ಅಧ್ಯಯನ ಮಾಡಿ ನೋಡಿ!
ಯಾವುದನ್ನ ಮೊದ್ಲು ಓದಬೇಕು?
ಬೈಬಲನ್ನ ಓದಿ ಅಧ್ಯಯನ ಮಾಡೋಕೆ ನಮಗೆ ಸಿಗೋ ಸಮಯ ಸ್ವಲ್ಪಾನೇ. ಆದ್ರೂ ಇರೋ ಸಮಯದಲ್ಲಿ ಅದನ್ನ ಹೇಗೆ ಮಾಡೋದು? ಎಲ್ಲಾನೂ ಒಂದೇ ಟೈಮಲ್ಲಿ ಓದಿ ಮುಗಿಸೋ ಬದ್ಲು ಸ್ವಲ್ಪ ಸ್ವಲ್ಪನೇ ಓದಿ. ಇದ್ರಿಂದ ತುಂಬ ಪ್ರಯೋಜನ ಆಗುತ್ತೆ.
ಮೊದ್ಲು ಯಾವುದನ್ನ ಓದಬಹುದು? —ಎಫೆ. 5:15, 16.
ಬೈಬಲನ್ನ ದಿನಾ ಓದಿ. (ಕೀರ್ತ. 1:2) ಮಧ್ಯವಾರದ ಕೂಟದ ಬೈಬಲ್ ವಾಚನದಿಂದ ಓದೋಕೆ ಶುರುಮಾಡಿ.
ಕಾವಲಿನಬುರುಜು ಮತ್ತು ಮಧ್ಯವಾರದ ಕೂಟಕ್ಕೆ ತಯಾರಿ ಮಾಡಿ. ಉತ್ರ ರೆಡಿ ಮಾಡ್ಕೊಳಿ.—ಕೀರ್ತ. 22:22.
ನಿಮಗೆ ಸಮಯ ಇದ್ರೆ ಇನ್ನೂ ಕೆಲವು ಪತ್ರಿಕೆಗಳನ್ನ ಓದಿ, ವಿಡಿಯೋ ನೋಡಿ. ವೆಬ್‌ಸೈಟಲ್ಲಿರೋ ಪ್ರಕಾಶನಗಳನ್ನೂ ಓದಿ.
ಒಂದು ಪ್ರಾಜೆಕ್ಟ್ ಮಾಡಿ. ನಿಮಗೆ ಬಂದಿರೋ ಸಮಸ್ಯೆ ಬಗ್ಗೆ, ಮನಸ್ಸಲ್ಲಿರೋ ಪ್ರಶ್ನೆ ಬಗ್ಗೆ ಅಥವಾ ನೀವು ಇನ್ನೂ ಜಾಸ್ತಿ ತಿಳ್ಕೊಳ್ಳೋಕೆ ಇಷ್ಟಪಡೋ ಯಾವುದಾದ್ರೂ ಒಂದು ಬೈಬಲ್ ವಿಷ್ಯದ ಬಗ್ಗೆ ಹುಡುಕಿ. ಅದಕ್ಕೆ jw.orgನಲ್ಲಿ “ಬೈಬಲ್ ಅಧ್ಯಯನದ ಚಟುವಟಿಕೆಗಳು” ಅನ್ನೋ ವಿಭಾಗ ನೋಡಿ.