ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ಓದಿ ಆನಂದಿಸಿದ್ದೀರಾ? ಹಾಗಿರುವಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಿ:

ಪ್ರಾಚೀನ ಯೆರಿಕೋ ಪಟ್ಟಣವನ್ನು ವಶಪಡಿಸಿಕೊಳ್ಳುವ ಮುಂಚೆ ಅದನ್ನು ದೀರ್ಘಕಾಲದ ವರೆಗೆ ಸುತ್ತುವರಿಯಲಾಗಲಿಲ್ಲ ಎನ್ನುವುದಕ್ಕೆ ಯಾವ ಪುರಾವೆ ಇದೆ?

ಪುರಾತನ ಕಾಲಗಳಲ್ಲಿ ಒಂದು ನಗರವನ್ನು ಎಷ್ಟೇ ಸಮಯದ ವರೆಗೆ ಮುತ್ತಿಗೆಹಾಕಿದರೂ ಅದನ್ನು ವಶಪಡಿಸಿಕೊಂಡ ಬಳಿಕ ವಿಜಯಿ ಸೈನ್ಯ ಅಲ್ಲಿನ ಎಲ್ಲ ಐಶ್ವರ್ಯವನ್ನು, ಉಳಿದಿದ್ದ ಯಾವುದೇ ಆಹಾರ ಸರಬರಾಜುಗಳನ್ನು ಕೊಳ್ಳೆಹೊಡೆಯುತ್ತಿತ್ತು. ಆದರೆ ಭೂಅಗೆತಶಾಸ್ತ್ರಜ್ಞರಿಗೆ ಯೆರಿಕೋವಿನಲ್ಲಿ ತುಂಬ ದೊಡ್ಡ ಮೊತ್ತದ ಧಾನ್ಯ ಸರಬರಾಜು ಸಿಕ್ಕಿದೆ. ಅಲ್ಲಿ ಇಷ್ಟೊಂದು ಧಾನ್ಯ ಉಳಿದಿತ್ತು ಎಂಬ ಸಂಗತಿಯು ಇಸ್ರಾಯೇಲ್ಯರು ಆ ನಗರವನ್ನು ಸ್ವಲ್ಪ ಸಮಯಕ್ಕೆ ಮಾತ್ರ ಮುತ್ತಿಗೆಹಾಕಿದ್ದರೆಂದು ತೋರಿಸುತ್ತದೆ. ಇದನ್ನೇ ಬೈಬಲಿನಲ್ಲೂ ತಿಳಿಸಲಾಗಿದೆ.—ಕಾವಲಿನಬುರುಜು15 11/15, ಪು. 13.

ಹೆತ್ತವರು ಹದಿಪ್ರಾಯದ ಮಕ್ಕಳಿಗೆ ಯೆಹೋವನ ಸೇವೆ ಮಾಡಲು ತರಬೇತಿ ಕೊಡಲಿಕ್ಕಾಗಿ ಯಾವ ಮುಖ್ಯ ವಿಷಯಗಳನ್ನು ಮಾಡಬೇಕು?

ಹೆತ್ತವರು ತಮ್ಮ ಹದಿಪ್ರಾಯದ ಮಕ್ಕಳಿಗೆ ಪ್ರೀತಿ ತೋರಿಸಬೇಕು ಮತ್ತು ಅವರು ನಡಕೊಳ್ಳುವ ರೀತಿಯಲ್ಲಿ ದೀನತೆ ತೋರಿಸಬೇಕು. ಅಲ್ಲದೆ ಹದಿಪ್ರಾಯದ ಮಕ್ಕಳನ್ನು ಅರ್ಥಮಾಡಿಕೊಳ್ಳಲು ಹೆತ್ತವರು ಒಳನೋಟ ತೋರಿಸುವುದು ಕೂಡ ತುಂಬ ಮುಖ್ಯ.—ಕಾವಲಿನಬುರುಜು15 11/15, ಪು. 9-11.

ಮಾತಾಡುವುದಕ್ಕೆ ಮುಂಚೆ ನಾವು ಯಾವುದರ ಬಗ್ಗೆ ಯೋಚಿಸಬೇಕು?

ನಮ್ಮ ನಾಲಿಗೆಯನ್ನು ಸರಿಯಾದ ರೀತಿಯಲ್ಲಿ ಬಳಸಲು ಇದನ್ನು ನೆನಪಿನಲ್ಲಿಡಬೇಕು: (1) ಯಾವಾಗ ಮಾತಾಡಬೇಕು? (ಪ್ರಸಂ. 3:7) (2) ಏನು ಹೇಳಬೇಕು? (ಜ್ಞಾನೋ. 12:18) (3) ಹೇಗೆ ಮಾತಾಡಬೇಕು? (ಜ್ಞಾನೋ. 25:15)—ಕಾವಲಿನಬುರುಜು15 12/15, ಪು. 19-22.

ಕ್ರಿಸ್ಮಸ್‌ ಆಚರಿಸುವುದು ತಪ್ಪಾ?

ಕ್ರಿಸ್ಮಸ್‌ ತಪ್ಪಾದ ಮೂಲದಿಂದ ಬಂದ ಆಚರಣೆಯಾಗಿದೆ. ಅದು ದೇವರನ್ನೂ ಆತನ ಮಗನಾದ ಯೇಸು ಕ್ರಿಸ್ತನನ್ನೂ ಅಗೌರವಪಡಿಸುತ್ತದೆ. ಇದು ಗಂಭೀರ ವಿಷಯ. ಮರದ ಬುಡವನ್ನು ನೆಟ್ಟಗೆ ಮಾಡಲು ಹೇಗೆ ಸಾಧ್ಯವಿಲ್ಲವೋ, ಅದೇ ರೀತಿ ಕ್ರಿಸ್ಮಸ್‌ ಎಂಬ ತಪ್ಪಾದ ಆಚರಣೆ ಎಷ್ಟು ಬಲವಾಗಿ ಬೇರೂರಿದೆಯೆಂದರೆ ಅದನ್ನು “ಸರಿಮಾಡುವದು ಅಸಾಧ್ಯ.” (ಪ್ರಸಂ. 1:15)—ಕಾವಲಿನಬುರುಜು16.1, ಪು. 11.

ಸ್ಮರಣೆಯ ಸಮಯದಲ್ಲಿ ರೊಟ್ಟಿ, ದ್ರಾಕ್ಷಾಮದ್ಯ ಸೇವಿಸುವವರನ್ನು ನಾವು ಹೇಗೆ ಕಾಣಬೇಕು?

ಅಂಥವರನ್ನು ಬೇರೆಯವರಿಗಿಂತ ಹೆಚ್ಚು ಶ್ರೇಷ್ಠರೆಂಬಂತೆ ಕ್ರೈಸ್ತರು ನೋಡುವುದಿಲ್ಲ. ನಿಜವಾಗಿಯೂ ಅಭಿಷಿಕ್ತನಾಗಿರುವ ವ್ಯಕ್ತಿ ತನ್ನನ್ನು ಬೇರೆಯವರು ತುಂಬ ಶ್ರೇಷ್ಠನೆಂಬಂತೆ ಕಾಣುವಂತೆ ಬಯಸುವುದಿಲ್ಲ. ದೇವರ ಮುಂದೆ ತನಗಿರುವ ನಿಲುವಿನ ಬಗ್ಗೆ ಎಲ್ಲರಿಗೂ ಹೇಳಿಕೊಂಡು ತಿರುಗುವುದಿಲ್ಲ. (ಮತ್ತಾ. 23:8-12)—ಕಾವಲಿನಬುರುಜು16.01, ಪು. 23-24.

ಅಬ್ರಹಾಮ ಹೇಗೆ ದೇವರ ಸ್ನೇಹಿತನಾದನೆಂಬ ವಿಷಯದಿಂದ ನಾವೇನು ಕಲಿಯುತ್ತೇವೆ?

ಅಬ್ರಹಾಮನು ಬಹುಶಃ ಶೇಮನಿಂದ ದೇವರ ಕುರಿತ ಜ್ಞಾನವನ್ನು ಪಡೆದುಕೊಂಡನು. ಅಲ್ಲದೆ, ತನ್ನೊಂದಿಗೆ ಮತ್ತು ತನ್ನ ಕುಟುಂಬದೊಂದಿಗೆ ದೇವರು ವ್ಯವಹರಿಸಿದ ವಿಧದಿಂದ ಅನುಭವ ಪಡೆದುಕೊಂಡನು. ನಾವು ಕೂಡ ಜ್ಞಾನ ಮತ್ತು ಅನುಭವ ಪಡೆಯಬೇಕು.—ಕಾವಲಿನಬುರುಜು16.02, ಪು. 9-10.

ಸೈತಾನನು ಯೇಸುವನ್ನು ಪ್ರಲೋಭಿಸುವಾಗ ನಿಜವಾಗಿಯೂ ಅವನನ್ನು ದೇವಾಲಯಕ್ಕೆ ಕರೆದುಕೊಂಡು ಹೋದನಾ?

ನಾವದನ್ನು ಖಚಿತವಾಗಿ ಹೇಳಲು ಆಗುವುದಿಲ್ಲ. ಮತ್ತಾಯ 4:5 ಮತ್ತು ಲೂಕ 4:9 ರಲ್ಲಿರುವ ಮಾತುಗಳು ಯೇಸುವಿಗೆ ಒಂದು ದರ್ಶನ ತೋರಿಸಲಾಗಿರಬಹುದು ಅಥವಾ ಅವನು ದೇವಾಲಯದ ಕೈಪಿಡಿ ಗೋಡೆಯ ಮೇಲಿದ್ದ ಅತಿ ಎತ್ತರದ ಸ್ಥಳದಲ್ಲಿ ನಿಂತಿರುವ ಸಾಧ್ಯತೆಯಿದೆ ಎಂದು ಸೂಚಿಸುತ್ತವೆ.—ಕಾವಲಿನಬುರುಜು16.03, ಪು. 31-32.

ನಮ್ಮ ಕ್ರೈಸ್ತ ಸೇವೆಯು ಯಾವ ವಿಧಗಳಲ್ಲಿ ಇಬ್ಬನಿಯಂತಿದೆ?

ಗಾಳಿಯಲ್ಲಿನ ತೇವಾಂಶ ಹನಿಹನಿಯಾಗಿ ಕೂಡಿ ಇಬ್ಬನಿ ಉಂಟಾಗುತ್ತದೆ. ಅದು ಚೈತನ್ಯ ನೀಡುತ್ತದೆ, ಜೀವ ಪೋಷಕ. ಇಬ್ಬನಿಯು ದೇವರ ಒಂದು ಆಶೀರ್ವಾದ ಆಗಿದೆ. (ಧರ್ಮೋ. 33:13) ಸೇವೆಯಲ್ಲಿ ದೇವರ ಜನರೆಲ್ಲರೂ ಸೇರಿ ಮಾಡುವ ಪ್ರಯತ್ನವು ಇಬ್ಬನಿಯಂತಿದೆ.—ಕಾವಲಿನಬುರುಜು16.04, ಪು. 4.