ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಜ್ರಕ್ಕಿಂತ ಅಮೂಲ್ಯವಾದ ಪ್ರಾಮಾಣಿಕತೆ

ವಜ್ರಕ್ಕಿಂತ ಅಮೂಲ್ಯವಾದ ಪ್ರಾಮಾಣಿಕತೆ

ನಮ್ಮೆಲ್ಲರಿಗೂ ಗೊತ್ತಿರುವಂತೆ ವಜ್ರ ತುಂಬಾ ಅಮೂಲ್ಯವಾದ ಕಲ್ಲು. ಕೆಲವೊಂದು ವಜ್ರಗಳ ಬೆಲೆ ಕೋಟ್ಯಾಂತರ ರೂಪಾಯಿ. ಆದರೆ ದೇವರ ದೃಷ್ಟಿಯಲ್ಲಿ ಈ ವಜ್ರಗಳಿಗಿಂತ ಅಮೂಲ್ಯವಾದ ವಿಷಯಗಳಿವೆ. ಅವು ಯಾವುವು ಗೊತ್ತಾ?

ಹೈಗಾನೂಶ್‌ ಮತ್ತು ಆಕೆಯ ಗಂಡ ಅರ್ಮೇನಿಯದವರು. ಅವರಿಬ್ಬರೂ ದೀಕ್ಷಾಸ್ನಾನವಾಗಿರದ ಪ್ರಚಾರಕರು. ಒಂದು ದಿನ ಹೈಗಾನೂಶ್‌ಗೆ ತನ್ನ ಮನೆಯ ಹತ್ತಿರ ಒಂದು ಪರ್ಸ್‌ ಸಿಕ್ಕಿತು. ಅದರಲ್ಲಿ ಪಾಸ್‌ಪೋರ್ಟ್‌, ಡೆಬಿಟ್‌ ಕಾರ್ಡ್‌ಗಳು ಮತ್ತು ತುಂಬಾ ದುಡ್ಡಿತ್ತು. ಇದನ್ನ ಆಕೆ ತನ್ನ ಗಂಡನಿಗೆ ಹೇಳಿದಳು.

ಆ ಸಮಯದಲ್ಲಿ ಅವರಿಗೆ ಸಾಲ ಇದ್ದದ್ದರಿಂದ ದುಡ್ಡಿನ ಅವಶ್ಯಕತೆ ತುಂಬಾ ಇತ್ತು. ಆಗ ಅವರೇನು ಮಾಡಿದರು ಗೊತ್ತಾ? ಆ ಪರ್ಸನ್ನು ತೆಗೆದುಕೊಂಡು ಪಾಸ್‌ ಪೋರ್ಟ್‌ನಲ್ಲಿದ್ದ ವಿಳಾಸಕ್ಕೆ ಹೋಗಿ ಅದನ್ನು ಸಂಬಂಧಪಟ್ಟ ವ್ಯಕ್ತಿಗೆ ಕೊಟ್ಟರು. ಆ ವ್ಯಕ್ತಿ ಮತ್ತು ಅವನ ಕುಟುಂಬದವರಿಗೆ ಆಶ್ಚರ್ಯವೋ ಆಶ್ಚರ್ಯ! ಹೈಗಾನೂಶ್‌ ಮತ್ತು ಆಕೆಯ ಗಂಡ ತಾವು ಬೈಬಲ್‌ ಕಲಿಯುತ್ತಿರುವುದರಿಂದ ಪ್ರಾಮಾಣಿಕರಾಗಿರಬೇಕು ಅಂತ ಗೊತ್ತಾಯಿತು ಹಾಗಾಗಿ ನಾವು ಈ ಪರ್ಸ್‌ನ ವಾಪಸ್ಸು ಕೊಟ್ಟೆವು ಎಂದು ಹೇಳಿದರು. ಯೆಹೋವನ ಸಾಕ್ಷಿಗಳ ಬಗ್ಗೆ ಅವರಿಗೆ ಹೇಳಿ, ಕೆಲವು ಪತ್ರಿಕೆಗಳನ್ನು ಕೊಡುವುದನ್ನೂ ಮರೆಯಲಿಲ್ಲ.

ಇದಕ್ಕೆ ಪ್ರತಿಯಾಗಿ ಪರ್ಸ್‌ ಕಳೆದುಕೊಂಡ ವ್ಯಕ್ತಿಯ ಕುಟುಂಬದವರು ಇವರಿಗೆ ಬಹುಮಾನವಾಗಿ ದುಡ್ಡು ಕೊಟ್ಟರು. ಆದರೆ ಹೈಗಾನೂಶ್‌ ಅದನ್ನು ಸ್ವೀಕರಿಸಲಿಲ್ಲ. ಮಾರನೇ ದಿನ ಪರ್ಸ್‌ ಕಳೆದುಕೊಂಡ ವ್ಯಕ್ತಿಯ ಹೆಂಡತಿ ಹೈಗಾನೂಶ್‌ರ ಮನೆಗೆ ಬಂದು ಒತ್ತಾಯ ಮಾಡಿ ವಜ್ರದ ಉಂಗುರವೊಂದನ್ನು ಕೊಟ್ಟರು.

ಇವರ ಪ್ರಾಮಾಣಿಕತೆ ನೋಡಿ ಆ ಕುಟುಂಬದವರು ಮಾತ್ರವಲ್ಲ ಇನ್ನೂ ಅನೇಕರು ಆಶ್ಚರ್ಯಪಡುವುದರಲ್ಲಿ ಸಂಶಯವೇ ಇಲ್ಲ. ಈ ದಂಪತಿ ತೋರಿಸಿದ ಪ್ರಾಮಾಣಿಕತೆಯನ್ನು ನೋಡಿದಾಗ ಯೆಹೋವ ದೇವರಿಗೆ ಹೇಗನಿಸುತ್ತದೆ? ಅವರು ತೋರಿಸಿದ ಪ್ರಾಮಾಣಿಕತೆ ಸಾರ್ಥಕವಾಯಿತಾ?

ಒಳ್ಳೆಯ ಗುಣಗಳು ವಜ್ರಕ್ಕಿಂತಲೂ ಬಹು ಅಮೂಲ್ಯ

ಯೆಹೋವ ದೇವರ ಗುಣಗಳನ್ನು ಅನುಕರಿಸಿದರೆ ಆತನು ಅದನ್ನು ವಜ್ರ, ಬೆಳ್ಳಿ ಬಂಗಾರಕ್ಕಿಂತಲೂ ಅಮೂಲ್ಯವಾಗಿ ನೆನಸುತ್ತಾನೆ ಎಂದು ದೇವರ ಸೇವಕರಾದ ನಮಗೆ ತಿಳಿದಿದೆ. ಮನುಷ್ಯರ ದೃಷ್ಟಿಯಲ್ಲಿ ಅಮೂಲ್ಯವಾದ ವಸ್ತುಗಳು ದೇವರ ದೃಷ್ಟಿಯಲ್ಲಿ ಅಮೂಲ್ಯವಲ್ಲ. (ಯೆಶಾ. 55:8, 9) ದೇವರ ಸೇವಕರಿಗೆ ಯೆಹೋವನ ಗುಣಗಳನ್ನು ಅನುಕರಿಸುವುದು ಸಾರ್ಥಕವಾದ ವಿಷಯವಾಗಿದೆ.

ವಿವೇಕ ಮತ್ತು ವಿವೇಚನೆಯ ಬಗ್ಗೆ ಬೈಬಲ್‌ ಹೇಳುವುದನ್ನು ಗಮನಿಸಿ. ಜ್ಞಾನೋಕ್ತಿಗಳು 3:13-15 ಹೇಳುವುದು: “ಜ್ಞಾನವನ್ನು ಪಡೆಯುವವನು ಧನ್ಯನು, ವಿವೇಕವನ್ನು ಸಂಪಾದಿಸುವವನು ಭಾಗ್ಯವಂತನು. ಅದರ ಲಾಭವು ಬೆಳ್ಳಿಯ ಲಾಭಕ್ಕಿಂತಲೂ ಅದರಿಂದಾಗುವ ಆದಾಯವು ಬಂಗಾರಕ್ಕಿಂತಲೂ ಅಮೂಲ್ಯವೇ ಸರಿ. ಅದರ ಬೆಲೆಯು ಹವಳಕ್ಕಿಂತಲೂ ಹೆಚ್ಚು, ನಿನ್ನ ಇಷ್ಟವಸ್ತುಗಳೆಲ್ಲವೂ ಅದಕ್ಕೆ ಸಮವಲ್ಲ.” ಇಲ್ಲಿ ತಿಳಿಸಿರುವ ಗುಣಗಳು ಯೆಹೋವ ದೇವರ ದೃಷ್ಟಿಯಲ್ಲಿ ತುಂಬಾ ಅಮೂಲ್ಯವಾಗಿವೆ.

ಪ್ರಾಮಾಣಿಕತೆ ಅಮೂಲ್ಯನಾ?

ಖಂಡಿತ ಅಮೂಲ್ಯ. ಏಕೆಂದರೆ ಯೆಹೋವ ದೇವರು ಪ್ರಾಮಾಣಿಕ. ಆತನಿಗೆ ‘ಸುಳ್ಳಾಡಲು ಸಾಧ್ಯವಿಲ್ಲ.’ (ತೀತ 1:2) ಮೊದಲನೇ ಶತಮಾನದ ಇಬ್ರಿಯ ಕ್ರೈಸ್ತರಿಗೆ ಹೀಗೆ ಬರೆಯುವಂತೆ ದೇವರು ಅಪೊಸ್ತಲ ಪೌಲನಿಗೆ ತಿಳಿಸಿದನು: “ನಮಗೋಸ್ಕರ ಪ್ರಾರ್ಥಿಸುತ್ತಾ ಇರಿ; ನಾವು ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳಲು ಬಯಸುವುದರಿಂದ ನಮಗೆ ಪ್ರಾಮಾಣಿಕವಾದ ಮನಸ್ಸಾಕ್ಷಿಯಿದೆ ಎಂದು ನಾವು ನಂಬುತ್ತೇವೆ.”—ಇಬ್ರಿ. 13:18.

ಯೇಸು ಕೂಡ ಪ್ರಾಮಾಣಿಕತೆಯ ವಿಷಯದಲ್ಲಿ ಉತ್ತಮ ಮಾದರಿಯಿಟ್ಟಿದ್ದಾನೆ. ಉದಾಹರಣೆಗೆ, ಮಹಾ ಯಾಜಕನಾದ ಕಾಯಫನು ಯೇಸುವಿನ ಹತ್ತಿರ “ಜೀವವುಳ್ಳ ದೇವರಾಣೆ, ನೀನು ದೇವರ ಮಗನಾದ ಕ್ರಿಸ್ತನೊ ಅಲ್ಲವೊ ಎಂಬುದನ್ನು ನಮಗೆ ಹೇಳು” ಎಂದು ಕೇಳಿದನು. ಆಗ ತಾನೇ ಮೆಸ್ಸೀಯ ಎಂದು ಸನ್ಹೇದ್ರಿನಿನ ಮುಂದೆ ಹೇಳುವಲ್ಲಿ ತನ್ನ ಮೇಲೆ ದೇವದೂಷಣೆಯ ಆರೋಪ ಹಾಕಿ ತನಗೆ ಮರಣದಂಡನೆ ವಿಧಿಸುವರೆಂದು ಯೇಸುವಿಗೆ ತಿಳಿದಿದ್ದರೂ ಅವನು ಸತ್ಯವನ್ನೇ ಹೇಳಿದನು. ಹೀಗೆ ಪ್ರಾಮಾಣಿಕತೆ ತೋರಿಸಿದನು.—ಮತ್ತಾ. 26:63-67.

ನಾವು ಕೂಡ ಎಲ್ಲಾ ಸಮಯದಲ್ಲಿ ಅದರಲ್ಲೂ ಚಿಕ್ಕಪುಟ್ಟ ವಿಷಯಗಳಲ್ಲೂ ಪ್ರಾಮಾಣಿಕತೆ ತೋರಿಸುತ್ತೇವಾ? ಲಾಭಕ್ಕಾಗಿ ವಿಷಯಗಳನ್ನು ಮರೆಮಾಚುತ್ತೇವಾ?

ಪ್ರಾಮಾಣಿಕತೆ ದೊಡ್ಡ ಸವಾಲು

‘ಸ್ವಪ್ರೇಮಿಗಳು ಹಣಪ್ರೇಮಿಗಳು’ ತುಂಬಿರುವ ಈ ಕಾಲದಲ್ಲಿ ನಿಯತ್ತಿನಿಂದಿರುವುದು ನಿಜವಾಗಿಯೂ ಒಂದು ದೊಡ್ಡ ಸವಾಲೇ ಸರಿ. (2 ತಿಮೊ. 3:2) ಯಾವಾಗ ಬೇಕಾದರೂ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಮತ್ತು ಆರ್ಥಿಕ ಮುಗ್ಗಟ್ಟಿನಿಂದಾಗಿ ಪ್ರಾಮಾಣಿಕರಾಗಿರುವುದು ಕಷ್ಟವಾಗಿದೆ. ಹಾಗಾಗಿ ‘ಕಳ್ಳತನ, ಮೋಸ, ವಂಚನೆ ಮಾಡುವುದರಲ್ಲಿ ತಪ್ಪೇನಿಲ್ಲ. ದುಡ್ಡು ಬೇಕಾದರೆ ನೀತಿ, ನಿಯತ್ತನ್ನೆಲ್ಲಾ ಪಕ್ಕಕ್ಕಿಡಬೇಕು’ ಅನ್ನೋ ಮನೋಭಾವ ಎಲ್ಲಾ ಕಡೆ ಸಾಮಾನ್ಯವಾಗಿಬಿಟ್ಟಿದೆ. ಕೆಲವು ಕ್ರೈಸ್ತರಲ್ಲೂ ಈ ಮನೋಭಾವ ಬಂದುಬಿಟ್ಟಿದೆ. “ಅಪ್ರಾಮಾಣಿಕ ಲಾಭಕ್ಕಾಗಿ” ತಪ್ಪಾದ ತೀರ್ಮಾನಗಳನ್ನು ಮಾಡಿ ಸಭೆಯಲ್ಲಿನ ತಮ್ಮ ಸೇವಾ ಸುಯೋಗಗಳನ್ನು ಕಳೆದುಕೊಂಡಿದ್ದಾರೆ.—1 ತಿಮೊ. 3:8; ತೀತ 1:7.

ಆದರೆ ಕ್ರೈಸ್ತರಲ್ಲಿ ಹೆಚ್ಚಿನವರು ಯೇಸುವನ್ನು ಅನುಕರಿಸುತ್ತಾರೆ. ಯಾವುದೇ ವಜ್ರ ವೈಢೂರ್ಯಕ್ಕಿಂತ ದೇವರ ಗುಣಗಳನ್ನು ಅನುಕರಿಸುವುದು ತುಂಬಾ ಮುಖ್ಯವೆಂಬುದು ಅವರಿಗೆ ತಿಳಿದಿದೆ. ಹಾಗಾಗಿ ಯುವ ಕ್ರೈಸ್ತರು ಶಾಲೆಯಲ್ಲಿ ಹೆಚ್ಚು ಅಂಕಗಳನ್ನು ಪಡೆಯಲು ಮೋಸದ ದಾರಿ ಹಿಡಿಯುವುದಿಲ್ಲ. (ಜ್ಞಾನೋ. 20:23) ಹೈಗಾನೂಶ್‌ ಪ್ರಾಮಾಣಿಕತೆ ತೋರಿಸಿದ್ದರಿಂದ ಆಕೆಗೆ ಬಹುಮಾನವಾಗಿ ವಜ್ರದುಂಗುರ ಸಿಕ್ಕಿತು. ಅದೇ ರೀತಿ ನಾವು ಪ್ರಾಮಾಣಿಕತೆ ತೋರಿಸಿದಾಗೆಲ್ಲಾ ಒಳ್ಳೇ ಫಲಿತಾಂಶನೇ ಸಿಗುತ್ತೆ ಅಂತೇನಿಲ್ಲ. ಆದರೆ ಒಂದು ವಿಷಯ ನಿಜ, ನಾವು ನಿಯತ್ತಿನಿಂದ ಇರುವುದಾದರೆ ಅದು ದೇವರ ದೃಷ್ಟಿಯಲ್ಲಿ ಸರಿಯಾಗಿದೆ. ಅಷ್ಟೇ ಅಲ್ಲ, ವಜ್ರಕ್ಕಿಂತ ಅಮೂಲ್ಯವಾದ ಶುದ್ಧ ಮನಸ್ಸಾಕ್ಷಿ ನಮಗೆ ಇರುತ್ತದೆ.

ಇದಕ್ಕೊಂದು ಉತ್ತಮ ಉದಾಹರಣೆ ಗಾಗಿಕ್‌ ಎಂಬವರದ್ದು. ಆತ ಹೇಳುವುದು: “ನಾನು ಒಂದು ದೊಡ್ಡ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೆ. ಆ ಕಂಪೆನಿಯ ಮಾಲೀಕ ಸರ್ಕಾರಕ್ಕೆ ಕಂದಾಯ ಕಟ್ಟೋದನ್ನು ತಪ್ಪಿಸಬೇಕು ಅಂತ ಕಂಪೆನಿಯ ಲಾಭವನ್ನು ದಾಖಲೆಗಳಲ್ಲಿ ಕಡಿಮೆ ತೋರಿಸುತ್ತಿದ್ದರು. ನಾನು ಆ ಕಂಪೆನಿಯ ಮ್ಯಾನೇಜಿಂಗ್‌ ಡೈರೆಕ್ಟರ್‌ ಆಗಿದ್ದೆ. ಕಂಪೆನಿಯ ಈ ವಂಚನೆಯನ್ನ ಮುಚ್ಚಿಹಾಕುವಂತೆ ಕಂದಾಯ ಅಧಿಕಾರಿಗಳಿಗೆ ಲಂಚ ಕೊಡುವಂಥ ಕೆಲಸವನ್ನು ನನಗೆ ವಹಿಸಿದರು. ಇದರಿಂದ ಅಪ್ರಾಮಾಣಿಕನೆಂಬ ಕೆಟ್ಟ ಹೆಸರು ನನಗೆ ಬಂತು. ಒಳ್ಳೇ ಸಂಬಳ ಸಿಗುತ್ತಿತ್ತಾದರೂ ಸತ್ಯ ಕಲಿತ ನಂತರ ಆ ಕೆಲಸ ಬಿಟ್ಟುಬಿಟ್ಟೆ. ನಾನೇ ವ್ಯಾಪಾರ ಶುರು ಮಾಡಿದೆ. ಕಾನೂನುಬದ್ಧವಾಗಿ ನನ್ನ ವ್ಯಾಪಾರವನ್ನು ನೊಂದಾಯಿಸಿಕೊಂಡು, ಮೊದಲ ದಿನದಿಂದಲೇ ತಪ್ಪದೇ ಕಂದಾಯಗಳನ್ನು ಕಟ್ಟುತ್ತಿದ್ದೇನೆ.”—2 ಕೊರಿಂ. 8:21.

ಗಾಗಿಕ್‌ ಮುಂದೆ ಹೇಳುವುದು, “ಮೊದಲು ನನಗೆ ಬರುತ್ತಿದ್ದ ವರಮಾನಕ್ಕೆ ಹೋಲಿಸಿದರೆ ಈಗ ನನಗೆ ಸಿಗುತ್ತಿರುವುದು ಅರ್ಧ ಅಷ್ಟೇ. ಇದರಿಂದ ನನ್ನ ಕುಟುಂಬವನ್ನು ನೋಡಿಕೊಳ್ಳುವುದಕ್ಕೆ ಕಷ್ಟ ಆಯಿತು. ಆದರೂ ಮನಸ್ಸಿಗೆ ಸಂತೋಷ ಇದೆ. ಯೆಹೋವ ದೇವರ ಮುಂದೆ ಶುದ್ಧ ಮನಸ್ಸಾಕ್ಷಿಯಿದೆ. ನನ್ನ ಇಬ್ಬರು ಗಂಡು ಮಕ್ಕಳಿಗೆ ಒಳ್ಳೆ ಮಾದರಿಯಿಟ್ಟಿದ್ದೇನೆ. ಅಲ್ಲದೇ ಸಭೆಯಲ್ಲಿ ಅನೇಕ ಸುಯೋಗಗಳು ಸಿಕ್ಕಿವೆ. ಕಂದಾಯ ಅಧಿಕಾರಿಗಳೊಂದಿಗೆ ಮತ್ತು ವ್ಯಾಪಾರ ಮಾಡುವವರೊಂದಿಗೆ ಪ್ರಾಮಾಣಿಕನೆಂಬ ಒಳ್ಳೆ ಹೆಸರು ನನಗಿದೆ.”

ಸಹಾಯಕ್ಕೆ ಸದಾ ಸಿದ್ಧನಾಗಿರುವ ಯೆಹೋವ

ಯೆಹೋವ ದೇವರ ಬೋಧನೆಗಳನ್ನು ಪಾಲಿಸಿ ಆತನ ಗುಣಗಳನ್ನು ಅನುಕರಿಸುತ್ತಾ ಪ್ರಾಮಾಣಿಕರಾಗಿರುವವರನ್ನು ಆತನು ತುಂಬಾ ಪ್ರೀತಿಸುತ್ತಾನೆ. (ತೀತ 2:10) ಹಾಗಾಗಿ ರಾಜ ದಾವೀದನಿಗೆ ದೇವರು ಈ ಸಾಂತ್ವನದ ಮಾತುಗಳನ್ನು ಬರೆಯುವಂತೆ ಹೇಳಿದನು: “ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ; ಈ ವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ ಅವನ ಸಂತತಿಯವರು ಭಿಕ್ಷೆಬೇಡಿ ತಿನ್ನುವದನ್ನಾಗಲಿ ನೋಡಲಿಲ್ಲ.”—ಕೀರ್ತ. 37:25.

ಇದು ನಂಬಿಗಸ್ತಳಾಗಿದ್ದ ರೂತಳ ಜೀವನದಲ್ಲೂ ಸತ್ಯವಾಗಿತ್ತು. ವಯಸ್ಸಾದ ತನ್ನ ಅತ್ತೆಯನ್ನು ರೂತಳು ದೂರ ಮಾಡಲಿಲ್ಲ. ಅವಳು ಇಸ್ರಾಯೇಲಿಗೆ ಅತ್ತೆ ಜೊತೆ ಹೋಗಿ ಸತ್ಯ ದೇವರನ್ನು ಆರಾಧಿಸಿದಳು. (ರೂತ. 1:16, 17) ಧರ್ಮಶಾಸ್ತ್ರದ ಏರ್ಪಾಡಿಗನುಸಾರ ಹಕ್ಕಲಾಯುವಾಗ ರೂತಳು ಪ್ರಾಮಾಣಿಕಳಾಗಿ ಶ್ರದ್ಧೆಯಿಂದ ಕಷ್ಟಪಟ್ಟು ಕೆಲಸ ಮಾಡಿದಳು. ಕಷ್ಟದ ಸಮಯದಲ್ಲಿ ದೇವರು ರೂತಳನ್ನು ಮತ್ತು ನೊವೊಮಿಯನ್ನು ಪರಾಮರಿಸಿದನು. ನಂತರ ದಾವೀದನ ಜೀವನದಲ್ಲಿ ಸಹ ದೇವರು ಅವನನ್ನು ಕೈಬಿಡಲಿಲ್ಲ. (ರೂತ. 2:2-18) ರೂತಳ ಅವಶ್ಯಕತೆಗಳನ್ನಷ್ಟೇ ಅಲ್ಲದೇ, ರಾಜ ದಾವೀದನ ಮತ್ತು ವಾಗ್ದತ್ತ ಮೆಸ್ಸೀಯನ ಪೂರ್ವಜಳಾಗುವ ಸುಯೋಗವನ್ನು ಅವಳಿಗೆ ಕೊಟ್ಟನು.—ರೂತ. 4:13-17; ಮತ್ತಾ. 1:5, 16.

ತಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲು ತುಂಬಾ ಕಷ್ಟಪಡಬೇಕಾದ ಪರಿಸ್ಥಿತಿಯಲ್ಲಿ ಕೆಲವು ದೇವರ ಸೇವಕರು ಇದ್ದಾರೆ. ಹಾಗಂತ ಅವರು ಸುಲಭವಾಗಿ ಹಣ ಮಾಡಲು ಮೋಸದ ದಾರಿ ಹಿಡಿಯುವುದಿಲ್ಲ. ಬದಲಿಗೆ ಕಷ್ಟಪಟ್ಟು ದುಡಿಯುತ್ತಾರೆ. ಪ್ರಾಮಾಣಿಕತೆ ಸೇರಿದಂತೆ ದೇವರ ಅಮೂಲ್ಯ ಗುಣಗಳನ್ನು ಅನುಕರಿಸುವುದು ತುಂಬಾ ಅಮೂಲ್ಯವೆಂದು ಅವರು ಗ್ರಹಿಸಿದ್ದಾರೆ.—ಜ್ಞಾನೋ. 12:24; ಎಫೆ. 4:28.

ರೂತಳಂತೆ ಲೋಕದಲ್ಲಿರುವ ಎಲ್ಲಾ ಕ್ರೈಸ್ತರು ಯೆಹೋವ ದೇವರು ತಮಗೆ ಸಹಾಯ ಮಾಡಶಕ್ತನೆಂದು ನಂಬಿಕೆ ಇಟ್ಟಿದ್ದಾರೆ. “ನಾನು ಎಂದಿಗೂ ನಿನ್ನ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ” ಎಂದು ದೇವರು ಕೊಟ್ಟ ಮಾತಿನ ಮೇಲೆ ಅವರಿಗೆ ಸಂಪೂರ್ಣ ಭರವಸೆಯಿದೆ. (ಇಬ್ರಿ. 13:5) ಪ್ರಾಮಾಣಿಕರಾಗಿರುವವರಿಗೆ ಯೆಹೋವ ದೇವರು ಸಹಾಯ ಮಾಡಿದ್ದಾನೆ. ತನ್ನ ಆರಾಧಕರ ಮೂಲಭೂತ ಅಗತ್ಯಗಳನ್ನು ಪೂರೈಸುತ್ತೇನೆಂಬ ಮಾತನ್ನು ಆತನು ಚಾಚೂತಪ್ಪದೇ ನೆರವೇರಿಸಿದ್ದಾನೆ.—ಮತ್ತಾ. 6:33.

ಜನರು ನಮ್ಮ ಪ್ರಾಮಾಣಿಕತೆಗೆ ವಜ್ರ ವೈಢೂರ್ಯಗಳನ್ನು ಬಹುಮಾನವಾಗಿ ಕೊಟ್ಟು ಬೆಲೆ ಕಟ್ಟಬಹುದು. ಆದರೆ ನಾವು ಪ್ರಾಮಾಣಿಕರಾಗಿ ಮತ್ತು ದೇವರ ಗುಣಗಳನ್ನು ಅನುಕರಿಸುವುದಾದರೆ ಅವು ನಮ್ಮ ತಂದೆಯಾದ ಯೆಹೋವನ ದೃಷ್ಟಿಯಲ್ಲಿ ವಜ್ರ ವೈಢೂರ್ಯಕ್ಕಿಂತ ಅಮೂಲ್ಯವಾಗಿವೆ. ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.

ಪ್ರಾಮಾಣಿಕರಾಗಿರುವುದರಿಂದ ನಮಗೆ ಶುದ್ಧ ಮನಸ್ಸಾಕ್ಷಿ ಇರುತ್ತದೆ ಮತ್ತು ಪ್ರಾಮಾಣಿಕತೆಯ ಬಗ್ಗೆ ಸೇವೆಯಲ್ಲಿ ಮಾತಾಡುವಾಗ ನಮ್ಮ ಮನಸ್ಸು ನಮ್ಮನ್ನು ಚುಚ್ಚುವುದಿಲ್ಲ