ಕಾವಲಿನಬುರುಜು - ಅಧ್ಯಯನ ಆವೃತ್ತಿ ಜೂನ್ 2017

ಈ ಸಂಚಿಕೆಯಲ್ಲಿ 2017ರ ಜುಲೈ 31ರಿಂದ ಆಗಸ್ಟ್‌ 27ರ ವರೆಗಿನ ಅಧ್ಯಯನ ಲೇಖನಗಳಿವೆ.

ನಿಮಗೆ ನೆನಪಿದೆಯೇ?

ಇತ್ತೀಚೆಗೆ ಬಂದ ಕಾವಲಿನಬುರುಜು ಪತ್ರಿಕೆಗಳನ್ನು ಓದಿದ್ದೀರಾ? ಬೈಬಲಿಗೆ ಸಂಬಂಧಪಟ್ಟ ಎಷ್ಟು ಪ್ರಶ್ನೆಗಳಿಗೆ ಉತ್ತರ ಕೊಡಬಲ್ಲಿರೆಂದು ನೋಡಿ.

ನಮ್ಮ ಎಲ್ಲ ಸಂಕಟಗಳಲ್ಲಿ ಯೆಹೋವನು ನಮ್ಮನ್ನು ಸಂತೈಸುತ್ತಾನೆ

ಇಂದು ವಿವಾಹ ಜೀವನ ಮತ್ತು ಕುಟುಂಬ ಜೀವನದಲ್ಲಿ ಕ್ರೈಸ್ತರಿಗೆ ಯಾವ ಕೆಲವೊಂದು ಕಷ್ಟಗಳು ಎದುರಾಗಬಹುದು? ನೀವು ಇಂಥ ಸಮಸ್ಯೆಗಳನ್ನು ಎದುರಿಸುತ್ತಿರುವಲ್ಲಿ ನಿಮಗೆ ದೇವರಿಂದ ಹೇಗೆ ಸಾಂತ್ವನ ಸಿಗಬಲ್ಲದು?

ಆಧ್ಯಾತ್ಮಿಕ ನಿಧಿ-ನಿಕ್ಷೇಪಗಳ ಮೇಲೆ ನಿಮ್ಮ ಮನಸ್ಸಿಡಿ

ನಾವು ಯಾವ ನಿಧಿ-ನಿಕ್ಷೇಪಗಳನ್ನು ಮಾನ್ಯಮಾಡಬೇಕು? ಇದನ್ನು ಮಾಡುವುದು ಹೇಗೆ?

ಹೊರತೋರಿಕೆ ನೋಡಿ ಹಿಂದೇಟು ಹಾಕಬೇಡಿ

ಬೀದಿಯಲ್ಲಿ ವಾಸವಾಗಿದ್ದ ಒಬ್ಬ ವ್ಯಕ್ತಿ ತುಂಬ ಅಂದ್ರೆ ತುಂಬ ಕೊಳಕಾಗಿದ್ದರು ಮತ್ತು ಜನರನ್ನು ತಮ್ಮಿಂದ ದೂರ ಇಟ್ಟಿದ್ದರು. ಅಂಥ ವ್ಯಕ್ತಿಗೆ ಒಬ್ಬ ಯೆಹೋವನ ಸಾಕ್ಷಿ ತಾಳ್ಮೆ ತೋರಿಸುತ್ತಾ ಮಾತಾಡಿದ್ದರಿಂದ ಸಿಕ್ಕಿದ ಫಲಿತಾಂಶ ಏನು?

ಮನಸ್ತಾಪಗಳನ್ನು ಬಗೆಹರಿಸಿ ಶಾಂತಿ ಕಾಪಾಡಿಕೊಳ್ಳುತ್ತೀರಾ?

ಜನರು ಶಾಂತಿ-ನೆಮ್ಮದಿಯಿಂದ ಇರಲು ತುಂಬ ಇಷ್ಟಪಡುತ್ತಾರೆ. ಆದರೂ ತಮ್ಮ ಸ್ಥಾನ ಅಥವಾ ಅಹಂಗೆ ಎಲ್ಲಾದರೂ ಧಕ್ಕೆ ಬಂದರೆ ಅವರು ನಡಕೊಳ್ಳುವ ರೀತಿ ಶಾಂತಿಯುತ ಆಗಿರುವುದಿಲ್ಲ. ನೀವು ಈ ರೀತಿ ನಡಕೊಳ್ಳದಂತೆ ಹೇಗೆ ನೋಡಿಕೊಳ್ಳಬಹುದು?

‘ನಿನ್ನ ಬುದ್ಧಿ ಸ್ತೋತ್ರಾರ್ಹವೇ ಸರಿ’

ಈ ಮಾತುಗಳನ್ನು ಪ್ರಾಚೀನ ಇಸ್ರಾಯೇಲಿನಲ್ಲಿದ್ದ ದಾವೀದನು ಅಬೀಗೈಲಳನ್ನು ಹೊಗಳುತ್ತಾ ಹೇಳಿದನು. ಆಕೆಯನ್ನು ದಾವೀದನು ಯಾಕೆ ಹೊಗಳಿದನು? ನಾವು ಆಕೆಯಿಂದ ಏನು ಕಲಿಯಬಹುದು?

ಮುಖ್ಯ ವಿವಾದಾಂಶದ ಮೇಲೆ ಗಮನವಿಡಿ

ಎಲ್ಲ ಮಾನವರನ್ನು ಒಳಗೂಡಿರುವ ಈ ಮುಖ್ಯ ವಿವಾದಾಂಶ ಯಾವುದು? ಅದರ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು ಯಾಕೆ?

ಯೆಹೋವನ ಪರಮಾಧಿಕಾರಕ್ಕೇ ನಮ್ಮ ಸಂಪೂರ್ಣ ಬೆಂಬಲ!

ಯೆಹೋವನಿಗೆ ಇಡೀ ವಿಶ್ವವನ್ನು ಆಳುವ ಹಕ್ಕಿದೆಯೆಂದು ನೀವು ಒಪ್ಪಿಕೊಂಡರೆ ಅದು ನಿಮ್ಮ ಜೀವನದ ಮೇಲೆ ಯಾವ ಪರಿಣಾಮ ಬೀರುತ್ತದೆ?

ನಿಮಗೆ ಗೊತ್ತಿತ್ತಾ?

ದೇವಾಲಯದಲ್ಲಿ ಪ್ರಾಣಿಗಳನ್ನು ಮಾರುತ್ತಿದ್ದವರನ್ನು ಯೇಸು ಯಾಕೆ ‘ಕಳ್ಳರು’ ಎಂದು ಕರೆದನು?