ಕಾವಲಿನಬುರುಜು - ಅಧ್ಯಯನ ಆವೃತ್ತಿ ಜೂನ್ 2020

ಈ ಸಂಚಿಕೆಯಲ್ಲಿ 2020 ರ ಆಗಸ್ಟ್‌ 3 ರಿಂದ 30 ರ ವರೆಗಿನ ಅಧ್ಯಯನ ಲೇಖನಗಳಿವೆ.

“ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ”

ಅಧ್ಯಯನ ಲೇಖನ 23: ಆಗಸ್ಟ್‌ 3-9, 2020. ಇಂದು ಯಾವ ವಿವಾದಾಂಶ ಇತ್ಯರ್ಥ ಆಗ್ಬೇಕಾಗಿದೆ? ಇದೊಂದು ದೊಡ್ಡ ವಿವಾದಾಂಶ ಆಗಿದೆ ಯಾಕೆ? ಇದ್ರಲ್ಲಿ ನಮ್ಮ ಪಾತ್ರವೇನು? ಈ ಪ್ರಶ್ನೆಗಳಿಗೆ ಮತ್ತು ಇದಕ್ಕೆ ಸಂಬಂಧಪಟ್ಟ ಬೇರೆ ಪ್ರಶ್ನೆಗಳಿಗೆ ಉತ್ರ ತಿಳ್ಕೊಳ್ಳೋದ್ರಿಂದ ಯೆಹೋವನ ಜೊತೆಗಿರೋ ನಮ್ಮ ಸಂಬಂಧ ಇನ್ನಷ್ಟು ಬಲವಾಗುತ್ತೆ.

“ನಿನ್ನ ನಾಮದಲ್ಲಿ ಭಯಭಕ್ತಿಯಿಂದಿರುವಂತೆ ಏಕಮನಸ್ಸನ್ನು ಅನುಗ್ರಹಿಸು”

ಅಧ್ಯಯನ ಲೇಖನ 24: ಆಗಸ್ಟ್‌ 10-16, 2020. ಈ ಲೇಖನದಲ್ಲಿ ದಾವೀದನು ಪ್ರಾರ್ಥನೆಯಲ್ಲಿ ಹೇಳಿದ ಮಾತುಗಳ ಬಗ್ಗೆ ಚರ್ಚಿಸಲಿದ್ದೇವೆ. ಆ ಮಾತುಗಳು ಕೀರ್ತನೆ 86:11, 12 ರಲ್ಲಿದೆ. ಯೆಹೋವನ ಹೆಸ್ರಿಗೆ ಭಯಪಡುವುದು ಅಂದರೇನು? ಆ ಮಹಾನ್‌ ಹೆಸ್ರಿಗೆ ನಾವ್ಯಾಕೆ ತುಂಬ ಗೌರವ ತೋರಿಸ್ಬೇಕು? ನಾವು ತಪ್ಪು ಮಾಡದಂತೆ ದೇವಭಯ ನಮ್ಮನ್ನು ಹೇಗೆ ತಡೆಯುತ್ತೆ?

ವಾಚಕರಿಂದ ಪ್ರಶ್ನೆಗಳು

ಗಲಾತ್ಯ 5:22, 23 ರಲ್ಲಿರೋ ಗುಣಗಳಷ್ಟೇ ಪವಿತ್ರಾತ್ಮದಿಂದ ಸಿಗೋದಾ?

‘ನಾನೇ ನನ್ನ ಕುರಿಗಳನ್ನು ಹುಡುಕುವೆನು’

2020, ಆಗಸ್ಟ್‌ 17-23 ರವಾರದ ಅಧ್ಯಯನ ಲೇಖನ 25: ತುಂಬ ವರ್ಷ ಯೆಹೋವನ ಸೇವೆ ಮಾಡಿದ ನಂಬಿಗಸ್ತ ಸೇವಕರು ಈಗ್ಯಾಕೆ ಸಭೆಯಿಂದ ದೂರ ಹೋಗಿದ್ದಾರೆ? ಅವ್ರ ಬಗ್ಗೆ ದೇವ್ರಿಗೆ ಏನನಿಸುತ್ತೆ? ಈ ಲೇಖನದಲ್ಲಿ ಇವುಗಳಿಗೆ ಉತ್ರ ಇದೆ. ಹಿಂದಿನ ಕಾಲದಲ್ಲಿದ್ದ ಕೆಲವು ಸೇವಕರಿಗೆ ಯೆಹೋವ ಸಹಾಯ ಮಾಡಿದ ವಿಧದಿಂದ ನಾವೇನು ಕಲೀಬಹುದು ಅಂತನೂ ನೋಡಲಿದ್ದೇವೆ.

“ನನ್ನ ಬಳಿಗೆ ಮರಳಿ ಬನ್ನಿ”

ಅಧ್ಯಯನ ಲೇಖನ 26: ಆಗಸ್ಟ್‌ 24-30, 2020. ಕೂಟಕ್ಕೆ ಬರೋದನ್ನ, ಸುವಾರ್ತೆ ಸಾರೋದನ್ನ ನಿಲ್ಲಿಸಿರೋರು ಪುನಃ ತನ್ನ ಬಳಿಗೆ ಬರ್ಬೇಕು ಅನ್ನೋದೇ ಯೆಹೋವನ ಆಸೆ. ಆತನು ಅವ್ರಿಗೆ “ನನ್ನ ಬಳಿಗೆ ಮರಳಿ ಬನ್ನಿ” ಅಂತ ಆಮಂತ್ರಿಸಿದ್ದಾನೆ. ಈ ಆಮಂತ್ರಣವನ್ನು ನಿಷ್ಕ್ರಿಯ ಪ್ರಚಾರಕರು ಸ್ವೀಕರಿಸೋಕೆ ನಾವು ಪ್ರೋತ್ಸಾಹಿಸಬೇಕು. ಅಂಥವ್ರು ಪುನಃ ಯೆಹೋವನ ಬಳಿ ಬರೋಕೆ ಹೇಗೆಲ್ಲಾ ಸಹಾಯ ಮಾಡ್ಬಹುದು ಅನ್ನೋದನ್ನ ಈ ಲೇಖನದಲ್ಲಿ ಚರ್ಚಿಸಲಿದ್ದೇವೆ.