ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾವಲಿನಬುರುಜುವಿನಲ್ಲಿ ಬರೋ ಬೇರೆ ಲೇಖನಗಳು

ಕಾವಲಿನಬುರುಜುವಿನಲ್ಲಿ ಬರೋ ಬೇರೆ ಲೇಖನಗಳು

JW ಲೈಬ್ರರಿಯಲ್ಲಿ ಕಾವಲಿನಬುರುಜು ಅಧ್ಯಯನ ಲೇಖನ ಸುಲಭವಾಗಿ ಸಿಗೋದ್ರಿಂದ ಅದನ್ನ ಬಳಸಿ ಕೂಟಗಳಿಗೆ ತಯಾರಿ ಮಾಡೋಕೆ ತುಂಬ ಪ್ರಚಾರಕರು ಇಷ್ಟಪಡ್ತಾರೆ. ಆದ್ರೆ ಅಧ್ಯಯನ ಲೇಖನಗಳ ಜೊತೆಗೆ ಬೇರೆ ಲೇಖನಗಳೂ ಇರುತ್ತೆ. ಅದು ನಮಗೆ ಯೆಹೋವನ ಜೊತೆ ಸ್ನೇಹ ಜಾಸ್ತಿ ಮಾಡ್ಕೊಳ್ಳೋಕೆ ಸಹಾಯ ಮಾಡುತ್ತೆ. ಆ ಲೇಖನಗಳನ್ನ ಕಂಡುಹಿಡಿಯೋದು ಹೇಗೆ?

  • ಕೂಟಗಳು (Meetings) ಟ್ಯಾಬ್‌ನಲ್ಲಿರೋ ಅಧ್ಯಯನ ಲೇಖನದ ಕೆಳಗೆ “ಹೆಚ್ಚಿನ ಮಾಹಿತಿ” ಅನ್ನೋ ಉಪಶೀರ್ಷಿಕೆ ಇದೆ. ಅದ್ರ ಕೆಳಗೆ “ಈ ಸಂಚಿಕೆಯ ಬೇರೆ ಲೇಖನಗಳು” ಅಂತ ಇರೋ ಲಿಂಕನ್ನ ಒತ್ತಿದ್ರೆ ಪರಿವಿಡಿ ಬರುತ್ತೆ. ಅಲ್ಲಿ ಶೀರ್ಷಿಕೆ ಮೇಲೆ ನಂಬರ್‌ ಇದ್ರೆ ಅದು ಅಧ್ಯಯನ ಲೇಖನಗಳು. ಇಲ್ಲಾಂದ್ರೆ ಅದು ಬೇರೆ ಲೇಖನಗಳು. ಅದ್ರಲ್ಲಿ ನಿಮಗೆ ಇಷ್ಟ ಆಗೋದನ್ನ ಕ್ಲಿಕ್‌ ಮಾಡಿ ಓದಬಹುದು.

  • JW ಲೈಬ್ರರಿಯಲ್ಲಿ ಹೋಮ್‌ ಟ್ಯಾಬಲ್ಲಿ “ಹೊಸತು” ಅನ್ನೋ ವಿಭಾಗದಲ್ಲಿ ಹೊಸದಾಗಿ ಬಂದಿರೋ ಕಾವಲಿನಬುರುಜು ಇರುತ್ತೆ. ಅದನ್ನ ಡೌನ್‌ಲೋಡ್‌ ಮಾಡ್ಕೊಳ್ಳಿ. ಆಮೇಲೆ ಆ ಪತ್ರಿಕೆಯನ್ನ ಓಪನ್‌ ಮಾಡ್ಕೊಂಡು “ಪರಿವಿಡಿ” ಅನ್ನೋದನ್ನ ಒತ್ತಿದ್ರೆ ಬೇರೆ ಲೇಖನಗಳೂ ಸಿಗುತ್ತೆ. ಅದನ್ನೆಲ್ಲ ಓದಬಹುದು.