ಅನುಭವ
ಎಲ್ರಿಗೂ ಅನುಕಂಪ ತೋರಿಸಿ
ಒಂದಿನ ನ್ಯೂಜ಼ಿಲೆಂಡಲ್ಲಿದ್ದ ಒಬ್ಬ ಸಹೋದರಿ ಒಬ್ಬರು ಇನ್ನೊಬ್ಬರ ಬಗ್ಗೆ ಚಿಂತೆ ಮಾಡಬೇಕು ಅನ್ನೋ ವಿಡಿಯೋ ನೋಡಿದ್ರು. ಅದ್ರಲ್ಲಿ ಯೆಹೋವನಿಗೆ ಅನುಕಂಪ ಅನ್ನೋ ಗುಣ ಇರೋದಷ್ಟೇ ಅಲ್ಲ ಅದನ್ನ ಆತನು ಜನ್ರಿಗೆ ತೋರಿಸ್ತಾನೆ ಅಂತ ಇತ್ತು. (ಯೆಶಾ. 63:7-9) ಆ ವಿಡಿಯೋದಲ್ಲಿ ಹೇಳಿದ ಹಾಗೆನೇ ಸಹೋದರಿ ಬೇರೆಯವ್ರಿಗೆ ಸಹಾಯ ಮಾಡಬೇಕು ಅಂತ ಅಂದ್ಕೊಂಡ್ರು. ಅದೇ ದಿನ ಅವರು ಮನೆಗೆ ಸಾಮಾನು ತಗೊಳ್ಳೋಕೆ ಅಂಗಡಿಗೆ ಹೋಗಿದ್ರು. ಅಲ್ಲಿ ಒಬ್ಬ ಸ್ತ್ರೀಯನ್ನ ಭೇಟಿ ಮಾಡಿದ್ರು. ಆ ಸ್ತ್ರೀಗೆ ಮನೆ ಇರ್ಲಿಲ್ಲ, ಅವ್ರ ಹತ್ರ ಹಣನೂ ಇರ್ಲಿಲ್ಲ. ಅದಕ್ಕೇ ಸಹೋದರಿ ಅವ್ರಿಗೆ ಊಟ ತಂದು ಕೊಟ್ರು. ಅಷ್ಟೇ ಅಲ್ಲ ಅವ್ರಿಗೆ ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? ಅನ್ನೋ ಟ್ರ್ಯಾಕ್ಟ್ ಕೊಟ್ಟು ಅದ್ರಲ್ಲಿದ್ದ ವಿಷ್ಯದ ಬಗ್ಗೆ ಮಾತಾಡಿದ್ರು.
ಆಗ ಆ ಸ್ತ್ರೀ ಅತ್ತುಬಿಟ್ರು. ಅವರು ಹುಟ್ಟಿ ಬೆಳೆದಿದ್ದು ಯೆಹೋವನ ಸಾಕ್ಷಿಗಳ ಕುಟುಂಬದಲ್ಲೇ. ಆದ್ರೆ ಕೆಲವು ವರ್ಷಗಳ ಹಿಂದೆ ಸತ್ಯ ಬಿಟ್ಟು ಹೋಗಿದ್ರು ಅಂತ ನಮ್ಮ ಸಹೋದರಿ ಹತ್ರ ಹೇಳಿದ್ರು. ಅವರು ಯೆಹೋವನಿಗೆ ‘ನಿನ್ನ ಹತ್ರ ವಾಪಸ್ ಬರೋಕೆ ಸಹಾಯ ಮಾಡಪ್ಪಾ’ ಅಂತ ಕೆಲವು ದಿನಗಳಿಂದ ಬೇಡ್ಕೊಳ್ತಿದ್ರು. ಇದು ಗೊತ್ತಾದ ಮೇಲೆ ನಮ್ಮ ಸಹೋದರಿ ಅವ್ರಿಗೆ ಬೈಬಲ್ ಕೊಟ್ಟು ಸ್ಟಡಿ ತಗೊಳ್ಳೋಕೆ ಏರ್ಪಾಡು ಮಾಡಿದ್ರು. a
ನಾವು ನಮ್ಮ ಸಂಬಂಧಿಕರಿಗೆ, ಸಹೋದರ ಸಹೋದರಿಯರಿಗೆ ಯೆಹೋವ ದೇವರ ತರ ಅನುಕಂಪ ತೋರಿಸಬೇಕು. ಅಷ್ಟೇ ಅಲ್ಲ, ಬೇರೆಯವ್ರಿಗೂ ಅನುಕಂಪ ತೋರಿಸೋಕೆ ಸಿಹಿಸುದ್ದಿ ಸಾರೋ ಅವಕಾಶಕ್ಕಾಗಿ ಹುಡುಕ್ತಾ ಇರಬೇಕು.
a ನಿಷ್ಕ್ರಿಯರಿಗೆ ಹೇಗೆ ಸಹಾಯ ಮಾಡೋದು ಅಂತ ತಿಳ್ಕೊಳ್ಳೋಕೆ ಜೂನ್ 2020ರ ಕಾವಲಿನಬುರುಜುವಿನಲ್ಲಿರೋ “ನನ್ನ ಬಳಿಗೆ ಮರಳಿ ಬನ್ನಿ” ಅನ್ನೋ ಲೇಖನ ನೋಡಿ.