ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯಾ?

ನಿಮಗೆ ನೆನಪಿದೆಯಾ?

ಈ ವರ್ಷದ ಕಾವಲಿನಬುರುಜು ಪತ್ರಿಕೆಗಳನ್ನ ಚೆನ್ನಾಗಿ ಓದಿದ್ದೀರಾ? ಹಾಗಾದ್ರೆ ಈ ಪ್ರಶ್ನೆಗಳಿಗೆ ಉತ್ತರ ಕೊಡ್ತೀರಾ?

‘ಯೋಚಿಸೋ ವಿಧಾನವನ್ನ ಬದಲಾಯಿಸಿಕೊಳ್ಳೋದ್ರಲ್ಲಿ’ ಏನ್ನೆಲ್ಲ ಒಳಗೂಡಿದೆ? (ರೋಮ. 12:2)

ನಾವು ಬರಿ ಒಂದೆರಡು ಒಳ್ಳೇ ಕೆಲಸಗಳನ್ನ ಮಾಡಿದ್ರೆ ಸಾಕಾಗಲ್ಲ. ನಮ್ಮ ಮನಸ್ಸಲ್ಲಿ ಏನಿದೆ, ನಾವು ಯಾವ ತರ ಯೋಚನೆ ಮಾಡ್ತಾ ಇದ್ದೀವಿ ಅನ್ನೋದನ್ನ ಪರೀಕ್ಷೆ ಮಾಡಿಕೊಳ್ತಾ ಇರಬೇಕು. ಆಮೇಲೆ ಅದಕ್ಕೆ ತಕ್ಕ ಹಾಗೆ ಬದಲಾವಣೆ ಮಾಡಿಕೊಳ್ತಾ ಇರಬೇಕು. ‘ಯೆಹೋವನ ನೀತಿ-ನಿಯಮಗಳನ್ನ ನಾನು ಪಾಲಿಸ್ತಾ ಇದ್ದೀನಾ’ ಅಂತ ಆಗಾಗ ನಮ್ಮನ್ನೇ ಕೇಳ್ಕೊಬೇಕು.—ಕಾವಲಿನಬುರುಜು23.01 ಪುಟ 8-9.

ಲೋಕದ ಘಟನೆಗಳನ್ನ ನೋಡುವಾಗ ನಾವ್ಯಾಕೆ ಎಚ್ಚರವಾಗಿರಬೇಕು?

ಲೋಕದಲ್ಲಿ ನಡಿತಿರೋ ಘಟನೆಗಳನ್ನ ನೋಡುವಾಗ ಇದು ಬೈಬಲ್‌ ಭವಿಷ್ಯವಾಣಿಯ ನೆರವೇರಿಕೆನಾ ಅಂತ ತಿಳ್ಕೊಳ್ಳೋಕೆ ನಾವು ಆಸೆಪಡ್ತೀವಿ. ಆದ್ರೆ ಆ ಘಟನೆ ಬೈಬಲ್‌ ಭವಿಷ್ಯವಾಣಿಯ ನೆರವೇರಿಕೆನೇ ಅಂತ ನಾವು ಅಂದ್ಕೊಬಾರದು. ಯೆಹೋವನ ಸಂಘಟನೆ ಏನು ಹೇಳುತ್ತೋ ಅದನ್ನ ಮಾತ್ರ ನಂಬಬೇಕು. ಇಲ್ಲಾಂದ್ರೆ ಸಭೆಯ ಒಗ್ಗಟ್ಟು ಒಡೆದುಹೋಗುತ್ತೆ. (1 ಕೊರಿಂ. 1:10)—ಕಾವಲಿನಬುರುಜು23.02 ಪುಟ 16.

ಯೇಸು ತಗೊಂಡಿರೋ ದೀಕ್ಷಾಸ್ನಾನಕ್ಕೂ ನಾವು ತಗೊಳ್ತಿರೋ ದೀಕ್ಷಾಸ್ನಾನಕ್ಕೂ ಏನ್‌ ವ್ಯತ್ಯಾಸ?

ಯೆಹೋವನಿಗೆ ಸಮರ್ಪಿಸ್ಕೊಂಡಿದ್ದ ಇಸ್ರಾಯೇಲ್‌ ಜನಾಂಗದಲ್ಲಿ ಯೇಸು ಹುಟ್ಟಿದ್ರಿಂದ ಆತನು ಯೆಹೋವನಿಗೆ ತನ್ನನ್ನ ಸಮರ್ಪಿಸ್ಕೊಳ್ಳೋ ಅಗತ್ಯ ಇರಲಿಲ್ಲ.​ ಯೇಸು ಒಬ್ಬ ಪರಿಪೂರ್ಣ ವ್ಯಕ್ತಿ ಆಗಿದ್ದ. ಆತನು ಯಾವತ್ತೂ ತಪ್ಪೇ ಮಾಡಲಿಲ್ಲ. ಅದಕ್ಕೆ ಪಶ್ಚಾತ್ತಾಪ ಪಡೋ ಅವಶ್ಯಕತೆನೂ ಇರಲಿಲ್ಲ.—ಕಾವಲಿನಬುರುಜು23.03 ಪುಟ 5.

ಬೇರೆಯವ್ರಿಗೂ ಉತ್ರ ಹೇಳೋಕೆ ಅವಕಾಶ ಸಿಗಬೇಕಂದ್ರೆ ನಾವೇನು ಮಾಡಬೇಕು?

ನಮ್ಮ ಉತ್ರ ಚಿಕ್ಕದಾಗಿರಬೇಕು, ಹೀಗೆ ಮಾಡಿದ್ರೆ ಬೇರೆಯವರಿಗೂ ಉತ್ರ ಕೊಡೋಕೆ ಅವಕಾಶ ಸಿಗುತ್ತೆ, ಉತ್ರ ಕೊಡುವಾಗ ಪ್ಯಾರದಲ್ಲಿರೋ ಒಂದು ಅಂಶ ಮಾತ್ರ ಹೇಳಬೇಕು. ಆಗ ಉಳಿದಿರೋ ವಿಷ್ಯಗಳನ್ನ ಹೇಳೋಕೆ ಬೇರೆಯವ್ರಿಗೂ ಅವಕಾಶ ಸಿಗುತ್ತೆ.—ಕಾವಲಿನಬುರುಜು23.04 ಪುಟ 23.

ಯೆಶಾಯ 35:8ರಲ್ಲಿ ಹೇಳಿರೋ “ಪವಿತ್ರ ದಾರಿ” ಅಂದ್ರೆ ಏನು?

ಮೊದ್ಲು, ಈ ಸಾಂಕೇತಿಕ ಹೆದ್ದಾರಿ ಯೆಹೂದ್ಯರು ಬಾಬೆಲಿಂದ ತಮ್ಮ ತಾಯ್ನಾಡಿಗೆ ಹೋಗಿದ್ದ ದಾರಿಯನ್ನ ಸೂಚಿಸ್ತಿತ್ತು. ಈಗ ಆ ದಾರಿ ಏನನ್ನ ಸೂಚಿಸುತ್ತೆ? ಇದು ನಮ್ಮನ್ನ ಹೊಸ ಲೋಕಕ್ಕೆ ಕರ್ಕೊಂಡು ಹೋಗೋ ದಾರಿಯನ್ನ ಸೂಚಿಸುತ್ತೆ. ಕ್ರಿಸ್ತ ಶಕ 1919ರಿಂದ ಅನೇಕ ದೇವ ಜನ್ರು ಈ ‘ಪವಿತ್ರ ದಾರಿಯಲ್ಲಿ’ ನಡಿತಾ ಇದ್ದಾರೆ. ಆದ್ರೆ ಅದಕ್ಕೂ ನೂರಾರು ವರ್ಷಗಳ ಮುಂಚೆನೇ ಈ ದಾರಿಯನ್ನ ಸಿದ್ಧ ಮಾಡೋಕೆ ಶುರುಮಾಡಲಾಯ್ತು. ಅಂದ್ರೆ ಬೈಬಲನ್ನ ಭಾಷಾಂತರ ಮಾಡಿ ಪ್ರಿಂಟ್‌ ಮಾಡಲಾಯ್ತು. ಅದ್ರ ಜೊತೆ ಇನ್ನೂ ಬೇರೆ ವಿಷ್ಯಗಳನ್ನೂ ಮಾಡಲಾಯ್ತು.—ಕಾವಲಿನಬುರುಜು23.05 ಪುಟ 15-19.

ಜ್ಞಾನೋಕ್ತಿ 9ನೇ ಅಧ್ಯಾಯದಲ್ಲಿರೋ ಇಬ್ರು ಸ್ತ್ರೀಯರಿಂದ ನಮಗೆ ಯಾವ ಪಾಠ ಇದೆ?

ಜ್ಞಾನೋಕ್ತಿಯಲ್ಲಿ ಮೂರ್ಖತನವನ್ನ ಒಂದು ಸ್ತ್ರೀಗೆ ಮತ್ತು ವಿವೇಕವನ್ನ ಇನ್ನೊಂದು ಸ್ತ್ರೀಗೆ ಹೋಲಿಸಲಾಗಿದೆ. “ಬುದ್ಧಿ ಇಲ್ಲದ ಸ್ತ್ರೀ” ಮನೆಗೆ ಹೋದ್ರೆ “ಸ್ಮಶಾನ” ಸೇರುತ್ತೀವಿ. ಆದ್ರೆ “ನಿಜ ವಿವೇಕ” ಅನ್ನೋ ಸ್ತ್ರೀಯ ಮನೆಗೆ ಹೋದ್ರೆ “ವಿವೇಚನೆಯ ದಾರಿಯಲ್ಲಿ” ನಡಿತಾ ಖುಷಿಯಾಗಿ ಇರ್ತೀವಿ. ಅಷ್ಟೆ ಅಲ್ಲ ಮುಂದೆ ಶಾಶ್ವತ ಜೀವನೂ ಸಿಗುತ್ತೆ. (ಜ್ಞಾನೋ. 9:1, 6, 13, 18)—ಕಾವಲಿನಬುರುಜು23.06 ಪುಟ 22-24.

ಯೆಹೋವ ಲೋಟನ ಜೊತೆ ನಡ್ಕೊಂಡ ರೀತಿಯಿಂದ ಆತನಿಗೆ ದೀನತೆ ಇದೆ ಮತ್ತು ಬಿಟ್ಕೊಡ್ತಾನೆ ಅಂತ ಹೇಗೆ ಗೊತ್ತಾಗುತ್ತೆ?

ಯೆಹೋವ ಲೋಟನಿಗೆ, ಸೊದೋಮನ್ನ ಬಿಟ್ಟು ಅಲ್ಲಿದ್ದ ಬೆಟ್ಟದ ಪ್ರದೇಶಕ್ಕೆ ಓಡಿಹೋಗೋಕೆ ಹೇಳಿದನು. ಆದ್ರೆ ಲೋಟ ಯೆಹೋವನ ಹತ್ರ ಚೋಗರ್‌ ಅನ್ನೋ ಊರಿಗೆ ಓಡಿ ಹೋಗ್ತೀವಿ ಅಂತ ಕೇಳ್ಕೊಂಡ್ರು. ಆಗ ಯೆಹೋವ ಲೋಟನಿಗೆ ಅಲ್ಲಿಗೆ ಹೋಗೋಕೆ ಅನುಮತಿ ಕೊಟ್ಟನು.—ಕಾವಲಿನಬುರುಜು23.07 ಪುಟ 21.

ಗಂಡ ಅಶ್ಲೀಲ ಚಿತ್ರ ನೋಡಿದ್ರೆ ಹೆಂಡತಿ ಏನು ಮಾಡಬೇಕು?

ಇದಕ್ಕೆ ಅವಳೇ ಕಾರಣ ಅಂತ ಅಂದ್ಕೊಬಾರದು. ಯೆಹೋವನ ಜೊತೆ ತನಗಿರೋ ಸ್ನೇಹನ ಗಟ್ಟಿ ಮಾಡ್ಕೊಬೇಕು ಮತ್ತು ತುಂಬ ದುಃಖದಲ್ಲಿದ್ದ ಸ್ತ್ರೀಯರ ಬಗ್ಗೆ ಬೈಬಲಲ್ಲಿ ಓದಿ, ಅವರಿಗೆ ಯೆಹೋವನಿಂದ ಹೇಗೆ ಸಾಂತ್ವನ ಸಿಕ್ತು ಅಂತ ಯೋಚಿಸಬೇಕು. ಅಷ್ಟೆ ಅಲ್ಲ ತನ್ನ ಗಂಡನಿಗೆ, ಅಶ್ಲೀಲ ಚಿತ್ರಗಳನ್ನ ನೋಡಬೇಕು ಅನ್ನೋ ಆಸೆ ಹುಟ್ಟಿಸೋ ಸನ್ನಿವೇಶಗಳಿಂದ ದೂರ ಇರೋಕೆ ಸಹಾಯ ಮಾಡಬಹುದು.—ಕಾವಲಿನಬುರುಜು23.08 ಪುಟ 14-17.

ನಮ್ಮ ನಂಬಿಕೆ ಬಗ್ಗೆ ಯಾರಾದ್ರು ಪ್ರಶ್ನೆ ಮಾಡಿದಾಗ, ಮೃದುವಾಗಿ ನಡ್ಕೊಳ್ಳೋಕೆ ತಿಳುವಳಿಕೆ ಹೇಗೆ ಸಹಾಯ ಮಾಡುತ್ತೆ?

ನಮಗೆ ಯಾರಾದ್ರು ಪ್ರಶ್ನೆ ಕೇಳಿದಾಗ ಅವರು ಯಾಕೆ ಹಾಗೆ ಕೇಳ್ತಿದ್ದಾರೆ, ಅವ್ರ ಮನಸ್ಸಲ್ಲಿ ಏನಿದೆ ಅಂತ ತಿಳ್ಕೊಳ್ಳೋಕೆ ಪ್ರಯತ್ನ ಮಾಡಬೇಕು. ಆಗ ನಮಗೆ ಮೃದುವಾಗಿ ಉತ್ರ ಕೊಡೋಕೆ ಆಗುತ್ತೆ.—ಕಾವಲಿನಬುರುಜು23.09 ಪುಟ 17.

ಮರಿಯ ಬಲ ಪಡ್ಕೊಂಡ ರೀತಿಯಿಂದ ನಾವೇನು ಕಲಿಬಹುದು?

ತಾನು ಮೆಸ್ಸೀಯನ ತಾಯಿ ಆಗ್ತೀನಿ ಅಂತ ಮರಿಯಗೆ ಗೊತ್ತಾದಾಗ ಅವಳು ಬೇರೆಯವ್ರಿಂದ ಬಲ ಪಡ್ಕೊಂಡಳು. ಗಬ್ರಿಯೇಲ ಮತ್ತು ಎಲಿಸಬೆತ್‌ ದೇವರ ವಾಕ್ಯವನ್ನ ಬಳಸಿ ಅವಳಿಗೆ ಸಹಾಯ ಮಾಡಿದ್ರು. ಅದೇ ತರ ನಾವು ಸಹೋದರ ಸಹೋದರಿಯರಿಂದ ಬಲ ಪಡ್ಕೊಬಹುದು.—ಕಾವಲಿನಬುರುಜು23.10 ಪುಟ 15.

ಯೆಹೋವ ನಮ್ಮ ಪ್ರಾರ್ಥನೆಗೆ ಹೇಗೆಲ್ಲ ಉತ್ರ ಕೊಡಬಹುದು?

ನಮ್ಮ ಪ್ರಾರ್ಥನೆಗಳನ್ನ ಕೇಳ್ತೀನಿ ಅಂತ ಮಾತು ಕೊಟ್ಟಿದ್ದಾನೆ. ನಾವು ಮಾಡೋ ಪ್ರಾರ್ಥನೆ ಆತನ ಉದ್ದೇಶಕ್ಕೆ ತಕ್ಕ ಹಾಗೆ ಇದ್ಯಾ ಅಂತ ಗಮನಿಸ್ತಾನೆ. (ಯೆರೆ. 29:12) ಯೆಹೋವ ಒಬ್ಬೊಬ್ರಿಗೆ ಒಂದೊಂದು ರೀತಿಲಿ ಉತ್ರ ಕೊಡಬಹುದು, ಆದ್ರೆ ಆತನು ನಮಗೆ ಯಾವಾಗ್ಲೂ ಸಹಾಯ ಮಾಡ್ತಾನೆ.—ಕಾವಲಿನಬುರುಜು23.11 ಪುಟ 21-22.

ಪೌಲ ರೋಮನ್ನರಿಗೆ 5:2ರಲ್ಲಿ “ನಿರೀಕ್ಷೆ” ಬಗ್ಗೆ ಈಗಾಗ್ಲೇ ಹೇಳಿದ ಮೇಲೂ ಮತ್ತೆ ಯಾಕೆ ಅದ್ರ ಬಗ್ಗೆ ವಚನ 4ರಲ್ಲಿ ಮಾತಾಡ್ತಿದ್ದಾನೆ?

ಮೊದಲನೇ ಸಲ ಸತ್ಯ ಕೇಳಿಸ್ಕೊಂಡಾಗ ಒಬ್ಬ ವ್ಯಕ್ತಿಗೆ ಪರದೈಸಲ್ಲಿ ಖುಷಿಖುಷಿಯಾಗಿ ಜೀವಿಸೋ ನಿರೀಕ್ಷೆ ಬಗ್ಗೆ ಗೊತ್ತಾಗುತ್ತೆ. ಆದ್ರೆ ಅವನು ಸತ್ಯಕ್ಕೋಸ್ಕರ ಹಿಂಸೆ-ವಿರೋಧಗಳನ್ನ ಎದುರಿಸಿದಾಗ, ಕಷ್ಟಗಳನ್ನ ಸಹಿಸ್ಕೊಂಡಾಗ, ದೇವರ ಮೆಚ್ಚುಗೆ ಪಡ್ಕೊಂಡಾಗ ಅವನ ನಿರೀಕ್ಷೆ ಇನ್ನೂ ಗಟ್ಟಿಯಾಗುತ್ತೆ.—ಕಾವಲಿನಬುರುಜು23.12 ಪುಟ 12-13.