ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯಾ?

ನಿಮಗೆ ನೆನಪಿದೆಯಾ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ಓದಿ ಆನಂದಿಸಿದ್ದೀರಾ? ಹಾಗಿರುವಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಿ:

ವಲಸೆಬಂದ ಹೆತ್ತವರು ತಮ್ಮ ಮಕ್ಕಳ ಆಧ್ಯಾತ್ಮಿಕತೆಗಾಗಿ ಭಾಷೆಯ ಬಗ್ಗೆ ಯಾಕೆ ಯೋಚಿಸಬೇಕು?

ಮಕ್ಕಳು ಸ್ಥಳೀಯ ಭಾಷೆಯನ್ನು ಶಾಲೆಯಲ್ಲೊ ಬೇರೆಯವರಿಂದಲೊ ಖಂಡಿತ ಕಲಿಯುತ್ತಾರೆ. ಮಕ್ಕಳು ಒಂದಕ್ಕಿಂತ ಜಾಸ್ತಿ ಭಾಷೆ ಮಾತಾಡುವುದರಿಂದ ಅವರಿಗೆ ಪ್ರಯೋಜನಗಳಿವೆ. ತಮ್ಮ ಮಕ್ಕಳಿಗೆ ಸತ್ಯವನ್ನು ಗ್ರಹಿಸಿಕೊಳ್ಳಲು ಮತ್ತು ಆಧ್ಯಾತ್ಮಿಕವಾಗಿ ಪ್ರಗತಿ ಮಾಡಲು ತಮ್ಮ ಭಾಷೆಯ ಸಭೆಯಲ್ಲಿದ್ದರೆ ಸಹಾಯವಾಗುತ್ತಾ ಅಥವಾ ಸ್ಥಳೀಯ ಭಾಷೆಯ ಸಭೆಗೆ ಹೋದರೆ ಸಹಾಯವಾಗುತ್ತಾ ಎಂದು ಯೋಚಿಸಬೇಕು. ಕ್ರೈಸ್ತ ಹೆತ್ತವರು ತಮಗೇನು ಇಷ್ಟ, ಏನು ಸುಲಭ ಎನ್ನುವುದಕ್ಕಿಂತ ತಮ್ಮ ಮಕ್ಕಳಿಗೆ ಏನು ಅಗತ್ಯ ಎಂಬದಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ.—w17.05, ಪು. 9-11.

“ಇವುಗಳಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತೀಯೊ?” ಎಂದು ಪೇತ್ರನನ್ನು ಯೇಸು ಕೇಳಿದಾಗ ಯಾವುದನ್ನು ಸೂಚಿಸಿ ಮಾತಾಡುತ್ತಿದ್ದನು? (ಯೋಹಾ. 21:15)

ಯೇಸು ದಡಕ್ಕೆ ತಂದುಹಾಕಿದ್ದ ಮೀನಿನ ಕುರಿತು ಮತ್ತು/ಅಥವಾ ಮೀನುಗಾರಿಕೆಯ ಕುರಿತು ಮಾತಾಡಿರಬಹುದು. ಯೇಸು ತೀರಿಕೊಂಡ ನಂತರ ಪೇತ್ರನು ತನ್ನ ಹಿಂದಿನ ಕೆಲಸ, ಅಂದರೆ ಮೀನು ಹಿಡಿಯುವ ಕೆಲಸಕ್ಕೆ ಹೋಗಿಬಿಟ್ಟನು. ಕ್ರೈಸ್ತರಾದ ನಾವು ಉದ್ಯೋಗಕ್ಕೆ ನಮ್ಮ ಹೃದಯದಲ್ಲಿ ಯಾವ ಸ್ಥಾನ ಕೊಟ್ಟಿದ್ದೇವೆ ಎಂದು ತೂಗಿನೋಡಬೇಕು.—w17.05, ಪು. 22-23.

ಹೀಬ್ರು ಭಾಷೆ ಕಲಿಯಲು ಬಯಸಿದವರಿಗೆ ಸಹಾಯ ಆಗಲಿಕ್ಕಾಗಿ ಎಲಿಯಾಸ್‌ ಹಟರ್‌ರವರು ಯಾವ ತಂತ್ರವನ್ನು ಉಪಯೋಗಿಸಿದರು?

ವಿದ್ಯಾರ್ಥಿಗಳು ಬೈಬಲಿನಲ್ಲಿರುವ ಹೀಬ್ರು ಭಾಷೆಯ ಮೂಲಪದವನ್ನು ಮತ್ತು ಅದಕ್ಕೆ ಸೇರಿಸುವ ಆರಂಭದ ಅಥವಾ ಕೊನೆಯ ಪದಗಳನ್ನು ಸುಲಭವಾಗಿ ಕಂಡುಹಿಡಿಯಲು ಸಹಾಯಮಾಡಿದರು. ಅದಕ್ಕಾಗಿ ಅವರು ಹೀಬ್ರುವಿನ ಮೂಲಪದಗಳನ್ನು ದಪ್ಪಕ್ಷರದಲ್ಲಿ ಮುದ್ರಿಸಿ ಮೂಲಪದದ ಆರಂಭ ಮತ್ತು ಕೊನೆಯಲ್ಲಿ ಸೇರಿಸುವ ಪದಗಳನ್ನು ತೆಳುವಾಗಿ ಮುದ್ರಿಸಿದರು. ನ್ಯೂ ವಲ್ಡ್‌ ಟ್ರಾನ್ಸ್‌ಲೇಷನ್‌ ಆಫ್‌ ದ ಹೋಲಿ ಸ್ಕ್ರಿಪ್ಚರ್ಸ್‌—ವಿತ್‌ ರೆಫರೆನ್ಸಸ್‌ ಸಹ ಪಾದಟಿಪ್ಪಣಿಯಲ್ಲಿ ಈ ವಿಧಾನವನ್ನೇ ಬಳಸಿದೆ.—wp17.4, ಪು. 11-12.

ಬೇರೆ ಮನುಷ್ಯರಿಂದ ತನ್ನನ್ನು ರಕ್ಷಿಸಿಕೊಳ್ಳಲು ಬಂದೂಕನ್ನು ಇಟ್ಟುಕೊಳ್ಳುವುದರ ಬಗ್ಗೆ ಒಬ್ಬ ಕ್ರೈಸ್ತನ ದೃಷ್ಟಿಕೋನವನ್ನು ಯಾವ ಅಂಶಗಳು ಪ್ರಭಾವಿಸಬೇಕು?

ಕೆಲವು ಅಂಶಗಳು: ದೇವರ ದೃಷ್ಟಿಯಲ್ಲಿ ಜೀವ ಅಮೂಲ್ಯ. ಸ್ವಂತ ರಕ್ಷಣೆಗಾಗಿ ಕತ್ತಿಯನ್ನು ತೆಗೆದುಕೊಳ್ಳುವಂತೆ ಯೇಸು ತನ್ನ ಹಿಂಬಾಲಕರಿಗೆ ಹೇಳಲಿಲ್ಲ. (ಲೂಕ 22:36, 38) ನಾವು ನಮ್ಮ ಕತ್ತಿಗಳನ್ನು ಗುಳಗಳನ್ನಾಗಿ ಮಾಡಬೇಕು. ಹಣ ವಸ್ತುಗಳಿಗಿಂತ ಜೀವ ಮುಖ್ಯ. ನಾವು ಬೇರೆಯವರ ಮನಸ್ಸಾಕ್ಷಿಯನ್ನು ಗೌರವಿಸುತ್ತೇವೆ ಮತ್ತು ಒಳ್ಳೇ ಮಾದರಿ ಇಡಲು ಬಯಸುತ್ತೇವೆ. (2 ಕೊರಿಂ. 4:2)—w17.07, ಪು. 31-32.

ಯೇಸುವಿನ ಆರಂಭದ ಜೀವನದ ಬಗ್ಗೆ ಮತ್ತಾಯ ಬರೆದಿರುವುದಕ್ಕೂ ಲೂಕ ಬರೆದಿರುವುದಕ್ಕೂ ಯಾಕೆ ವ್ಯತ್ಯಾಸವಿದೆ?

ಮತ್ತಾಯನು ಯೋಸೇಫನಿಗಾದ ಅನುಭವಗಳನ್ನು ಬರೆದಿದ್ದಾನೆ. ಮರಿಯ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದಾಗ ಅವನ ಪ್ರತಿಕ್ರಿಯೆಯ ಬಗ್ಗೆ ಮತ್ತು ಐಗುಪ್ತಕ್ಕೆ ಓಡಿಹೋಗಿ ನಂತರ ಹಿಂದೆ ಹೋಗುವಂತೆ ದೇವದೂತನು ಹೇಳಿದ್ದರ ಬಗ್ಗೆ ಮತ್ತಾಯನು ಬರೆದಿದ್ದಾನೆ. ಆದರೆ ಲೂಕನು ಹೆಚ್ಚಾಗಿ ಮರಿಯಳ ಬಗ್ಗೆ ಮಾತಾಡಿದ್ದಾನೆ. ಉದಾಹರಣೆಗೆ, ಅವಳು ಎಲಿಸಬೇತಳನ್ನು ಭೇಟಿಮಾಡಿದ್ದರ ಬಗ್ಗೆ ಮತ್ತು ಬಾಲಕ ಯೇಸು ದೇವಾಲಯದಲ್ಲೇ ಹಿಂದೆ ಉಳಿದಾಗ ಅವಳ ಪ್ರತಿಕ್ರಿಯೆಯ ಬಗ್ಗೆ ಲೂಕನು ಬರೆದಿದ್ದಾನೆ.—w17.08, ಪು. 32.

ಬೈಬಲು ಯಾವ ಕೆಲವು ತಡೆಗಳನ್ನು ದಾಟಿಬರಬೇಕಾಯಿತು?

ಬೈಬಲನ್ನು ಬರೆದು ವರ್ಷಗಳು ಉರುಳಿದಂತೆ ಬೈಬಲಿನಲ್ಲಿ ಉಪಯೋಗಿಸಲಾದ ಪದಗಳಿಗೆ ಹೊಸ ಅರ್ಥ ಬಂತು. ರಾಜಕೀಯ ಬೆಳವಣಿಗೆಗಳು ಸಹ ಭಾಷೆಯ ಮೇಲೆ ಪರಿಣಾಮ ಬೀರಿದವು. ಸಾಮಾನ್ಯ ಜನರು ಮಾತಾಡುತ್ತಿದ್ದ ಭಾಷೆಯಲ್ಲಿ ಬೈಬಲನ್ನು ಭಾಷಾಂತರಿಸಲು ವಿರೋಧ ಇತ್ತು.—w17.09, ಪು. 19-21.

ಅತಿ ಶ್ರೇಷ್ಠ ವಿಧದ ಪ್ರೀತಿ ಯಾವುದು?

ಸರಿಯಾದ ತತ್ವಗಳ ಮೇಲೆ ಆಧರಿತವಾದ ಅಗಾಪೆ ಪ್ರೀತಿಯು ಅತಿ ಶ್ರೇಷ್ಠ ವಿಧದ ಪ್ರೀತಿ. ಈ ಪ್ರೀತಿಯಲ್ಲಿ ಮಮತೆ ಮಮಕಾರ ಸೇರಿರಬಹುದು. ಆದರೆ ಇದರಲ್ಲಿ ತುಂಬ ಒಳ್ಳೇ ತತ್ವಗಳಿವೆ ಮತ್ತು ಬೇರೆಯವರ ಒಳಿತನ್ನು ಬಯಸಿ ಮಾಡುವ ನಿಸ್ವಾರ್ಥ ಕ್ರಿಯೆಗಳಲ್ಲಿ ಇದು ತೋರಿಬರುತ್ತದೆ.—w17.10, ಪು. 7.