ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಸೈತಾನ ಹವ್ವಳಿಗೆ ಒಳ್ಳೇದರ ಕೆಟ್ಟದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ತಿಂದರೆ ಸಾಯಲ್ಲ ಅಂತ ಹೇಳಿದನಲ್ಲ, ಅವನ ಮಾತಿನ ಅರ್ಥ ಆತ್ಮಕ್ಕೆ ಸಾವಿಲ್ಲ ಅಂತನಾ?

ಅಲ್ಲ. ಯಾಕೆಂದ್ರೆ ಸೈತಾನ ಹವ್ವಳಿಗೆ, ‘ದೇವರು ತಿನ್ನಬಾರದು ಅಂತ ಹೇಳಿದ ಹಣ್ಣನ್ನು ತಿಂದರೆ ನಿನ್ನ ದೇಹ ಸಾಯುತ್ತೆ, ಆದ್ರೆ ಆತ್ಮ ಇನ್ನೆಲ್ಲೋ ಹೋಗಿ ಬದುಕುತ್ತೆ’ ಅಂತ ಹೇಳಲಿಲ್ಲ. ಸೈತಾನ ಹಾವಿನ ಮೂಲಕ ಹವ್ವಳಿಗೆ, ಆ ಮರದ ಹಣ್ಣನ್ನು ತಿಂದರೆ ‘ನೀನು ಹೇಗೂ ಸಾಯುವದಿಲ್ಲ’ ಅಂತ ಹೇಳಿದನು. ಅಂದ್ರೆ ‘ನಿನಗೆ ಸಾವೇ ಬರಲ್ಲ, ಬದುಕೇ ಇರ್ತೀಯ, ನೀನು ಈಗಿರೋದಕ್ಕಿಂತ ಚೆನ್ನಾಗಿ ಬದುಕ್ತೀಯ, ದೇವರು ಹೇಳಿದ ಹಾಗೆ ಕೇಳ್ಬೇಕಾಗಿಲ್ಲ, ಇಷ್ಟಬಂದ ಹಾಗೆ ಬದುಕಬಹುದು’ ಅಂತ ಅವಳಿಗೆ ಹೇಳಿದನು.—ಆದಿ. 2:17; 3:3-5.

ಆತ್ಮಕ್ಕೆ ಸಾವು ಇಲ್ಲ ಅನ್ನುವ ಸುಳ್ಳು ಬೋಧನೆ ಏದೆನ್‌ ತೋಟದಲ್ಲಿ ಆರಂಭ ಆಗಿಲ್ಲಾಂದ್ರೆ ಇನ್ನು ಯಾವಾಗ ಆರಂಭವಾಯ್ತು? ಇದು ಯಾವಾಗ ಆರಂಭವಾಯ್ತು ಅಂತ ನಮಗೆ ಸರಿಯಾಗಿ ಗೊತ್ತಿಲ್ಲ. ಆದರೆ ನೋಹನ ಸಮಯದಲ್ಲಿ ಜಲಪ್ರಳಯ ಬಂದಾಗ ಅದಕ್ಕಿಂತ ಮುಂಚೆ ಇದ್ದ ಎಲ್ಲ ಸುಳ್ಳು ಆರಾಧನೆ ಪೂರ್ತಿಯಾಗಿ ನಾಶ ಆಯ್ತು. ಎಳ್ಳಷ್ಟೂ ಉಳಿಯಲಿಲ್ಲ. ಯಾಕೆಂದರೆ ಆ ಜಲಪ್ರಳಯದಿಂದ ನೋಹ ಮತ್ತು ಅವನ ಕುಟುಂಬದವರು ಮಾತ್ರ ಪಾರಾದರು. ಅವರೆಲ್ಲರು ಸತ್ಯಾರಾಧಕರಾಗಿದ್ದರು.

ಆದ್ದರಿಂದ ಆತ್ಮ ಸಾಯಲ್ಲ ಅಂತ ಜನರು ಹೇಳುವ ಬೋಧನೆ ಜಲಪ್ರಳಯದ ನಂತರನೇ ಹುಟ್ಟಿಕೊಂಡಿರಬೇಕು. ಇದಾಗಿ ವರ್ಷಗಳ ನಂತರ ದೇವರು ಬಾಬೆಲಿನಲ್ಲಿ ಭಾಷೆಯನ್ನು ಬದಲಾಯಿಸಿದಾಗ ‘ಜನರು ಭೂಲೋಕದಲ್ಲೆಲ್ಲಾ ಚದರಿ ಹೋದರು.’ ಆ ಸಮಯದಲ್ಲೇ ಆತ್ಮ ಸಾಯಲ್ಲ ಎಂಬ ಬೋಧನೆ ಎಲ್ಲಾ ಕಡೆ ಹಬ್ಬಿರಬಹುದು. (ಆದಿ. 11:8, 9) ಅದೇನೇ ಆಗಿರಲಿ ಒಂದು ವಿಷಯ ಅಂತು ಸತ್ಯ, ಇದೆಲ್ಲದರ ಹಿಂದೆ ‘ಸುಳ್ಳಿಗೆ ತಂದೆಯಾಗಿರೋ’ ಸೈತಾನನ ಕೈವಾಡ ಇದೆ ಮತ್ತು ಈ ಬೋಧನೆ ಎಲ್ಲ ಕಡೆಗೆ ಹಬ್ಬಿರೋದನ್ನು ನೋಡುವಾಗ ಸೈತಾನನಿಗಂತೂ ತುಂಬ ಖುಷಿಯಾಗಿರುತ್ತೆ ಅನ್ನೋದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.—ಯೋಹಾ. 8:44.