ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯಾ?

ನಿಮಗೆ ನೆನಪಿದೆಯಾ?

ನೀವು ಈ ವರ್ಷದ ಕಾವಲಿನಬುರುಜು ಪತ್ರಿಕೆಗಳನ್ನ ಚೆನ್ನಾಗಿ ಓದಿದ್ದೀರಾ? ಹಾಗಾದ್ರೆ ಈ ಪ್ರಶ್ನೆಗಳಿಗೆ ಉತ್ತರ ಕೊಡುತ್ತೀರಾ?

ಅಭಿಷಿಕ್ತರ ಜೊತೆ ನಾವು ಹೇಗೆ ನಡ್ಕೋಬೇಕು?

ನಾವು ಅವರ ನಂಬಿಕೆಯನ್ನ ಮೆಚ್ಚಿಕೊಳ್ತೀವಿ. ಆದ್ರೆ, ಅವ್ರಿಗೆ ಬೇರೆಲ್ಲರಿಗಿಂತ ಹೆಚ್ಚು ಪ್ರಾಮುಖ್ಯತೆ ಕೊಡಲ್ಲ. ನಾವು ‘ವ್ಯಕ್ತಿತ್ವಗಳನ್ನ ಹೊಗಳಲ್ಲ’ ಅಥವಾ ಯಾರ ಬಗ್ಗೆನೂ ಅಭಿಮಾನ ಬೆಳೆಸಿಕೊಳ್ಳಲ್ಲ. (ಯೂದ 16) ನಾವು ಅವರ ನಿರೀಕ್ಷೆ ಬಗ್ಗೆ ವೈಯಕ್ತಿಕ ಪ್ರಶ್ನೆಗಳನ್ನ ಕೇಳಲ್ಲ.—w20.01, ಪುಟ 29.

ಯೆಹೋವನು ನಿಮ್ಮನ್ನು ಗಮನಿಸ್ತಾನೆ ಅಂತ ನಂಬೋಕೆ ಏನು ಆಧಾರ ಇದೆ?

ನೀವು ಹುಟ್ಟೋಕೂ ಮುಂಚೆನೇ ನಿಮ್ಮನ್ನ ದೇವರು ನೋಡಿದ್ದಾನೆ ಅಂತ ಬೈಬಲಿಂದ ಗೊತ್ತಾಗುತ್ತೆ. ಆತನು ನಿಮ್ಮ ಪ್ರಾರ್ಥನೆಗಳನ್ನ ಕೇಳ್ತಾನೆ. ನೀವು ಏನು ಯೋಚಿಸ್ತೀರಿ ಮತ್ತು ನಿಮ್ಮ ಹೃದಯದಲ್ಲೇನಿದೆ ಅಂತ ಆತನಿಗೆ ಗೊತ್ತಿದೆ. ನೀವು ನಡಕೊಳ್ಳೋ ರೀತಿಯಿಂದ ಒಂದೋ ಆತನಿಗೆ ಖುಷಿ ಆಗುತ್ತೆ, ಇಲ್ಲಾ ದುಃಖ ಆಗುತ್ತೆ. (1 ಪೂರ್ವ. 28:9; ಜ್ಞಾನೋ. 27:11) ಆತನು ನಿಮ್ಮನ್ನು ತನ್ನ ಕಡೆಗೆ ಸೆಳೆದಿದ್ದಾನೆ.—w20.02, ಪುಟ 12.

ನಾವು ಯಾವಾಗ ಮಾತಾಡಬೇಕು, ಯಾವಾಗ ಸುಮ್ಮನಿರಬೇಕು?

ನಾವು ಯೆಹೋವನ ಬಗ್ಗೆ ಸಂತೋಷದಿಂದ ಮಾತಾಡಬೇಕು. ಯಾರಾದ್ರೂ ತಪ್ಪು ದಾರಿ ಹಿಡಿಯುತ್ತಿದ್ದಾರೆ ಅಂತ ಗೊತ್ತಾದಾಗ ಮಾತಾಡಬೇಕು. ಸಲಹೆ ಕೊಡಬೇಕಾಗಿ ಬಂದಾಗ ಹಿರಿಯರು ಮಾತಾಡಬೇಕು. ನಿಷೇಧ ಇರೋ ದೇಶಗಳಲ್ಲಿ ನಮ್ಮ ಕೆಲ್ಸ ಹೇಗೆ ನಡೀತಿದೆ ಅನ್ನೋದನ್ನ ಕೇಳಬೇಕು (ಅಥವಾ ಹೇಳಬೇಕು) ಅಂತನಿಸಿದಾಗ ಸುಮ್ಮನಿರಬೇಕು. ಗುಟ್ಟಾಗಿ ಇಡಬೇಕಾಗಿರೋ ವಿಷ್ಯಗಳ ಬಗ್ಗೆ ಬೇರೆಯವರಿಗೆ ತಿಳಿಸಲ್ಲ.—w20.03, ಪುಟ 20-21.

ಯೋವೇಲ 2 ನೇ ಅಧ್ಯಾಯದಲ್ಲಿ ತಿಳಿಸಿರೋ ಮಿಡತೆಗಳು ಮತ್ತು ಪ್ರಕಟನೆ 9 ನೇ ಅಧ್ಯಾಯದಲ್ಲಿ ತಿಳಿಸಿರೋ ಮಿಡತೆಗಳ ಮಧ್ಯೆ ಯಾವ ವ್ಯತ್ಯಾಸ ಇದೆ?

ಯೋವೇಲ 2:20-29 ರಲ್ಲಿ ಹೇಳೋ ಪ್ರಕಾರ ಯೆಹೋವನು ಮಿಡತೆಗಳನ್ನು ದೂರ ತೊಲಗಿಸುತ್ತಾನೆ ಮತ್ತು ಅವುಗಳಿಂದಾದ ಹಾನಿಗೆ ನಷ್ಟಭರ್ತಿ ಮಾಡ್ತೀನಂತ ಆತನು ಮಾತುಕೊಟ್ಟಿದ್ದಾನೆ. ಅದರ ನಂತ್ರ ದೇವರು ಪವಿತ್ರಾತ್ಮ ಸುರಿಸುತ್ತಾನೆ. ಈ ಎಲ್ಲಾ ವಿಷಯಗಳು ಬಾಬೆಲಿನವರು ಇಸ್ರಾಯೇಲ್ಯರ ಮೇಲೆ ಆಕ್ರಮಣ ಮಾಡಿದಾಗ ಮತ್ತು ಅದ್ರ ನಂತ್ರ ನೆರವೇರಿದವು. ಪ್ರಕಟನೆ 9:1-11 ವಚನಗಳು ನಮ್ಮ ದಿನಗಳಲ್ಲಿನ ಅಭಿಷಿಕ್ತರನ್ನು ವರ್ಣಿಸುತ್ತವೆ. ಅವರು ಈ ದುಷ್ಟಲೋಕದ ವಿರುದ್ಧ ದೇವರ ನ್ಯಾಯತೀರ್ಪನ್ನು ಸಾರುತ್ತಿರೋದ್ರಿಂದ ಮಿಡತೆಗಳಂತೆ ಇದ್ದಾರೆ. ಇದ್ರಿಂದಾಗಿ ಲೋಕಕ್ಕೆ ಬೆಂಬಲ ನೀಡುವವ್ರಿಗೆ ಕಷ್ಟವಾಗುತ್ತೆ.—w20.04, ಪುಟ 3-6.

ಈಗ “ಉತ್ತರ ರಾಜ” ಯಾರು?

ರಷ್ಯಾ ಮತ್ತದರ ಮಿತ್ರರಾಷ್ಟ್ರಗಳು. ಆ ಸರ್ಕಾರಗಳು ಸಾರುವ ಕೆಲಸವನ್ನು ನಿಷೇಧಿಸಿವೆ ಮತ್ತು ಸಾಕ್ಷಿಗಳನ್ನು ದ್ವೇಷಿಸುತ್ತಿವೆ. ಉತ್ತರ ರಾಜನು ದಕ್ಷಿಣ ರಾಜನಿಗಿಂತ ತನ್ನನ್ನು ಹೆಚ್ಚಿಸಿಕೊಳ್ಳೋಕೆ ಪ್ರಯತ್ನಿಸ್ತಿದ್ದಾನೆ.—w20.05, ಪುಟ 13.

ಗಲಾತ್ಯ 5:22, 23 ರಲ್ಲಿರೋ ಒಂಬತ್ತು ಗುಣಗಳಷ್ಟೇ ಪವಿತ್ರಾತ್ಮದಿಂದ ಸಿಗೋದಾ?

ಇಲ್ಲ. ನೀತಿಯಂಥ ಇನ್ನೂ ಬೇರೆ ಒಳ್ಳೇ ಗುಣಗಳನ್ನು ಸಹ ನಾವು ಪವಿತ್ರಾತ್ಮದ ಸಹಾಯದಿಂದ ಬೆಳೆಸಿಕೊಳ್ಳಬಹುದು. (ಎಫೆ. 5:8, 9)—w20.06, ಪುಟ 17.

ಆನ್‌ಲೈನ್‌ನಲ್ಲಿ ನೀವು ಫೋಟೋ ಅಥ್ವಾ ವಿಡಿಯೋ ಪೋಸ್ಟ್‌ ಮಾಡೋದ್ರಿಂದ ಯಾವ ಒಂದು ಅಪಾಯ ಇದೆ?

ನೀವು ಆನ್‌ಲೈನ್‌ನಲ್ಲಿ ಪೋಸ್ಟ್‌ ಮಾಡೋ ಫೋಟೋ, ವಿಡಿಯೋ ನಿಮ್ಮ ಬಗ್ಗೆ ನೀವೇ ಕೊಚ್ಚಿಕೊಳ್ಳೋ ತರ ಇರಬಹುದು ಮತ್ತು ನೀವು ದೀನ ವ್ಯಕ್ತಿ ಅಲ್ಲ ಅಂತ ತೋರಿಸೋ ತರ ಇರಬಹುದು.—w20.07, ಪುಟ 6-7.

ಪ್ರಚಾರಕರು ಮೀನು ಹಿಡಿಯೋ ನಿಪುಣ ಬೆಸ್ತರಿಂದ ಏನು ಕಲಿಬಹುದು?

ನಿಪುಣ ಬೆಸ್ತರು ಎಲ್ಲಿ ಹೆಚ್ಚು ಮೀನುಗಳು ಸಿಗುತ್ತೋ ಅಲ್ಲಿಗೆ ಮತ್ತು ಯಾವಾಗ ಸಿಗುತ್ತೋ ಆವಾಗ ಹೋಗಿ ಮೀನು ಹಿಡಿತಾರೆ. ಸರಿಯಾದ ಸಲಕರಣೆಗಳನ್ನ ಹೇಗೆ ಉಪಯೋಗಿಸೋದು ಅಂತ ಚೆನ್ನಾಗಿ ತಿಳ್ಕೊಂಡಿರುತ್ತಾರೆ. ಮತ್ತು ಹವಾಮಾನದಲ್ಲಿ ಏರುಪೇರಾದ್ರೂ ಧೈರ್ಯಗೆಡದೆ ತಮ್ಮ ಕೆಲಸ ಮಾಡ್ತಾರೆ. ನಾವು ಸಹ ಇದೇ ತರ ಸಾರುವ ಕೆಲಸ ಮಾಡಬಹುದು.—w20.09, ಪುಟ 5.

ವಿದ್ಯಾರ್ಥಿಯು ಯೆಹೋವನನ್ನು ಇನ್ನೂ ಹೆಚ್ಚು ಪ್ರೀತಿಸೋಕೆ ನಾವು ಹೇಗೆಲ್ಲಾ ಸಹಾಯ ಮಾಡಬಹುದು?

ಪ್ರತಿದಿನ ಬೈಬಲನ್ನು ಓದಲು ಮತ್ತು ಓದಿದ್ದನ್ನು ಧ್ಯಾನಿಸಲು ಪ್ರೋತ್ಸಾಹಿಸಬಹುದು. ಪ್ರಾರ್ಥಿಸೋದು ಹೇಗಂತ ಕಲಿಸಬಹುದು.—w20.11, ಪುಟ 4.

“ಕ್ರಿಸ್ತನಿಂದಾಗಿ ಎಲ್ಲರೂ ಜೀವಿತರಾಗುವರು” ಅನ್ನೋ ಹೇಳಿಕೆಯಲ್ಲಿ ಯಾರು ಕೂಡ ಸೇರಿದ್ದಾರೆ?—1 ಕೊರಿಂ. 15:22.

ಇಲ್ಲಿ ಅಪೊಸ್ತಲ ಪೌಲ ತೀರಿಹೋಗಿರೋ ಪ್ರತಿಯೊಬ್ಬ ಮನುಷ್ಯನಿಗೂ ಮರುಜೀವ ಸಿಗುತ್ತೆ ಅಂತ ಹೇಳ್ತಾ ಇಲ್ಲ. ಬದ್ಲಿಗೆ ಅವನು “ಕ್ರಿಸ್ತ ಯೇಸುವಿನೊಂದಿಗೆ ಐಕ್ಯದಲ್ಲಿ ಪವಿತ್ರೀಕರಿಸಲ್ಪಟ್ಟವರೂ” ಆಗಿರುವ ಅಭಿಷಿಕ್ತ ಕ್ರೈಸ್ತರ ಬಗ್ಗೆ ಹೇಳ್ತಾ ಇದ್ದಾನೆ. (1 ಕೊರಿಂ. 1:2; 15:18)—w20.12, ಪುಟ 5-6.

‘ಕೊನೆಯ ತುತೂರಿಯು ಊದಲ್ಪಡುವಾಗ ಕಣ್ಣುರೆಪ್ಪೆ ಬಡಿಯುವಷ್ಟರೊಳಗೆ ಮಾರ್ಪಡುವಂಥ’ ಅಭಿಷಿಕ್ತರು ಆಮೇಲೆ ಏನು ಮಾಡ್ತಾರೆ?—1 ಕೊರಿಂ. 15:51-53.

ಅವ್ರು ತಮ್ಮ ನಾಯಕನಾದ ಯೇಸುವನ್ನು ಹಿಂಬಾಲಿಸ್ತಾ ಜನಾಂಗವನ್ನು ಕಬ್ಬಿಣದ ಕೋಲಿನಿಂದ ಆಳ್ತಾರೆ. (ಪ್ರಕ. 2:26, 27)—w20.12, ಪುಟ 12-13.