ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯಾ?

ನಿಮಗೆ ನೆನಪಿದೆಯಾ?

ಈ ವರ್ಷದ ಕಾವಲಿನಬುರುಜು ಪತ್ರಿಕೆಗಳನ್ನ ಚೆನ್ನಾಗಿ ಓದಿದ್ದೀರಾ? ಹಾಗಾದ್ರೆ ಈ ಪ್ರಶ್ನೆಗಳಿಗೆ ಉತ್ತರ ಕೊಡ್ತೀರಾ?

ಯಾಕೋಬ 5:11ರಲ್ಲಿರೋ “ದೇವರು ಕೋಮಲ ಮಮತೆ ತೋರಿಸ್ತಾನೆ, ಆತನು ಕರುಣಾಮಯಿ” ಅನ್ನೋ ಮಾತಿಂದ ನಮಗೆ ಯಾವ ಭರವಸೆ ಸಿಗುತ್ತೆ?

ಯೆಹೋವ ಕರುಣಾಮಯಿ ಆಗಿರೋದರಿಂದ ನಮ್ಮ ತಪ್ಪುಗಳನ್ನ ಕ್ಷಮಿಸ್ತಾನೆ ಅಂತ ನಮಗೆ ಗೊತ್ತು. ಆತ ಕರುಣೆಯಿಂದ ಸಹಾಯ ಮಾಡಲು ಮುಂದೆ ಬರ್ತಾನೆ ಅಂತ ಯಾಕೋಬ 5:11 ಭರವಸೆ ಕೊಡುತ್ತೆ. ನಾವೂ ಯೆಹೋವನ ತರ ಇರಬೇಕು.—w21.01, ಪುಟ 21.

ಯೆಹೋವ ಕೆಲವರಿಗೆ ಯಾಕೆ ಅಧಿಕಾರ ಕೊಟ್ಟಿದ್ದಾನೆ?

ಈ ಏರ್ಪಾಡಿಂದ ಯೆಹೋವನ ಕುಟುಂಬದಲ್ಲಿ ಶಾಂತಿ ಇದೆ ಮತ್ತು ಎಲ್ಲಾ ವಿಷ್ಯಗಳು ವ್ಯವಸ್ಥಿತವಾಗಿ ನಡಿತಿದೆ. ನಾವೆಲ್ಲರೂ ಇದನ್ನ ಅರ್ಥ ಮಾಡಿಕೊಂಡ್ರೆ ಕುಟುಂಬನ ಯಾರು ನೋಡ್ಕೊತಾರೆ, ಯಾರು ತೀರ್ಮಾನ ಮಾಡ್ತಾರೆ ಅನ್ನೋ ವಿಷಯದಲ್ಲಿ ಗೊಂದಲ ಇರಲ್ಲ. ಹಾಗಾಗಿ ತನ್ನ ಮಕ್ಕಳ ಮೇಲೆ ಪ್ರೀತಿ ಇರೋದ್ರಿಂದನೇ ಯೆಹೋವ ಈ ಏರ್ಪಾಡು ಮಾಡಿದ್ದಾನೆ.—w21.02, ಪುಟ 3.

ಕ್ರೈಸ್ತರು ಯಾಕೆ ಮೆಸೆಜ್‌ ಕಳಿಸೋ ಆ್ಯಪ್‌ಗಳನ್ನು ಬಳಸೋ ವಿಷ್ಯದಲ್ಲಿ ಎಚ್ಚರಿಕೆ ವಹಿಸಬೇಕು?

ಯಾಕಂದ್ರೆ ಸಿಕ್ಕಸಿಕ್ಕವರಿಗೆಲ್ಲ ನಾವು ಮೆಸೆಜ್‌ ಕಳಿಸಿದ್ರೆ ಕೆಟ್ಟವರು ಯಾರು ಅಂತ ಕಂಡುಹಿಡಿದು ಅವರಿಂದ ದೂರ ಇರೋಕೆ ಕಷ್ಟ ಆಗುತ್ತೆ. ಒಂದು ಗ್ರೂಪ್‌ನಲ್ಲಿ ತುಂಬ ಜನ ಇದ್ರಂತೂ ಇದು ತುಂಬ ಕಷ್ಟ. (1 ತಿಮೊ. 5:13) ಸತ್ಯ ಅಂತ ಸಾಬೀತು ಆಗದಿರೋ ವಿಷ್ಯಗಳು ಅದ್ರಲ್ಲಿ ಹರಿದಾಡುತ್ತಿರುತ್ತೆ. ಸಭೆಯವರ ಹತ್ರ ಬರೀ ವ್ಯಾಪಾರ-ವ್ಯವಹಾರಕ್ಕೆ ಸಂಬಂಧಪಟ್ಟ ವಿಷ್ಯಗಳನ್ನೇ ಮಾತಾಡಿಬಿಡಬಹುದು.—w21.03, ಪುಟ 31.

ಯೇಸು ಯಾಕೆ ಚಿತ್ರಹಿಂಸೆ ಅನುಭವಿಸಿ ಸಾಯಬೇಕಿತ್ತು?

ಒಂದನೇ ಕಾರಣ, ಯೇಸುವನ್ನ ಕಂಬಕ್ಕೆ ತೂಗು ಹಾಕಿದರೆನೇ ಯೆಹೂದ್ಯರಿಗೆ ಬಂದಿರೋ ಶಾಪದಿಂದ ಬಿಡುಗಡೆ ಸಿಗ್ತಿತ್ತು. (ಗಲಾ. 3:10, 13) ಎರಡನೇ ಕಾರಣ, ಮುಂದೆ ಮಹಾ ಪುರೋಹಿತನಾಗಲಿದ್ದ ಯೇಸುಗೆ ಯೆಹೋವ ತರಬೇತಿ ಕೊಟ್ಟನು. ಮೂರನೇ ಕಾರಣ, ಒಬ್ಬ ಮನುಷ್ಯನಿಗೆ ತುಂಬ ಕಷ್ಟ ಬಂದ್ರೂ ಅವನು ಯೆಹೋವನಿಗೆ ನಿಷ್ಠೆ ತೋರಿಸೋಕೆ ಆಗುತ್ತೆ ಅಂತ ಯೇಸು ಸಾಬೀತು ಮಾಡಿದನು. (ಯೋಬ 1:9-11)—w21.04, ಪುಟ 16-17.

ಸೇವೆಗೆ ಹೋದಾಗ ಜನ ಸಿಗದಿದ್ರೆ ಏನು ಮಾಡಬೇಕು?

ಜನ ಮನೆಯಲ್ಲಿರೋ ಸಮಯ ನೋಡಿಕೊಂಡು ಹೋಗಿ. ಬೇರೆಬೇರೆ ಜಾಗದಲ್ಲಿ ಸಾರಿ. ಬೇರೆ ವಿಧಾನ ಬಳಸಿ. ಉದಾಹರಣೆಗೆ, ಪತ್ರ ಬರೆದು ಸಾರಿ.—w21.05, ಪುಟ 15-16.

ಅಪೊಸ್ತಲ ಪೌಲ “ನಾನು ನಿಯಮ ಪುಸ್ತಕದ ಪಾಲಿಗೆ ಸತ್ತು ಹೋದೆ” ಅಂತ ಯಾಕೆ ಹೇಳಿದ? (ಗಲಾ. 2:19)

ಮನುಷ್ಯರು ಪಾಪಿಗಳು ಮತ್ತು ಅವರಿಗೆ ರಕ್ಷಣೆ ಕೊಡೋ ಸಂತಾನ ಯೇಸು ಕ್ರಿಸ್ತನೇ ಅಂತ ನಿಯಮ ಪುಸ್ತಕ ತೋರಿಸಿಕೊಡ್ತು. (ಗಲಾ. 3:19, 24) ಅದರ ಸಹಾಯದಿಂದ ಪೌಲ ಯೇಸುವನ್ನ ಮೆಸ್ಸೀಯ ಅಂತ ಒಪ್ಪಿಕೊಂಡು ಅವನ ಮೇಲೆ ನಂಬಿಕೆ ಇಟ್ಟ. ಹೀಗೆ ಅವನು ‘ನಿಯಮ ಪುಸ್ತಕದ ಪಾಲಿಗೆ ಸತ್ತು ಹೋದ’ ಅಂದ್ರೆ ನಿಯಮ ಪುಸ್ತಕಕ್ಕೆ ಅವನ ಮೇಲೆ ಇದ್ದ ಅಧಿಕಾರ ಹೋಯ್ತು.—w21.06, ಪುಟ 31.

ಯೆಹೋವ ಏನನ್ನೆಲ್ಲಾ ಸಹಿಸ್ಕೊಳ್ತಾ ಇದ್ದಾರೆ?

ಹೆಸರಿಗೆ ಕಳಂಕ, ಅಧಿಕಾರದ ಬಗ್ಗೆ ಪ್ರಶ್ನೆ, ತನ್ನ ಮಕ್ಕಳ ದಂಗೆ, ಸೈತಾನನ ಸುಳ್ಳುಗಳು, ತನ್ನ ಜನರಿಗೆ ಬಂದ ಕಷ್ಟ, ಸ್ನೇಹಿತರ ಸಾವು, ಕೆಟ್ಟವರ ಕಾಟ, ಪರಿಸರಕ್ಕೆ ಹಾನಿ ಇದನ್ನೆಲ್ಲಾ ಯೆಹೋವ ದೇವರು ಸಹಿಸಿಕೊಳ್ತಾ ಇದ್ದಾರೆ.—w21.07, ಪುಟ 9-12.

ಯೋಸೇಫನ ತರ ನಾವು ಹೇಗೆ ತಾಳ್ಮೆ ತೋರಿಸಬಹುದು?

ಅವನಿಗೆ ತನ್ನ ಅಣ್ಣಂದಿರಿಂದಾನೇ ಅನ್ಯಾಯ ಆಯ್ತು. ಇದರಿಂದಾಗಿ ಅವನು ಸುಳ್ಳಾರೋಪ ಹೊತ್ಕೊಂಡು ಈಜಿಪ್ಟ್‌ನ ಜೈಲಿನಲ್ಲಿ ಅನೇಕ ವರ್ಷಗಳು ಕಳೆಯಬೇಕಾಗಿ ಬಂತು.—w21.08, ಪುಟ 12.

ಹಗ್ಗಾಯ 2:6-9, 20-22ರಲ್ಲಿರೋ ‘ಎಲ್ಲ ರಾಷ್ಟ್ರಗಳನ್ನ ನಡುಗಿಸ್ತೀನಿ’ ಅನ್ನೋ ಮಾತಿನ ಅರ್ಥವೇನು?

ರಾಷ್ಟ್ರಗಳು ಸಿಹಿಸುದ್ದಿಗೆ ಕಿವಿಗೊಡದಿದ್ರೂ ಅನೇಕ ಜನರು ಸತ್ಯಕ್ಕೆ ಬರುತ್ತಾರೆ. ಯೆಹೋವ ಕೊನೆಯದಾಗಿ ನಡುಗಿಸುವಾಗ ರಾಷ್ಟ್ರಗಳು ಸಂಪೂರ್ಣವಾಗಿ ನಾಶ ಆಗುತ್ತೆ.—w21.09, ಪುಟ 15-19.

ನಾವು ಜನರಿಗೆ ಸಿಹಿಸುದ್ದಿ ಸಾರುವಾಗ ಯಾವುದನ್ನ ಮನಸ್ಸಿನಲ್ಲಿ ಇಡಬೇಕು?

ನಾವು ಶ್ರಮಪಟ್ಟು ಸಿಹಿಸುದ್ದಿ ಸಾರೋದನ್ನ ಯೆಹೋವ ನೋಡ್ತಾರೆ, ನಾವು ಮಾಡೋ ಸೇವೆಯನ್ನ ನೋಡಿ ಖುಷಿಪಡ್ತಾರೆ, ಸೋತುಹೋಗದೆ ಸಾರಿದರೆ ನಮಗೆ ಶಾಶ್ವತ ಜೀವ ಸಿಗುತ್ತೆ.—w21.10, ಪುಟ 25-26.

“ನೀವೂ ನಿಮ್ಮ ನಡೆನುಡಿಯಲ್ಲಿ ಪವಿತ್ರರಾಗಿ ಇರಬೇಕು” ಅಂತ ಹೇಳಿರೋ ಬುದ್ಧಿವಾದನ ಪಾಲಿಸೋಕೆ ಯಾಜಕಕಾಂಡ 19ನೇ ಅಧ್ಯಾಯ ಹೇಗೆ ಸಹಾಯ ಮಾಡುತ್ತೆ? (1 ಪೇತ್ರ 1:15)

ಈ ಮಾತನ್ನ ಯಾಜಕಕಾಂಡ 19:2ರಿಂದ ತೆಗೆದುಕೊಳ್ಳಲಾಗಿದೆ. 19ನೇ ಅಧ್ಯಾಯದಲ್ಲಿ ಇನ್ನೂ ತುಂಬ ವಿಷಯಗಳಿವೆ. ಅವನ್ನ ಪಾಲಿಸಿದ್ರೆ, 1 ಪೇತ್ರ 1:15ರಲ್ಲಿರೋ ಬುದ್ಧಿವಾದವನ್ನ ನಾವು ಪ್ರತಿದಿನ ಪಾಲಿಸೋಕೆ ಆಗುತ್ತೆ. —21.12, ಪುಟ 3-4.