ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯಾ?

ನಿಮಗೆ ನೆನಪಿದೆಯಾ?

ಈ ವರ್ಷದ ಕಾವಲಿನಬುರುಜು ಪತ್ರಿಕೆಗಳನ್ನ ಚೆನ್ನಾಗಿ ಓದಿದ್ದೀರಾ? ಹಾಗಾದ್ರೆ ಈ ಪ್ರಶ್ನೆಗಳಿಗೆ ಉತ್ರ ಕೊಡ್ತೀರಾ?

ಯೆಹೋವ ಸ್ತ್ರೀಯರನ್ನ ಗೌರವಿಸ್ತಾನೆ ಅಂತ ಹೇಗೆ ಹೇಳಬಹುದು?

ಯೆಹೋವ ಭೇದಭಾವ ಮಾಡಲ್ಲ, ಸ್ತ್ರೀಯರಿಗಿಂತ ಪುರುಷರೇ ಮೇಲು ಅಂತ ನೆನಸಲ್ಲ. ಸ್ತ್ರೀಯರಿಗೆ ಹೇಗನಿಸುತ್ತೆ, ಅವ್ರ ಸಮಸ್ಯೆಗಳೇನು ಅಂತ ತಿಳ್ಕೊಳ್ತಾನೆ. ಅವ್ರನ್ನ ನಂಬಿ ತನ್ನ ಕೆಲಸಗಳನ್ನ ವಹಿಸ್ಕೊಟ್ಟಿದ್ದಾನೆ. —ಕಾವಲಿನಬುರುಜು24.01 ಪುಟ 15-16.

ಎಫೆಸ 5:7ರಲ್ಲಿ “ಅವ್ರ ತರ ಇರಬೇಡಿ” ಅಂತಿದೆ. ನಾವೀದನ್ನ ಹೇಗೆ ಪಾಲಿಸಬಹುದು?

ಯಾರು ಯೆಹೋವನ ನೀತಿ ನಿಯಮ ಪಾಲಿಸಲ್ವೋ, ಅಂಥವ್ರ ಜೊತೆ ಸಹವಾಸ ಮಾಡಬಾರದು ಅಂತ ಪೌಲ ಹೇಳ್ತಿದ್ದಾನೆ. ನೇರವಾಗಿ ಅಥವಾ ಆನ್‌ಲೈನ್‌ ಮೂಲಕ ಅಂಥವ್ರ ಜೊತೆ ಸಹವಾಸ ಮಾಡಿದ್ರೆ ಯೆಹೋವನಿಗೆ ಇಷ್ಟ ಆಗೋ ತರ ಜೀವಿಸೋಕೆ ಕಷ್ಟ ಆಗುತ್ತೆ. —ಕಾವಲಿನಬುರುಜು24.03 ಪುಟ 22-23.

ಯಾವ ರೀತಿಯ ಸುಳ್ಳು ಕಥೆಗಳಿಂದ ದೂರ ಇರಬೇಕು?

ನಮ್ಮ ಸಹೋದರ ಸಹೋದರಿಯರು ಒಂದು ವಿಷ್ಯ ನಿಜಾನಾ ಇಲ್ವಾ ಅಂತ ತಿಳ್ಕೊಳ್ಳದೇನೇ ನಮಗೆ ಹೇಳಬಹುದು. ಸುಳ್ಳುಸುದ್ದಿಗಳು ಇ-ಮೇಲ್‌ನಿಂದನೂ ಬರಬಹುದು. ನಾವು ಸಾರೋಕೆ ಹೋದಾಗ್ಲೂ ಧರ್ಮಭ್ರಷ್ಟರು ಬೈಬಲ್‌ ಕಲಿಯೋಕೆ ಇಷ್ಟ ಇರೋ ತರ ನಾಟಕ ಆಡಿ ಸುಳ್ಳುಸುದ್ದಿ ಹೇಳಬಹುದು.—ಕಾವಲಿನಬುರುಜು24.04 ಪುಟ 12.

ಜಲಪ್ರಳಯದಲ್ಲಿ, ಸೊದೋಮ್‌ ಮತ್ತು ಗೊಮೋರದಲ್ಲಿ ನಾಶ ಆದವ್ರಿಗೆ ಮತ್ತು ಸೊಲೊಮೋನನಿಗೆ ಯೆಹೋವ ತೀರ್ಪು ಮಾಡೋದ್ರ ಬಗ್ಗೆ ನಮಗೇನು ಗೊತ್ತು? ಏನು ಗೊತ್ತಿಲ್ಲ?

ಇವ್ರಿಗೆಲ್ಲಾ ಮತ್ತೆ ಜೀವಿಸೋ ಅವಕಾಶ ಸಿಗದೇ ಇರೋ ತರ ಯೆಹೋವ ಅವ್ರನ್ನ ಶಾಶ್ವತಕ್ಕೂ ನಾಶ ಮಾಡಿದ್ದಾನಾ ಅಂತ ಗೊತ್ತಿಲ್ಲ. ಆದ್ರೆ ಯೆಹೋವನಿಗೆ ಎಲ್ಲಾ ವಿಷ್ಯಗಳು ಚೆನ್ನಾಗಿ ಗೊತ್ತಿದೆ ಮತ್ತು ಆತನಲ್ಲಿ ಕರುಣೆ ಇದೆ ಅಂತ ನಮಗೆ ಗೊತ್ತು.—ಕಾವಲಿನಬುರುಜು24.05 ಪುಟ 3-4.

ಯೆಹೋವನನ್ನ ‘ಬಂಡೆಗೆ’ ಯಾಕೆ ಹೋಲಿಸಲಾಗಿದೆ? (ಧರ್ಮೋ. 32:4)

ಯೆಹೋವನಲ್ಲಿ ನಾವು ಆಶ್ರಯ ಪಡ್ಕೊಬಹುದು, ಭರವಸೆ ಇಡಬಹುದು. ಯಾಕಂದ್ರೆ ಕೊಟ್ಟಿರೋ ಮಾತನ್ನ ಆತನು ಉಳಿಸ್ಕೊಳ್ತಾನೆ. ಯೆಹೋವ ಸ್ಥಿರವಾಗಿ ಇರ್ತಾನೆ ಅಂದ್ರೆ ಆತನ ವ್ಯಕ್ತಿತ್ವ, ಉದ್ದೇಶ ಯಾವತ್ತೂ ಬದಲಾಗಲ್ಲ.—ಕಾವಲಿನಬುರುಜು24.06 ಪುಟ 26-28.

ಹೊಸ ಸಭೆಗೆ ಹೊಂದ್ಕೊಳ್ಳೋಕೆ ನಾವೇನು ಮಾಡಬೇಕು?

ಯೆಹೋವನ ಮೇಲೆ ಆತ್ಕೊಬೇಕು. ಯಾಕಂದ್ರೆ ಯೆಹೋವ ತನ್ನ ಹಿಂದಿನ ಸೇವಕರಿಗೆ ಸಹಾಯ ಮಾಡಿದ ತರಾನೇ ನಮಗೂ ಮಾಡ್ತಾನೆ. ಹಿಂದೆ ಇದ್ದ ಸಭೆ ಜೊತೆ ಈಗಿರೋ ಸಭೆಯನ್ನ ಹೋಲಿಸಬಾರದು. ಹೊಸ ಸಭೆಲಿ ಬಿಜ಼ಿಯಾಗಿದ್ದು ಅಲ್ಲಿ ಹೊಸ ಫ್ರೆಂಡ್‌ಶಿಪ್‌ ಬೆಳೆಸ್ಕೊಬೇಕು. —ಕಾವಲಿನಬುರುಜು24.07 ಪುಟ 26-28.

ಮತ್ತಾಯ 25ನೇ ಅಧ್ಯಾಯದಲ್ಲಿರೋ ಯೇಸು ಹೇಳಿದ ಮೂರು ಉದಾಹರಣೆಗಳಿಂದ ನಾವೇನು ಕಲಿತೀವಿ?

ಕುರಿ ಮತ್ತು ಆಡುಗಳ ಉದಾಹರಣೆಯಿಂದ ನಾವು ಯಾವಾಗ್ಲೂ ನಿಯತ್ತಾಗಿರಬೇಕು ಅಂತ ಕಲಿತ್ವಿ. ಬುದ್ಧಿವಂತ ಮತ್ತು ಮೂರ್ಖ ಕನ್ಯೆಯರ ಉದಾಹರಣೆಯಿಂದ ತಯಾರಾಗಿರಬೇಕು ಅಂತ ಕಲಿತ್ವಿ. ತಲಾಂತುಗಳ ಉದಾಹರಣೆಯಿಂದ ಕಷ್ಟಪಟ್ಟು ಕೆಲಸ ಮಾಡಬೇಕು ಅಂತ ಕಲಿತ್ವಿ.—ಕಾವಲಿನಬುರುಜು24.09 ಪುಟ 20-24.

ಸೊಲೊಮೋನನ ಆಲಯದ ಮಂಟಪದ ಎತ್ತರ ಎಷ್ಟಿತ್ತು?

2 ಪೂರ್ವಕಾಲವೃತ್ತಾಂತ 3:4ರ ಕೆಲವು ಹಳೇ ಹಸ್ತಪ್ರತಿಗಳಲ್ಲಿ “120 ಮೊಳ” ಅಂದ್ರೆ 53 ಮೀಟರ್‌ (175 ಅಡಿ) ಅಂತಿದೆ. ಆದ್ರೆ ಇನ್ನೂ ಕೆಲವು ನಂಬಬಹುದಾದ ಹಸ್ತಪ್ರತಿಗಳಲ್ಲಿ “20 ಮೊಳ” ಅಂದ್ರೆ 9 ಮೀಟರ್‌ (30 ಅಡಿ) ಅಂತಿದೆ. ಆಲಯದ ಗೋಡೆಯ ದಪ್ಪಕ್ಕೆ ಹೋಲಿಸಿದ್ರೆ “20 ಮೊಳ” ಸರಿಯಾದ ಎತ್ತರ ಆಗಿರಬಹುದು. —ಕಾವಲಿನಬುರುಜು24.10 ಪುಟ 31.

“ಸಹಾಯಕ ಸೇವಕನಿಗೆ ಒಬ್ಬಳೇ ಹೆಂಡತಿ ಇರಬೇಕು” ಅನ್ನೋದ್ರ ಅರ್ಥ ಏನು? (1ತಿಮೊ 3:12)

ಒಬ್ಬ ಸಹೋದರ ಒಬ್ಬ ಸ್ತ್ರೀಯನ್ನ ಮಾತ್ರ ಮದುವೆ ಆಗಿರಬೇಕು. ಲೈಂಗಿಕ ಅನೈತಿಕತೆ ಮಾಡಬಾರದು. ಬೇರೆ ಯಾವ ಸ್ತ್ರೀ ಮೇಲೂ ಅವನು ಆಸೆ ಬೆಳೆಸ್ಕೊಬಾರದು.—ಕಾವಲಿನಬುರುಜು24.11 ಪುಟ 19.

ಯೋಹಾನ 6:53ರಲ್ಲಿ ಯೇಸು ಹೇಳಿದ್ದು ಒಡೆಯನ ರಾತ್ರಿ ಊಟದಲ್ಲಿ ನಾವೇನು ಮಾಡಬೇಕು ಅಂತಲ್ಲ ಅನ್ನೋದನ್ನ ಹೇಗೆ ಹೇಳಬಹುದು?

ಯೋಹಾನ 6:53ರಲ್ಲಿ ಯೇಸುವಿನ ‘ಮಾಂಸ ತಿಂದು, ಆತನ ರಕ್ತ ಕುಡಿಯೋದ್ರ‘ ಬಗ್ಗೆ ಇದೆ. ಯೇಸು ಈ ಮಾತನ್ನ ಕ್ರಿಸ್ತ ಶಕ 32ರಲ್ಲಿ ಗಲಿಲಾಯದಲ್ಲಿ ಯೆಹೂದಿ ಗುಂಪಿಗೆ ಹೇಳಿದ್ದು. ಅವರು ಯೇಸುನ ಇನ್ನೂ ನಂಬಿರಲಿಲ್ಲ. ಯೇಸು ಇದನ್ನ ಹೇಳಿ ಒಂದು ವರ್ಷ ಆದ್ಮೇಲೆ ಒಡೆಯನ ರಾತ್ರಿ ಊಟ ಮಾಡಿದ್ದು. ಅಲ್ಲಿ ಯೇಸು ಸ್ವರ್ಗದಲ್ಲಿ ತನ್ನ ಜೊತೆ ಆಳ್ವಿಕೆ ಮಾಡೋರ ಜೊತೆ ಮಾತಾಡಿದ. —ಕಾವಲಿನಬುರುಜು24.12 ಪುಟ 10-11.