ಕಲಿಯೋಕೆ ಒಂದು ಕಥೆ
ನುಡಿದಂತೆ ನಡೆದವರು
ನ್ಯಾಯಸ್ಥಾಪಕರು 11:30-40 ಓದಿ. ಯೆಫ್ತಾಹ ಮತ್ತು ಅವನ ಮಗಳು ಕೊಟ್ಟ ಮಾತನ್ನ ಹೇಗೆ ಉಳಿಸ್ಕೊಂಡ್ರು ಅನ್ನೋ ಕಥೆ ಇಲ್ಲಿದೆ.
ಇದ್ರ ಬಗ್ಗೆ ಯೋಚಿಸಿ. ಇಸ್ರಾಯೇಲ್ಯರು ಯೆಹೋವನಿಗೆ ಮಾತುಕೊಟ್ಟ ಮೇಲೆ ಹೇಗೆ ನಡ್ಕೊಳ್ತಿದ್ರು? (ಅರ. 30:2) ಯೆಫ್ತಾಹ ಮತ್ತು ಅವನ ಮಗಳು ಯೆಹೋವನ ಮೇಲೆ ನಂಬಿಕೆಯಿದೆ ಅಂತ ಹೇಗೆ ತೋರಿಸಿದ್ರು?—ನ್ಯಾಯ. 11:9-11, 19-24, 36.
ಹುಡುಕಿ ನೋಡಿ. ಯೆಫ್ತಾಹ ಹರಕೆ ಹೊತ್ತಾಗ ಹೇಳಿದ ಮಾತಿಂದ ನಮಗೇನು ಗೊತ್ತಾಗುತ್ತೆ? (ಕಾವಲಿನಬುರುಜು16.04 ಪುಟ 7 ಪ್ಯಾರ 12) ಹರಕೆ ತೀರಿಸೋಕೆ ಯೆಫ್ತಾಹ ಮತ್ತು ಅವನ ಮಗಳು ಏನೆಲ್ಲ ತ್ಯಾಗ ಮಾಡಿದ್ರು? (ಕಾವಲಿನಬುರುಜು16.04 ಪುಟ 7-8 ಪ್ಯಾರ 14-16) ಇವತ್ತು ನಾವು ಯೆಹೋವನಿಗೆ ಏನೆಲ್ಲಾ ಮಾತು ಕೊಡ್ತೀವಿ?—ಕಾವಲಿನಬುರುಜು17.04 ಪುಟ 5-8 ಪ್ಯಾರ 10-19.
ಪಾಠ ಕಂಡುಹಿಡೀರಿ. ಈ ಪ್ರಶ್ನೆಗಳನ್ನ ಕೇಳ್ಕೊಳಿ:
-
‘ದೀಕ್ಷಾಸ್ನಾನದ ಸಮಯದಲ್ಲಿ ಕೊಟ್ಟ ಮಾತಂತೆ ನಡೆಯೋಕೆ ಯಾವುದು ಸಹಾಯ ಮಾಡುತ್ತೆ?’ (ಕಾವಲಿನಬುರುಜು20.03 ಪುಟ 13 ಪ್ಯಾರ 20)
-
‘ನಾನು ಇನ್ನೂ ಚೆನ್ನಾಗಿ ಯೆಹೋವನ ಸೇವೆ ಮಾಡೋಕೆ ಯಾವೆಲ್ಲ ತ್ಯಾಗ ಮಾಡಬಹುದು?’
-
‘ಮದುವೆ ಟೈಮಲ್ಲಿ ಕೊಟ್ಟ ಮಾತನ್ನ ನಾನು ಹೇಗೆ ಉಳಿಸ್ಕೊಳ್ಳಬಹುದು?’ (ಮತ್ತಾ. 19:5, 6; ಎಫೆ. 5:28-33)