ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

1 ತಿಮೊತಿ 5:21ರಲ್ಲಿ ಹೇಳಿರೋ ‘ಆರಿಸ್ಕೊಂಡಿರೋ ದೇವದೂತರು’ ಯಾರು?

ಹಿರಿಯನಾಗಿದ್ದ ತಿಮೊತಿಗೆ ಅಪೊಸ್ತಲ ಪೌಲ, “ವಿಚಾರಣೆ ಮಾಡೋ ಮುಂಚೆ ತೀರ್ಮಾನ ಮಾಡದೆ, ಪಕ್ಷಪಾತ ಮಾಡದೆ ನೀನು ಈ ನಿರ್ದೇಶನಗಳನ್ನ ಪಾಲಿಸು. ಈ ಆಜ್ಞೆಯನ್ನ ದೇವರ, ಕ್ರಿಸ್ತ ಯೇಸುವಿನ ಮತ್ತು ಆರಿಸ್ಕೊಂಡಿರೋ ದೇವದೂತರ ಮುಂದೆ ನಾನು ಕೊಡ್ತೀನಿ” ಅಂತ ಬರೆದ.—1 ತಿಮೊ. 5:21.

ಮೊದ್ಲು, ಈ ‘ಆರಿಸ್ಕೊಂಡಿರೋ ದೇವದೂತರು’ ಯಾರಲ್ಲ ಅಂತ ನೋಡೋಣ. ಖಂಡಿತ ಇವರು 1,44,000 ಅಭಿಷಿಕ್ತರಲ್ಲ ಅಂತ ಸ್ಪಷ್ಟವಾಗಿ ಗೊತ್ತಾಗುತ್ತೆ. ಯಾಕಂದ್ರೆ, ಪೌಲ ಈ ಮಾತನ್ನ ತಿಮೊತಿಗೆ ಹೇಳ್ದಾಗ ಯಾವ ಅಭಿಷಿಕ್ತರೂ ಇನ್ನೂ ಸ್ವರ್ಗಕ್ಕೆ ಹೋಗಿರಲಿಲ್ಲ. ಅಷ್ಟೇ ಅಲ್ಲ, ಅಪೊಸ್ತಲರು ಮತ್ತು ಬೇರೆ ಅಭಿಷಿಕ್ತರು ಇನ್ನೂ ಅದೃಶ್ಯ ಜೀವಿಗಳಾಗಿರಲಿಲ್ಲ. ಹಾಗಾಗಿ ಇವ್ರನ್ನ ‘ಆರಿಸ್ಕೊಂಡಿರೋ ದೇವದೂತರು’ ಅಂತ ಹೇಳೋಕಾಗಲ್ಲ.—1 ಕೊರಿಂ. 15:50-54; 1 ಥೆಸ. 4:13-17; 1 ಯೋಹಾ. 3:2.

ಜಲಪ್ರಳಯದ ಸಮಯದಲ್ಲಿ ದೇವರಿಗೆ ತಿರುಗಿಬಿದ್ದ ದೇವದೂತರು ಕೂಡ ‘ಆರಿಸ್ಕೊಂಡಿರೋ ದೇವದೂತರು’ ಆಗೋಕೆ ಸಾಧ್ಯ ಇಲ್ಲ. ಯಾಕಂದ್ರೆ ಅವ್ರೆಲ್ಲ ಸೈತಾನನ ಕಡೆ ಸೇರ್ಕೊಂಡು ಕೆಟ್ಟ ದೇವದೂತರಾದ್ರು ಮತ್ತು ಯೇಸು ಇವ್ರನ್ನೆಲ್ಲ ವಿರೋಧಿಸಿದನು. (ಆದಿ. 6:2; ಲೂಕ 8:30, 31; 2 ಪೇತ್ರ 2:4) ಭವಿಷ್ಯದಲ್ಲಿ ಕೆಟ್ಟ ದೇವದೂತರನ್ನ ಮತ್ತು ಸೈತಾನನನ್ನ 1,000 ವರ್ಷ ಅಗಾಧ ಸ್ಥಳದಲ್ಲಿ ಬಂಧಿಸಿಡಲಾಗುತ್ತೆ. ಆಮೇಲೆ ಇವ್ರೆಲ್ಲರನ್ನ ಸಂಪೂರ್ಣ ನಾಶ ಮಾಡಲಾಗುತ್ತೆ.—ಯೂದ 6; ಪ್ರಕ. 20:1-3, 10.

ಹಾಗಾಗಿ ‘ಆರಿಸ್ಕೊಂಡಿರೋ ದೇವದೂತರು’ ಅಂದ್ರೆ ಬಹುಶಃ ದೇವರಿಗೆ ಮತ್ತು ಯೇಸು ಕ್ರಿಸ್ತನಿಗೆ ನಿಯತ್ತಾಗಿರೋ ಸ್ವರ್ಗದಲ್ಲಿರೋ ದೇವದೂತರಾಗಿರಬೇಕು.

ಯೆಹೋವನಿಗೆ ನಿಯತ್ತಾಗಿರೋ ಲಕ್ಷಗಟ್ಟಲೆ ದೇವದೂತರು ಸ್ವರ್ಗದಲ್ಲಿದ್ದಾರೆ. (ಇಬ್ರಿ. 12:22, 23) ಇವ್ರಿಗೆಲ್ಲಾ ಒಂದೇ ತರದ ಕೆಲ್ಸನ ಒಂದೇ ಸಮಯದಲ್ಲಿ ಮಾಡೋ ನೇಮಕ ಇರಲ್ಲ. (ಪ್ರಕ. 14:17, 18) ಅದು ನಮಗೆ ಹೇಗೆ ಗೊತ್ತು? ನಿಮ್ಗೆ ನೆನಪಿದ್ಯಾ ಒಬ್ಬ ದೇವದೂತನಿಗೆ 1,85,000 ಅಶ್ಶೂರ ಸೈನಿಕರನ್ನ ಕೊಲ್ಲೋ ನೇಮಕ ಸಿಕ್ತು. (2 ಅರ. 19:35) ಇನ್ನೂ ಹಲವಾರು ದೇವದೂತರಿಗೆ “ಪಾಪ ಮಾಡೋಕೆ ಬೇರೆಯವ್ರಿಗೆ ಕುಮ್ಮಕ್ಕು ಕೊಡುವವ್ರನ್ನ ಮತ್ತು ಕೆಟ್ಟ ಕೆಲಸಗಳನ್ನ ಮಾಡುವವ್ರನ್ನ . . . ದೇವರ ಆಳ್ವಿಕೆಯಿಂದ ತೆಗೆದು” ಹಾಕೋ ನೇಮಕನ ಯೆಹೋವ ಕೊಟ್ಟಿದ್ದಾನೆ. (ಮತ್ತಾ. 13:39-41) ಬೇರೆ ದೇವದೂತರು ಯೆಹೋವ “ಆರಿಸ್ಕೊಂಡವ್ರನ್ನ” ಸ್ವರ್ಗಕ್ಕೆ ಒಟ್ಟುಗೂಡಿಸೋ ನೇಮಕ ಪಡ್ಕೊಂಡಿದ್ದಾರೆ. (ಮತ್ತಾ. 24:31) ಇನ್ನು ಕೆಲವು ದೇವದೂತರಿಗೆ ನಾವು “ಹೋದ ಕಡೆ ಎಲ್ಲ . . . ಕಾದು ಕಾಪಾಡೋ” ನೇಮಕ ಸಿಕ್ಕಿದೆ.—ಕೀರ್ತ. 91:11; ಮತ್ತಾ. 18:10; ಮತ್ತಾಯ 4:11; ಲೂಕ 22:43 ಹೋಲಿಸಿ.

1 ತಿಮೊತಿ 5:21ರಲ್ಲಿ ಹೇಳಿರೋ ‘ಆರಿಸ್ಕೊಂಡಿರೋ ದೇವದೂತರು,’ ಸಭೆನ ನೋಡ್ಕೊಳ್ಳೋ ವಿಶೇಷ ನೇಮಕ ಪಡ್ಕೊಂಡಿರೋ ದೇವದೂತರಾಗಿದ್ದಾರೆ. ಇದನ್ನ ಹೇಗೆ ಹೇಳಬಹುದು? ಈ ವಚನದ ಹಿನ್ನೆಲೆ ನೋಡಿದ್ರೆ ಪೌಲ ಇಲ್ಲಿ, ಹಿರಿಯರಿಗೆ ತಮ್ಮ ಜವಾಬ್ದಾರಿನ ಹೇಗೆ ಮಾಡಬೇಕು ಮತ್ತು ಸಭೆಯವ್ರು ಅವ್ರಿಗೆ ಹೇಗೆ ಗೌರವ ಕೊಡಬೇಕು ಅಂತ ಹೇಳ್ತಿದ್ದಾನೆ. ಹಿರಿಯರು ಸಭೆಯಲ್ಲಿ “ವಿಚಾರಣೆ ಮಾಡೋ ಮುಂಚೆ ತೀರ್ಮಾನ ಮಾಡದೆ, ಪಕ್ಷಪಾತ ಮಾಡದೆ” ತಮ್ಮ ಜವಾಬ್ದಾರಿ ನಡೆಸಬೇಕು ಅಂತ ಹೇಳಿದ. ಪೌಲ ಕೊಟ್ಟ ಈ ಸಲಹೆನ ಅವ್ರು ಪಾಲಿಸೋಕೆ ಒಂದು ಮುಖ್ಯ ಕಾರಣ ಇತ್ತು. ಅದೇನಂದ್ರೆ ಸಭೆಲಿ ಹಿರಿಯರು ಮಾಡ್ತಿರೋದನ್ನೆಲ್ಲ ‘ದೇವರು, ಕ್ರಿಸ್ತ ಯೇಸು ಮತ್ತು ಆರಿಸ್ಕೊಂಡಿರೋ ದೇವದೂತರು’ ನೋಡ್ತಿದ್ದಾರೆ ಅಂತ ಪೌಲನ ಮಾತಿಂದ ಗೊತ್ತಾಗುತ್ತೆ. ಇದ್ರಿಂದ ಕೆಲವು ದೇವದೂತರಿಗೆ ಸಭೆಗೆ ಸಹಾಯ ಮಾಡೋ ನೇಮಕ ಇದೆ ಅಂತ ಗೊತ್ತಾಗುತ್ತೆ. ಇದ್ರಲ್ಲಿ ಸಭೆಯನ್ನ ಕಾಪಾಡೋ, ಸಾರೋ ಕೆಲ್ಸ ನೋಡ್ಕೊಳೋ ಮತ್ತು ತಾವು ನೋಡಿದ್ದನ್ನ ಯೆಹೋವನಿಗೆ ತಿಳಿಸೋ ಜವಾಬ್ದಾರಿ ಸೇರಿದೆ.—ಮತ್ತಾ. 18:10; ಪ್ರಕ. 14:6.