ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯಾ?

ನಿಮಗೆ ನೆನಪಿದೆಯಾ?

ನೀವು ಈ ವರ್ಷದ ಕಾವಲಿನಬುರುಜುವಿನ ಎಲ್ಲಾ ಸಂಚಿಕೆಗಳನ್ನು ಓದಿದ್ದೀರಾ? ಹಾಗಿದ್ರೆ, ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯೋಕೆ ಪ್ರಯತ್ನಿಸಿ:

ನಾವು ಯೆಹೋವನ ಜೊತೆ ಮಾತಾಡೋಕೆ, ಆತನು ಹೇಳೋದನ್ನು ಕೇಳೋಕೆ, ಆತನ ಬಗ್ಗೆ ಯೋಚಿಸೋಕೆ ಸಮಯ ಕೊಟ್ರೆ ಏನೆಲ್ಲಾ ಒಳ್ಳೇದಾಗುತ್ತೆ?

ನಾವು ಒಳ್ಳೇ ತೀರ್ಮಾನ ಮಾಡೋಕೆ ಆಗುತ್ತೆ, ಒಳ್ಳೇ ಶಿಕ್ಷಕರಾಗ್ತೀವಿ, ನಮ್ಮ ನಂಬಿಕೆ ಬಲವಾಗುತ್ತೆ ಮತ್ತು ಯೆಹೋವನ ಮೇಲಿರೋ ಪ್ರೀತಿ ಇನ್ನೂ ಜಾಸ್ತಿಯಾಗುತ್ತೆ.—w22.01, ಪುಟ 30-31.

ಯೆಹೋವ ಮತ್ತು ಆತನು ನೇಮಿಸಿರೋ ಸಹೋದರರನ್ನ ನಂಬೋದ್ರಿಂದ ನಮಗೇನು ಪ್ರಯೋಜನ?

ಯೆಹೋವ ಮತ್ತು ಆತನು ನೇಮಿಸಿರೋ ಹಿರಿಯರನ್ನ ನಂಬಿದ್ರೆ ಅವರು ಕೊಡೋ ನಿರ್ದೇಶನಗಳನ್ನ ಪಾಲಿಸ್ತೀವಿ. ಈಗ ನಾವು ಇದನ್ನ ಮಾಡಿದ್ರೆ ಮಹಾ ಸಂಕಟ ಬಂದಾಗ ನಮಗೆ ಸಿಗೋ ನಿರ್ದೇಶನಗಳು ವಿಚಿತ್ರ ಅನಿಸಿದ್ರೂ, ಅದನ್ನ ನಮ್ಮಿಂದ ಮಾಡಕ್ಕಾಗಲ್ಲ ಅನಿಸಿದ್ರೂ ಅದನ್ನ ಪಾಲಿಸ್ತೀವಿ. —w22.02, ಪುಟ 4-6.

“[ರಾಜ್ಯಪಾಲ] ಜೆರುಬ್ಬಾಬೆಲನ ಕೈಯಲ್ಲಿ ಜನ ತೂಗುಗುಂಡನ್ನ ನೋಡ್ತಾರೆ” ಅಂತ ದೇವದೂತ ಜೆಕರ್ಯನಿಗೆ ಹೇಳಿದ್ದರ ಅರ್ಥ ಏನು? (ಜೆಕ. 4:8-10)

ದೇವರ ಆಲಯವನ್ನ ಸರಿಯಾದ ರೀತಿಯಲ್ಲಿ ಮತ್ತು ಯೆಹೋವನಿಗೆ ಇಷ್ಟ ಆಗೋ ತರಾನೇ ಕಟ್ಟಿ ಮುಗಿಸಲಾಗುತ್ತೆ ಅಂತ ಈ ದರ್ಶನ ದೇವಜನರಿಗೆ ಆಶ್ವಾಸನೆ ಕೊಡ್ತು.—w22.03, ಪುಟ 16-17.

ನಾವು ನಮ್ಮ “ಮಾತಲ್ಲಿ . . . ಮಾದರಿಯಾಗಿ” ಇರೋದು ಹೇಗೆ? (1 ತಿಮೊ. 4:12)

ಸಾರುವಾಗ ನಾವು ದಯೆಯಿಂದ ಮತ್ತು ಗೌರವದಿಂದ ಮಾತಾಡ್ತೀವಿ, ಕೂಟಗಳಲ್ಲಿ ಮನಸಾರೆ ಹಾಡ್ತೀವಿ, ಉತ್ತರ ಹೇಳ್ತೀವಿ, ಎಲ್ಲರನ್ನ ಹುರಿದುಂಬಿಸೋ ತರ ಮಾತಾಡ್ತೀವಿ, ಸತ್ಯವನ್ನೇ ಹೇಳ್ತೀವಿ ಮತ್ತು ಬೇರೆಯವರ ಬಗ್ಗೆ ತಪ್ಪಾಗಿ ಮಾತಾಡಲ್ಲ.—w22.04, ಪುಟ 6-9.

ದಾನಿಯೇಲ 7ನೇ ಅಧ್ಯಾಯದಲ್ಲಿರೋ ನಾಲ್ಕು ಪ್ರಾಣಿಗಳ (ಲೋಕಶಕ್ತಿಗಳು) ಗುಣಲಕ್ಷಣಗಳು ಪ್ರಕಟನೆ 13:1, 2ರಲ್ಲಿ ಹೇಳಿರೋ ಒಂದೇ ಕಾಡುಪ್ರಾಣಿಯಲ್ಲಿ ಯಾಕಿದೆ?

ಪ್ರಕಟನೆ 13ನೇ ಅಧ್ಯಾಯದಲ್ಲಿರೋ ಕಾಡುಪ್ರಾಣಿ ಯಾವುದೋ ಒಂದು ಸರ್ಕಾರ ಅಥವಾ ಲೋಕಶಕ್ತಿಯನ್ನ (ಉದಾಹರಣೆಗೆ, ರೋಮ್‌) ಸೂಚಿಸಲ್ಲ. ಬದಲಿಗೆ, ಇಲ್ಲಿ ತನಕ ಮಾನವರ ಮೇಲೆ ಆಳ್ವಿಕೆ ನಡೆಸಿರೋ ಎಲ್ಲಾ ಸರ್ಕಾರಗಳನ್ನ ಸೂಚಿಸುತ್ತೆ.—w22.05, ಪುಟ 9.

ಯೆಹೋವ ನ್ಯಾಯ ಕೊಡಿಸ್ತಾನೆ ಅನ್ನೋ ನಂಬಿಕೆ ನಮಗಿದೆ ಅಂತ ಹೇಗೆ ತೋರಿಸಬಹುದು?

ಯಾರಾದ್ರೂ ನಮಗೆ ಅವಮಾನ ಮಾಡಿದ್ರೆ, ನಮ್ಮ ಮನಸ್ಸನ್ನ ನೋಯಿಸಿದ್ರೆ ಅಥವಾ ಬೇಜಾರಾಗೋ ತರ ನಡ್ಕೊಂಡ್ರೆ ನಾವು ಮನಸ್ಸಲ್ಲಿ ಕೋಪ ಇಟ್ಟುಕೊಂಡು ಸೇಡು ತೀರಿಸಿಕೊಳ್ಳಬಾರದು. ಎಲ್ಲವನ್ನ ಯೆಹೋವನ ಕೈಯಲ್ಲಿ ಬಿಟ್ಟುಬಿಡಬೇಕು. ಆಗ ಅಪರಿಪೂರ್ಣತೆಯಿಂದ ಆಗಿರೋ ಎಲ್ಲ ತೊಂದರೆಗಳನ್ನ, ಅನಾಹುತಗಳನ್ನ ಯೆಹೋವ ಪೂರ್ತಿಯಾಗಿ ಸರಿಮಾಡ್ತಾನೆ.—w22.06, ಪುಟ 10-11.

ಕೂಟದಲ್ಲಿ ಪ್ರಾರ್ಥನೆ ಮಾಡೋ ಸಹೋದರ ಏನನ್ನ ಮನಸ್ಸಲ್ಲಿ ಇಟ್ಟುಕೊಳ್ಳಬೇಕು?

ಆ ಸಹೋದರ ಮಾಡೋ ಪ್ರಾರ್ಥನೆ ಸಲಹೆ ಕೊಡೋ ತರನೋ ಅಥವಾ ಪ್ರಕಟಣೆ ಮಾಡೋ ತರನೋ ಇರಬಾರದು. ಕೂಟದ ಆರಂಭದ ಪ್ರಾರ್ಥನೆ ಮಾಡುವಾಗ ‘ತುಂಬ ಮಾತಾಡುತ್ತಾ’ ಇರಬಾರದು. (ಮತ್ತಾ. 6:7)—w22.07, ಪುಟ 24-25.

‘ಕೆಟ್ಟ ಕೆಲಸ ಮಾಡ್ತಾ ಇದ್ದವರು’ “ನ್ಯಾಯತೀರ್ಪಿಗಾಗಿ ಎದ್ದು ಬರ್ತಾರೆ” ಅನ್ನೋದರ ಅರ್ಥ ಏನು? (ಯೋಹಾ. 5:29)

ತೀರಿಹೋಗೋ ಮುಂಚೆ ಅವರು ಮಾಡ್ತಾ ಇದ್ದ ಕೆಟ್ಟ ಕೆಲಸಗಳ ಆಧಾರದ ಮೇಲೆ ಅವರಿಗೆ ತೀರ್ಪು ಮಾಡಲ್ಲ. ಬದಲಿಗೆ ಜೀವಂತವಾಗಿ ಎದ್ದುಬಂದ ಮೇಲೆ ಹೇಗೆ ನಡ್ಕೊಳ್ತಾರೆ ಮತ್ತು ಅವರ ಜೀವನವನ್ನು ಹೇಗೆ ಬದಲಾಯಿಸಿಕೊಂಡಿದ್ದಾರೆ ಅನ್ನೋದನ್ನ ಪರಿಶೀಲಿಸಲಾಗುತ್ತೆ.—w22.09, ಪುಟ 18.

1922ರ ಸೆಪ್ಟೆಂಬರ್‌ ತಿಂಗಳಲ್ಲಿ ನಡೆದ ಅಧಿವೇಶನದಲ್ಲಿ ಸಹೋದರ ಜೆ. ಎಫ್‌. ರದರ್‌ಫರ್ಡ್‌ ಯಾವ ರೋಮಾಂಚಕ ಪ್ರಕಟಣೆ ಮಾಡಿದ್ರು?

ಅಮೆರಿಕಾದ ಒಹಾಯೋದ ಸೀಡರ್‌ ಪಾಯಿಂಟ್‌ನಲ್ಲಿ ನಡೆದ ಅಧಿವೇಶನದಲ್ಲಿ ಅವರು: “ರಾಜನು ಆಳುತ್ತಾನೆ! ಅವನ ಬಗ್ಗೆ ಪ್ರಚುರಪಡಿಸುವ ಪ್ರತಿನಿಧಿಗಳು ನೀವು. ಆದಕಾರಣ ರಾಜನನ್ನೂ, ಅವನ ರಾಜ್ಯವನ್ನೂ ಪ್ರಕಟಿಸಿರಿ, ಪ್ರಕಟಿಸಿರಿ, ಪ್ರಕಟಿಸಿರಿ” ಅಂದ್ರು.—w22.10, ಪುಟ 3-5.

ಸಹಿಸಿಕೊಳ್ಳೋಕೆ ಯೆಹೋವ ನಮಗೆ ಯಾವ 3 ವಿಧದಲ್ಲಿ ಸಹಾಯ ಮಾಡ್ತಾನೆ ಅಂತ ಯೆಶಾಯ 30ನೇ ಅಧ್ಯಾಯ ಹೇಳುತ್ತೆ?

ದೇವರು (1) ನಮ್ಮ ಪ್ರಾರ್ಥನೆಯನ್ನ ಕೇಳಿಸಿಕೊಂಡು ಅದಕ್ಕೆ ಉತ್ತರ ಕೊಡ್ತಾನೆ, (2) ಜೀವನದಲ್ಲಿ ಒಳ್ಳೇ ನಿರ್ಧಾರ ಮಾಡೋದು ಹೇಗೆ ಅಂತ ಹೇಳಿಕೊಡ್ತಾನೆ, (3) ಈಗಲೂ ಮುಂದಕ್ಕೂ ನಮ್ಮನ್ನ ಆಶೀರ್ವದಿಸ್ತಾನೆ ಅಂತ ಆ ಅಧ್ಯಾಯ ಹೇಳುತ್ತೆ.—w22.11, ಪುಟ 9.

ಕೀರ್ತನೆ 37:10, 11, 29ರಲ್ಲಿ ಹೇಳಿರೋ ಮಾತುಗಳು ಹಿಂದಿನ ಕಾಲದಲ್ಲೂ ನಿಜ ಆಯ್ತು, ಮುಂದೆನೂ ನಿಜ ಆಗುತ್ತೆ ಅಂತ ನಾವ್ಯಾಕೆ ಹೇಳಬಹುದು?

ಇಸ್ರಾಯೇಲ್ಯರು ಒಳ್ಳೇ ಪರಿಸ್ಥಿತಿಯಲ್ಲಿ ಜೀವಿಸ್ತಾರೆ ಅಂತ ದಾವೀದ ಹೇಳಿದ ಮಾತು ಸೊಲೊಮೋನನ ಆಳ್ವಿಕೆಯ ಸಮಯದಲ್ಲಿ ನಿಜ ಆಯ್ತು. ಯೇಸು ಕೂಡ ಮುಂದೆ ಬರೋ ಪರದೈಸ್‌ ಬಗ್ಗೆ ಮಾತಾಡುವಾಗ 11ನೇ ವಚನವನ್ನ ಉಲ್ಲೇಖಿಸಿದನು. (ಮತ್ತಾ. 5:5; ಲೂಕ 23:43)—w22.12, ಪುಟ 8-10, 14.