ಕಾವಲಿನಬುರುಜು - ಅಧ್ಯಯನ ಆವೃತ್ತಿ ನವೆಂಬರ್ 2019

ಈ ಸಂಚಿಕೆಯಲ್ಲಿ 2019 ಡಿಸೆಂಬರ್‌ 30 ರಿಂದ 2020 ಫೆಬ್ರವರಿ 2 ರ ವರೆಗಿನ ಅಧ್ಯಯನ ಲೇಖನಗಳಿವೆ.

ಅಂತ್ಯ ಬರುವುದಕ್ಕೂ ಮುಂಚೆ ಆಪ್ತ ಸ್ನೇಹ ಬೆಳೆಸಿಕೊಳ್ಳಿ

ಯೆರೂಸಲೇಮಿನ ನಾಶನ ಹತ್ತಿರ ಇದ್ದ ಸಮಯದಲ್ಲಿ ಸ್ನೇಹಿತರ ಸಹಾಯದಿಂದ ಬದುಕುಳಿದ ಯೆರೆಮೀಯನ ಉದಾಹರಣೆಯಿಂದ ನಾವು ಅನೇಕ ವಿಷಯಗಳನ್ನು ಕಲಿಯಬಹುದು.

ಪರೀಕ್ಷೆಯ ಸಮಯದಲ್ಲಿ ಪವಿತ್ರಾತ್ಮದ ಸಹಾಯ

ಕಷ್ಟಗಳನ್ನು ತಾಳಿಕೊಳ್ಳಲು ಪವಿತ್ರಾತ್ಮ ನಮಗೆ ಸಹಾಯ ಮಾಡುತ್ತದೆ. ಆದರೆ ಪವಿತ್ರಾತ್ಮದ ಸಹಾಯವನ್ನು ಆದಷ್ಟು ಹೆಚ್ಚು ಪಡಕೊಳ್ಳಲು ನಾವು ಮಾಡಲೇಬೇಕಾದ ನಾಲ್ಕು ವಿಷಯಗಳನ್ನು ಈ ಲೇಖನದಲ್ಲಿ ಕೊಡಲಾಗಿದೆ.

ನಿಮ್ಮ ‘ನಂಬಿಕೆಯೆಂಬ ಗುರಾಣಿ’ ಗಟ್ಟಿಯಾಗಿದೆಯಾ?

ನಮ್ಮ ನಂಬಿಕೆ ಗುರಾಣಿಯಂತೆ ಇದೆ. ಅದು ನಮಗೇನೂ ಹಾನಿಯಾಗದಂತೆ ಕಾಪಾಡುತ್ತದೆ. ಈ “ನಂಬಿಕೆಯೆಂಬ ದೊಡ್ಡ ಗುರಾಣಿ” ಸುಸ್ಥಿತಿಯಲ್ಲಿ ಇರಬೇಕೆಂದರೆ ನಾವೇನು ಮಾಡಬೇಕು?

ಯಾಜಕಕಾಂಡ ಪುಸ್ತಕದಿಂದ ನಮಗಿರುವ ಪಾಠಗಳು

ಪ್ರಾಚೀನ ಕಾಲದ ಇಸ್ರಾಯೇಲ್ಯರಿಗೆ ಯೆಹೋವನು ಕೊಟ್ಟಿದ್ದ ನಿಯಮಗಳು ಯಾಜಕಕಾಂಡ ಪುಸ್ತಕದಲ್ಲಿವೆ. ಕ್ರೈಸ್ತರಾದ ನಾವು ಆ ನಿಯಮಗಳನ್ನು ಪಾಲಿಸುವ ಅಗತ್ಯ ಇಲ್ಲದಿದ್ದರೂ ಇಂದು ಅವುಗಳಿಂದ ನಮಗೆ ಪ್ರಯೋಜನಗಳಿವೆ.

‘ಆರಂಭಿಸಿದ್ದನ್ನು ಮಾಡಿ ಮುಗಿಸಿರಿ’

ನಾವು ಒಳ್ಳೇ ನಿರ್ಣಯಗಳನ್ನು ಮಾಡಿದರೂ ಕೆಲವೊಮ್ಮೆ ಅದನ್ನು ಕಾರ್ಯರೂಪಕ್ಕೆ ಹಾಕಲು ಕಷ್ಟಪಡುತ್ತೇವೆ. ನೀವು ಆರಂಭಿಸಿದ್ದನ್ನು ಮಾಡಿ ಮುಗಿಸಲು ಸಹಾಯ ಮಾಡುವ ಸಲಹೆಗಳನ್ನು ನೋಡಿ.

ನಿಮಗೆ ಗೊತ್ತಿತ್ತಾ?

ಬೈಬಲ್‌ ಕಾಲದಲ್ಲಿದ್ದ ಮನೆವಾರ್ತೆಯವರಿಗೆ ಯಾವ ಜವಾಬ್ದಾರಿಯಿತ್ತು?