ಕಾವಲಿನಬುರುಜು - ಅಧ್ಯಯನ ಆವೃತ್ತಿ ಫೆಬ್ರವರಿ 2017

2017⁠ರ ಏಪ್ರಿಲ್‌ 3-30⁠ರ ವರೆಗಿನ ಅಧ್ಯಯನ ಲೇಖನಗಳು ಈ ಸಂಚಿಕೆಯಲ್ಲಿವೆ.

ಯೆಹೋವನ ಉದ್ದೇಶ ಖಂಡಿತ ನೆರವೇರುತ್ತದೆ!

ಭೂಮಿ ಮತ್ತು ಮಾನವರ ಬಗ್ಗೆ ದೇವರಿಗೆ ಯಾವ ಉದ್ದೇಶ ಇದೆ? ಆ ಉದ್ದೇಶ ಇಂದಿನ ತನಕ ನೆರವೇರಿಲ್ಲ ಯಾಕೆ? ಯೇಸು ತನ್ನ ಜೀವವನ್ನು ಕೊಟ್ಟದ್ದರಿಂದ ದೇವರ ಉದ್ದೇಶ ನೆರವೇರಲು ಹೇಗೆ ಸಾಧ್ಯವಾಗುತ್ತದೆ?

ವಿಮೋಚನಾ ಮೌಲ್ಯ—ನಮ್ಮ ತಂದೆ ಕೊಟ್ಟ “ಪರಿಪೂರ್ಣ ವರ”

ದೇವರ ಈ ಏರ್ಪಾಡು ಅದ್ಭುತ ಅವಕಾಶಗಳನ್ನು ಮುಂದಿಡುತ್ತದೆ ಮಾತ್ರವಲ್ಲ, ಸ್ವರ್ಗದಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲರಿಗೂ ಮಹತ್ವದ್ದಾಗಿರುವ ವಿವಾದಾಂಶಗಳನ್ನು ಇತ್ಯರ್ಥಗೊಳಿಸುತ್ತದೆ.

ಜೀವನ ಕಥೆ

ನಾವು ದೇವರ ಅಪಾತ್ರ ದಯೆಯನ್ನು ಅನೇಕ ವಿಧಗಳಲ್ಲಿ ಅನುಭವಿಸಿದೆವು

ಡಗ್ಲಸ್‌ ಮತ್ತು ಮೇರಿ ಗೆಸ್ಟ್‌ ಕೆನಡದಲ್ಲಿ ಪಯನೀಯರರಾಗಿದ್ದಾಗ ಮತ್ತು ಬ್ರೆಜಿಲ್‌ ಹಾಗೂ ಪೋರ್ಚುಗಲ್‌ನಲ್ಲಿದ್ದಾಗ ದೇವರ ಅಪಾತ್ರ ದಯೆಯನ್ನು ಅನುಭವಿಸಿದರು.

ಯೆಹೋವನು ತನ್ನ ಜನರನ್ನು ನಡಿಸುತ್ತಾನೆ

ಹಿಂದಿನ ಕಾಲದಲ್ಲಿ ತನ್ನ ಜನರನ್ನು ನಡಿಸಲು ಯೆಹೋವನು ಕೆಲವು ಮನುಷ್ಯರನ್ನು ಉಪಯೋಗಿಸಿದನು. ಆತನೇ ಅವರ ಮೂಲಕ ನಡೆಸುತ್ತಿದ್ದಾನೆಂದು ಹೇಳಲು ಯಾವ ಪುರಾವೆ ಇತ್ತು?

ಇಂದು ಯೆಹೋವನ ಜನರನ್ನು ಯಾರು ನಡೆಸುತ್ತಿದ್ದಾರೆ?

ಈ ದುಷ್ಟ ಲೋಕದ ಸಮಾಪ್ತಿಯವರೆಗೆ ಯೇಸು ತನ್ನ ಶಿಷ್ಯರ ಜೊತೆಗೆ ಇರುವನೆಂದು ಮಾತುಕೊಟ್ಟಿದ್ದಾನೆ. ಇಂದು ಭೂಮಿಯಲ್ಲಿರುವ ದೇವರ ಜನರನ್ನು ಅವನು ಹೇಗೆ ನಡೆಸುತ್ತಿದ್ದಾನೆ?

ವಾಚಕರಿಂದ ಪ್ರಶ್ನೆಗಳು

“ಸಹಿಸಿಕೊಳ್ಳಲು ಅಸಾಧ್ಯವಾಗುವಷ್ಟರ ಮಟ್ಟಿಗೆ ನೀವು ಪ್ರಲೋಭಿಸಲ್ಪಡುವಂತೆ [ಯೆಹೋವನು] ಅನುಮತಿಸುವುದಿಲ್ಲ” ಎಂದು ಅಪೊಸ್ತಲ ಪೌಲ ಹೇಳಿದ್ದಾನೆ. ಇದರರ್ಥ ಯಾವ್ಯಾವ ಕಷ್ಟಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯ ನಮಗಿದೆ ಎಂದು ದೇವರು ಮುಂಚೆಯೇ ತೂಗಿನೋಡಿ ನಂತರ ಕಷ್ಟಗಳನ್ನು ಅನುಮತಿಸುತ್ತಾನೆ ಎಂದಾ?

ನಮ್ಮ ಸಂಗ್ರಹಾಲಯ

“ಯಾವ ರಸ್ತೆಯೂ ಕಷ್ಟವಲ್ಲ, ಯಾವ ಸ್ಥಳವೂ ದೂರವಲ್ಲ”

1920⁠ನೇ ದಶಕದ ಕೊನೇ ಭಾಗದಲ್ಲಿ ಮತ್ತು 1930⁠ನೇ ದಶಕದ ಆರಂಭದಲ್ಲಿ ಹುರುಪಿನ ಪಯನೀಯರರು ದೇವರ ರಾಜ್ಯದ ಸುವಾರ್ತೆಯನ್ನು ಆಸ್ಟ್ರೇಲಿಯದ ಹಿನ್ನಾಡಿನಲ್ಲಿ ಸಾರಲು ದೃಢನಿರ್ಣಯ ಮಾಡಿದರು.