ಕಾವಲಿನಬುರುಜು - ಅಧ್ಯಯನ ಆವೃತ್ತಿ ಫೆಬ್ರವರಿ 2018

ಈ ಸಂಚಿಕೆಯಲ್ಲಿ 2018​ರ ಏಪ್ರಿಲ್‌ 2​ರಿಂದ 29​ರ ವರೆಗಿನ ಅಧ್ಯಯನ ಲೇಖನಗಳಿವೆ.

ನೋಹ, ದಾನಿಯೇಲ, ಯೋಬ—ಇವರ ನಂಬಿಕೆ ಮತ್ತು ವಿಧೇಯತೆಯನ್ನು ಅನುಕರಿಸಿ

ನಾವು ಇವತ್ತು ಅನುಭವಿಸುತ್ತಿರುವ ಕಷ್ಟಗಳಲ್ಲಿ ಕೆಲವೊಂದನ್ನು ಅವತ್ತು ನೋಹ, ದಾನಿಯೇಲ, ಯೋಬ ಕೂಡ ಅನುಭವಿಸಿದ್ದರು. ಆಗೆಲ್ಲ ಅವರಿಗೆ ನಿಷ್ಠೆ ಕಾಪಾಡಿಕೊಳ್ಳಲು ಯಾವುದು ಸಹಾಯ ಮಾಡಿತು?

ನೋಹ, ದಾನಿಯೇಲ, ಯೋಬನಂತೆ ನೀವೂ ಯೆಹೋವನನ್ನು ತಿಳಿದುಕೊಂಡಿದ್ದೀರಾ?

ಈ ಪುರುಷರು ಸರ್ವಶಕ್ತನ ಬಗ್ಗೆ ಹೇಗೆ ತಿಳಿದುಕೊಂಡರು? ಇದರಿಂದ ಅವರಿಗೆ ಯಾವ ಪ್ರಯೋಜನ ಸಿಕ್ಕಿತು? ಅವರಲ್ಲಿದ್ದಂಥ ನಂಬಿಕೆಯನ್ನು ನಾವು ಹೇಗೆ ಬೆಳೆಸಿಕೊಳ್ಳಬಹುದು?

ಜೀವನ ಕಥೆ

ಯೆಹೋವನಿಗೆ ಎಲ್ಲವೂ ಸಾಧ್ಯ

ಬಸ್ಸಲ್ಲಿ ಕೇಳಿಸಿಕೊಂಡ ಪುಳಕಗೊಳಿಸುವ ಕೆಲವು ಮಾತುಗಳು ಕಿರ್ಗಿಸ್ತಾನದ ಒಬ್ಬ ದಂಪತಿಯ ಬದುಕನ್ನೇ ಬದಲಾಯಿಸಿದವು.

ಆಧ್ಯಾತ್ಮಿಕ ವ್ಯಕ್ತಿ ಆಗಿರುವುದು ಅಂದರೆ ಏನು?

“ಆಧ್ಯಾತ್ಮಿಕ ಮನುಷ್ಯ” ಮತ್ತು “ಭೌತಿಕ ಮನುಷ್ಯನ” ಮಧ್ಯೆ ಇರುವ ವ್ಯತ್ಯಾಸವನ್ನು ಬೈಬಲ್‌ ವಿವರಿಸುತ್ತದೆ.

ಆಧ್ಯಾತ್ಮಿಕವಾಗಿ ಬೆಳೆಯುತ್ತಾ ಇರಿ

ನಮಗೆ ಬೈಬಲಿನ ಬಗ್ಗೆ ತುಂಬ ಜ್ಞಾನ ಇದ್ದ ತಕ್ಷಣ ನಾವು ಆಧ್ಯಾತ್ಮಿಕ ವ್ಯಕ್ತಿಗಳು ಎಂದಾಗುವುದಿಲ್ಲ. ಹಾಗಾದರೆ ನಮ್ಮಲ್ಲಿ ಇನ್ನೂ ಏನಿರಬೇಕು?

ಆನಂದ—ನಾವು ದೇವರಿಂದ ಪಡೆಯುವ ಗುಣ

ಒಂದಲ್ಲ ಒಂದು ಸಮಸ್ಯೆಯಿಂದಾಗಿ ನೀವು ಆನಂದ ಕಳಕೊಳ್ಳುತ್ತಿದ್ದೀರಾ? ಹಾಗಿದ್ದರೆ, ನೀವು ಪುನಃ ಪಡೆದುಕೊಳ್ಳಬಹುದು. ಹೇಗೆ?

ನಮ್ಮ ಸಂಗ್ರಹಾಲಯ

ಐರ್ಲೆಂಡಿನಲ್ಲಿ ಸುವಾರ್ತೆ ಹಬ್ಬಲು ಸಹಾಯ ಮಾಡಿದ ಸಾರ್ವಜನಿಕ ಭಾಷಣಗಳು

ಐರ್ಲೆಂಡಿನ ಕ್ಷೇತ್ರಗಳು “ಕೊಯ್ಲಿಗಾಗಿ ಸಿದ್ಧವಾಗಿ ಕಾಯುತ್ತಿವೆ” ಎಂದು ಚಾರ್ಲ್ಸ್‌ ಟೇಸ್‌ ರಸಲ್‌ಗೆ ಯಾಕೆ ಬಲವಾಗಿ ಅನಿಸಿತು?