ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದೇ ಒಂದು ನಗುವಿನಿಂದ . . .

ಒಂದೇ ಒಂದು ನಗುವಿನಿಂದ . . .

ಫಿಲಿಪ್ಪೀನ್ಸ್‌ ದೇಶದ ವ್ಯಾಪಾರ ನಗರಿಯಾದ ಬ್ಯಾಗಿಯೋ ಎಂಬಲ್ಲಿ ಇಬ್ಬರು ಹುಡುಗಿರು ನಡ್ಕೊಂಡು ಹೋಗ್ತಿದ್ರು. ರಸ್ತೆ ಪಕ್ಕದಲ್ಲೇ ತಳ್ಳುಬಂಡಿ ಸಾಕ್ಷಿಕಾರ್ಯ ನಡೀತಿತ್ತು. ಅಲ್ಲಿದ್ದ ಹೆಲೆನ್‌ ಅನ್ನೋ ಸಹೋದರಿ ಈ ಹುಡುಗಿರನ್ನ ನೋಡಿ ಸ್ನೇಹದಿಂದ ನಕ್ಕರು. ಆದ್ರೂ ಆ ಹುಡುಗಿರು ತಳ್ಳುಬಂಡಿ ಹತ್ರ ಹೋಗಿಲ್ಲ. ಆದ್ರೆ ಆ ಸಹೋದರಿಯ ನಗು ಮಾತ್ರ ಅವರ ಮನಸ್ಸಲ್ಲಿ ಅಚ್ಚಳಿಯದೆ ಉಳಿಯಿತು.

ಆ ದಿನ ಹುಡುಗಿಯರು ಬಸ್ಸಲ್ಲಿ ವಾಪಸ್‌ ಮನೆಗೆ ಹೋಗ್ತಿದ್ದಾಗ ಒಂದು ರಾಜ್ಯ ಸಭಾಗೃಹದ ಮುಂದೆ jw.org ಅಂತ ಬರೆದಿರೋದನ್ನ ಗಮನಿಸಿದ್ರು. ತಕ್ಷಣ ಅವ್ರಿಗೆ ತಳ್ಳುಬಂಡಿಯಲ್ಲಿ jw.org ಅಂತ ಬರೆದಿರೋದನ್ನ ನೋಡಿದ್ದು ನೆನಪಾಯಿತು. ಅಲ್ಲೇ ಬಸ್ಸಿಂದ ಇಬ್ರೂ ಇಳಿದು ರಾಜ್ಯ ಸಭಾಗೃಹದ ಗೇಟ್‌ ಹತ್ರ ಹೋದರು. ಯಾವ ಸಭೆಯ ಕೂಟಗಳು ಯಾವಾಗ ನಡೆಯುತ್ತೆ ಅಂತ ಹಾಕಿದ ಶೆಡ್ಯೂಲನ್ನ ನೋಡಿದ್ರು.

ಅವ್ರಿಬ್ರೂ ಒಂದು ಕೂಟಕ್ಕೆ ಹಾಜರಾದರು. ಅಲ್ಲಿ ಹೋಗ್ತಾನೇ ಯಾರು ಸಿಕ್ಕಿದ್ರು ಗೊತ್ತಾ? ಹೆಲೆನ್‌ ಸಿಕ್ಕಿದ್ರು! ಅವತ್ತು ತಮ್ಮನ್ನ ನೋಡಿ ಸ್ಮೈಲ್‌ ಮಾಡಿದ್ದು ಇವ್ರೇ ಅಂತ ಗುರುತಿಸಿ ಆಕೆಯನ್ನ ಮಾತಾಡಿಸಿದ್ರು. “ದಿಡೀರ್‌ ಅಂತ ಆ ಇಬ್ರು ಹುಡುಗಿರು ನನ್ನತ್ರ ಬರೋದನ್ನ ನೋಡಿದಾಗ ನಂಗೆ ಹೆದರಿಕೆ ಆಯ್ತು. ನನ್ನಿಂದ ಏನಾದ್ರೂ ತಪ್ಪು ಆಗಿದ್ಯಾ ಅಂತ ಯೋಚಿಸ್ದೆ” ಅಂತ ಹೆಲೆನ್‌ ಹೇಳ್ತಾಳೆ. “ಆ ದಿನ ನಿಮ್ಮನ್ನ ತಳ್ಳುಬಂಡಿಯತ್ರ ನೋಡಿದ್ವಿ” ಅಂತ ಹುಡುಗಿರು ಹೆಲೆನ್‌ ಹತ್ರ ಹೇಳಿದ್ರು.

ಅವ್ರಿಬ್ರಿಗೂ ಕೂಟ ತುಂಬ ಇಷ್ಟವಾಯ್ತು. ಸಹೋದರ ಸಹೋದರಿಯರು ಮಾತಾಡಿಸಿದ್ದು ನೋಡಿ ಸಂತೋಷವಾಯ್ತು. ತಾವೆಲ್ಲೋ ಬೇರೆಕಡೆ ಇದ್ದೀವಿ ಅಂತ ಅವ್ರಿಗೆ ಅನಿಸಲೇ ಇಲ್ಲ. ಕೂಟ ಆದ್ಮೇಲೆ ಕೆಲವ್ರು ಸಭಾಗೃಹವನ್ನ ಶುಚಿ ಮಾಡೋದು ನೋಡಿ ತಾವೂ ಶುಚಿ ಮಾಡ್ಬಹುದಾ ಅಂತ ಕೇಳಿದ್ರು. ಅವ್ರಿಬ್ರಲ್ಲಿ ಒಬ್ಬಳು ಈಗ ಆ ದೇಶದಲ್ಲಿಲ್ಲ. ಆದ್ರೆ ಇನ್ನೊಬ್ಬಳು ಕೂಟಗಳಿಗೆ ಹಾಜರಾಗುತ್ತಿದ್ದಾಳೆ. ಬೈಬಲನ್ನ ಕಲಿತಿದ್ದಾಳೆ. ಇದೆಲ್ಲಾ ಆಗಿದ್ದು ಆ ಒಂದೇ ಒಂದು ನಗುವಿನಿಂದ!