ನಮ್ಮ ವೆಬ್ಸೈಟಲ್ಲಿ . . .
ಮುಖಪುಟದಲ್ಲಿದ್ದ ಲೇಖನ ಎಲ್ಲೋಯ್ತು?
jw.org ವೆಬ್ಸೈಟ್ನ ಮುಖಪುಟದಲ್ಲಿ ಇರೋ ಲೇಖನಗಳು ತುಂಬ ಚೆನ್ನಾಗಿವೆ. ಇತ್ತೀಚೆಗೆ ನಡೆದ ಘಟನೆಗಳ ಬಗ್ಗೆನೇ ಆ ಲೇಖನಗಳಲ್ಲಿ ಇರುತ್ತೆ. ಬೈಬಲ್ ಭವಿಷ್ಯವಾಣಿಗಳು ಹೇಗೆ ನಿಜ ಆಗ್ತಿದೆ ಅಂತ ಆ ಲೇಖನಗಳು ವಿವರಿಸುತ್ತೆ. ಇವುಗಳನ್ನ ಸಹೋದರ ಸಹೋದರಿಯರು ಸೇವೇಲಿ ಬಳಸ್ತಾ ಇದ್ದಾರೆ. ಇವು ಎಲೆಕ್ಟ್ರಾನಿಕ್ ರೂಪದಲ್ಲಿ ಇರೋದ್ರಿಂದ ಬೇರೆಯವ್ರಿಗೆ ಅದನ್ನ ಕಳಿಸೋದು ತುಂಬ ಸುಲಭ. “ನಾವೀಗ ಹೊಸ ವಿಧಾನದಲ್ಲಿ ಸೇವೆ ಮಾಡ್ತಿದ್ದೀವಿ. ಹಾಗಾಗಿ ಈ ಲೇಖನಗಳನ್ನ ತುಂಬ ಚೆನ್ನಾಗಿ ಬಳಸ್ಕೊಳ್ಳೋಕೆ ಆಗ್ತಿದೆ” ಅಂತ ಒಬ್ಬ ಸಹೋದರ ಹೇಳ್ತಾರೆ.
ಮುಖಪುಟದಲ್ಲಿ ಹೊಸಹೊಸ ಲೇಖನಗಳು ಬರ್ತಾ ಇರುತ್ತೆ. ಆಗ ಹಳೇ ಲೇಖನಗಳು ಎಲ್ಲಿ ಹೋಗುತ್ತೆ?
jw.org ವೆಬ್ಸೈಟ್ನ ಮುಖಪುಟಕ್ಕೆ ಹೋಗಿ. “ಆಯ್ದ ವಿಷಯಗಳು” ಅನ್ನೋ ವಿಭಾಗದಲ್ಲಿರೋ “ಹೆಚ್ಚಿನ ಮಾಹಿತಿ” ಅನ್ನೋ ಲಿಂಕನ್ನ ಒತ್ತಿ. ಆಗ “ಇತ್ತೀಚಿಗೆ ಮುಖಪುಟದಲ್ಲಿ ಬಂದ ಹೊಸ ಲೇಖನಗಳು” ಅನ್ನೋ ಪುಟ ತೆರೆಯುತ್ತೆ. ಅಲ್ಲಿ ಹಳೇ ಲೇಖನಗಳು ಸಿಗುತ್ತೆ.
jw.org ಅಥವಾ JW ಲೈಬ್ರರಿಯಲ್ಲಿ “ಲೈಬ್ರರಿ” ಅನ್ನೋದನ್ನ ಒತ್ತಿ. ಅದ್ರಲ್ಲಿ “ಲೇಖನ ಸರಣಿಗಳು” ಅನ್ನೋ ವಿಭಾಗಕ್ಕೆ ಹೋಗಿ. ಅದ್ರಲ್ಲಿ “ಇತರ ವಿಷಯಗಳು” ಅನ್ನೋ ಲಿಂಕ್ ಒತ್ತಿ. ವೆಬ್ಸೈಟ್ನ ಮುಖಪುಟದಲ್ಲಿ ಬಂದಿದ್ದ ತುಂಬ ಲೇಖನಗಳು ಇಲ್ಲಿ ಸಿಗುತ್ತೆ.