ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಲಿಯೋಕೆ ಒಂದು ಕಥೆ

ಹೆದರದೆ ಎದುರಿಸಿದವರು!

ಹೆದರದೆ ಎದುರಿಸಿದವರು!

ಯೆರೆಮೀಯ 38:1-13 ಓದಿ. ಪ್ರವಾದಿ ಯೆರೆಮೀಯ ಮತ್ತು ಅಧಿಕಾರಿಯಾದ ಎಬೆದ್ಮೆಲೆಕನಿಂದ ಧೈರ್ಯದ ಪಾಠ ಕಲೀರಿ.

ಇದ್ರ ಬಗ್ಗೆ ಯೋಚಿಸಿ. ಯೆಹೋವ ಹೇಳಿದ್ದನ್ನ ಜನ್ರಿಗೆ ಹೇಳೋಕೆ ಯೆರೆಮೀಯನಿಗೆ ಯಾಕೆ ಧೈರ್ಯ ಬೇಕಿತ್ತು? (ಯೆರೆ. 27:12-14; 28:15-17; 37:6-10) ಅವನು ಹೇಳಿದ್ದನ್ನ ಕೇಳಿ ಜನ ಅವನಿಗೆ ಏನು ಮಾಡಿದ್ರು?—ಯೆರೆ. 37:15, 16.

ಹುಡುಕಿ ನೋಡಿ. ಯೆರೆಮೀಯ ಏನು ಮಾಡಬೇಕಂತ ಜನ ಒತ್ತಾಯ ಮಾಡಿದ್ರು? (jr-E ಪುಟ 26-27 ಪ್ಯಾರ 20-22) ಬೈಬಲ್‌ ಕಾಲದಲ್ಲಿ ಗುಂಡಿಗಳು ಹೇಗಿತ್ತು ಮತ್ತು ಅವನ್ನ ಯಾಕೆ ಬಳಸ್ತಿದ್ರು? (it-1-E ಪುಟ 471) ಯೆರೆಮೀಯ ಕೆಸರು ಗುಂಡಿಯಲ್ಲಿ ಬಿದ್ದಿದ್ದಾಗ ಅವನಿಗೆ ಹೇಗೆಲ್ಲಾ ಅನಿಸಿರಬಹುದು? ಎಬೆದ್ಮೆಲೆಕನಿಗೆ ಏನೆಲ್ಲಾ ಭಯ ಇದ್ದಿರಬಹುದು?—w12-E 5/1 ಪುಟ 31 ಪ್ಯಾರ 2-3.

ಪಾಠ ಕಂಡುಹಿಡೀರಿ. ಈ ಪ್ರಶ್ನೆಗಳನ್ನ ಕೇಳ್ಕೊಳಿ:

  • ತನಗೆ ನಿಯತ್ತಾಗಿರೋರನ್ನ ಯೆಹೋವ ಕಾಪಾಡೋದ್ರ ಬಗ್ಗೆ ಈ ಕಥೆಯಿಂದ ನಾವೇನು ಕಲಿಬಹುದು? (ಕೀರ್ತ. 97:10; ಯೆರೆ. 39:15-18)

  • ನಾನು ಯಾವಾಗೆಲ್ಲಾ ಧೈರ್ಯ ತೋರಿಸಬೇಕು?

  • ಕಷ್ಟ ಆದ್ರೂ ಸರಿಯಾಗಿರೋದನ್ನ ಮಾಡೋಕೆ ಬೇಕಾದ ಧೈರ್ಯವನ್ನ ನಾವು ಹೇಗೆ ಬೆಳೆಸ್ಕೊಬಹುದು? (w11-E 3/1 ಪುಟ 30) a

a ಚೆನ್ನಾಗಿ ಅಧ್ಯಯನ ಮಾಡೋಕೆ ಜುಲೈ 2003ರ ಕಾವಲಿನಬುರುಜು,ಅಧ್ಯಯನ ಮಾಡಿ ನೋಡಿ!” ಅನ್ನೋ ಲೇಖನ ಓದಿ.