ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲೋಕ ನೋಡಿ ಸ್ವಾರ್ಥ ಕಲಿಬೇಡಿ!

ಲೋಕ ನೋಡಿ ಸ್ವಾರ್ಥ ಕಲಿಬೇಡಿ!

ಇವತ್ತು ಜನ ‘ಎಲ್ರೂ ನನ್ನ ಸ್ಪೆಷಲಾಗಿ ನೋಡ್ಬೇಕು, ನನಗೆ ವಿಶೇಷ ಸ್ಥಾನಮಾನ ಸಿಗಬೇಕು’ ಅಂತ ಯೋಚ್ನೆ ಮಾಡ್ತಾರೆ. ಅವ್ರಿಗೆ ಎಷ್ಟೇ ಗೌರವ, ಸ್ಥಾನಮಾನ ಸಿಕ್ಕಿದ್ರೂ ಸಾಕಾಗಲ್ಲ. ಇನ್ನೂ ಬೇಕು ಅಂತ ಆಸೆ ಪಡ್ತಾರೆ. ಅವರ ಆಸೆಗೆ ಕೊನೆನೇ ಇರಲ್ಲ. ಈ ರೀತಿ ಸ್ವಾರ್ಥವಾಗಿ ಯೋಚ್ನೆ ಮಾಡೋರು ಮತ್ತು ಮಾಡಿದ ಉಪಕಾರನ ಮರೆತುಬಿಡೋರು ಕೊನೇ ದಿನಗಳಲ್ಲಿ ಇರ್ತಾರೆ ಅಂತ ಬೈಬಲ್‌ ಹೇಳಿದೆ.—2 ತಿಮೊ. 3:2.

ಸ್ವಾರ್ಥ ಅನ್ನೋದು ಪ್ರಪಂಚದಲ್ಲಿ ಹೊಸದೇನಲ್ಲ. ಆದಾಮ ಮತ್ತು ಹವ್ವ ಮಾಡಿದ ತಪ್ಪಿಂದ ಇವತ್ತಿನವರೆಗೂ ನಾವು ಕಷ್ಟಪಡ್ತಾ ಇದ್ದೀವಿ. ಯಾವುದು ಸರಿ ಯಾವುದು ತಪ್ಪು ಅಂತ ಯೋಚಿಸದೇ ಅವರು ತಮ್ಮ ಬಗ್ಗೆ ಮಾತ್ರನೇ ಯೋಚಿಸಿದ್ರು. ಹೀಗೆ ಮೊದಲ ಸ್ವಾರ್ಥಿಗಳಾದ್ರು. ನೂರಾರು ವರ್ಷಗಳಾದ್ಮೇಲೆ ಯೆಹೂದದ ರಾಜ ಉಜ್ಜೀಯ, ‘ನಾನೇ ಶ್ರೇಷ್ಠ’ ಅಂತ ಅನ್ಕೊಂಡು ದೇವಾಲಯದಲ್ಲಿ ಧೂಪ ಹಾಕೋಕೆ ಹೋಗ್ಬಿಟ್ಟ. ಆಮೇಲೆ ಅದ್ರಿಂದ ಅವನು ತುಂಬ ಕಷ್ಟ ಪಡಬೇಕಾಯ್ತು. (2 ಪೂರ್ವ. 26:18, 19) ಒಂದನೇ ಶತಮಾನದಲ್ಲಿ ಫರಿಸಾಯರು ಮತ್ತು ಸದ್ದುಕಾಯರು ‘ನಾವು ಅಬ್ರಹಾಮನ ವಂಶದವರು, ದೇವರು ನಮಗೆ ವಿಶೇಷ ಅನುಗ್ರಹ ಕೊಡಬೇಕು’ ಅಂತ ಅಹಂಕಾರದಿಂದ ನಡ್ಕೊಳ್ತಿದ್ರು.—ಮತ್ತಾ. 3:9.

ಇಡೀ ಪ್ರಪಂಚ ಸ್ವಾರ್ಥಿಗಳಿಂದ ಮತ್ತು ಅಹಂಕಾರಿಗಳಿಂದಾನೇ ತುಂಬಿದೆ. ನಮಗೇ ಗೊತ್ತಿಲ್ಲದೆ ನಾವೂ ಅವ್ರ ತರ ಆಗಿಬಿಡಬಹುದು. (ಗಲಾ. 5:26) ಆ ತರ ಆದ್ರೆ ‘ನಮಗೆ ವಿಶೇಷ ಸ್ಥಾನ ಮಾನ ಸಿಗಬೇಕು, ಹೆಚ್ಚು ಗೌರವ ಸಿಗಬೇಕು’ ಅಂತ ನಾವೂ ಅಂದ್ಕೊಬಿಡ್ತೀವಿ. ಇದು ತಪ್ಪು! ಹಾಗಾದ್ರೆ ಈ ತರ ಯೋಚ್ನೆ ಮಾಡದೇ ಇರೋಕೆ ನಾವೇನು ಮಾಡಬೇಕು? ಇದರ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ ಅಂತ ಮೊದಲು ತಿಳ್ಕೊಬೇಕು. ಇದನ್ನ ಅರ್ಥ ಮಾಡ್ಕೊಳ್ಳೋಕೆ ಎರಡು ಬೈಬಲ್‌ ತತ್ವಗಳು ನಮಗೆ ಸಹಾಯ ಮಾಡುತ್ತೆ.

ನಮಗೇನು ಸಿಗಬೇಕು ಅಂತ ಯೆಹೋವನೇ ನಿರ್ಧಾರ ಮಾಡ್ತಾನೆ. ಕೆಲವು ಉದಾಹರಣೆಗಳನ್ನ ನೋಡೋಣ.

  • ಕುಟುಂಬದಲ್ಲಿ ಗಂಡನಿಗೆ ಸಿಗಬೇಕಾಗಿರೋ ಗೌರವನ ಹೆಂಡತಿ ಕೊಡಬೇಕು. ಹೆಂಡತಿಗೆ ಸಿಗಬೇಕಾಗಿರೋ ಪ್ರೀತಿನ ಗಂಡ ಕೊಡಬೇಕು. (ಎಫೆ. 5:33) ಮದುವೆಯಾಗಿರೋ ದಂಪತಿ ಮಧ್ಯೆ ಮಾತ್ರ ಲೈಂಗಿಕ ವಿಷಯಗಳು ಇರಬೇಕು. (1 ಕೊರಿಂ. 7:3) ಅಪ್ಪಅಮ್ಮ ಹೇಳೋ ಮಾತನ್ನ ಮಕ್ಕಳು ಕೇಳ್ಬೇಕು. ಮಕ್ಕಳಿಗೆ ಬೇಕಿರೋ ಪ್ರೀತಿ ಮತ್ತು ಬೆಂಬಲನ ಅಪ್ಪಅಮ್ಮ ಕೊಡಬೇಕು.—2 ಕೊರಿಂ. 12:14; ಎಫೆ. 6:2.

  • ಸಭೆಲಿ ಕಷ್ಟಪಟ್ಟು ಕೆಲಸ ಮಾಡೋ ಹಿರಿಯರಿಗೆ ನಾವೆಲ್ಲ ಗೌರವ ಕೊಡಬೇಕು. (1 ಥೆಸ. 5:12) ಹಾಗಂತ ಸಹೋದರ ಸಹೋದರಿಯರ ಮೇಲೆ ದಬ್ಬಾಳಿಕೆ ಮಾಡೋ ಅಧಿಕಾರ ಅವ್ರಿಗೆ ಇಲ್ಲ.—1 ಪೇತ್ರ 5:2, 3.

  • ನಾವು ಸರ್ಕಾರ ಹೇಳೋ ಮಾತನ್ನ ಕೇಳ್ಬೇಕು ಮತ್ತು ತೆರಿಗೆ ಕಟ್ಟಬೇಕು.—ರೋಮ. 13:1, 6, 7.

ನಮಗೆ ಸಿಗಬೇಕಾಗಿರೋದ್ಕಿಂತ ಜಾಸ್ತಿನೇ ಯೆಹೋವ ಕೊಡ್ತಾನೆ. ನಾವೆಲ್ಲ ಪಾಪಿಗಳಾಗಿರೋದ್ರಿಂದ ಬದುಕೋ ಯೋಗ್ಯತೆನೇ ನಮಗಿರಲಿಲ್ಲ, ನಾವು ಸಾಯಬೇಕಾಗಿತ್ತಷ್ಟೇ. (ರೋಮ. 6:23) ಆದ್ರೂ ಯೆಹೋವ ದೇವರು ತನ್ನ ಶಾಶ್ವತ ಪ್ರೀತಿಯಿಂದ ನಮಗೆ ಎಷ್ಟೊಂದು ಆಶೀರ್ವಾದಗಳನ್ನ ಕೊಟ್ಟಿದ್ದಾನೆ. (ಕೀರ್ತ. 103:10, 11) ನಾವು ಪಡ್ಕೊಳ್ಳೋ ಒಂದೊಂದು ಆಶೀರ್ವಾದನೂ ಒಂದೊಂದು ಸುಯೋಗನೂ ಆತನ ಅಪಾರ ಕೃಪೆಯಿಂದಾನೇ! ರೋಮ. 12:6-8; ಎಫೆ. 2:8.

ಸ್ವಾರ್ಥ ಬಿಟ್ಟು ಬದುಕೋದು ಹೇಗೆ?

ಇದು ಸೈತಾನನ ಗುಣ ಅಂತ ನೆನಪಿಡಿ. ‘ಬೇರೆಯವ್ರಿಗಿಂತ ನಮಗೆ ಜಾಸ್ತಿ ಸಿಗಬೇಕು’ ಅನ್ನೋ ಸ್ವಾರ್ಥ ನಮಗೇ ಗೊತ್ತಿಲ್ಲದೇ ನಮ್ಮಲ್ಲಿ ಬಂದುಬಿಡುತ್ತೆ. ಯೇಸು ಇದನ್ನ ಅರ್ಥ ಮಾಡಿಸೋಕೆ ಒಂದು ಉದಾಹರಣೆ ಹೇಳಿದ. ಅದ್ರಲ್ಲಿ ಕೂಲಿ ಮಾಡಿದವ್ರಿಗೆ ಒಂದು ದಿನಾರು ಸಂಬಳ ಕೊಡೋದ್ರ ಬಗ್ಗೆ ಇದೆ. ಕೆಲವು ಕೆಲಸಗಾರರು ಬೆಳಗ್ಗೆಯಿಂದ ಸಾಯಂಕಾಲದವರೆಗೂ ಬಿಸಿಲಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ರು. ಇನ್ನು ಕೆಲವರು ಸಾಯಂಕಾಲ ಒಂದು ಗಂಟೆ ಮಾತ್ರ ಕೆಲಸ ಮಾಡಿದ್ರು. ಬೆಳಗ್ಗಿಂದ ಕೆಲಸ ಮಾಡಿದೋರು ‘ಎಲ್ರಿಗಿಂತ ನಮಗೆ ಜಾಸ್ತಿ ಸಂಬಳ ಸಿಗುತ್ತೆ’ ಅಂತ ಅಂದ್ಕೊಂಡ್ರು. ಆದ್ರೆ ಎಲ್ರಿಗೂ ಸಿಕ್ಕಿದ್ದು ಒಂದೇ ಸಂಬಳ. (ಮತ್ತಾ. 20:1-16) ಯೇಸು ಆ ಉದಾಹರಣೆಯನ್ನ ವಿವರಿಸ್ತಾ, ದೇವರು ಏನು ಕೊಡ್ತಾನೋ ಅದ್ರಲ್ಲಿ ತೃಪ್ತಿ ಪಡಬೇಕು ಅನ್ನೋ ಪಾಠ ಕಲಿಸಿದನು.

ಇಡೀ ದಿನ ಕೆಲಸ ಮಾಡಿದೋರು ‘ನಮಗೆ ಜಾಸ್ತಿ ಸಂಬಳ ಸಿಗುತ್ತೆ’ ಅಂದ್ಕೊಂಡ್ರು.

ಜಾಸ್ತಿ ಆಸೆ ಪಡಬೇಡಿ, ಯೆಹೋವ ಕೊಟ್ಟಿರೋದಕ್ಕೆ ಥ್ಯಾಂಕ್ಸ್‌ ಹೇಳಿ. (1 ಥೆಸ. 5:18) ನಾವು ಅಪೊಸ್ತಲ ಪೌಲನ ತರ ಇರ್ಬೇಕು. ಅವನಿಗೆ ಸಹಾಯ ಪಡ್ಕೊಳ್ಳೋ ಹಕ್ಕಿತ್ತು. ಆದ್ರೂ ಕೊರಿಂಥ ಸಭೆಯವ್ರ ಹತ್ರ ಯಾವ ವಿಷ್ಯಕ್ಕೂ ಅವನು ಆಸೆ ಪಡಲಿಲ್ಲ. (1 ಕೊರಿಂ. 9:11-14) ನಾವು ಅದೇ ತರ ಯೆಹೋವ ಏನು ಕೊಟ್ಟಿದ್ದಾನೋ ಅದಕ್ಕೆ ಥ್ಯಾಂಕ್ಸ್‌ ಹೇಳಬೇಕು, ಜಾಸ್ತಿ ಆಸೆ ಪಡಬಾರದು.

ಪೌಲ ಸಭೆಯವ್ರಿಂದ ಹಣಕಾಸಿಗೆ ಆಸೆ ಪಡಲಿಲ್ಲ

ದೀನತೆ ಬೆಳೆಸ್ಕೊಳ್ಳಿ. ಒಬ್ಬ ವ್ಯಕ್ತಿ ನಾನೇ ಶ್ರೇಷ್ಠ ಅಂತ ಯೋಚ್ನೆ ಮಾಡಿದ್ರೆ, ಬೇರೆಯವ್ರಿಗಿಂತ ನನಗೆ ಜಾಸ್ತಿ ಸಿಗಬೇಕು ಅಂತ ಅಂದ್ಕೊಳ್ತಾನೆ. ಈ ತರ ಯೋಚ್ನೆ ಮಾಡೋದು ವಿಷ ಕುಡಿದಂತೆ. ಇದಕ್ಕೆ ದೀನತೆನೇ ಮದ್ದು!

ದಾನಿಯೇಲ ದೀನತೆ ತೋರಿಸಿದ್ರಿಂದ ಯೆಹೋವ ಅವನನ್ನ ಅಮೂಲ್ಯವಾಗಿ ನೋಡಿದನು

ಪ್ರವಾದಿ ದಾನಿಯೇಲ ದೀನತೆ ತೋರಿಸೋದ್ರಲ್ಲಿ ಒಳ್ಳೆ ಮಾದರಿ ಇಟ್ಟಿದ್ದಾನೆ. ಅವನು ರಾಜವಂಶಕ್ಕೆ ಸೇರಿದ್ದ, ಸುಂದರವಾಗಿದ್ದ, ಬುದ್ಧಿವಂತನಾಗಿದ್ದ, ತುಂಬಾ ಸಾಮರ್ಥ್ಯನೂ ಇತ್ತು. ಹಾಗಾಗಿ ಅವನು ‘ನಂಗೆ ವಿಶೇಷ ಸ್ಥಾನಮಾನ ಸಿಗಬೇಕು, ಗೌರವ ಸಿಗಬೇಕು’ ಅಂತ ಅಹಂಕಾರ ಪಡಬಹುದಿತ್ತು. (ದಾನಿ. 1:3, 4, 19, 20) ಆದ್ರೆ ದಾನಿಯೇಲ ಒಂಚೂರೂ ಅಹಂಕಾರ ಪಡದೆ ದೀನತೆ ತೋರಿಸಿದ. ಇದ್ರಿಂದ ಯೆಹೋವ ಅವನನ್ನ ಅಮೂಲ್ಯವಾಗಿ ನೋಡಿದನು.—ದಾನಿ. 2:30; 10:11, 12.

ಈ ಲೋಕದಲ್ಲಿ ಸ್ವಾರ್ಥ, ಅಹಂಕಾರ ರಾರಾಜಿಸ್ತಿದೆ. ನಾವು ಅದ್ರಿಂದ ದೂರ ಇರಬೇಕು. ಯೆಹೋವ ತನ್ನ ಅಪಾರ ಕೃಪೆಯಿಂದ ಕೊಡ್ತಿರೋ ಒಂದೊಂದು ಆಶೀರ್ವಾದಕ್ಕೂ ಮನಸಾರೆ ಥ್ಯಾಂಕ್ಸ್‌ ಹೇಳ್ತಾ ಅದ್ರಲ್ಲಿ ಸಂತೋಷ ಪಡಬೇಕು.