ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 13

ಗೀತೆ 61 ನಾನು ಯಾವ ರೀತಿಯ ವ್ಯಕ್ತಿಯಾಗಿರಬೇಕು?

ಯೆಹೋವ ನಿಮ್ಮನ್ನ ಮೆಚ್ಕೊಂಡಿದ್ದಾನೆ ಅಂತ ನಂಬಿ

ಯೆಹೋವ ನಿಮ್ಮನ್ನ ಮೆಚ್ಕೊಂಡಿದ್ದಾನೆ ಅಂತ ನಂಬಿ

“ನೀನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ.”ಲೂಕ 3:22.

ಈ ಲೇಖನದಲ್ಲಿ ಏನಿದೆ?

ಯೆಹೋವ ನಿಮ್ಮನ್ನ ಮೆಚ್ಕೊಂಡಿದ್ದಾನೆ ಅಂತ ನಂಬೋಕೆ ಆಧಾರಗಳನ್ನ ನೋಡೋಣ.

1. ಕೆಲವೊಮ್ಮೆ ನಮಗೆ ಏನು ಅನಿಸುತ್ತೆ?

 ಯೆಹೋವ ದೇವರಿಗೆ ತನ್ನ ಜನ್ರಂದ್ರೆ ತುಂಬ ಇಷ್ಟ. ಆತನು ಅವ್ರನ್ನ ಮೆಚ್ಕೊಳ್ತಾನೆ. ಅದಕ್ಕೇ ಬೈಬಲ್‌ “ಯೆಹೋವ ತನ್ನ ಜನ್ರನ್ನ ನೋಡಿ ಖುಷಿಪಡ್ತಾನೆ” ಅಂತ ಹೇಳುತ್ತೆ. (ಕೀರ್ತ. 149:4) ಆದ್ರೆ ಕೆಲವು ಸಲ ನಾವು ಕುಗ್ಗಿಹೋದಾಗ ‘ಯೆಹೋವ ನನ್ನನ್ನ ಮೆಚ್ಕೊಳ್ತಾನಾ?’ ಅಂತ ಅನಿಸುತ್ತೆ. ಇದೇ ತರ ಹಿಂದಿನ ಕಾಲದಲ್ಲಿದ್ದ ಯೆಹೋವನ ಸೇವಕರಿಗೂ ಅನಿಸಿತ್ತು.—1 ಸಮು. 1:6-10; ಯೋಬ 29:2, 4; ಕೀರ್ತ. 51:11.

2. ಯೆಹೋವ ಯಾರನ್ನ ಮೆಚ್ಕೊಳ್ತಾನೆ?

2 ನಾವು ಅಪರಿಪೂರ್ಣರಾಗಿದ್ರೂ ಯೆಹೋವನ ಮೆಚ್ಚಿಗೆ ಪಡ್ಕೊಳ್ಳೋಕೆ ಆಗುತ್ತೆ ಅಂತ ಬೈಬಲ್‌ ಹೇಳುತ್ತೆ. ಅದಕ್ಕೆ ಏನು ಮಾಡಬೇಕು? ನಾವು ಯೇಸು ಮೇಲೆ ನಂಬಿಕೆ ಇಟ್ಟು ದೀಕ್ಷಾಸ್ನಾನ ತಗೊಬೇಕು. (ಯೋಹಾ. 3:16) ಆಗ ನಮ್ಮ ಪಾಪಗಳಿಗೆ ಪಶ್ಚಾತ್ತಾಪಪಟ್ಟಿದ್ದೀವಿ, ಯೆಹೋವನ ಇಷ್ಟ ಮಾಡ್ತೀವಿ ಅಂತ ಆತನಿಗೆ ಮಾತು ಕೊಟ್ಟಿದ್ದೀವಿ ಅಂತ ಎಲ್ರಿಗೂ ತೋರಿಸ್ಕೊಡ್ತೀವಿ. (ಅ. ಕಾ. 2:38; 3:19) ಯೆಹೋವನ ಜೊತೆ ಫ್ರೆಂಡ್‌ಶಿಪ್‌ ಮಾಡ್ಕೊಳ್ಳೋಕೆ ನಾವು ಈ ಹೆಜ್ಜೆ ತಗೊಳ್ಳುವಾಗ ಆತನಿಗೆ ತುಂಬ ಖುಷಿ ಆಗುತ್ತೆ. ನಾವು ಸಮರ್ಪಣೆಯಲ್ಲಿ ಕೊಟ್ಟ ಮಾತನ್ನ ಉಳಿಸ್ಕೊಳ್ಳೋಕೆ ಎಲ್ಲಿ ತನಕ ಪ್ರಯತ್ನ ಹಾಕ್ತೀವೋ ಅಲ್ಲಿ ತನಕ ಯೆಹೋವ ನಮ್ಮ ಸ್ನೇಹಿತನಾಗಿ ಇರ್ತಾನೆ ಮತ್ತು ನಮ್ಮನ್ನ ಮೆಚ್ಕೊಳ್ತಾನೆ.—ಕೀರ್ತ. 25:14.

3. ನಾವು ಯಾವ ಪ್ರಶ್ನೆಗಳಿಗೆ ಉತ್ರ ತಿಳ್ಕೊತೀವಿ?

3 ಆದ್ರೂ ಕೆಲವ್ರಿಗೆ ಯೆಹೋವ ತಮ್ಮನ್ನ ಮೆಚ್ಚಲ್ಲ ಅಂತ ಅನಿಸುತ್ತೆ. ಯಾಕೆ ಹಾಗೆ ಅನಿಸುತ್ತೆ? ಯೆಹೋವ ನಮ್ಮನ್ನ ಮೆಚ್ಕೊಂಡಿದ್ದಾನೆ ಅಂತ ಹೇಗೆ ತೋರಿಸಿದ್ದಾನೆ? ಯೆಹೋವ ನಮ್ಮನ್ನ ಮೆಚ್ಚಿದ್ದಾನೆ ಅಂತ ನಂಬೋಕೆ ಯಾವ ಆಧಾರ ಇದೆ? ಈ ಪ್ರಶ್ನೆಗಳಿಗೆ ನಾವೀಗ ಉತ್ರ ತಿಳ್ಕೊಳ್ಳೋಣ.

ಯೆಹೋವ ತಮ್ಮನ್ನ ಮೆಚ್ಕೊಳ್ಳಲ್ಲ ಅಂತ ಕೆಲವ್ರಿಗೆ ಯಾಕೆ ಅನಿಸುತ್ತೆ?

4-5. ನಾವು ಯಾವುದಕ್ಕೂ ಲಾಯಕ್ಕಿಲ್ಲ ಅಂತ ಅನಿಸುವಾಗ ಏನನ್ನ ನೆನಪಿಡಬೇಕು?

4 ಕೆಲವ್ರಿಗೆ ಚಿಕ್ಕಂದಿನಿಂದಾನೇ ‘ನಾನು ಯಾವುದಕ್ಕೂ ಲಾಯಕ್ಕಿಲ್ಲ’ ಅಂತ ಅನಿಸುತ್ತೆ. (ಕೀರ್ತ. 88:15) ಏಡ್ರಿಯನ್‌ ಅನ್ನೋ ಸಹೋದರನಿಗೂ ಹೀಗೇ ಅನಿಸ್ತು. “ನಾನು ಚಿಕ್ಕವನಾಗಿದ್ದಾಗ ನನ್ನ ಕುಟುಂಬದವ್ರೆಲ್ಲ ಪರದೈಸಲ್ಲಿ ಇರಬೇಕು ಅಂತ ಪ್ರಾರ್ಥಿಸ್ತಿದ್ದೆ. ಆದ್ರೆ ಅಲ್ಲಿರೋ ಯೋಗ್ಯತೆ ನಂಗಿಲ್ಲ ಅಂತ ಯಾವಾಗ್ಲೂ ಅನಿಸ್ತಿತ್ತು” ಅಂತ ಅವರು ಹೇಳ್ತಾರೆ. ಟೋನಿ ಬಗ್ಗೆ ನೋಡಿ. ಚಿಕ್ಕವನಾಗಿದ್ದಾಗ ಅವನ ಕುಟುಂಬದವರು ಯೆಹೋವನ ಸಾಕ್ಷಿಗಳಾಗಿರಲಿಲ್ಲ. “ನಮ್ಮಪ್ಪ-ಅಮ್ಮ ‘ನೀನಂದ್ರೆ ನಮಗೆ ಇಷ್ಟ, ನಿನ್ನನ್ನ ಪ್ರೀತಿಸ್ತೀವಿ’ ಅಂತ ನನ್ನ ಹತ್ರ ಯಾವತ್ತೂ ಹೇಳಿಲ್ಲ. ಅದಕ್ಕೇ ನಾನು ಯಾವುದಕ್ಕೂ ಲಾಯಕ್ಕಿಲ್ಲ, ನಾನು ಅವ್ರನ್ನ ಮೆಚ್ಚಿಸೋಕಾಗಲ್ಲ ಅಂತ ನನಗೆ ಯಾವಾಗ್ಲೂ ಅನಿಸ್ತಿತ್ತು” ಅಂತ ಹೇಳ್ತಾರೆ.

5 ನೀವು ಯಾವುದಕ್ಕೂ ಲಾಯಕ್ಕಿಲ್ಲ ಅಂತ ಅನಿಸಿದ್ರೆ ಯೆಹೋವ ನಿಮ್ಮನ್ನ ಸೆಳೆದಿದ್ದಾನೆ ಅನ್ನೋದನ್ನ ನೆನಪಿಡಿ. (ಯೋಹಾ. 6:44) ಆತನು ನಮ್ಮಲ್ಲಿ ಏನೋ ಒಂದು ಒಳ್ಳೇದನ್ನ ನೋಡಿದ್ದಾನೆ. ಅಷ್ಟೇ ಅಲ್ಲ ನಮ್ಮ ಬಗ್ಗೆ ನಮಗಿಂತ ಯೆಹೋವನಿಗೆ ಚೆನ್ನಾಗಿ ಗೊತ್ತು. ಆತನು ನಮ್ಮ ಹೃದಯ ನೋಡ್ತಾನೆ. (1 ಸಮು. 16:7; 2 ಪೂರ್ವ. 6:30) ಹಾಗಾಗಿ ಯೆಹೋವನೇ ನಮ್ಮನ್ನ ಅಮೂಲ್ಯವಾಗಿ ನೋಡ್ತಾನೆ ಅಂತ ಹೇಳುವಾಗ ಅದನ್ನ ಕಣ್ಮುಚ್ಚಿ ನಂಬಬಹುದು.—1 ಯೋಹಾ. 3:19, 20.

6. ಹಿಂದೆ ಮಾಡಿದ ತಪ್ಪನ್ನ ನೆನಸ್ಕೊಂಡಾಗ ಪೌಲನಿಗೆ ಹೇಗನಿಸ್ತು?

6 ನಮ್ಮಲ್ಲಿ ಕೆಲವರು ಸತ್ಯ ಕಲಿಯೋಕೆ ಮುಂಚೆ ಮಾಡಿದ ತಪ್ಪನ್ನ ನೆನಸ್ಕೊಂಡು ಈಗ್ಲೂ ಕೊರಗ್ತಿದ್ದಾರೆ. (1 ಪೇತ್ರ 4:3) ಆದ್ರೆ ಒಂದು ವಿಷ್ಯ ನೆನಪಿಡಿ. ಎಷ್ಟೋ ವರ್ಷಗಳಿಂದ ಸತ್ಯದಲ್ಲಿರೋ ಸಹೋದರ ಸಹೋದರಿಯರು ತಪ್ಪಾದ ಆಸೆಗಳ ವಿರುದ್ಧ ಈಗ್ಲೂ ಹೋರಾಡ್ತಿದ್ದಾರೆ. ಒಂದುವೇಳೆ ನಿಮಗೆ ಯೆಹೋವ ನಿಮ್ಮನ್ನ ಕ್ಷಮಿಸ್ತಿಲ್ಲ ಅಂತ ಅನಿಸಿದ್ರೆ ಹಿಂದಿನ ಕಾಲದಲ್ಲಿದ್ದ ದೇವ ಸೇವಕರ ಬಗ್ಗೆ ಯೋಚ್ನೆ ಮಾಡಿ. ಉದಾಹರಣೆಗೆ, ಅಪೊಸ್ತಲ ಪೌಲ ತಾನು ಹಿಂದೆ ಮಾಡಿದ್ದ ತಪ್ಪನ್ನ ನೆನಸ್ಕೊಂಡು ತುಂಬ ಬೇಜಾರು ಮಾಡ್ಕೊಳ್ತಿದ್ದ. (ರೋಮ. 7:24) ಅವನು ಪಶ್ಚಾತ್ತಾಪಪಟ್ಟು ದೀಕ್ಷಾಸ್ನಾನ ತಗೊಂಡಿದ್ರೂ “ನಾನು ಅಪೊಸ್ತಲರಲ್ಲೇ ತುಂಬ ಕನಿಷ್ಠನು,” “ಪಾಪಿಗಳಲ್ಲಿ ದೊಡ್ಡ ಪಾಪಿ ನಾನೇ” ಅಂತ ಹೇಳಿದ.—1 ಕೊರಿಂ. 15:9; 1 ತಿಮೊ. 1:15.

7. ನಾವು ಏನನ್ನ ನಂಬಬಹುದು?

7 ನಾವು ಮಾಡಿದ ತಪ್ಪಿಗೆ ಪಶ್ಚಾತ್ತಾಪಪಟ್ರೆ ಯೆಹೋವ ನಮ್ಮನ್ನ ಕ್ಷಮಿಸ್ತಾನೆ ಅಂತ ಮಾತುಕೊಟ್ಟಿದ್ದಾನೆ. (ಕೀರ್ತ. 86:5) ಆತನು ಮಾತುಕೊಟ್ಟ ಮೇಲೆ ಖಂಡಿತ ಕ್ಷಮಿಸ್ತಾನೆ. ಹಾಗಾಗಿ ಆತನನ್ನ ನಾವು ನಂಬಬಹುದು.—ಕೊಲೊ. 2:13.

8-9. ಎಷ್ಟೇ ಸೇವೆ ಮಾಡಿದ್ರೂ ಯೆಹೋವನನ್ನ ಮೆಚ್ಚಿಸೋಕೆ ಆಗಲ್ಲ ಅಂತ ಅನಿಸ್ತಿದ್ರೆ ಏನು ಮಾಡಬೇಕು?

8 ನಾವೆಲ್ರೂ ಯೆಹೋವನ ಸೇವೆ ಚೆನ್ನಾಗಿ ಮಾಡಬೇಕು ಅಂತ ಆಸೆಪಡ್ತೀವಿ. ಆದ್ರೂ ಕೆಲವ್ರಿಗೆ ತಾವೆಷ್ಟೇ ಸೇವೆ ಮಾಡಿದ್ರೂ ಯೆಹೋವನನ್ನ ಮೆಚ್ಚಿಸೋಕಾಗಲ್ಲ ಅಂತ ಅನಿಸುತ್ತೆ. ಸಹೋದರಿ ಅಮಾಂಡಗೂ ಹೀಗೇ ಅನಿಸ್ತು. “ನಾನು ಯೆಹೋವನಿಗೆ ಬೆಸ್ಟ್‌ ಆಗಿರೋದನ್ನ ಕೊಡಬೇಕಂದ್ರೆ ಜಾಸ್ತಿ ಸೇವೆ ಮಾಡಬೇಕು ಅಂದ್ಕೊಂಡಿದ್ದೆ. ಅದಕ್ಕೇ ಜಾಸ್ತಿ ಸೇವೆ ಮಾಡ್ತಿದ್ದೆ. ಆದ್ರೆ ಕೆಲವು ಸಲ ನನ್ನಿಂದ ‘ಆಗ್ತಿರಲಿಲ್ಲ.’ ಆಗ ನನ್ನ ಮೇಲೆ ನನಗೆ ತುಂಬ ಬೇಜಾರಾಗ್ತಿತ್ತು. ಯೆಹೋವನಿಗೂ ನನ್ನ ಮೇಲೆ ಬೇಜಾರಾಗುತ್ತೆ ಅಂತ ಅಂದ್ಕೊಳ್ತಿದ್ದೆ” ಅಂತ ಅಮಾಂಡ ಹೇಳ್ತಾರೆ.

9 ನಾನೆಷ್ಟು ಸೇವೆ ಮಾಡಿದ್ರೂ ಯೆಹೋವನನ್ನ ಮೆಚ್ಚಿಸೋಕೆ ಆಗಲ್ಲ ಅನ್ನೋ ಭಾವನೆಯಿಂದ ಹೊರಗೆ ಬರೋಕೆ ನಾವೇನು ಮಾಡಬೇಕು? ಒಂದಂತೂ ಮರಿಬೇಡಿ. ‘ನೀವು ಇಷ್ಟೇ ಸೇವೆ ಮಾಡಬೇಕು’ ಅಂತ ಯೆಹೋವ ಯಾವತ್ತೂ ಕಟ್ಟುನಿಟ್ಟು ಮಾಡಲ್ಲ ಅಥವಾ ಒತ್ತಾಯ ಮಾಡಲ್ಲ. ನಮ್ಮ ಕೈಯಲ್ಲಿ ಆಗದೇ ಇರೋದನ್ನ ಯಾವತ್ತೂ ಕೇಳಲ್ಲ. ನಮ್ಮಿಂದ ಎಷ್ಟಾಗುತ್ತೋ ಅಷ್ಟು ಸೇವೆ ಮಾಡೋಕೆ ನಾವು ಹಾಕೋ ಪ್ರಯತ್ನ ನೋಡಿ ಖಂಡಿತ ಆತನು ಮೆಚ್ಕೊಳ್ತಾನೆ. ಪೂರ್ಣ ಹೃದಯದಿಂದ ಆತನ ಸೇವೆ ಮಾಡಿರೋ ಎಷ್ಟೋ ದೇವಜನ್ರ ಬಗ್ಗೆ ಬೈಬಲಲ್ಲಿದೆ, ಅವ್ರಲ್ಲೊಬ್ಬ ಪೌಲ. ಅವನು ತುಂಬ ವರ್ಷ ಉತ್ಸಾಹದಿಂದ ಯೆಹೋವನ ಸೇವೆ ಮಾಡಿದ. ಸಾವಿರಾರು ಮೈಲಿ ಪ್ರಯಾಣ ಮಾಡಿದ, ತುಂಬ ಸಭೆಗಳನ್ನ ಶುರುಮಾಡಿದ. ಆದ್ರೆ ಕೆಲವು ಸನ್ನಿವೇಶಗಳಲ್ಲಿ ಅವನಿಗೆ ಮುಂಚಿನ ತರ ಸೇವೆ ಮಾಡೋಕಾಗಲಿಲ್ಲ. ಆಗ ಯೆಹೋವ ಅವನನ್ನ ಮೆಚ್ಕೊಳಲ್ಲ ಅಂತ ಹೇಳಿದನಾ? ಇಲ್ಲ. ಪೌಲ ತನ್ನಿಂದ ಆದಷ್ಟು ಸೇವೆ ಮಾಡಿದ್ದನ್ನ ನೋಡಿದಾಗ ಯೆಹೋವ ಅವನನ್ನ ಆಶೀರ್ವದಿಸಿದನು. (ಅ. ಕಾ. 28:30, 31) ನಿಮಗೂ ಪೌಲನ ತರ ಕೆಲವೊಮ್ಮೆ ಜಾಸ್ತಿ ಸೇವೆ ಮಾಡೋಕೆ ಆಗ್ದೇ ಇದ್ರೆ ಬೇಜಾರು ಮಾಡ್ಕೊಬೇಡಿ. ಯಾಕಂದ್ರೆ ನೀವು ಎಷ್ಟು ಸೇವೆ ಮಾಡ್ತಿದ್ದೀರ ಅಂತ ಅಲ್ಲ, ಯಾಕೆ ಆ ಸೇವೆ ಮಾಡ್ತಿದ್ದೀರ ಅಂತ ಯೆಹೋವ ನೋಡ್ತಾನೆ. ಈಗ ನಾವು ಯೆಹೋವ ನಮ್ಮನ್ನ ಮೆಚ್ಕೊಂಡಿದ್ದಾನೆ ಅಂತ ಹೇಗೆ ತೋರಿಸ್ತಾನೆ ಅಂತ ನೋಡೋಣ.

ಯೆಹೋವ ನಮ್ಮನ್ನ ಮೆಚ್ಕೊಂಡಿದ್ದಾನೆ ಅಂತ ಹೇಗೆ ತೋರಿಸಿದ್ದಾನೆ?

10. ಯೆಹೋವ ನಮ್ಮನ್ನ ಮೆಚ್ಕೊಂಡಿದ್ದಾನೆ ಅಂತ ಹೇಳೋದನ್ನ ಹೇಗೆ “ಕೇಳಿಸ್ಕೊಬಹುದು?” (ಯೋಹಾನ 16:27)

10 ಯೆಹೋವ ನಮ್ಮನ್ನ ಮೆಚ್ತಾನೆ ಅಂತ ಬೈಬಲಿಂದ ಗೊತ್ತಾಗುತ್ತೆ. ಯೆಹೋವ ತನ್ನ ಸೇವಕರಾದ ನಮ್ಮನ್ನ ಪ್ರೀತಿಸ್ತಾನೆ, ಮೆಚ್ಕೊಳ್ತಾನೆ ಅಂತ ತೋರಿಸೋಕೆ ಇಷ್ಟಪಡ್ತಾನೆ. ತನ್ನ ಪ್ರೀತಿಯ ಮಗನಾದ ಯೇಸುವನ್ನೂ ಯೆಹೋವ ಮೆಚ್ಕೊಂಡನು. ಅಂಥ 2 ಸಂದರ್ಭದ ಬಗ್ಗೆ ಬೈಬಲ್‌ ಹೇಳುತ್ತೆ. (ಮತ್ತಾ. 3:17; 17:5) ಯೆಹೋವ ನಿಮ್ಮನ್ನೂ ಮೆಚ್ಕೊಂಡಿದ್ದೀನಿ ಅಂತ ಹೇಳೋದನ್ನ ಕೇಳಿಸ್ಕೊಳ್ಳೋಕೆ ನೀವು ಇಷ್ಟಪಡ್ತೀರಾ? ಆತನು ಯೇಸುಗೆ ಹೇಳಿದ ತರ ಸ್ವರ್ಗದಿಂದ ನೇರವಾಗಿ ನಿಮ್ಮ ಹತ್ರ ಹೇಳಲ್ಲ, ಆದ್ರೆ ಬೈಬಲಿಂದ ಹೇಳ್ತಾನೆ. ಯೇಸು ತನ್ನ ಶಿಷ್ಯರಿಗೆ ಹೇಳಿದ ಮಾತುಗಳು ಬೈಬಲಲ್ಲಿದೆ. ಅದನ್ನ ಓದುವಾಗ ಯೆಹೋವ ನಮ್ಮನ್ನ ಮೆಚ್ಕೊಂಡಿದ್ದಾನೆ ಅಂತ ಹೇಳೋದನ್ನ “ಕೇಳಿಸ್ಕೊಳ್ಳೋಕೆ” ಆಗುತ್ತೆ. (ಯೋಹಾನ 16:27 ಓದಿ.) ತನ್ನ ಶಿಷ್ಯರು ಅಪರಿಪೂರ್ಣರಾಗಿದ್ರೂ ಯೆಹೋವನಿಗೆ ನಂಬಿಕೆಯಿಂದ ಸೇವೆ ಮಾಡೋದನ್ನ ನೋಡಿದಾಗ ಯೇಸು ಅವ್ರನ್ನ ಮೆಚ್ಕೊಂಡನು. ಯೆಹೋವನಲ್ಲಿರೋ ಈ ಗುಣನ ಯೇಸುನೂ ತೋರಿಸಿದ್ರಿಂದ ಯೆಹೋವ ನಮ್ಮನ್ನೂ ಮೆಚ್ಕೊಳ್ತಾನೆ ಅಂತ ಗೊತ್ತಾಗುತ್ತೆ.—ಯೋಹಾ. 15:9, 15.

ಯೆಹೋವ ನಮ್ಮನ್ನ ಮೆಚ್ಕೊಂಡಿದ್ದೀನಿ ಅಂತ ಬೇರೆಬೇರೆ ರೀತಿಯಲ್ಲಿ ತೋರಿಸ್ತಾನೆ (ಪ್ಯಾರ 10 ನೋಡಿ)


11. ಕಷ್ಟಗಳು ಬಂದಾಗ ನಮ್ಮನ್ನ ಯೆಹೋವ ಮೆಚ್ಕೊಂಡಿಲ್ಲ ಅಂತ ಅರ್ಥನಾ? (ಯಾಕೋಬ 1:12)

11 ಯೆಹೋವ ನಮಗೆ ಬೇಕಾಗಿರೋದನ್ನ ಕೊಟ್ಟು ನಮ್ಮನ್ನ ಮೆಚ್ಕೊಂಡಿದ್ದಾನೆ ಅಂತ ತೋರಿಸ್ತಾನೆ. ಆತನು ನಮಗೆ ಸಹಾಯ ಮಾಡೋಕೆ ತುದಿಗಾಲಲ್ಲಿ ನಿಲ್ತಾನೆ. ಆದ್ರೆ ನಮಗೆ ಕಷ್ಟಗಳು ಬರುವಾಗ ಕೆಲವೊಮ್ಮೆ ಆತನು ಅದನ್ನ ತಡಿಯಲ್ಲ, ಬಿಟ್ಕೊಡ್ತಾನೆ. ಯೋಬನಿಗೂ ಹಾಗೇ ಬಿಟ್ಕೊಟ್ಟನು. (ಯೋಬ 1:8-11) ಆದ್ರೆ ನಮಗೆ ಕಷ್ಟ ಬರ್ತಾ ಇದೆ ಅಂದ್ರೆ ಅದರರ್ಥ ಯೆಹೋವ ನಮ್ಮನ್ನ ಮೆಚ್ಕೊಂಡಿಲ್ಲ ಅಂತನಾ? ಅಲ್ಲ. ನಾವು ಯೆಹೋವ ದೇವ್ರನ್ನ ಎಷ್ಟು ಪ್ರೀತಿಸ್ತೀವಿ, ಆತನ ಮೇಲೆ ಎಷ್ಟು ನಂಬಿಕೆ ಇಟ್ಟಿದ್ದೀವಿ ಅಂತ ತೋರಿಸೋಕೆ ಆಗ ನಮಗೊಂದು ಅವಕಾಶ ಸಿಗುತ್ತೆ. (ಯಾಕೋಬ 1:12 ಓದಿ.) ಅಷ್ಟೇ ಅಲ್ಲ, ಕಷ್ಟಗಳು ಬಂದಾಗ ಯೆಹೋವನಿಗೆ ನಮ್ಮ ಮೇಲೆ ಎಷ್ಟು ಪ್ರೀತಿ ಇದೆ, ನಮಗೆ ಸಹಾಯ ಮಾಡೋಕೆ ಆತನಿಗೆ ಎಷ್ಟು ಆಸೆ ಇದೆ ಅಂತ ಅರ್ಥ ಮಾಡ್ಕೊಳ್ಳೋಕಾಗುತ್ತೆ.

12. ಡಿಮಿಟ್ರಿಯವ್ರಿಂದ ನಾವೇನು ಕಲಿಬಹುದು?

12 ಏಷ್ಯಾದಲ್ಲಿರೋ ಡಿಮಿಟ್ರಿ ಅನ್ನೋ ಸಹೋದರನ ಉದಾಹರಣೆ ನೋಡಿ. ಅವರು ತಮ್ಮ ಕೆಲಸ ಕಳ್ಕೊಂಡ್ರು. ತುಂಬ ತಿಂಗಳು ಎಷ್ಟು ಹುಡುಕಿದ್ರೂ ಅವ್ರಿಗೆ ಕೆಲಸ ಸಿಗಲೇ ಇಲ್ಲ. ಆದ್ರೆ ಯೆಹೋವನ ಮೇಲೆ ನಂಬಿಕೆ ಇದ್ದಿದ್ರಿಂದ ಅವರು ಆತನ ಸೇವೆ ಜಾಸ್ತಿ ಮಾಡಬೇಕು ಅಂತ ನಿರ್ಧಾರ ಮಾಡಿದ್ರು. ಹೀಗೆ ಎಷ್ಟೋ ತಿಂಗಳುಗಳು ಕಳೆದ್ರೂ ಅವ್ರಿಗೆ ಯಾವ ಕೆಲಸನೂ ಸಿಗಲಿಲ್ಲ. ಇದಾದ್ಮೇಲೆ ಅವರು ಕಾಯಿಲೆ ಬಂದು ಹಾಸಿಗೆ ಹಿಡಿದ್ರು. ಆಗ ಅವ್ರಿಗೆ ‘ನಾನು ಒಳ್ಳೇ ಗಂಡನೂ ಅಲ್ಲ, ಒಳ್ಳೇ ಅಪ್ಪನೂ ಅಲ್ಲ. ಯೆಹೋವ ನನ್ನನ್ನ ಮೆಚ್ಕೊಳ್ಳೋದೂ ಇಲ್ಲ’ ಅಂತ ಅನಿಸ್ತು. ಒಂದಿನ ಸಂಜೆ ಅವ್ರ ಮಗಳು ಅವ್ರಿಗೆ ಯೆಶಾಯ 30:15ರಲ್ಲಿರೋ “ಶಾಂತಿಯಿಂದ ಇದ್ದು ಭರವಸೆ ಇಟ್ರೆ ನಿಮಗೆ ಬಲ ಸಿಗುತ್ತೆ” ಅನ್ನೋ ಮಾತನ್ನ ಒಂದು ಪೇಪರಲ್ಲಿ ಪ್ರಿಂಟ್‌ ಮಾಡಿ ತಂದುಕೊಟ್ಟಳು. ಆಮೇಲೆ “ಡ್ಯಾಡಿ, ನಿಮಗೆ ಬೇಜಾರಾದಾಗೆಲ್ಲ ಇದನ್ನ ನೆನಪು ಮಾಡ್ಕೊಳಿ” ಅಂತ ಹೇಳಿದಳು. ಆಗ ಡಿಮಿಟ್ರಿ ತನ್ನ ಕುಟುಂಬಕ್ಕೆ ಬೇಕಾಗಿರೋ ಊಟ, ಬಟ್ಟೆ ಮತ್ತು ಮನೆಯನ್ನ ಕೊಟ್ಟಿರೋದಕ್ಕೆ ಯೆಹೋವನಿಗೆ ಥ್ಯಾಂಕ್ಸ್‌ ಹೇಳಬೇಕು ಅಂತ ಅರ್ಥಮಾಡ್ಕೊಂಡ್ರು. ಆಮೇಲೆ ಅವರು ಹೀಗೆ ಹೇಳಿದ್ರು, “ನಾನು ಮಾಡಬೇಕಾಗಿರೋದು ಇಷ್ಟೇ, ಶಾಂತಿಯಿಂದ ಇದ್ದು ಯೆಹೋವನ ಮೇಲೆ ನಂಬಿಕೆ ಇಡಬೇಕು.” ನೀವು ಇದೇ ತರ ಸಮಸ್ಯೆಯನ್ನ ಎದುರಿಸ್ತಿದ್ದೀರಾ? ಹಾಗಿದ್ರೆ ಯೆಹೋವ ನಿಮ್ಮನ್ನ ನೋಡ್ಕೊಳ್ತಾನೆ ಮತ್ತು ಸಹಿಸ್ಕೊಳ್ಳೋಕೆ ಶಕ್ತಿ ಕೊಡ್ತಾನೆ ಅಂತ ನಂಬಿ.

ಯೆಹೋವ ನಮ್ಮನ್ನ ಮೆಚ್ಕೊಂಡಿದ್ದಾನೆ ಅಂತ ಬೇರೆಬೇರೆ ರೀತಿಯಲ್ಲಿ ತೋರಿಸ್ತಾನೆ (ಪ್ಯಾರ 12 ನೋಡಿ) a


13. ಯೆಹೋವ ನಮ್ಮನ್ನ ಮೆಚ್ಕೊಂಡಿದ್ದಾನೆ ಅಂತ ಯಾರಿಂದ ತೋರಿಸ್ತಾನೆ ಮತ್ತು ಹೇಗೆ ತೋರಿಸ್ತಾನೆ?

13 ಸಹೋದರ ಸಹೋದರಿಯರಿಂದನೂ ಯೆಹೋವ ನಮ್ಮನ್ನ ಮೆಚ್ಕೊಂಡಿದ್ದಾನೆ ಅಂತ ತೋರಿಸ್ತಾನೆ. ಉದಾಹರಣೆಗೆ ಅವರು ಸರಿಯಾದ ಸಮಯಕ್ಕೆ ಬಂದು ನಮಗೆ ಪ್ರೋತ್ಸಾಹ ಕೊಡೋ ತರ ಆತನು ಮಾಡ್ತಾನೆ. ಏಷ್ಯಾದಲ್ಲಿರೋ ಒಬ್ಬ ಸಹೋದರಿಗೂ ಹೀಗೇ ಆಯ್ತು. ಈ ಸಹೋದರಿಗೆ ಒಂದ್ರ ಮೇಲೊಂದು ಕಷ್ಟ ಬಂತು. ಮೊದ್ಲು ಅವರು ಕೆಲಸ ಕಳ್ಕೊಂಡ್ರು. ಆಮೇಲೆ ಅವ್ರಿಗೆ ತುಂಬ ಹುಷಾರಿಲ್ಲದೆ ಆಗೋಯ್ತು. ಅವ್ರ ಗಂಡನೂ ದೊಡ್ಡ ತಪ್ಪು ಮಾಡಿ ಹಿರಿಯರ ಸ್ಥಾನ ಕಳ್ಕೊಂಡ್ರು. ಆಗ ಆ ಸಹೋದರಿಗೆ ಹೇಗನಿಸ್ತು? “ನನಗೆ ಯಾಕೆ ಹೀಗೆಲ್ಲ ಆಯ್ತು ಅಂತನೇ ಗೊತ್ತಾಗಲಿಲ್ಲ. ನಾನೇನೋ ತಪ್ಪು ಮಾಡಿಬಿಟ್ಟಿದ್ದೀನಿ ಮತ್ತು ಯೆಹೋವನ ಮೆಚ್ಚಿಗೆಯನ್ನ ಕಳ್ಕೊಂಡುಬಿಟ್ಟಿದ್ದೀನಿ ಅಂತ ಅನಿಸ್ತಿತ್ತು” ಅಂತ ಆ ಸಹೋದರಿ ಹೇಳ್ತಾರೆ. ಆಗ ಅವರು ಯೆಹೋವನಿಗೆ ‘ನೀನು ನನ್ನನ್ನ ಮೆಚ್ಕೊಂಡಿದ್ದೀಯ ಅಂತ ತೋರಿಸ್ಕೊಡಪ್ಪಾ’ ಅಂತ ಪ್ರಾರ್ಥನೆ ಮಾಡಿದ್ರು. ಯೆಹೋವ ಅವ್ರ ಪ್ರಾರ್ಥನೆಯನ್ನ ಕೇಳಿದನಾ? ಹೌದು. “ಸಭೆಲಿರೋ ಹಿರಿಯರು ಬಂದು ನನ್ನ ಹತ್ರ ಮಾತಾಡಿದ್ರು ಮತ್ತು ಯೆಹೋವ ನನ್ನನ್ನ ಎಷ್ಟು ಪ್ರೀತಿಸ್ತಾನೆ ಅಂತ ಅರ್ಥಮಾಡಿಸಿದ್ರು” ಅಂತ ಹೇಳ್ತಾರೆ. ಸ್ವಲ್ಪ ಸಮಯ ಆದ್ಮೇಲೆ ಮತ್ತೆ ಅವರು ಯೆಹೋವನ ಸಹಾಯ ಕೇಳಿದ್ರು. “ಅದೇ ದಿನ ನಮ್ಮ ಸಭೆಲಿರೋ ಸಹೋದರ ಸಹೋದರಿಯರು ನನಗೊಂದು ಪತ್ರ ಬರೆದು ಕಳಿಸಿದ್ರು. ನಾನು ಆ ಪತ್ರ ಓದಿದಾಗ ತುಂಬ ಸಮಾಧಾನ ಆಯ್ತು, ಯೆಹೋವ ನನ್ನ ಪ್ರಾರ್ಥನೆ ಕೇಳಿದನು ಅಂತ ಅನಿಸ್ತು” ಅಂತ ಅವರು ಹೇಳ್ತಾರೆ. ಇದ್ರಿಂದ ನಮಗೇನು ಗೊತ್ತಾಗುತ್ತೆ? ಯೆಹೋವ ನಮ್ಮನ್ನ ಮೆಚ್ಕೊಂಡಿದ್ದಾನೆ ಅಂತ ನಮ್ಮ ಸಹೋದರ ಸಹೋದರಿಯರಿಂದ ತೋರಿಸ್ತಾನೆ.—ಕೀರ್ತ. 10:17.

ಯೆಹೋವ ನಮ್ಮನ್ನ ಮೆಚ್ಕೊಂಡಿದ್ದಾನೆ ಅಂತ ಬೇರೆಬೇರೆ ರೀತಿಯಲ್ಲಿ ತೋರಿಸ್ತಾನೆ (ಪ್ಯಾರ 13 ನೋಡಿ) b


14. ಯೆಹೋವ ನಮ್ಮನ್ನ ಮೆಚ್ಕೊಂಡಿದ್ದಾನೆ ಅಂತ ಇನ್ನೂ ಹೇಗೆಲ್ಲಾ ತೋರಿಸ್ತಾನೆ?

14 ಯೆಹೋವ ನಮ್ಮನ್ನ ಮೆಚ್ಕೊಂಡಿದ್ದಾನೆ ಅಂತ ಇನ್ನೂ ಹೇಗೆಲ್ಲಾ ತೋರಿಸ್ತಾನೆ? ನಮಗೆ ಸಹಾಯ ಬೇಕಿದ್ದಾಗ ಸಹೋದರ ಸಹೋದರಿಯರಿಂದ ಸಲಹೆ ಕೊಡ್ತಾನೆ. ಉದಾಹರಣೆಗೆ, ಒಂದನೇ ಶತಮಾನದಲ್ಲಿ ಅಪೊಸ್ತಲ ಪೌಲ ಸಹೋದರ ಸಹೋದರಿಯರಿಗೆ 14 ಪತ್ರಗಳನ್ನ ಬರಿಯೋ ತರ ಯೆಹೋವ ಮಾಡಿದನು. ಆ ಪತ್ರಗಳಲ್ಲಿ ಏನಿತ್ತು? ನೇರವಾಗಿ ಕೊಟ್ಟ ಬುದ್ಧಿಮಾತಿತ್ತು. ಅದನ್ನ ಅವನು ಅವ್ರಿಗೆ ಪ್ರೀತಿಯಿಂದ ಹೇಳಿದನು. ಯೆಹೋವ ಯಾಕೆ ಪೌಲನಿಂದ ಈ ತರ ಪತ್ರಗಳನ್ನ ಬರೆಸಿದನು? ಯಾಕಂದ್ರೆ ಯೆಹೋವ ಒಳ್ಳೇ ಅಪ್ಪ ಆಗಿದ್ದಾನೆ. ಆತನು “ಯಾರನ್ನ ಪ್ರೀತಿಸ್ತಾನೋ ಅವ್ರನ್ನೇ ತಿದ್ದುತ್ತಾನೆ.” (ಜ್ಞಾನೋ. 3:11, 12) ಒಂದುವೇಳೆ ನಮಗೆ ಬೈಬಲಿಂದ ಸಲಹೆ ಸಿಗುವಾಗ ನಾವು ಏನಂತ ಅರ್ಥಮಾಡ್ಕೊಬೇಕು? ಯೆಹೋವ ನಮ್ಮ ಮೇಲೆ ಬೇಜಾರು ಮಾಡ್ಕೊಂಡಿದ್ದಾನೆ ಅಂತನಾ? ಇಲ್ಲ, ಆತನು ನಮ್ಮನ್ನ ಮೆಚ್ಕೊಂಡಿದ್ದಾನೆ ಅಂತ ಅರ್ಥ ಮಾಡ್ಕೊಬೇಕು. (ಇಬ್ರಿ. 12:6) ಈಗ ನಾವು ಯೆಹೋವ ನಮ್ಮನ್ನ ಮೆಚ್ಕೊಂಡಿದ್ದಾನೆ ಅಂತ ಅರ್ಥಮಾಡ್ಕೊಳ್ಳೋಕೆ ಇನ್ನೂ ಯಾವ ಆಧಾರಗಳಿವೆ ಅಂತ ನೋಡೋಣ.

ಯೆಹೋವ ನಮ್ಮನ್ನ ಮೆಚ್ಕೊಂಡಿದ್ದಾನೆ ಅಂತ ನಂಬೋಕೆ ಇನ್ನೂ ಯಾವ ಆಧಾರಗಳಿವೆ?

15. (ಎ) ಯೆಹೋವ ತನ್ನ ಪವಿತ್ರಶಕ್ತಿಯನ್ನ ಯಾರಿಗೆ ಕೊಡ್ತಾನೆ? (ಬಿ) ಇದನ್ನ ಕೇಳಿದಾಗ ನಿಮಗೆ ಹೇಗನಿಸುತ್ತೆ?

15 ಯೆಹೋವ ಯಾರನ್ನ ಮೆಚ್ಕೊಂಡಿದ್ದಾನೋ ಅವ್ರಿಗೆ ಪವಿತ್ರಶಕ್ತಿ ಕೊಡ್ತಾನೆ. (ಮತ್ತಾ. 12:18) ಆದ್ರೆ ‘ಆ ಪವಿತ್ರಶಕ್ತಿಯಿಂದ ಬರೋ ಗುಣಗಳನ್ನ ನಾನು ನನ್ನ ಜೀವನದಲ್ಲಿ ತೋರಿಸ್ತಾ ಇದ್ದೀನಾ?’ ಅಂತ ನಾವು ಕೇಳ್ಕೊಬೇಕು. ಅಷ್ಟೇ ಅಲ್ಲ, ಯೆಹೋವನ ಬಗ್ಗೆ ತಿಳ್ಕೊಂಡ ಮೇಲೆ ಜಾಸ್ತಿ ತಾಳ್ಮೆ ತೋರಿಸೋಕೆ ಕಲ್ತಿದ್ದೀರಾ? ಅಂತ ಯೋಚಿಸಿ. ಹೀಗೆ ನೀವು ಪವಿತ್ರಶಕ್ತಿಯಿಂದ ಬರೋ ಗುಣಗಳನ್ನ ತೋರಿಸ್ತಾ ಇದ್ರೆ ಯೆಹೋವ ನಿಮ್ಮನ್ನ ಮೆಚ್ಕೊಂಡಿದ್ದಾನೆ ಅನ್ನೋ ನಂಬಿಕೆ ಜಾಸ್ತಿ ಆಗ್ತಾ ಹೋಗುತ್ತೆ.—“ ಪವಿತ್ರಶಕ್ತಿಯಿಂದ ಬರೋ ಗುಣಗಳು” ಅನ್ನೋ ಚೌಕ ನೋಡಿ.

ಯೆಹೋವ ನಿಮ್ಮನ್ನ ಮೆಚ್ಕೊಂಡಿದ್ದಾನೆ ಅನ್ನೋದು ನಿಮಗೆ ಗೊತ್ತಾಗ್ತಿದ್ಯಾ? (ಪ್ಯಾರ 15 ನೋಡಿ)


16. ಯೆಹೋವ ಯಾರಿಗೆ ಸಿಹಿಸುದ್ದಿ ಸಾರೋ ಕೆಲಸ ಕೊಟ್ಟಿದ್ದಾನೆ? ಅದನ್ನ ಕೇಳಿಸ್ಕೊಂಡಾಗ ನಿಮಗೆ ಹೇಗನಿಸುತ್ತೆ? (1 ಥೆಸಲೊನೀಕ 2:4)

16 ಯೆಹೋವ ಯಾರನ್ನ ಮೆಚ್ಕೊಂಡಿದ್ದಾನೋ ಅವ್ರಿಗೆ ಸಿಹಿಸುದ್ದಿ ಸಾರೋ ಕೆಲಸ ಕೊಟ್ಟಿದ್ದಾನೆ. (1 ಥೆಸಲೊನೀಕ 2:4 ಓದಿ.) ಜಾಸ್ಲಿನ್‌ ಅನ್ನೋ ಸಹೋದರಿಯ ಬಗ್ಗೆ ನೋಡಿ. ಅವರು ಸಿಹಿಸುದ್ದಿ ಸಾರೋದ್ರಿಂದ ತುಂಬ ಪ್ರಯೋಜನ ಪಡ್ಕೊಂಡ್ರು. ಒಂದಿನ ಅವ್ರಿಗೆ ತುಂಬ ಬೇಜಾರಾಗಿತ್ತು, ಕುಗ್ಗಿಹೋಗಿಬಿಟ್ಟಿದ್ರು. “ನಾನೊಬ್ಬ ಪಯನೀಯರ್‌ ಆಗಿದ್ರೂ ಯೆಹೋವನಿಗೆ ನನ್ನಿಂದ ಏನೂ ಕೊಡಕ್ಕಾಗಲ್ಲ ಅಂತ ಅನಿಸ್ತಿತ್ತು. ಆಗ ತಕ್ಷಣ ಪ್ರಾರ್ಥನೆ ಮಾಡಿ ಸೇವೆಗೆ ಹೋದೆ” ಅಂತ ಜಾಸ್ಲಿನ್‌ ಹೇಳ್ತಾರೆ. ಅವತ್ತು ಅವ್ರಿಗೆ ಮೇರಿ ಅನ್ನೋರು ಸಿಕ್ಕಿದ್ರು. ಅವರು ಬೈಬಲ್‌ ಸ್ಟಡಿಗೆ ಒಪ್ಕೊಂಡ್ರು. ಜಾಸ್ಲಿನ್‌ ಮೇರಿ ಮನೆ ಬಾಗಿಲು ತಟ್ಟಿದಾಗ ಮೇರಿ ದೇವರಿಗೆ ಸಹಾಯಕ್ಕಾಗಿ ಪ್ರಾರ್ಥನೆ ಮಾಡ್ತಿದ್ರಂತೆ. ಅದನ್ನ ಅವರು ಕೆಲವು ತಿಂಗಳಾದಮೇಲೆ ಜಾಸ್ಲಿನ್‌ ಹತ್ರ ಹೇಳಿದ್ರು. ಆಗ ಜಾಸ್ಲಿನ್‌ಗೆ ಹೇಗನಿಸ್ತು? “ಯೆಹೋವನೇ ನನ್ನ ಹತ್ರ ಬಂದು ‘ನಾನು ನಿನ್ನನ್ನ ಮೆಚ್ಕೊಂಡಿದ್ದೀನಿ’ ಅಂತ ಹೇಳಿದಂಗೆ ಅನಿಸ್ತು” ಅಂತ ಅವರು ಹೇಳ್ತಾರೆ. ನಿಜ ನಾವು ಯಾರಿಗೆಲ್ಲ ಸಿಹಿಸುದ್ದಿ ಸಾರ್ತೀವೋ ಅವ್ರೆಲ್ಲ ಸ್ಟಡಿ ತಗೊಳ್ತಾರೆ ಅಂತ ಹೇಳೋಕಾಗಲ್ಲ. ಆದ್ರೆ ನಾವು ಮಾಡೋ ಪ್ರಯತ್ನ ನೋಡಿ ಯೆಹೋವ ನಮ್ಮನ್ನ ಖಂಡಿತ ಮೆಚ್ಕೊತಾನೆ.

ಯೆಹೋವ ನಿಮ್ಮನ್ನ ಮೆಚ್ಕೊಂಡಿದ್ದಾನೆ ಅನ್ನೋದು ನಿಮಗೆ ಗೊತ್ತಾಗ್ತಿದ್ಯಾ? (ಪ್ಯಾರ 16 ನೋಡಿ) c


17. ಬಿಡುಗಡೆ ಬೆಲೆ ಬಗ್ಗೆ ವಿಕ್ಕಿ ಹೇಳಿದ ಮಾತುಗಳಿಂದ ನೀವೇನು ಕಲಿತ್ರಿ? (ಕೀರ್ತನೆ 5:12)

17 ಯೆಹೋವ ತಾನು ಮೆಚ್ಕೊಂಡವ್ರಿಗೆ ಬಿಡುಗಡೆ ಬೆಲೆಯಿಂದ ಪ್ರಯೋಜನ ಪಡ್ಕೊಳ್ಳೋ ಅವಕಾಶ ಕೊಡ್ತಾನೆ. (1 ತಿಮೊ. 2:5, 6) ಆದ್ರೆ ಯೇಸು ಕೊಟ್ಟ ಬಿಡುಗಡೆ ಬೆಲೆ ಮೇಲೆ ನಂಬಿಕೆ ಇಟ್ಟು ದೀಕ್ಷಾಸ್ನಾನ ತಗೊಂಡ್ರೂ ಕೆಲವು ಸಲ ನಮಗೆ ಯೆಹೋವ ನಮ್ಮನ್ನ ಮೆಚ್ಕೊಳ್ತಾನಾ ಅಂತ ಅನಿಸಬಹುದು. ಒಂದು ವಿಷ್ಯ ನೆನಪಿಡಿ, ನಾವು ನಮ್ಮ ಭಾವನೆಗಳನ್ನ ನಂಬಕ್ಕಾಗಲ್ಲ, ಆದ್ರೆ ಯೆಹೋವನನ್ನ ನಂಬಬಹುದು. ಅಷ್ಟೇ ಅಲ್ಲ, ಯಾರು ಬಿಡುಗಡೆ ಬೆಲೆ ಮೇಲೆ ನಂಬಿಕೆ ಇಡ್ತಾರೋ ಅವ್ರನ್ನ ಯೆಹೋವ ನೀತಿವಂತರು ಅಂತ ನೋಡ್ತಾನೆ ಮತ್ತು ಅವ್ರನ್ನ ಆಶೀರ್ವದಿಸ್ತೀನಿ ಅಂತ ಮಾತುಕೊಟ್ಟಿದ್ದಾನೆ. (ಕೀರ್ತನೆ 5:12 ಓದಿ; ರೋಮ. 3:26) ವಿಕ್ಕಿ ಅನ್ನೋ ಸಹೋದರಿಯ ಬಗ್ಗೆ ನೋಡಿ. ಅವರು ಬಿಡುಗಡೆ ಬೆಲೆ ಬಗ್ಗೆ ತುಂಬ ಯೋಚ್ನೆ ಮಾಡಿದ್ರು. ಆಗ ಅವ್ರಿಗೆ ಹೇಗನಿಸ್ತು? “ಯೆಹೋವನು ಎಷ್ಟೊಂದು ಸಮಯದಿಂದ ನನ್ನ ವಿಷಯದಲ್ಲಿ ತಾಳ್ಮೆ ತೋರಿಸಿದ್ದಾನೆ, . . . ಆದರೆ ನಾನು ಒಂದು ರೀತಿಯಲ್ಲಿ ಆತನಿಗೆ ‘ನನ್ನಂಥವಳನ್ನು ಪ್ರೀತಿಸುವಷ್ಟು ಅಪಾರ ಪ್ರೀತಿ ನಿನ್ನಲ್ಲಿಲ್ಲ. ನನ್ನ ಪಾಪಗಳು ಎಷ್ಟಿವೆಯೆಂದರೆ ನಿನ್ನ ಮಗನ ಯಜ್ಞ ಅವುಗಳನ್ನು ಮುಚ್ಚಿಸಲು ಸಾಕಾಗುವುದಿಲ್ಲ’ ಎಂದು ಹೇಳಿದಂತಿತ್ತು” ಅಂತ ಅವರು ಹೇಳ್ತಾರೆ. ಬಿಡುಗಡೆ ಬೆಲೆ ಬಗ್ಗೆ ಈ ತರ ಯೋಚ್ನೆ ಮಾಡಿದ್ರಿಂದ ಆ ಸಹೋದರಿಗೆ ಯೆಹೋವ ತನ್ನನ್ನ ಎಷ್ಟು ಪ್ರೀತಿಸ್ತಾನೆ ಅಂತ ಅರ್ಥಮಾಡ್ಕೊಳ್ಳೋಕೆ ಆಯ್ತು. ನಾವೂ ಆ ಸಹೋದರಿ ತರ ಬಿಡುಗಡೆ ಬೆಲೆ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಿದ್ರೆ ಯೆಹೋವ ನಮ್ಮನ್ನ ಎಷ್ಟು ಪ್ರೀತಿಸ್ತಾನೆ, ಮೆಚ್ಕೊಳ್ತಾನೆ ಅಂತ ಗೊತ್ತಾಗುತ್ತೆ.

ಯೆಹೋವ ನಿಮ್ಮನ್ನ ಮೆಚ್ಕೊಂಡಿದ್ದಾನೆ ಅನ್ನೋದು ನಿಮಗೆ ಗೊತ್ತಾಗ್ತಿದ್ಯಾ? (ಪ್ಯಾರ 17 ನೋಡಿ)


18. ನಾವ್ಯಾಕೆ ಯೆಹೋವನನ್ನ ಯಾವಾಗ್ಲೂ ಪ್ರೀತಿಸ್ತಾ ಇರಬೇಕು?

18 ಈ ಲೇಖನದಲ್ಲಿ ಕೊಟ್ಟಿರೋದನ್ನೆಲ್ಲ ಮಾಡಿನೂ ಯೆಹೋವ ನಮ್ಮನ್ನ ಮೆಚ್ಕೊಳ್ತಿಲ್ಲ ಅಂತ ಕೆಲವೊಮ್ಮೆ ಅನಿಸಬಹುದು ಅಥವಾ ನಾವು ಕುಗ್ಗಿಹೋಗಬಹುದು. ಹಾಗೆ ಅನಿಸಿದಾಗ “ಯೆಹೋವ ತನ್ನನ್ನ ಯಾರು ಪ್ರೀತಿಸ್ತಾರೋ” ಅಂಥವ್ರನ್ನ ಮೆಚ್ಕೊಳ್ತಾನೆ ಅನ್ನೋದನ್ನ ನೆನಪಲ್ಲಿಡಿ. (ಯಾಕೋ. 1:12) ಹಾಗಾಗಿ ಯೆಹೋವನನ್ನ ಪ್ರೀತಿಸ್ತಾ ಆತನಿಗೆ ಹತ್ರ ಆಗ್ತಾ ಇರಿ. ಜೊತೆಗೆ, ಆತನು ನಿಮ್ಮನ್ನ ಮೆಚ್ಕೊಂಡಿದ್ದಾನೆ ಅನ್ನೋದನ್ನ ಹೇಗೆಲ್ಲಾ ತೋರಿಸ್ತಿದ್ದಾನೆ ಅಂತ ಅರ್ಥಮಾಡ್ಕೊಳ್ಳಿ. ಅಷ್ಟೇ ಅಲ್ಲ, “ದೇವರು ನಮ್ಮಲ್ಲಿ ಒಬ್ರಿಗೂ ದೂರವಾಗಿಲ್ಲ” ಅನ್ನೋದನ್ನ ಯಾವಾಗ್ಲೂ ನೆನಪಲ್ಲಿಡಿ.—ಅ. ಕಾ. 17:27.

ನೀವೇನು ಹೇಳ್ತೀರಾ?

  • ಯೆಹೋವ ನಮ್ಮನ್ನ ಮೆಚ್ಕೊಳ್ಳಲ್ಲ ಅಂತ ಕೆಲವ್ರಿಗೆ ಯಾಕೆ ಅನಿಸುತ್ತೆ?

  • ಯೆಹೋವ ನಿಮ್ಮನ್ನ ಮೆಚ್ಕೊಂಡಿದ್ದಾನೆ ಅಂತ ಹೇಗೆಲ್ಲಾ ತೋರಿಸ್ತಿದ್ದಾನೆ?

  • ಯೆಹೋವ ನಿಮ್ಮನ್ನ ಮೆಚ್ಕೊಂಡಿದ್ದಾನೆ ಅನ್ನೋದಕ್ಕೆ ಇನ್ನೂ ಯಾವೆಲ್ಲ ಆಧಾರಗಳಿವೆ?

ಗೀತೆ 69 ನಿನ್ನ ಮಾರ್ಗಗಳನ್ನು ನನಗೆ ತಿಳಿಸು

a ಚಿತ್ರ ವಿವರಣೆ: ಅಭಿನಯ

b ಚಿತ್ರ ವಿವರಣೆ: ಅಭಿನಯ

c ಚಿತ್ರ ವಿವರಣೆ: ಅಭಿನಯ