ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಲ್ಲಿ ಹೀಗ್ಯಾಕಿದೆ?

“ಹಿಂದಿನ ಕಾಲದಲ್ಲಿ ಆತನು . . . ಪಾಪಗಳನ್ನ ಕ್ಷಮಿಸ್ತಿದ್ದನು”

“ಹಿಂದಿನ ಕಾಲದಲ್ಲಿ ಆತನು . . . ಪಾಪಗಳನ್ನ ಕ್ಷಮಿಸ್ತಿದ್ದನು”

ಯೇಸು ಬಿಡುಗಡೆ ಬೆಲೆ ಕೊಟ್ಟಿರೋದ್ರಿಂದನೇ ನಮ್ಮ ಪಾಪಗಳಿಗೆ ಕ್ಷಮೆ ಸಿಗ್ತಿರೋದು. (ಎಫೆ. 1:7) ಆದ್ರೆ ಯೇಸು ಬಿಡುಗಡೆ ಬೆಲೆ ಕೊಡೋಕೂ ಮುಂಚೆನೇ ದೇವರು “ಹಿಂದಿನ ಕಾಲದಲ್ಲಿ . . . ತಾಳ್ಮೆ ತೋರಿಸ್ತಾ ಜನ ಮಾಡಿದ ಪಾಪಗಳನ್ನ ಕ್ಷಮಿಸ್ತಿದ್ದನು” ಅಂತ ಬೈಬಲ್‌ ಹೇಳುತ್ತೆ. (ರೋಮ. 3:25) ಅದು ಹೇಗೆ ಆಗುತ್ತೆ? ಯೆಹೋವ ಹೀಗೆ ಮಾಡಿದ್ರೂ ಆತನು ನ್ಯಾಯವಂತ ದೇವರು ಅಂತ ನಾವು ಹೇಗೆ ಹೇಳಬಹುದು?

ಯಾರು ಯೆಹೋವನ ಮೇಲೆ ಮತ್ತು ಆತನು ಕೊಟ್ಟ ಮಾತಿನ ಮೇಲೆ ನಂಬಿಕೆ ಇಡ್ತಾರೋ ಅವ್ರನ್ನ ಕಾಪಾಡೋಕೆ ಒಂದು “ಸಂತಾನ” ಬರುತ್ತೆ ಅಂತ ಯೆಹೋವ ಹೇಳಿದ್ದನು. ಆತನು ಆ ಮಾತು ಕೊಟ್ಟಾಗಲೇ ಯೇಸು ಬಿಡುಗಡೆ ಬೆಲೆ ಕೊಟ್ಟ ಹಾಗಿತ್ತು. (ಆದಿ. 3:15; 22:18) ಯಾಕಂದ್ರೆ ತಾನು ಹೇಳಿದ ಸಮಯಕ್ಕೆ ತನ್ನ ಮಗ ಬಿಡುಗಡೆ ಬೆಲೆ ಕೊಟ್ಟೇ ಕೊಡ್ತಾನೆ ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತಿತ್ತು. (ಗಲಾ. 4:4; ಇಬ್ರಿ. 10:7-10) ಇದು ಯೇಸುಗೂ ಗೊತ್ತಿತ್ತು. ಯೇಸು ಭೂಮಿಗೆ ಬಂದಾಗ ಯೆಹೋವ ಆತನಿಗೆ ಜನ್ರನ್ನ ಕ್ಷಮಿಸೋ ಅಧಿಕಾರ ಕೊಟ್ಟಿದ್ದನು. ಅದಕ್ಕೇ ಬಿಡುಗಡೆ ಬೆಲೆ ಕೊಡೋಕೂ ಮುಂಚೆನೇ ಯೇಸುಗೆ ಜನ್ರ ಪಾಪಗಳನ್ನ ಕ್ಷಮಿಸೋಕೆ ಆಗ್ತಿತ್ತು.—ಮತ್ತಾ. 9:2-6.