ಕಾವಲಿನಬುರುಜು - ಅಧ್ಯಯನ ಆವೃತ್ತಿ ಮೇ 2020

ಈ ಸಂಚಿಕೆಯಲ್ಲಿ 2020, ಜುಲೈ 6 ರಿಂದ ಆಗಸ್ಟ್‌ 2 ರವರೆಗಿನ ಅಧ್ಯಯನ ಲೇಖನಗಳಿವೆ.

ಅಂತ್ಯಕಾಲದ “ಉತ್ತರ ರಾಜ”

ಅಧ್ಯಯನ ಲೇಖನ 19: ಜುಲೈ 6-12, 2020. “ಉತ್ತರ ರಾಜ” ಮತ್ತು “ದಕ್ಷಿಣ ರಾಜ” ಬಗ್ಗೆ ಇರುವ ದಾನಿಯೇಲನ ಪ್ರವಾದನೆ ನೆರವೇರುತ್ತಿದೆ ಅನ್ನೋದಕ್ಕಿರೋ ಆಧಾರಗಳು ನಮ್ಮ ಕಣ್ಮುಂದೆ ಇವೆ. ಇವು ನಿಜವಾಗ್ಲೂ ನೆರವೇರುತ್ತಿವೆ ಅಂತ ಹೇಗೆ ಹೇಳಬಹುದು ಮತ್ತು ಈ ಪ್ರವಾದನೆಯ ವಿವರಗಳ ಬಗ್ಗೆ ನಾವ್ಯಾಕೆ ತಿಳ್ಕೋಬೇಕು?

ಅಂತ್ಯಕಾಲದಲ್ಲಿ ಕಿಡಿಕಾರೋ ರಾಜರು

“ಉತ್ತರ ರಾಜ” ಮತ್ತು “ದಕ್ಷಿಣ ರಾಜ” ಬಗ್ಗೆ ಇರುವ ಪ್ರವಾದನೆಗಳು ಮತ್ತು ಬೇರೆ ಪ್ರವಾದನೆಗಳು ಒಂದೇ ಸಮ್ಯದಲ್ಲಿ ನೆರವೇರಿದ ಪ್ರವಾದನೆಗಳಾಗಿವೆ. ಈ ಎಲ್ಲಾ ಪ್ರವಾದನೆಗಳಿಂದ ಸೈತಾನನ ಲೋಕ ಅತೀ ಶೀಘ್ರದಲ್ಲಿ ಅಂತ್ಯವಾಗಲಿದೆ ಅನ್ನೋದು ಹೇಗೆ ಗೊತ್ತಾಗುತ್ತೆ?

ಈಗ “ಉತ್ತರ ರಾಜ” ಯಾರು?

ಅಧ್ಯಯನ ಲೇಖನ 20: ಜುಲೈ 13-19, 2020. ಈಗ “ಉತ್ತರ ರಾಜ” ಯಾರು ಮತ್ತು ಅವನು ಹೇಗೆ ನಾಶವಾಗ್ತಾನೆ? ಈ ಪ್ರಶ್ನೆಗಳಿಗೆ ಉತ್ತರ ತಿಳುಕೊಳ್ಳೋದ್ರಿಂದ ನಮ್ಮ ನಂಬಿಕೆ ಬಲ ಆಗುತ್ತೆ ಮತ್ತು ಮುಂದೆ ಬರೋ ಕಷ್ಟಗಳನ್ನು ಎದುರಿಸೋಕೆ ನಾವು ಸಿದ್ಧರಾಗ್ತೇವೆ.

ದೇವರ ಉಡುಗೊರೆಗಳಿಗೆ ನೀವು ಕೃತಜ್ಞರಾ?

ಅಧ್ಯಯನ ಲೇಖನ 21: ಜುಲೈ 20-26, 2020. ಯೆಹೋವನ ಮೇಲೆ ಮತ್ತು ಆತನು ಕೊಟ್ಟಿರೋ ಮೂರು ಉಡುಗೊರೆಗಳ ಮೇಲೆ ಕೃತಜ್ಞತೆ ಬೆಳೆಸಿಕೊಳ್ಳೋಕೆ ಈ ಲೇಖನ ಸಹಾಯ ಮಾಡುತ್ತೆ. ಅಷ್ಟೇ ಅಲ್ಲ, ದೇವರಿದ್ದಾನಾ ಅಂತ ಸಂಶಯಪಡುವವ್ರ ಹತ್ರ ಆತನಿದ್ದಾನೆ ಅಂತ ಕಾರಣ ಕೊಟ್ಟು ಮಾತಾಡೋಕೆ ಇದು ಸಹಾಯ ಮಾಡುತ್ತೆ.

ಕಣ್ಣಿಗೆ ಕಾಣದ ಸಂಪತ್ತಿಗೆ ಕೃತಜ್ಞತೆ

ಅಧ್ಯಯನ ಲೇಖನ 22: ಜುಲೈ 27–ಆಗಸ್ಟ್‌ 2, 2020. ಹಿಂದಿನ ಲೇಖನದಲ್ಲಿ ದೇವ್ರು ಕೊಟ್ಟಿರೋ ಕೆಲ್ವು ಉಡುಗೊರೆಗಳ ಬಗ್ಗೆ ಚರ್ಚಿಸಿದೆವು. ಅವು ನಮ್ಮ ಕಣ್ಣಿಗೆ ಕಾಣುವಂಥ ಉಡುಗೊರೆಗಳಾಗಿದ್ದವು. ಈ ಲೇಖನದಲ್ಲಿ ಕಣ್ಣಿಗೆ ಕಾಣಿಸದ ಸಂಪತ್ತುಗಳ ಬಗ್ಗೆ ಚರ್ಚಿಸಲಿದ್ದೇವೆ. ಅವುಗಳಿಗೆ ಕೃತಜ್ಞರಾಗಿದ್ದೇವೆಂದು ಹೇಗೆ ತೋರಿಸಿಕೊಡ್ಬಹುದು ಅನ್ನೋದನ್ನೂ ಕಲಿಯಲಿದ್ದೇವೆ. ಇಂಥ ಅಮೂಲ್ಯ ಉಡುಗೊರೆಗಳನ್ನ ಕೊಟ್ಟಿರೋ ಯೆಹೋವನಿಗೆ ಇನ್ನೂ ಹೆಚ್ಚು ಕೃತಜ್ಞತೆ ತೋರಿಸುವುದಕ್ಕೂ ಈ ಲೇಖನ ಸಹಾಯ ಮಾಡುತ್ತೆ.