ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಂತ್ಯಕಾಲದಲ್ಲಿ ಕಿಡಿಕಾರೋ ರಾಜರು

ಅಂತ್ಯಕಾಲದಲ್ಲಿ ಕಿಡಿಕಾರೋ ರಾಜರು

ಈ ಚಾರ್ಟ್‌ನಲ್ಲಿರುವ ಪ್ರವಾದನೆಗಳು ಒಂದೇ ಸಮ್ಯದಲ್ಲಿ ನಡೆದ ಘಟನೆಗಳನ್ನು ವಿವರಿಸುತ್ತವೆ. ಇದ್ರಿಂದಾಗಿ, ನಾವು ‘ಅಂತ್ಯಕಾಲದಲ್ಲಿ’ ಜೀವಿಸುತ್ತಿದ್ದೇವೆ ಅನ್ನೋದಕ್ಕೆ ಬರೀ ಒಂದು ಆಧಾರವಲ್ಲ ಬೇರೆ-ಬೇರೆ ಆಧಾರಗಳಿವೆ ಅನ್ನೋದು ಗೊತ್ತಾಗುತ್ತೆ.—ದಾನಿ. 12:4.

  • ವಚನ ಪ್ರಕ. 11:7; 12:13, 17; 13:1-8, 12

    ಪ್ರವಾದನೆ “ಕಾಡುಮೃಗ” ವರ್ಷಗಟ್ಟಲೆ ಜನ್ರನ್ನು ಆಳುತ್ತೆ. ಅಂತ್ಯಕಾಲದಲ್ಲಿ ಅದ್ರ ಏಳನೇ ತಲೆಗೆ ಏಟಾಗುತ್ತೆ. ಆದ್ರೆ ವಾಸಿಯಾಗುತ್ತೆ. “ಇಡೀ ಭೂಮಿ” ಕಾಡುಮೃಗನ ಹಿಂಬಾಲಿಸುತ್ತೆ. “[ಸ್ತ್ರೀ] ಸಂತಾನದವರಲ್ಲಿ ಉಳಿದವರ ಮೇಲೆ ಯುದ್ಧ” ಮಾಡಲು ಸೈತಾನ ಈ ಕಾಡುಮೃಗನ ಬಳಸ್ತಾನೆ.

    ನೆರವೇರಿಕೆ ಜಲಪ್ರಳಯದ ನಂತ್ರ ಮಾನವ ಸರ್ಕಾರಗಳು ಯೆಹೋವನನ್ನ ವಿರೋಧಿಸಿ ಜನ್ರನ್ನು ಆಳಲಾರಂಭಿಸಿದ್ವು. ಸುಮಾರು 3,000 ವರ್ಷ ನಂತ್ರ ಬ್ರಿಟನ್‌ ಸಾಮ್ರಾಜ್ಯ 1 ನೇ ಮಹಾಯುದ್ಧದಲ್ಲಿ ಪ್ರಾಬಲ್ಯ ಕಳಕೊಳ್ತು. ಆದ್ರೆ ಅಮೆರಿಕ ಜೊತೆ ಸೇರಿ ಪುನಃ ಪ್ರಬಲವಾಯ್ತು. ಅಂತ್ಯಕಾಲದಲ್ಲಿ ಸೈತಾನ ಮಾನವ ಸರ್ಕಾರಗಳನ್ನು ಬಳಸಿ ದೇವಜನ್ರನ್ನು ಹಿಂಸಿಸುತ್ತಿದ್ದಾನೆ.

  • ವಚನ ದಾನಿ. 11:25-45

    ಪ್ರವಾದನೆ ಅಂತ್ಯಕಾಲದಲ್ಲಿ ಉತ್ತರ ರಾಜ ಮತ್ತು ದಕ್ಷಿಣ ರಾಜ ಅಧಿಕಾರಕ್ಕಾಗಿ ಹೋರಾಡ್ತಾರೆ.

    ನೆರವೇರಿಕೆ ಜರ್ಮನಿ ಮತ್ತು ಆ್ಯಂಗ್ಲೋ-ಅಮೆರಿಕ ನಡುವೆ ಯುದ್ಧ ನಡೀತು. 1945 ರಲ್ಲಿ ಸೋವಿಯತ್‌ ಒಕ್ಕೂಟ ಮತ್ತದರ ಮಿತ್ರರಾಷ್ಟ್ರಗಳು ಉತ್ತರ ರಾಜ ಆದವು. 1991 ರಲ್ಲಿ ಸೋವಿಯತ್‌ ಒಕ್ಕೂಟ ಬಿದ್ದುಹೋಯ್ತು. ನಂತ್ರ ರಷ್ಯಾ ಮತ್ತದರ ಮಿತ್ರರಾಷ್ಟ್ರಗಳು ಉತ್ತರ ರಾಜ ಆದವು.

  • ವಚನ ಯೆಶಾ. 61:1; ಮಲಾ. 3:1; ಲೂಕ 4:18

    ಪ್ರವಾದನೆ ಮೆಸ್ಸೀಯ ರಾಜ್ಯ ಸ್ಥಾಪನೆ ಆಗೋ ಮುಂಚೆ ‘ದಾರಿ ಸರಿಮಾಡಲು’ ಯೆಹೋವನು ತನ್ನ “ದೂತನನ್ನು” ಕಳುಹಿಸ್ವನು. ಈ ದೂತ ‘ಬಡವರಿಗೆ ಸುವಾರ್ತೆ ಪ್ರಕಟಿಸೋಕೆ’ ಪ್ರಾರಂಭಿಸ್ತಾನೆ.

    ನೆರವೇರಿಕೆ 1870 ರಿಂದ ರಸಲ್‌ ಮತ್ತು ಸಂಗಡಿಗರು ಬೈಬಲ್‌ ಸತ್ಯಗಳನ್ನು ಅರ್ಥಮಾಡ್ಕೊಂಡು ಬೇರೆಯವ್ರಿಗೆ ತಿಳ್ಸೋಕೆ ಅವಿರತ ಪ್ರಯತ್ನ ಮಾಡಿದ್ರು. 1881 ರಲ್ಲಿ ದೇವಸೇವಕರೆಲ್ರೂ ಸುವಾರ್ತೆ ಸಾರಲೇಬೇಕು ಅನ್ನೋದನ್ನ ಅರ್ಥಮಾಡಿಕೊಂಡ್ರು. “ಸಾವಿರ ಸೌವಾರ್ತಿಕರು ಬೇಕಾಗಿದ್ದಾರೆ,” “ಸಾರುವುದಕ್ಕೆ ಸಮರ್ಪಿತರು” (ಇಂಗ್ಲಿಷ್‌) ಎಂಬ ಲೇಖನಗಳನ್ನು ಪ್ರಕಟಿಸಿದ್ರು.

  • ವಚನ ಮತ್ತಾ. 13:24-30, 36-43

    ಪ್ರವಾದನೆ ಒಬ್ಬನು ಹೊಲದಲ್ಲಿ ಗೋದಿ ಬಿತ್ತುತ್ತಾನೆ. ಅವನ ವೈರಿ ಗೋದಿ ಮಧ್ಯೆ ಕಳೆ ಬಿತ್ತಿ ಹೋಗ್ತಾನೆ. ಕಳೆ ಬೆಳೆದು ಗೋದಿಯನ್ನು ಮರೆಮಾಡುತ್ತೆ. ಕೊಯ್ಲಿನ ಕಾಲದಲ್ಲಿ ಕಳೆಗಳನ್ನು ಗೋದಿಯಿಂದ ಬೇರೆ ಮಾಡಲಾಗುತ್ತೆ.

    ನೆರವೇರಿಕೆ 1870 ರಿಂದ ಸತ್ಯ ಕ್ರೈಸ್ತರು ಮತ್ತು ಸುಳ್ಳು ಕ್ರೈಸ್ತರ ಮಧ್ಯೆ ವ್ಯತ್ಯಾಸ ಸ್ಪಷ್ಟವಾಗಿ ಕಾಣೋಕೆ ಆರಂಭವಾಯ್ತು. ಅಂತ್ಯಕಾಲದಲ್ಲಿ ಸತ್ಯ ಕ್ರೈಸ್ತರನ್ನು ಒಟ್ಟುಗೂಡಿಸಲಾಯ್ತು ಮತ್ತು ಸುಳ್ಳು ಕ್ರೈಸ್ತರಿಂದ ಬೇರೆ ಮಾಡಲಾಯ್ತು.

  • ವಚನ ದಾನಿ. 2:31-33, 41-43

    ಪ್ರವಾದನೆ ಲೋಹಗಳಿಂದ ಮಾಡಿದ ಪ್ರತಿಮೆಯ ಪಾದಗಳು ಕಬ್ಬಿಣ ಮತ್ತು ಜೇಡಿಮಣ್ಣಿನ ಮಿಶ್ರಣವಾಗಿವೆ.

    ನೆರವೇರಿಕೆ ಜೇಡಿಮಣ್ಣು ಬ್ರಿಟನ್‌ ಮತ್ತು ಅಮೆರಿಕ ಸರ್ಕಾರಗಳ ಕೆಳಗಿರುವ ಸಾಮಾನ್ಯ ಜನ್ರನ್ನು ಸೂಚಿಸುತ್ತೆ. ಈ ಜನ್ರು ಆ ಎರಡು ಸರ್ಕಾರಗಳ ವಿರುದ್ಧ ದಂಗೆ ಎದ್ದಿದ್ದಾರೆ ಮತ್ತು ಚಳುವಳಿಗಳನ್ನು ನಡೆಸ್ತಿದ್ದಾರೆ. ಈ ಜನ್ರಿಂದಾಗಿ ಆ ಸರ್ಕಾರಗಳ ಕಬ್ಬಿಣದಂಥ ಸಾಮರ್ಥ್ಯ ದುರ್ಬಲವಾಗ್ತಿದೆ.

  • ವಚನ ಮತ್ತಾ. 13:30; 24:14, 45; 28:19, 20

    ಪ್ರವಾದನೆ “ಗೋದಿಯನ್ನು” ‘ಕಣಜದಲ್ಲಿ’ ತುಂಬಿಸಿಡಲಾಗುತ್ತೆ ಮತ್ತು ‘ಮನೆಯವರ’ ಮೇಲೆ ‘ನಂಬಿಗಸ್ತ ವಿವೇಚನೆಯುಳ್ಳ ಆಳನ್ನು’ ನೇಮಿಸಲಾಗುತ್ತೆ. “ಭೂಮಿಯಾದ್ಯಂತ” ಸುವಾರ್ತೆ ಸಾರುವ ಕೆಲ್ಸ ಆರಂಭವಾಗುತ್ತೆ.

    ನೆರವೇರಿಕೆ 1919 ರಲ್ಲಿ ದೇವಜನ್ರ ಮೇಲೆ ನಂಬಿಗಸ್ತ ಆಳನ್ನು ನೇಮಿಸಲಾಯಿತು. ಅಂದಿನಿಂದ ಬೈಬಲ್‌ ವಿದ್ಯಾರ್ಥಿಗಳು ಹುರುಪಿನಿಂದ ಸಾರುತ್ತಿದ್ದಾರೆ. ಇಂದು 200ಕ್ಕಿಂತ ಹೆಚ್ಚು ದೇಶ-ದ್ವೀಪಗಳಲ್ಲಿ ಯೆಹೋವನ ಸಾಕ್ಷಿಗಳು ಸುವಾರ್ತೆ ಸಾರುತ್ತಿದ್ದಾರೆ ಮತ್ತು 1,000ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಪ್ರಕಾಶನ ಹೊರತಂದಿದ್ದಾರೆ.

  • ವಚನ ದಾನಿ. 12:11; ಪ್ರಕ. 13:11, 14, 15

    ಪ್ರವಾದನೆ ಎರಡು ಕೊಂಬುಗಳ ಕಾಡುಮೃಗ ಭೂನಿವಾಸಿಗಳಿಗೆ “ಕಾಡುಮೃಗಕ್ಕಾಗಿ ಒಂದು ವಿಗ್ರಹವನ್ನು ಮಾಡುವಂತೆ” ಹೇಳುತ್ತೆ ಮತ್ತು ‘ಆ ವಿಗ್ರಹಕ್ಕೆ ಜೀವಶ್ವಾಸ’ ಕೊಡುತ್ತೆ.

    ನೆರವೇರಿಕೆ ಆ್ಯಂಗ್ಲೋ-ಅಮೆರಿಕನ್‌ ಲೋಕಶಕ್ತಿಯು ರಾಷ್ಟ್ರ ಸಂಘ ಸ್ಥಾಪಿಸೋದ್ರಲ್ಲಿ ಮುಂದಾಳತ್ವ ವಹಿಸ್ತು. ಬೇರೆ ದೇಶಗಳೂ ರಾಷ್ಟ್ರ ಸಂಘದ ಸದಸ್ಯವಾದವು. 1926 ರಿಂದ 1933 ರವರೆಗೆ ಉತ್ತರ ರಾಜ ಸಹ ಇದ್ರ ಸದಸ್ಯನಾಗಿದ್ದ. ರಾಷ್ಟ್ರ ಸಂಘ ಲೋಕಕ್ಕೆ ಶಾಂತಿ ತರುತ್ತೆ ಅಂತ ಜನ ನಂಬಿದ್ರು. ಈಗಿರೋ ವಿಶ್ವಸಂಸ್ಥೆನೂ ಶಾಂತಿ ತರುತ್ತೆ ಅಂತ ನಂಬಿದ್ದಾರೆ. ಆದ್ರೆ ಅದು ದೇವರ ರಾಜ್ಯದಿಂದ ಮಾತ್ರ ಸಾಧ್ಯ.

  • ವಚನ ದಾನಿ. 8:23, 24

    ಪ್ರವಾದನೆ “ಕಠಿಣಮುಖ” ರಾಜ ‘ಅತ್ಯಧಿಕವಾಗಿ ಹಾಳುಮಾಡ್ತಾನೆ.’

    ನೆರವೇರಿಕೆ ಆ್ಯಂಗ್ಲೋ-ಅಮೆರಿಕನ್‌ ಲೋಕಶಕ್ತಿ ಭಾರೀ ಹಾನಿ ಮಾಡಿದೆ. ಉದಾಹರಣೆಗೆ, 2 ನೇ ಮಹಾಯುದ್ಧದಲ್ಲಿ ಶತ್ರುರಾಷ್ಟ್ರದ ಮೇಲೆ ಅಮೆರಿಕ ಸರ್ಕಾರ ಎರಡು ಅಣು ಬಾಂಬ್‌ ಹಾಕಿ ಧ್ವಂಸಮಾಡಿತು. ಇದ್ರಿಂದ ಆದ ಅನಾಹುತ ಹಿಂದೆ ಯಾವತ್ತೂ ಆಗಿರಲಿಲ್ಲ.

  • ವಚನ ದಾನಿ. 11:31; ಪ್ರಕ. 17:3, 7-11

    ಪ್ರವಾದನೆ ಹತ್ತುಕೊಂಬಿನ “ಕಡುಗೆಂಪು ಬಣ್ಣದ” ಕಾಡುಮೃಗ ಅಗಾಧ ಸ್ಥಳದಿಂದ ಏರಿಬರುತ್ತೆ, ಎಂಟನೇ ರಾಜನಾಗುತ್ತೆ. ದಾನಿಯೇಲ ಪುಸ್ತಕವು ಈ ರಾಜನನ್ನು “ಹಾಳುಮಾಡುವ ಅಸಹ್ಯವಸ್ತು” ಅಂತ ಹೇಳುತ್ತೆ.

    ನೆರವೇರಿಕೆ 2 ನೇ ಮಹಾಯುದ್ಧದ ಸಮ್ಯದಲ್ಲಿ ರಾಷ್ಟ್ರ ಸಂಘ ನಿಷ್ಕ್ರಿಯವಾಯ್ತು. ಯುದ್ಧದ ನಂತ್ರ ವಿಶ್ವಸಂಸ್ಥೆನಾ ‘ಪ್ರತಿಷ್ಠಿಸಲಾಯಿತು.’ ರಾಷ್ಟ್ರ ಸಂಘದಂತೆ ವಿಶ್ವಸಂಸ್ಥೆಯನ್ನೂ ಮಹಿಮೆ ಪಡಿಸಿ ಲೋಕಕ್ಕೆ ಶಾಂತಿ ತರುವ ಹೆಗ್ಗಳಿಕೆಯನ್ನು ಜನ್ರು ದೇವರ ರಾಜ್ಯಕ್ಕೆ ಕೊಡದೆ ವಿಶ್ವಸಂಸ್ಥೆಗೆ ಕೊಟ್ಟಿದ್ದಾರೆ. ವಿಶ್ವಸಂಸ್ಥೆ ಧರ್ಮಗಳ ಮೇಲೆ ದಾಳಿ ಮಾಡಲಿದೆ.

  • ವಚನ 1 ಥೆಸ. 5:3; ಪ್ರಕ. 17:16

    ಪ್ರವಾದನೆ ಲೋಕದ ಮುಖಂಡರು “ಶಾಂತಿ ಮತ್ತು ಭದ್ರತೆ” ಎಂದು ಹೇಳುವರು. “ಹತ್ತು ಕೊಂಬು” ಮತ್ತು “ಕಾಡುಮೃಗ” “ವೇಶ್ಯೆ” ಮೇಲೆ ದಾಳಿ ಮಾಡಿ ನಾಶಮಾಡುತ್ತವೆ. ನಂತ್ರ ಲೋಕದ ಎಲ್ಲಾ ಸರ್ಕಾರಗಳು ನಾಶವಾಗುತ್ತವೆ.

    ನೆರವೇರಿಕೆ ಲೋಕದ ಮುಖಂಡರು ಇಡೀ ಲೋಕದಲ್ಲಿ ಶಾಂತಿ ಭದ್ರತೆ ತಂದಿದ್ದೇವೆಂದು ಹೇಳಿಕೊಳ್ತಾರೆ. ನಂತ್ರ ವಿಶ್ವಸಂಸ್ಥೆಯನ್ನು ಬೆಂಬಲಿಸೋ ದೇಶಗಳು ಸುಳ್ಳು ಧರ್ಮದ ಸಂಘಟನೆಗಳನ್ನು ನಾಶ ಮಾಡುತ್ತವೆ. ಆಗ ಮಹಾ ಸಂಕಟ ಶುರುವಾಗುತ್ತೆ. ಈ ಸಂಕಟವು ಅರ್ಮಗೆದೋನ್‌ ಯುದ್ಧದಲ್ಲಿ ಸೈತಾನನ ಲೋಕವನ್ನು ಯೇಸು ನಾಶ ಮಾಡಿದಾಗ ಕೊನೆಗೊಳ್ಳುತ್ತೆ.

  • ವಚನ ಯೆಹೆ. 38:11, 14-17; ಮತ್ತಾ. 24:31

    ಪ್ರವಾದನೆ ಗೋಗನು ದೇವಜನ್ರ ದೇಶದೊಳಗೆ ನುಗ್ಗುವನು. ಆಗ ಅಭಿಷಿಕ್ತರಲ್ಲಿ ಉಳಿದವರನ್ನು ದೇವದೂತರು ಒಟ್ಟುಗೂಡಿಸುವರು.

    ನೆರವೇರಿಕೆ ಉತ್ತರ ರಾಜ ಮತ್ತು ಲೋಕದ ಇತರ ಸರ್ಕಾರಗಳು ದೇವಜನ್ರ ಮೇಲೆ ದಾಳಿ ಮಾಡುತ್ತವೆ. ದಾಳಿ ಪ್ರಾರಂಭವಾದ ಸ್ವಲ್ಪದರಲ್ಲೇ ಅಭಿಷಿಕ್ತರಲ್ಲಿ ಉಳಿದವರು ಒಟ್ಟುಗೂಡಿಸಲ್ಪಟ್ಟು ಸ್ವರ್ಗಕ್ಕೆ ಹೋಗ್ತಾರೆ.

  • ವಚನ ಯೆಹೆ. 38:18-23; ದಾನಿ. 2:34, 35, 44, 45; ಪ್ರಕ. 6:2; 16:14, 16; 17:14; 19:20

    ಪ್ರವಾದನೆ “ಬಿಳೀ ಕುದುರೆ” ಮೇಲೆ ಕುಳಿತವನು ಗೋಗ ಮತ್ತವನ ಸೈನ್ಯವನ್ನು ನಾಶ ಮಾಡಿ “ತನ್ನ ವಿಜಯ” ಪೂರ್ಣಗೊಳಿಸ್ತಾನೆ. ‘ಕಾಡುಮೃಗವನ್ನು’ ‘ಬೆಂಕಿಯ ಕೆರೆಗೆ ದೊಬ್ಬಲಾಗುತ್ತೆ’ ಮತ್ತು ಒಂದು ಗುಂಡು ಬಂಡೆ ದೊಡ್ಡ ಪ್ರತಿಮೆಯನ್ನು ನುಚ್ಚುನೂರು ಮಾಡುತ್ತೆ.

    ನೆರವೇರಿಕೆ ದೇವರ ರಾಜ್ಯದ ರಾಜನಾಗಿರುವ ಯೇಸು ದೇವಜನ್ರನ್ನು ಕಾಪಾಡ್ತಾನೆ. ಯೇಸು, ಆತನ ಸಹರಾಜರಾದ 1,44,000 ಮಂದಿ ಮತ್ತು ದೇವದೂತ ಪಡೆ ಜನಾಂಗಗಳ ಗುಂಪನ್ನು ನಾಶ ಮಾಡ್ತಾರೆ. ಹೀಗೆ ಸೈತಾನನ ಲೋಕ ಸರ್ವನಾಶವಾಗುತ್ತೆ.