ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂಶೋಧನೆಗಾಗಿ . . .

ಸಂಶೋಧನೆಗಾಗಿ . . .

ವಾಚ್‌ಟವರ್‌ ಆನ್‌ಲೈನ್‌ ಲೈಬ್ರರಿಯಲ್ಲಿ ಇರೋ ರೆಫರೆನ್ಸ್‌ಗಳು

ನಿಮಗೆ ಈ ರೆಫರೆನ್ಸ್‌ಗಳಿಂದ ತುಂಬ ವಿಷ್ಯಗಳನ್ನ ತಿಳ್ಕೊಳ್ಳೋಕೆ ಆಗುತ್ತೆ. ಕನ್ನಡ ಭಾಷೆಯ ಲೈಬ್ರರಿಯಲ್ಲಿ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ ಇದೆ. ಇಂಗ್ಲಿಷ್‌ ಭಾಷೆಯ ಲೈಬ್ರರಿಯಲ್ಲಿ ಪದಕೋಶ, ಶಾಸ್ತ್ರಗಳ ಒಳನೋಟ ಮತ್ತು ವಾಚ್‌ ಟವರ್‌ ಪಬ್ಲಿಕೇಷನ್ಸ್‌ ಇಂಡೆಕ್ಸ್‌ ಕೂಡ ಇದೆ.

ಈ ರೆಫರೆನ್ಸ್‌ಗಳಲ್ಲಿ ನಿಮಗೆ ಬೇಕಾಗಿರೋ ಮಾಹಿತಿಯನ್ನ ಹುಡುಕಬಹುದು. ಹುಡುಕಬೇಕಾಗಿರೋ ಪದನ ಆನ್‌ಲೈನ್‌ ಲೈಬ್ರರಿಯಲ್ಲಿ “ಹುಡುಕಲು ಟೈಪ್‌ ಮಾಡಿ” ಅನ್ನೋ ಬಾಕ್ಸ್‌ ಒಳಗೆ ಬರೆಯಿರಿ. ಆ ಪದಕ್ಕೆ ರೆಫರೆನ್ಸ್‌ ಇದ್ರೆ ಕೆಳಗೆ ಆ ಪದದ ಪಕ್ಕದಲ್ಲಿ “ವಿಷಯ” ಅಂತ ಬರುತ್ತೆ.

ಮಾಡಿ ನೋಡಿ: “ಹುಡುಕಲು ಟೈಪ್‌ ಮಾಡಿ” ಅನ್ನೋ ಬಾಕ್ಸ್‌ ಒಳಗೆ “ಯೆಹೋವ” ಅಂತ ಬರೆಯಿರಿ (1). ಕೆಳಗೆ “ವಿಷಯ” ಅನ್ನೋದರ ಪಕ್ಕದಲ್ಲಿರೋ “ಯೆಹೋವ” ಅನ್ನೋ ಪದನ ಒತ್ತಿ (2). ಆಗ ರೆಫರೆನ್ಸ್‌ಗಳಲ್ಲಿ ಆ ಪದ ಎಲ್ಲೆಲ್ಲಿ ಇದೆ ಅಂತ ತೋರಿಸುತ್ತೆ.