ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇದನ್ನ ಮಾಡಿ!

ಕಲಿಯೋ ಮನಸ್ಸಿಂದ ಓದಿ

ಕಲಿಯೋ ಮನಸ್ಸಿಂದ ಓದಿ

ಓದಕ್ಕೆ ಅಂತ ಕೂತಾಗ ‘ಎಲ್ಲಾ ಗೊತ್ತಿರೋದೇ ಇರುತ್ತೆ’ ಅಂತ ಅಂದ್ಕೊಳ್ಳದೆ, ‘ಇವತ್ತು ನಾನೇನ್‌ ಕಲಿಬಹುದು?’ ಅಂತ ಕೇಳ್ಕೊಳಿ. ನಿಜ, ಎಷ್ಟೋ ಸಲ ನಮಗೆ ಗೊತ್ತಿರೋದೇ ಓದ್ತೀವಿ. ಆದ್ರೂ ‘ಯೆಹೋವ ಇವತ್ತೇನಾದ್ರೂ ಹೊಸ ವಿಷ್ಯ ಕಲಿಸ್ತಿದ್ದಾನಾ?’ ಅಂತ ಹುಡುಕಬೇಕು. ಈ ತರ ಕಲಿಯೋ ಮನಸ್ಸಿಂದ ಅಧ್ಯಯನ ಮಾಡೋಕೆ ನಾವು ಏನು ಮಾಡಬೇಕು?

ವಿವೇಕ ಕೊಡಿ ಅಂತ ಪ್ರಾರ್ಥನೆ ಮಾಡಿ. ‘ನನಗೆ ಬೈಬಲ್‌ ಬಗ್ಗೆ ಸುಮಾರು ಗೊತ್ತಿದೆ ಅಲ್ವಾ! ಸಾಕು ಬಿಡು!’ ಅಂತ ಅಂದ್ಕೊಬೇಡಿ. (ಜ್ಞಾನೋ. 3:5, 6) ‘ಯೆಹೋವ, ನಾನಿವತ್ತು ಏನು ಕಲಿಬೇಕು ಅಂತ ಚೆನ್ನಾಗಿ ಅರ್ಥಮಾಡಿಸು’ ಅಂತ ಕೇಳ್ಕೊಳ್ಳಿ.—ಯಾಕೋ. 1:5.

ಬೈಬಲಿಗೆ ಶಕ್ತಿ ಇದೆ ಅಂತ ಮರೀಬೇಡಿ. “ಪವಿತ್ರ ಗ್ರಂಥಕ್ಕೆ ಜೀವ ಇದೆ.” (ಇಬ್ರಿ. 4:12) ಪ್ರತಿಸಲ ಬೈಬಲ್‌ ಓದಿದಾಗ ಏನಾದ್ರೂ ಹೊಸ ವಿಷ್ಯ ಕಲಿತೀವಿ ಅಥವಾ ಹೊಸ ವಿಧಾನದಲ್ಲಿ ಅದನ್ನ ಅರ್ಥಮಾಡ್ಕೊಳ್ತೀವಿ. ಈ ತರ ಅರ್ಥ ಮಾಡ್ಕೋಬೇಕಂದ್ರೆ ನಮಗೆ ಕಲಿಯೋ ಮನಸ್ಸು ಇರಬೇಕು.

ಯೆಹೋವನ ಮೇಜಲ್ಲಿ ಇರೋದನ್ನೆಲ್ಲ ತಿಂದು ನೋಡಿ. ಆತನು ನಮಗೆ ಕಲಿಸ್ತಿರೋ ಬೇರೆಬೇರೆ ವಿಷ್ಯಗಳು “ರುಚಿಯಾದ ಆಹಾರ ಪದಾರ್ಥಗಳ ಔತಣ” ತರ ಇದೆ. (ಯೆಶಾ. 25:6) ಹಾಗಾಗಿ ನಮಗೆ ಇಷ್ಟ ಆಗೋದನ್ನಷ್ಟೇ ಅಲ್ಲ ಎಲ್ಲಾ ಅಡುಗೆನೂ ಮಿಸ್‌ ಮಾಡದೆ ತಿನ್ನಬೇಕು. ಆಗ ನಮಗೆ ಅಧ್ಯಯನ ಮಾಡೋಕೆ ತುಂಬ ಇಷ್ಟ ಆಗುತ್ತೆ. ಅಷ್ಟೇ ಅಲ್ಲ ಯೆಹೋವನಿಗೆ ಇಷ್ಟ ಆಗೋ ತರನೂ ನಡ್ಕೊಳ್ತೀವಿ.