ಕಾವಲಿನಬುರುಜು - ಅಧ್ಯಯನ ಆವೃತ್ತಿ ಸೆಪ್ಟೆಂಬರ್ 2017

ಈ ಸಂಚಿಕೆಯಲ್ಲಿ 2017ರ ಅಕ್ಟೋಬರ್‌ 23 ರಿಂದ ನವೆಂಬರ್‌ 26 ರ ವರೆಗಿನ ಅಧ್ಯಯನ ಲೇಖನಗಳಿವೆ.

ಸ್ವನಿಯಂತ್ರಣ ಬೆಳೆಸಿಕೊಳ್ಳಿ

ಬೈಬಲಿನಲ್ಲಿರುವ ಮಾದರಿಗಳು ನಾವು ಈ ಗುಣವನ್ನು ಬೆಳೆಸಿಕೊಂಡು ತೋರಿಸಲು ಹೇಗೆ ಸಹಾಯಮಾಡುತ್ತವೆ? ಕ್ರೈಸ್ತರು ಈ ಗುಣವನ್ನು ಏಕೆ ಬೆಳೆಸಿಕೊಳ್ಳಬೇಕು?

ಯೆಹೋವನಂತೆ ನೀವೂ ಕನಿಕರ ತೋರಿಸಿ

ಒಂದು ಸಂದರ್ಭದಲ್ಲಿ ಯೆಹೋವನು ತನ್ನ ಬಗ್ಗೆ ಮೋಶೆಗೆ ತಿಳಿಸುತ್ತಾ, ತನ್ನ ನಾಮ ಹಾಗೂ ಗುಣಗಳ ಬಗ್ಗೆ ಹೇಳಿದನು. ಆ ಗುಣಗಳಲ್ಲಿ ಆತನು ಮೊದಲು ತಿಳಿಸಿದ ಗುಣ ಕನಿಕರ. ಕನಿಕರ ಅಂದರೇನು? ನೀವು ಇದರ ಬಗ್ಗೆ ಯಾಕೆ ಆಸಕ್ತಿ ತೋರಿಸಬೇಕು?

ಜೀವನ ಕಥೆ

ಆಧ್ಯಾತ್ಮಿಕ ವ್ಯಕ್ತಿಗಳ ಜೊತೆ ಕೆಲಸ ಮಾಡುವುದು ನನ್ನ ಸುಯೋಗ

ಡೇವಿಡ್‌ ಸಿಂಕ್ಲೆರ್‌ 61 ವರ್ಷಗಳ ಕಾಲ ಬ್ರೂಕ್ಲಿನ್‌ ಬೆತೆಲಿನಲ್ಲಿ ಸೇವೆ ಮಾಡಿದರು. ಅವರು ಅಲ್ಲಿ ನಿಷ್ಠಾವಂತ ಸಹೋದರ ಸಹೋದರಿಯರ ಜೊತೆ ಕೆಲಸ ಮಾಡಿದ್ದರಿಂದ ಪಡಕೊಂಡ ಸಂತೋಷ, ಆಶೀರ್ವಾದಗಳ ಬಗ್ಗೆ ತಿಳಿಸಿದ್ದಾರೆ.

‘ನಮ್ಮ ದೇವರ ಮಾತು ಸದಾಕಾಲ ಇರುವುದು’

ಬೈಬಲನ್ನು ಬರೆದು ಮುಗಿಸಿ ಶತಮಾನಗಳೇ ಆಗಿದ್ದರೂ ಅದು ಈಗಲೂ ಹೆಚ್ಚು ಮಾರಾಟವಾಗುವ ಪುಸ್ತಕವಾಗಿದೆ. ಇದು ಭಾಷೆಯಲ್ಲಾದ ಬದಲಾವಣೆ, ರಾಜಕೀಯ ಬೆಳವಣಿಗೆಗಳು, ಭಾಷಾಂತರಕ್ಕೆ ಎದುರಾದ ವಿರೋಧವನ್ನು ಯಶಸ್ವಿಕರವಾಗಿ ಜಯಿಸಿ ಬಂದಿದೆ.

ದೇವರ ವಾಕ್ಯಕ್ಕೆ ಶಕ್ತಿಯಿದೆ

ದೇವರ ವಾಕ್ಯದ ಅಧ್ಯಯನ ಮಾಡಿದ ಕಾರಣ ಅನೇಕರು ದೊಡ್ಡ ಬದಲಾವಣೆಗಳನ್ನು ಮಾಡಿದ್ದಾರೆ. ನಮ್ಮ ಮೇಲೂ ದೇವರ ವಾಕ್ಯ ಇಂಥ ಪ್ರಭಾವ ಬೀರಬೇಕಾದರೆ ಏನು ಮಾಡಬೇಕು?

“ಧೈರ್ಯದಿಂದಿರು, ಕೆಲಸಕ್ಕೆ ಕೈಹಾಕು”

ನಮಗೆ ಯಾಕೆ ಧೈರ್ಯ ಬೇಕು? ನಾವು ಧೈರ್ಯ ತಂದುಕೊಳ್ಳುವುದು ಹೇಗೆ?