ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 40

“ನಿನ್ನ ವಶಕ್ಕೆ ಕೊಡಲ್ಪಟ್ಟಿರುವುದನ್ನು ಕಾಪಾಡಿಕೊ”

“ನಿನ್ನ ವಶಕ್ಕೆ ಕೊಡಲ್ಪಟ್ಟಿರುವುದನ್ನು ಕಾಪಾಡಿಕೊ”

“ತಿಮೊಥೆಯನೇ, . . . ನಿನ್ನ ವಶಕ್ಕೆ ಕೊಡಲ್ಪಟ್ಟಿರುವುದನ್ನು ಕಾಪಾಡಿಕೊ.”—1 ತಿಮೊ. 6:20.

ಗೀತೆ 34 ನಮ್ಮ ಹೆಸರಿನ ಪ್ರಕಾರ ಜೀವಿಸುವುದು

ಕಿರುನೋಟ *

1-2. ಒಂದನೇ ತಿಮೊಥೆಯ 6:20 ರ ಪ್ರಕಾರ ತಿಮೊಥೆಯ ಏನು ಮಾಡ್ಬೇಕಿತ್ತು?

ಸಾಮಾನ್ಯವಾಗಿ ನಮ್ಮತ್ರ ಇರೋ ಹಣ ಅಥವಾ ಬೇರೆ ಯಾವುದೇ ಅಮೂಲ್ಯ ವಸ್ತುಗಳನ್ನ ಜೋಪಾನವಾಗಿ ಇಡಬೇಕಂದ್ರೆ ಬ್ಯಾಂಕಲ್ಲಿ ಇಡ್ತೀವಿ ಅಥವಾ ನಮಗೆ ಚೆನ್ನಾಗಿ ಗೊತ್ತಿರೋ ಒಬ್ಬ ವ್ಯಕ್ತಿ ಹತ್ರ ಕೊಡ್ತೀವಿ. ಹೀಗೆ ಕೊಟ್ಟಾಗ ಅದನ್ನ ಅವ್ರು ಜೋಪಾನವಾಗಿ ನೋಡ್ಕೋಬೇಕು, ಕಳೀಬಾರದು ಅಥ್ವಾ ಕಳವಾಗ್ಬಾರ್ದು ಅಂತ ನಿರೀಕ್ಷಿಸುತ್ತೀವಿ. ಹಾಗಾಗಿ ನಮ್ಮತ್ರ ಇರೋ ಅಮೂಲ್ಯ ವಸ್ತುವನ್ನ ನಾವು ಪೂರ್ತಿ ಭರವಸೆ ಇಡುವಂಥ ವ್ಯಕ್ತಿಗೆ ಮಾತ್ರ ಕೊಡ್ತೀವಿ.

2 1 ತಿಮೊಥೆಯ 6:20 ಓದಿ. ತಿಮೊಥೆಯನಿಗೆ ಅಮೂಲ್ಯ ವಿಷ್ಯಗಳನ್ನ ಕೊಡಲಾಗಿದೆ ಅಂತ ಪೌಲನು ಹೇಳಿದನು. ಅವನು ದೇವ್ರ ಉದ್ದೇಶದ ಬಗ್ಗೆ ನಿಷ್ಕೃಷ್ಟ ಜ್ಞಾನ ಪಡ್ಕೊಂಡಿದ್ದ. ಜೊತೆಗೆ ಅವನಿಗೆ ‘ವಾಕ್ಯ ಸಾರೋ’ ಕೆಲ್ಸ ಕೊಡಲಾಗಿತ್ತು. (2 ತಿಮೊ. 4:2, 5) ಈ ವಿಷ್ಯಗಳನ್ನು ಕಾಪಾಡಿಕೊಳ್ಳುವಂತೆ ಪೌಲ ತಿಮೊಥೆಯನಿಗೆ ಉತ್ತೇಜಿಸಿದನು. ತಿಮೊಥೆಯನಂತೆ ನಮ್ಗೂ ಯೆಹೋವನು ಅನೇಕ ಅಮೂಲ್ಯ ವಿಷ್ಯಗಳನ್ನ ಕೊಟ್ಟಿದ್ದಾನೆ. ಆ ವಿಷ್ಯಗಳು ಯಾವುವು? ಅವುಗಳನ್ನ ನಾವ್ಯಾಕೆ ಕಾಪಾಡಿಕೊಳ್ಳಬೇಕು?

ನಮಗೆ ಕೊಟ್ಟಿರೋ ಸತ್ಯ

3-4. ಬೈಬಲಿನಲ್ಲಿರೋ ಸತ್ಯ ಅಮೂಲ್ಯವಾಗಿದೆ ಅನ್ನೋದಕ್ಕೆ ಯಾವ ಕಾರಣಗಳಿವೆ?

3 ಯೆಹೋವನು ನಮ್ಗೆ ಬೈಬಲಿನಲ್ಲಿರೋ ಅಮೂಲ್ಯ ಸತ್ಯಗಳ ನಿಷ್ಕೃಷ್ಟ ಜ್ಞಾನವನ್ನ ಕೊಟ್ಟಿದ್ದಾನೆ. ನಾವು ಈ ಸತ್ಯಗಳನ್ನ ತಿಳುಕೊಂಡಾಗ ಯೆಹೋವನಿಗೆ ಆಪ್ತ ಸ್ನೇಹಿತರಾಗೋದು ಹೇಗೆ ಅಂತ ಕಲಿತ್ವಿ ಮತ್ತು ಜೀವನದಲ್ಲಿ ಸಂತೋಷವಾಗಿರೋಕೆ ಏನು ಮಾಡಬೇಕು ಅಂತನೂ ತಿಳ್ಕೊಂಡ್ವಿ. ಹಾಗಾಗಿ ಈ ಸತ್ಯಗಳು ತುಂಬ ಅಮೂಲ್ಯವಾಗಿವೆ. ಇವುಗಳನ್ನ ನಾವು ಒಪ್ಪಿಕೊಂಡು ಅದ್ರ ಪ್ರಕಾರ ನಡಿತಿರೋದ್ರಿಂದ ಸುಳ್ಳು ಬೋಧನೆಗಳ ಸುಳಿಯಿಂದ ತಪ್ಪಿಸಿಕೊಂಡಿದ್ದೇವೆ ಮತ್ತು ಅನೈತಿಕ ಜೀವನದ ದಾಸತ್ವದಿಂದ ಸ್ವತಂತ್ರರಾಗಿದ್ದೇವೆ.—1 ಕೊರಿಂ. 6:9-11.

4 ಬೈಬಲಿನಲ್ಲಿರೋ ಸತ್ಯ ಅಮೂಲ್ಯವಾಗಿದೆ ಅನ್ನೋದಕ್ಕೆ ಇನ್ನೊಂದು ಕಾರಣ ಯೆಹೋವನು ಅದನ್ನ ‘ಯೋಗ್ಯವಾದ ಮನೋಭಾವವಿರೋ’ ದೀನ ಜನ್ರಿಗೆ ಮಾತ್ರ ತಿಳ್ಸಿದ್ದಾನೆ. (ಅ. ಕಾ. 13:48) ಯೆಹೋವನು ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನ ಮೂಲಕ ಬೈಬಲಿನ ಬಗ್ಗೆ ಕಲಿಸ್ತಿದ್ದಾನೆ ಅಂತ ಅವ್ರು ನಂಬ್ತಾರೆ. (ಮತ್ತಾ. 11:25; 24:45) ಬೈಬಲಿನಲ್ಲಿರೋ ಈ ಸತ್ಯಗಳು ನಿಧಿ ತರ. ಅವುಗಳನ್ನ ಆ ಆಳಿನ ಸಹಾಯ ಇಲ್ಲದೆ ನಾವಾಗೇ ತಿಳ್ಕೊಳ್ಳೋಕೆ ಸಾಧ್ಯವಿಲ್ಲ.—ಜ್ಞಾನೋ. 3:13, 15.

5. ಯೆಹೋವನು ನಮ್ಗೆ ಇನ್ನೇನೆಲ್ಲಾ ಕೊಟ್ಟಿದ್ದಾನೆ?

5 ಯೆಹೋವ ನಮಗೆ ತನ್ನ ಬಗ್ಗೆ ಮತ್ತು ತನ್ನ ಉದ್ದೇಶದ ಬಗ್ಗೆ ಇರೋ ಸತ್ಯವನ್ನ ಬೇರೆಯವ್ರಿಗೆ ಕಲಿಸೋ ಅವಕಾಶ ಕೊಟ್ಟಿದ್ದಾನೆ. (ಮತ್ತಾ. 24:14) ಈ ಸಂದೇಶಕ್ಕೆ ಬೆಲೆ ಕಟ್ಟೋಕಾಗಲ್ಲ. ಯಾಕಂದ್ರೆ ಈ ಸಂದೇಶಕ್ಕೆ ಕಿವಿಗೊಡೋ ಜನ್ರು ಯೆಹೋವನ ಕುಟುಂಬದ ಭಾಗವಾಗ್ತಾರೆ ಮತ್ತು ಅವ್ರಿಗೆ ನಿತ್ಯಜೀವ ಪಡೆಯೋ ಅವಕಾಶ ಸಿಗುತ್ತೆ. (1 ತಿಮೊ. 4:16) ಈಗಿನ ಕಾಲದಲ್ಲಿ ನಡಿತಿರೋ ಬಹು ಮುಖ್ಯ ಕೆಲ್ಸ ಸಾರೋ ಕೆಲ್ಸವಾಗಿದೆ. ಹಾಗಾಗಿ ನಾವು ತುಂಬ ಸೇವೆ ಮಾಡ್ತಾ ಇದ್ರೂ ಅಥವಾ ನಮ್ಮಿಂದ ಸ್ವಲ್ಪನೇ ಸೇವೆ ಮಾಡೋಕೆ ಆಗ್ತಾ ಇದ್ರೂ ನಾವೆಲ್ರೂ ಈ ಮುಖ್ಯ ಕೆಲ್ಸವನ್ನ ಬೆಂಬಲಿಸ್ತೀವಿ. (1 ತಿಮೊ. 2:3, 4) ಈ ರೀತಿ ನಾವು ದೇವ್ರ ಜೊತೆಕೆಲ್ಸಗಾರರಾಗಿರೋದು ನಮ್ಗೆ ಸಿಕ್ಕಿರೋ ಗೌರವ ಅಲ್ವಾ!—1 ಕೊರಿಂ. 3:9.

ನಮಗೆ ಕೊಟ್ಟಿರೋ ಸತ್ಯವನ್ನ ಕಾಪಾಡಿಕೊಳ್ಳಬೇಕು

ಕೆಲವ್ರು ಸತ್ಯದಿಂದ ದೂರ ಹೋದ್ರೂ ತಿಮೊಥೆಯನು ಸತ್ಯದಲ್ಲಿ ಸ್ಥಿರವಾಗಿದ್ದನು (ಪ್ಯಾರ 6 ನೋಡಿ)

6. ದೇವ್ರು ಕೊಟ್ಟಿದ್ದ ವಿಷ್ಯಗಳ ಕಡೆಗೆ ಗಣ್ಯತೆ ಇಲ್ಲದ ಕೆಲವ್ರಿಗೆ ಏನಾಯ್ತು?

6 ತಿಮೊಥೆಯನ ಕಾಲದಲ್ಲಿದ್ದ ಕೆಲವ್ರಿಗೆ ದೇವ್ರ ಜೊತೆಕೆಲಸಗಾರರಾಗಿ ಇರೋ ಅವಕಾಶದ ಕಡೆಗೆ ಗಣ್ಯತೆ ಇರಲಿಲ್ಲ. ದೇಮನು ಸದ್ಯದ ವಿಷಯಗಳ ವ್ಯವಸ್ಥೆಯನ್ನ ಪ್ರೀತಿಸಿದ್ರಿಂದ ಪೌಲನ ಜೊತೆ ಸೇವೆ ಮಾಡೋ ಅವಕಾಶವನ್ನ ಬಿಟ್ಟು ಹೋದನು. (2 ತಿಮೊ. 4:10) ಫುಗೇಲ ಮತ್ತು ಹೆರ್ಮೊಗೇನರು ಪೌಲನಿಗೆ ಬಂದಂಥ ಹಿಂಸೆಯನ್ನ ತಾವೂ ಅನುಭವಿಸಬೇಕಾಗುತ್ತೆ ಅಂತ ಹೆದರಿ ಸೇವೆ ಮಾಡೋದನ್ನ ಬಿಟ್ಟುಬಿಟ್ರು. (2 ತಿಮೊ. 1:15) ಹುಮೆನಾಯ, ಅಲೆಕ್ಸಾಂದರ ಮತ್ತು ಪಿಲೇತರು ಧರ್ಮಭ್ರಷ್ಟರಾಗಿ ಸತ್ಯವನ್ನ ಬಿಟ್ಟುಹೋದ್ರು. (1 ತಿಮೊ. 1:19, 20; 2 ತಿಮೊ. 2:16-18) ಇವ್ರೆಲ್ರೂ ಹಿಂದೆ ಯೆಹೋವನನ್ನ ತುಂಬ ಪ್ರೀತಿಸ್ತಿದ್ರು. ಆದ್ರೆ ಸ್ವಲ್ಪ ಸಮ್ಯ ಆದ ಮೇಲೆ, ಯೆಹೋವನು ಅವ್ರಿಗೆ ಕೊಟ್ಟಿದ್ದ ವಿಷ್ಯಗಳ ಕಡೆಗೆ ಅವ್ರಿಗಿದ್ದ ಗಣ್ಯತೆ ಕಡಿಮೆ ಆಯ್ತು.

7. ಸೈತಾನನು ನಮ್ಮ ಮೇಲೆ ಯಾವೆಲ್ಲಾ ಕುತಂತ್ರಗಳನ್ನ ಉಪಯೋಗಿಸ್ತಾನೆ?

7 ಯೆಹೋವನು ನಮ್ಗೆ ಕೊಟ್ಟಿರೋ ನಿಧಿಯನ್ನ ನಾವು ಕಳಕೊಳ್ಳೋ ತರ ಮಾಡೋಕೆ ಸೈತಾನ ಹೇಗೆಲ್ಲಾ ಪ್ರಯತ್ನಿಸ್ತಾನೆ? ಅವ್ನ ಕೆಲ್ವು ಕುತಂತ್ರಗಳನ್ನ ಗಮನಿಸಿ. ನಾವು ನಿಧಾನವಾಗಿ ಸತ್ಯದಿಂದ ದೂರ ಹೋಗೋ ತರ ಮಾಡೋ ಯೋಚನೆ ಮತ್ತು ನಡತೆಯನ್ನ ನಮ್ಮಲ್ಲಿ ಬೇರೂರಿಸೋಕೆ ಅವ್ನು ಪ್ರಯತ್ನಿಸ್ತಾನೆ. ಇದಕ್ಕಾಗಿ ಟಿವಿ, ಚಲನಚಿತ್ರ, ಇಂಟರ್‌ನೆಟ್‌, ವಾರ್ತಾಮಾಧ್ಯಮ, ಪುಸ್ತಕ ಮತ್ತು ಪತ್ರಿಕೆಗಳನ್ನ ಉಪಯೋಗಿಸ್ತಾನೆ. ಸಮಾನ ವಯಸ್ಸಿನವರ ಮೂಲಕ ನಮ್ಮ ಮೇಲೆ ಒತ್ತಡ ತರ್ತಾನೆ, ಹಿಂಸೆ ತರ್ತಾನೆ. ಇದಕ್ಕೆ ನಾವು ಹೆದರಿ ಸಾರೋದನ್ನ ನಿಲ್ಲಿಸಿಬಿಡಬೇಕು ಅನ್ನೋದು ಅವನ ಉದ್ದೇಶ. ನಾವು ಸತ್ಯವನ್ನ ಬಿಟ್ಟು ದೂರ ಹೋಗಲಿಕ್ಕಾಗಿ ಅವ್ನು ನಮ್ಮನ್ನ ಧರ್ಮಭ್ರಷ್ಟರ ಸುಳ್ಳು ಬೋಧನೆಗಳ ಬಲೆಗೆ ಬೀಳಿಸೋಕೆ ಪ್ರಯತ್ನಿಸ್ತಾನೆ.—1 ತಿಮೊ. 6:20, 21.

8. ಡ್ಯಾನಿಯೆಲ್‌ ಅನ್ನೋ ಸಹೋದರನ ಅನುಭವದಿಂದ ನೀವೇನು ಕಲಿತ್ರಿ?

8 ನಾವು ಜಾಗ್ರತೆವಹಿಸದೇ ಇದ್ರೆ, ನಿಧಾನವಾಗಿ ಸತ್ಯದಿಂದ ದೂರ ಹೋಗೋ ಸಾಧ್ಯತೆ ಇದೆ. ಡ್ಯಾನಿಯೆಲ್‌ * ಅನ್ನೋ ಸಹೋದರನ ಉದಾಹರಣೆ ನೋಡಿ. ಅವ್ನು ವಿಡಿಯೋ ಗೇಮ್ಸ್‌ನ ತುಂಬ ಇಷ್ಟಪಡ್ತಿದ್ನು. ಅವ್ನು ಹೀಗೆ ಹೇಳ್ತಾನೆ: “ನಾನು ಸುಮಾರು 10 ವರ್ಷದವನಾಗಿದ್ದಾಗ ವಿಡಿಯೋ ಗೇಮ್ಸ್‌ ಆಡೋಕೆ ಶುರು ಮಾಡ್ದೆ. ಶುರುನಲ್ಲಿ ನಾನು ಒಳ್ಳೇ ಗೇಮ್‌ಗಳನ್ನೇ ಆಡ್ತಾ ಇದ್ದೆ. ಆದ್ರೆ ನಿಧಾನವಾಗಿ ಹಿಂಸೆ ಇರೋ ಮತ್ತು ದೆವ್ವಗಳಿಗೆ ಸಂಬಂಧಿಸಿದ ಗೇಮ್‌ಗಳನ್ನ ಆಡೋಕೆ ಶುರು ಮಾಡ್ದೆ.” ಹೀಗೆ ಹೋಗ್ತಾ ಹೋಗ್ತಾ ಅವ್ನು ದಿನಕ್ಕೆ 15 ತಾಸು ಗೇಮ್‌ ಆಡೋದ್ರಲ್ಲಿ ಕಳೆಯೋಕೆ ಶುರು ಮಾಡಿದ್ನು. “ನಾನು ಆಡ್ತಿರೋ ಗೇಮ್‌ಗಳಿಂದ ಮತ್ತು ಅದಕ್ಕೋಸ್ಕರ ಅಷ್ಟೊಂದು ಸಮ್ಯ ಕಳಿತಿರೋದಿಂದ ಯೆಹೋವನಿಂದ ದೂರ ಹೋಗ್ತಿದ್ದೀನಿ ಅನ್ನೋದು ನನಗೆ ಗೊತ್ತಿತ್ತು. ಆದ್ರೂ ನನ್ನ ಹೃದಯ ಎಷ್ಟು ಗಟ್ಟಿಯಾಗಿ ಬಿಟ್ಟಿತ್ತಂದ್ರೆ ಬೈಬಲ್‌ ತತ್ವಗಳು ನನಗೆ ಅನ್ವಯ ಆಗಲ್ಲ ಅಂತ ಅನಿಸ್ತಿತ್ತು” ಅಂತ ಡ್ಯಾನಿಯೆಲ್‌ ಹೇಳ್ತಾನೆ. ಮನೋರಂಜನೆ ನಮ್ಗೇ ಗೊತ್ತಿಲ್ಲದೆ ನಮ್ಮ ಮೇಲೆ ಎಷ್ಟು ಪ್ರಭಾವ ಬೀರುತ್ತಂದ್ರೆ ನಿಧಾನವಾಗಿ ನಾವು ಸತ್ಯದಿಂದ ದೂರ ಹೋಗಿ ಬಿಡಬಹುದು. ಇದ್ರಿಂದ ಯೆಹೋವನು ನಮ್ಗೆ ಕೊಟ್ಟಿರೋ ಅಮೂಲ್ಯ ನಿಧಿಯನ್ನ ನಾವು ಕಳಕೊಳ್ಳಬಹುದು.

ಸತ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು?

9. ಒಂದನೇ ತಿಮೊಥೆಯ 1:18, 19 ರ ಪ್ರಕಾರ ಪೌಲನು ತಿಮೊಥೆಯನಿಗೆ ಏನಂತ ಉತ್ತೇಜಿಸಿದನು?

9 1 ತಿಮೊಥೆಯ 1:18, 19 ಓದಿ. ಪೌಲನು ತಿಮೊಥೆಯನನ್ನ ಒಬ್ಬ ಸೈನಿಕನಿಗೆ ಹೋಲಿಸಿದನು. (2 ತಿಮೊ. 2:3) ಉತ್ತಮವಾದ ‘ಹೋರಾಟವನ್ನ ಮಾಡ್ತಾ ಮುಂದುವರಿ’ ಅಂತ ಉತ್ತೇಜಿಸಿದನು. ಈ ಹೋರಾಟ ಮನುಷ್ಯರ ಮಧ್ಯೆ ನಡಿತಿದ್ದ ಯುದ್ಧ ಆಗಿರಲಿಲ್ಲ. ಆದ್ರೂ ಕ್ರೈಸ್ತರಿಗೂ ಯುದ್ಧದಲ್ಲಿ ಭಾಗವಹಿಸ್ತಿದ್ದ ಸೈನಿಕರಿಗೂ ಯಾವ ಹೋಲಿಕೆಗಳಿವೆ? ಕ್ರಿಸ್ತನ ಸೈನಿಕರಾಗಿ ನಾವು ಯಾವ ಗುಣಗಳನ್ನ ಬೆಳೆಸಿಕೊಳ್ಳಬೇಕು? ಪೌಲನು ಉಪಯೋಗಿಸಿದ ಈ ಉದಾಹರಣೆಯಿಂದ ನಾವು ಯಾವ 5 ಪಾಠಗಳನ್ನ ಕಲಿಬಹುದು ಅಂತ ನೋಡೋಣ. ಈ ಪಾಠಗಳು ನಮ್ಗೆ ಸತ್ಯವನ್ನ ಕಾಪಾಡಿಕೊಳ್ಳೋಕೆ ಸಹಾಯ ಮಾಡ್ತವೆ.

10. (ಎ) ದೇವಭಕ್ತಿ ಅಂದ್ರೇನು? (ಬಿ) ನಮಗ್ಯಾಕೆ ಈ ಗುಣ ಇರಬೇಕು?

10 ದೇವಭಕ್ತಿಯನ್ನ ಬೆಳೆಸಿಕೊಳ್ಳಿ. ಒಬ್ಬ ಒಳ್ಳೇ ಸೈನಿಕನು ನಿಷ್ಠಾವಂತನಾಗಿರುತ್ತಾನೆ. ಅವ್ನು ತನ್ನ ಪ್ರೀತಿಪಾತ್ರರನ್ನ ಮತ್ತು ತನಗೆ ಅಮೂಲ್ಯವಾಗಿರೋ ವಿಷ್ಯಗಳನ್ನ ಕಾಪಾಡಿಕೊಳ್ಳೋಕೆ ತುಂಬ ಹೋರಾಡ್ತಾನೆ. ಪೌಲನು ತಿಮೊಥೆಯನಿಗೆ ದೇವಭಕ್ತಿಯನ್ನ ಬೆಳೆಸಿಕೊಳ್ಳೋಕೆ ಅಂದ್ರೆ ಭಯಭಕ್ತಿಯಿಂದ ನಡಕೊಳ್ತಾ ದೇವ್ರಿಗೆ ನಿಷ್ಠೆಯಿಂದ ಇರೋಕೆ ಉತ್ತೇಜಿಸಿದನು. (1 ತಿಮೊ. 4:7) ದೇವರ ಮೇಲೆ ನಮಗೆ ಪ್ರೀತಿ ಮತ್ತು ಭಕ್ತಿ ಹೆಚ್ಚಾದಂತೆ ಸತ್ಯವನ್ನ ಕಾಪಾಡಿಕೊಳ್ಳಬೇಕು ಅನ್ನೋ ಬಯಕೆನೂ ಹೆಚ್ಚಾಗುತ್ತೆ.—1 ತಿಮೊ. 4:8-10; 6:6.

ಇಡೀ ದಿನ ಕೆಲ್ಸ ಮಾಡಿ ಸುಸ್ತಾದಾಗ ಕೂಟಕ್ಕೆ ಹೋಗಬೇಕಂದ್ರೆ ಕಷ್ಟ ಆಗಬಹುದು. ಹಾಗಿದ್ರೂ ನಾವು ಹೋಗೋದ್ರಿಂದ ನಮಗೆ ಆಶೀರ್ವಾದ ಸಿಗುತ್ತೆ! (ಪ್ಯಾರ 11 ನೋಡಿ)

11. ನಮಗೆ ಸ್ವಶಿಸ್ತು ಯಾಕೆ ಬೇಕು?

11 ಸ್ವಶಿಸ್ತನ್ನ ಬೆಳೆಸಿಕೊಳ್ಳಿ. ಒಬ್ಬ ಸೈನಿಕನು ಎಲ್ಲಾ ಸಮ್ಯದಲ್ಲೂ ಯುದ್ಧಕ್ಕೆ ತಯಾರಾಗಿ ಇರಬೇಕಂದ್ರೆ ಅವ್ನಿಗೆ ಸ್ವಶಿಸ್ತು ಇರಬೇಕು. ತಿಮೊಥೆಯನು ಸೈತಾನನ ಪ್ರಭಾವದ ವಿರುದ್ಧ ಹೋರಾಡಿದನು. ಕಾರಣ, ಅವನು ಕೆಟ್ಟ ಇಚ್ಛೆಗಳನ್ನ ಬಿಟ್ಟು ಓಡಿಹೋಗುವಂತೆ, ದೇವ್ರಲ್ಲಿರೋ ಗುಣಗಳನ್ನ ಬೆಳೆಸಿಕೊಳ್ಳುವಂತೆ ಮತ್ತು ಜೊತೆ ವಿಶ್ವಾಸಿಗಳೊಂದಿಗೆ ಸಹವಾಸ ಮಾಡುವಂತೆ ಪೌಲನು ಕೊಟ್ಟ ಸಲಹೆಗಳನ್ನ ಪಾಲಿಸಿದನು. (2 ತಿಮೊ. 2:22) ಇದನ್ನ ಮಾಡೋಕೆ ಅವ್ನಿಗೆ ಸ್ವಶಿಸ್ತು ಬೇಕಿತ್ತು. ನಾವು ಸಹ ಇವತ್ತು ನಮ್ಮ ಶಾರೀರಿಕ ಆಸೆಗಳ ವಿರುದ್ಧ ಹೋರಾಡಿ ಜಯ ಪಡೀಬೇಕಂದ್ರೆ ನಮ್ಗೆ ಸ್ವಶಿಸ್ತು ಇರಬೇಕು. (ರೋಮ. 7:21-25) ಅಷ್ಟೇ ಅಲ್ಲ, ಹಳೇ ವ್ಯಕ್ತಿತ್ವವನ್ನ ತೆಗೆದುಹಾಕಿ ಹೊಸ ವ್ಯಕ್ತಿತ್ವವನ್ನ ಧರಿಸಿಕೊಳ್ಳೋಕೆ ಪ್ರಯತ್ನಿಸ್ತಾ ಇರಬೇಕಂದ್ರೆ ಸ್ವಶಿಸ್ತು ಬೇಕು. (ಎಫೆ. 4:22, 24) ನಾವು ಇಡೀ ದಿನ ಕೆಲ್ಸ ಮಾಡಿ ಸುಸ್ತಾದಾಗ ಕೂಟಗಳಿಗೆ ಹೋಗೋಕೆ ಕಷ್ಟ ಆಗಬಹುದು. ಹಾಗಿದ್ರೂ ನಾವು ಕೂಟಗಳಿಗೆ ತಪ್ಪದೇ ಹಾಜರಾಗೋಕೆ ಸ್ವಶಿಸ್ತು ಬೇಕು.—ಇಬ್ರಿ. 10:24, 25.

12. ಬೈಬಲನ್ನ ಉಪಯೋಗಿಸೋದ್ರಲ್ಲಿ ನಿಪುಣರಾಗಲು ನಾವೇನು ಮಾಡಬಹುದು?

12 ಸೈನಿಕನು ಯುದ್ಧದ ಆಯುಧಗಳನ್ನ ಉಪಯೋಗಿಸೋದು ಹೇಗಂತ ತಿಳುಕೊಂಡಿರಬೇಕು. ಅವನದ್ರಲ್ಲಿ ನಿಪುಣನಾಗಬೇಕಂದ್ರೆ ತಪ್ಪದೇ ಪ್ರತಿ ದಿನ ಪ್ರ್ಯಾಕ್ಟೀಸ್‌ ಮಾಡಬೇಕು. ಅದೇ ರೀತಿ ನಾವು ಸಹ ದೇವ್ರ ವಾಕ್ಯವನ್ನ ಉಪಯೋಗಿಸೋದ್ರಲ್ಲಿ ನಿಪುಣರಾಗಬೇಕು. (2 ತಿಮೊ. 2:15) ಇದನ್ನ ಉಪಯೋಗಿಸೋದು ಹೇಗೆ ಅಂತ ನಾವು ಸ್ವಲ್ಪ ಮಟ್ಟಿಗೆ ಕೂಟಗಳಲ್ಲಿ ಕಲಿಬಹುದು. ಆದ್ರೆ ಬೈಬಲ್‌ ಸತ್ಯ ನಿಜವಾಗಿಯೂ ಅಮೂಲ್ಯವಾಗಿದೆ ಅನ್ನೋದನ್ನ ಬೇರೆಯವ್ರಿಗೆ ಮನವರಿಕೆ ಮಾಡ್ಬೇಕಂದ್ರೆ ನಾವು ಪ್ರತಿದಿನ ತಪ್ಪದೇ ಬೈಬಲನ್ನು ಅಧ್ಯಯನ ಮಾಡ್ಬೇಕು. ಬೈಬಲನ್ನ ಉಪಯೋಗಿಸಿ ನಮ್ಮ ನಂಬಿಕೆಯನ್ನ ಬಲಪಡಿಸಬೇಕು. ಹೀಗೆ ಮಾಡಬೇಕಂದ್ರೆ ಅದನ್ನ ಓದಿದ್ರೆ ಮಾತ್ರ ಸಾಕಾಗಲ್ಲ, ನಾವು ಏನನ್ನ ಓದಿದ್ದೇವೋ ಅದ್ರ ಬಗ್ಗೆ ಧ್ಯಾನಿಸಬೇಕು. ಜೊತೆಗೆ, ಅದನ್ನ ಚೆನ್ನಾಗಿ ಅರ್ಥಮಾಡಿಕೊಳ್ಳೋಕೆ ಮತ್ತು ಬೇರೆಯವ್ರಿಗೆ ಅದನ್ನು ವಿವರಿಸೋದು ಹೇಗಂತ ತಿಳುಕೊಳ್ಳೋಕೆ ನಮ್ಮ ಸಾಹಿತ್ಯಗಳಲ್ಲಿ ಸಂಶೋಧನೆ ಮಾಡಬೇಕು. (1 ತಿಮೊ. 4:13-15) ಹೀಗೆ ಮಾಡೋದಾದ್ರೆ ನಾವು ದೇವ್ರ ವಾಕ್ಯವನ್ನ ಬೇರೆಯವ್ರಿಗೆ ಕಲಿಸೋಕಾಗುತ್ತೆ. ಬೇರೆಯವ್ರಿಗೆ ಕಲಿಸೋದಂದ್ರೆ ಅವ್ರಿಗೆ ಓದಿ ಹೇಳಿದ್ರೆ ಸಾಕಾಗಲ್ಲ. ವಚನಗಳನ್ನ ಅರ್ಥಮಾಡಿಕೊಳ್ಳೋಕೆ ಮತ್ತು ಅದನ್ನ ಅವ್ರ ಜೀವನದಲ್ಲಿ ಅನ್ವಯಿಸಿಕೊಳ್ಳೋಕೆ ನಾವು ಸಹಾಯ ಮಾಡ್ಬೇಕು. ಹೀಗೆ ತಪ್ಪದೇ ಪ್ರತಿದಿನ ಬೈಬಲನ್ನ ಅಧ್ಯಯನ ಮಾಡೋ ಮೂಲಕ ನಾವು ದೇವ್ರ ವಾಕ್ಯವನ್ನ ಬೇರೆಯವ್ರಿಗೆ ಕಲಿಸೋದ್ರಲ್ಲಿ ನಿಪುಣರಾಗಬಹುದು.—2 ತಿಮೊ. 3:16, 17.

13. ಇಬ್ರಿಯರಿಗೆ 5:14 ರ ಪ್ರಕಾರ ನಾವು ಸರಿ ಮತ್ತು ತಪ್ಪಿನ ಭೇದವನ್ನ ಯಾಕೆ ತಿಳ್ಕೊಬೇಕು?

13 ಸರಿ ಮತ್ತು ತಪ್ಪಿನ ಭೇದವನ್ನ ತಿಳ್ಕೊಳ್ಳಿ. ಒಬ್ಬ ಸೈನಿಕನಿಗೆ ಮುಂದೆ ಬರಲಿರೋ ಅಪಾಯವನ್ನ ಮೊದಲೇ ಗುರುತಿಸೋಕೆ ಗೊತ್ತಿರಬೇಕು ಮತ್ತು ಅದ್ರಿಂದ ತಪ್ಪಿಸಿಕೊಳ್ಳೋಕೂ ತಿಳಿದಿರಬೇಕು. ಅದೇ ರೀತಿ ನಾವು ಸಹ ಯಾವ ಸನ್ನಿವೇಶಗಳು ನಮ್ಗೆ ಹಾನಿಮಾಡ್ತವೆ ಅಂತ ತಿಳುಕೊಂಡು ಅವುಗಳಿಂದ ದೂರ ಇರಬೇಕು. (ಜ್ಞಾನೋ. 22:3; ಇಬ್ರಿಯ 5:14 ಓದಿ.) ಉದಾಹರಣೆಗೆ, ನಾವು ಮನೋರಂಜನೆಯನ್ನ ವಿವೇಕದಿಂದ ಆರಿಸಿಕೊಳ್ಳಬೇಕು. ಟಿವಿ ಕಾರ್ಯಕ್ರಮಗಳಲ್ಲಿ, ಚಲನಚಿತ್ರಗಳಲ್ಲಿ ಹೆಚ್ಚಾಗಿ ಅನೈತಿಕ ನಡತೆಯನ್ನೇ ತೋರಿಸಲಾಗುತ್ತೆ. ಇಂಥ ನಡತೆ ಯೆಹೋವನಿಗೆ ಕೋಪ ಬರಿಸುತ್ತೆ ಮತ್ತು ಖಂಡಿತ ನಮಗೂ ಹಾನಿ ಮಾಡುತ್ತೆ. ಹಾಗಾಗಿ ಯೆಹೋವನ ಮೇಲೆ ನಮಗಿರೋ ಪ್ರೀತಿಯನ್ನ ನಿಧಾನವಾಗಿ ಕಡಿಮೆ ಮಾಡೋ ಇಂಥ ಮನೋರಂಜನೆಗಳಿಂದ ನಾವು ದೂರ ಇರಬೇಕು.—ಎಫೆ. 5:5, 6.

14. ಸರಿ ಮತ್ತು ತಪ್ಪಿನ ಭೇದವನ್ನ ತಿಳುಕೊಂಡಿದ್ರಿಂದ ಡ್ಯಾನಿಯೆಲ್‌ಗೆ ಹೇಗೆ ಸಹಾಯವಾಯ್ತು?

14 ಹಿಂಸೆ ಇರುವ ಮತ್ತು ದೆವ್ವಗಳಿಗೆ ಸಂಬಂಧಿಸಿದ ವಿಡಿಯೋ ಗೇಮ್‌ಗಳನ್ನ ಆಡೋದು ಸರಿಯಲ್ಲ ಅನ್ನೋದನ್ನ ಈ ಹಿಂದೆ ತಿಳಿಸಲಾದ ಡ್ಯಾನಿಯೆಲ್‌ ಅರ್ಥಮಾಡಿಕೊಂಡನು. ಹಾಗಾಗಿ ಅವ್ನು ಇದ್ರಿಂದ ಹೊರಗೆ ಬರೋಕೆ ಸಹಾಯ ಮಾಡೋ ಮಾಹಿತಿಗಾಗಿ ವಾಚ್‌ಟವರ್‌ ಲೈಬ್ರರಿಯಲ್ಲಿ ಹುಡುಕಿದ್ನು. ಇದು ಅವ್ನ ಮೇಲೆ ಯಾವ ಪರಿಣಾಮ ಬೀರಿತು? ಅವ್ನು ಕೆಟ್ಟ ಗೇಮ್‌ಗಳನ್ನ ಆಡೋದನ್ನ ನಿಲ್ಲಿಸಿದ್ನು. ಆ ಗೇಮ್‌ಗಳನ್ನ ಡಿಲೀಟ್‌ ಮಾಡಿದ್ನು, ಅವುಗಳನ್ನು ಆಡ್ತಿದ್ದ ಬೇರೆಯವ್ರ ಜೊತೆನೂ ಸಹವಾಸ ಮಾಡೋದನ್ನ ಸಂಪೂರ್ಣವಾಗಿ ನಿಲ್ಲಿಸಿಬಿಟ್ಟನು. ಡ್ಯಾನಿಯೆಲ್‌ ಹೀಗೆ ಹೇಳ್ತಾನೆ: “ಮನೆಯಲ್ಲಿ ಕೂತು ವಿಡಿಯೋ ಗೇಮ್‌ ಆಡೋ ಬದಲಿಗೆ ನಾನು ಹೊರಗೆ ಹೋಗಿ ಏನಾದ್ರೂ ಕೆಲ್ಸ ಮಾಡೋಕೆ ಶುರು ಮಾಡಿದೆ ಮತ್ತು ನಮ್ಮ ಸಭೆಯಲ್ಲಿರೋ ಸ್ನೇಹಿತರ ಜೊತೆ ಬೆರೆಯೋಕೆ ಶುರು ಮಾಡಿದೆ.” ಈಗ ಡ್ಯಾನಿಯೆಲ್‌ ಪಯನೀಯರಾಗಿ ಮತ್ತು ಹಿರಿಯನಾಗಿ ಸೇವೆ ಮಾಡ್ತಿದ್ದಾನೆ.

15. ಸುಳ್ಳು ಕಥೆಗಳು ಯಾಕೆ ಅಪಾಯಕಾರಿ ಆಗಿವೆ?

15 ತಿಮೊಥೆಯನ ತರಾನೇ ನಾವು ಸಹ ಧರ್ಮಭ್ರಷ್ಟರು ಹಬ್ಬಿಸೋ ಸುಳ್ಳು ಮಾಹಿತಿಯಿಂದ ಎಷ್ಟೊಂದು ಅಪಾಯ ಇದೆ ಅನ್ನೋದನ್ನ ತಿಳುಕೊಳ್ಳಬೇಕು. (1 ತಿಮೊ. 4:1, 7; 2 ತಿಮೊ. 2:16) ಉದಾಹರಣೆಗೆ, ಅವ್ರು ನಮ್ಮ ಸಹೋದರ ಸಹೋದರಿಯರ ಬಗ್ಗೆ ಸುಳ್ಳು ಕಥೆಯನ್ನ ಹಬ್ಬಿಸೋಕೆ ಅಥ್ವಾ ಯೆಹೋವನ ಸಂಘಟನೆ ಬಗ್ಗೆ ಸಂಶಯ ಹುಟ್ಟಿಸೋಕೆ ಪ್ರಯತ್ನಿಸಬಹುದು. ಇಂಥ ಸುಳ್ಳು ಮಾಹಿತಿಯು ನಮ್ಮ ನಂಬಿಕೆಯನ್ನ ಕಡಿಮೆ ಮಾಡಬಹುದು. ಯಾಕಂದ್ರೆ‘ಮನಸ್ಸಿನಲ್ಲಿ ಭ್ರಷ್ಟಗೊಂಡಿರುವ ಮತ್ತು ಸತ್ಯದಿಂದ ದೂರ ಸರಿದಿರುವ ಜನರೇ’ ಇಂಥ ಕಥೆಗಳನ್ನ ಹಬ್ಬಿಸ್ತಿದ್ದಾರೆ. ಅವರ ಗುರಿ ‘ಪ್ರಶ್ನೆಗಳನ್ನ ಹಾಕಿ ವಾಗ್ವಾದಗಳನ್ನ’ ಮಾಡೋದೇ ಆಗಿದೆ. (1 ತಿಮೊ. 6:4, 5) ಅವ್ರು ಹೇಳೋ ಸುಳ್ಳಾರೋಪಗಳನ್ನ ನಾವು ನಂಬಬೇಕು ಮತ್ತು ನಮ್ಮ ಸಹೋದರರ ಬಗ್ಗೆ ಸಂಶಯ ಪಡಬೇಕು ಅಂತ ಅವ್ರು ಬಯಸ್ತಾರೆ. ಹಾಗಾಗಿ, ನಾವು ಇಂಥ ಸುದ್ದಿಗಳ ಬಲೆಗೆ ಬೀಳಬಾರದು.

16. ನಮ್ಮ ಗಮನವನ್ನ ಬೇರೆ ಕಡೆಗೆ ತಿರುಗಿಸೋ ಯಾವ ವಿಷ್ಯಗಳಿಂದ ನಾವು ದೂರ ಇರಬೇಕು?

16 ಗಮನ ಬೇರೆಡೆಗೆ ತಿರುಗದಂತೆ ನೋಡ್ಕೊಳ್ಳಿ. ಕ್ರಿಸ್ತ ಯೇಸುವಿನ ‘ಒಳ್ಳೇ ಸೈನಿಕನಾಗಿ’ ತಿಮೊಥೆಯನು ಸೇವೆಗೆ ಪೂರ್ತಿ ಗಮನ ಕೊಡಬೇಕಿತ್ತು. ಜೀವನದ ಯಾವುದೇ ಗುರಿ ಅಥವಾ ಲೋಕದ ವಿಷ್ಯಗಳು ಅವ್ನ ಗಮನವನ್ನ ಬೇರೆ ಕಡೆಗೆ ತಿರುಗಿಸದಂತೆ ನೋಡ್ಕೊಬೇಕಿತ್ತು. (2 ತಿಮೊ. 2:3, 4) ತಿಮೊಥೆಯನಂತೆ ನಾವು ಸಹ ಲೋಕದ ಯಾವುದೇ ಆಸೆಗಳು ನಮ್ಮ ಗಮನವನ್ನ ಬೇರೆ ಕಡೆಗೆ ತಿರುಗಿಸದಂತೆ ನೋಡ್ಕೊಬೇಕು. ‘ಐಶ್ವರ್ಯದ ಮೋಸಕರ ಪ್ರಭಾವವು’ ಯೆಹೋವನ ಮೇಲೆ ನಮಗಿರೋ ಪ್ರೀತಿಯನ್ನ, ದೇವ್ರ ವಾಕ್ಯದ ಕಡೆಗಿರೋ ಗಣ್ಯತೆಯನ್ನ ಮತ್ತು ದೇವ್ರ ವಾಕ್ಯವನ್ನ ಬೇರೆಯವ್ರಿಗೆ ತಿಳಿಸಬೇಕನ್ನೋ ನಮ್ಮ ಆಸೆಯನ್ನ ನಾಶಮಾಡಿಬಿಡೋ ಸಾಧ್ಯತೆ ಇದೆ. (ಮತ್ತಾ. 13:22) ಹಾಗಾಗಿ ನಾವು ನಮ್ಮ ಜೀವನವನ್ನ ಸರಳವಾಗಿ ಇಡಬೇಕು ಮತ್ತು ನಮ್ಮ ಸಮ್ಯ, ಶಕ್ತಿಯನ್ನ ದೇವರ ರಾಜ್ಯದ ಕೆಲ್ಸಗಳಿಗಾಗಿ ಉಪಯೋಗಿಸಬೇಕು.—ಮತ್ತಾ. 6:22-25, 33.

17-18. ಯೆಹೋವನ ಜೊತೆ ನಮ್ಗಿರೋ ಸ್ನೇಹವನ್ನ ಕಾಪಾಡಿಕೊಳ್ಳೋಕೆ ನಾವೇನು ಮಾಡಬಹುದು?

17 ತಕ್ಷಣ ಕ್ರಿಯೆಗೈಯಲು ತಯಾರಾಗಿರಿ. ಒಬ್ಬ ಸೈನಿಕ ತನ್ನನ್ನ ರಕ್ಷಿಸಿಕೊಳ್ಳೋಕೆ ಏನು ಮಾಡಬೇಕು ಅನ್ನೋದ್ರ ಬಗ್ಗೆ ಮೊದಲೇ ಯೋಚನೆ ಮಾಡಿರಬೇಕು. ಯೆಹೋವನು ನಮ್ಗೆ ಕೊಟ್ಟಿರೋ ವಿಷ್ಯಗಳನ್ನ ಕಾಪಾಡಿಕೊಳ್ಳಬೇಕಂದ್ರೆ ನಾವು ಅಪಾಯ ನೋಡಿದ ತಕ್ಷಣ ಕ್ರಿಯೆಗೈಯಬೇಕು. ಇದನ್ನ ಮಾಡೋಕೆ ನಮ್ಗೆ ಯಾವುದು ಸಹಾಯ ಮಾಡುತ್ತೆ? ಅಪಾಯ ಬಂದಾಗ ನಾವು ಏನು ಮಾಡ್ಬೇಕು ಅನ್ನೋದ್ರ ಬಗ್ಗೆ ನಾವು ಮೊದಲೇ ಯೋಜನೆ ಮಾಡಿರಬೇಕು.

18 ಉದಾಹರಣೆಗೆ, ಯಾವ್ದೇ ಒಂದು ಸಭಾಂಗಣದಲ್ಲಿ ಕಾರ್ಯಕ್ರಮ ಶುರು ಆಗೋದಕ್ಕೂ ಮುಂಚೆ ಅಲ್ಲಿ ಸೇರಿ ಬಂದವ್ರಿಗೆ ಹೊರಗೆ ಹೋಗಲು ಯಾವ ಬಾಗಿಲು ಅವ್ರಿಗೆ ಹತ್ತಿರದಲ್ಲಿದೆ ಅನ್ನೋದನ್ನ ಗಮನಿಸೋಕೆ ಹೇಳ್ತಾರೆ. ಯಾಕಂದ್ರೆ ಯಾವುದೇ ಅಪಾಯದ ಸನ್ನಿವೇಶ ಎದುರಾದ್ರೆ ಅವ್ರು ತಕ್ಷಣ ಅಲ್ಲಿಂದ ಹೋಗೋಕೆ ಸಹಾಯ ಆಗುತ್ತೆ. ಅದೇ ರೀತಿ, ನಾವು ಸಹ ಇಂಟರ್‌ನೆಟ್‌ ಉಪಯೋಗಿಸುವಾಗ, ಟಿವಿ ಕಾರ್ಯಕ್ರಮ ಅಥವಾ ಚಲನಚಿತ್ರಗಳನ್ನ ನೋಡುವಾಗ ಅನೈತಿಕ ಅಥವಾ ಹಿಂಸೆ ಇರೋ ದೃಶ್ಯ ಬರೋದಾದ್ರೆ ಇಲ್ಲವೆ ಧರ್ಮಭ್ರಷ್ಟರ ಮಾಹಿತಿ ಬರೋದಾದ್ರೆ ಏನು ಮಾಡ್ಬೇಕು ಅಂತ ಮೊದಲೇ ತಯಾರಿ ಮಾಡಿರಬೇಕು. ಇದಕ್ಕಾಗಿ ನಾವು ಅಂಥ ಸನ್ನಿವೇಶದಲ್ಲಿ ಏನು ಮಾಡ್ತೇವೆ ಅನ್ನೋದನ್ನ ಪ್ರ್ಯಾಕ್ಟೀಸ್‌ ಮಾಡಬೇಕು. ಮುಂದೆ ಎದುರಾಗಬಹುದಾದ ವಿಷ್ಯಗಳಿಗೆ ನಾವು ಮೊದಲೇ ತಯಾರಾಗಿದ್ರೆ ಯೆಹೋವನ ಜೊತೆ ನಮ್ಗಿರೋ ಸ್ನೇಹನ ಕಾಪಾಡಿಕೊಳ್ತೇವೆ ಮತ್ತು ಆತನ ದೃಷ್ಟಿಯಲ್ಲಿ ಪರಿಶುದ್ಧರಾಗಿ ಇರ್ತೇವೆ.—ಕೀರ್ತ. 101:3; 1 ತಿಮೊ. 4:12.

19. ಯೆಹೋವನು ನಮಗೆ ಕೊಟ್ಟಿರೋ ಅಮೂಲ್ಯ ವಿಷ್ಯಗಳನ್ನ ಕಾಪಾಡಿಕೊಳ್ಳೋದಾದ್ರೆ ನಮ್ಗೆ ಯಾವ ಆಶೀರ್ವಾದ ಸಿಗುತ್ತೆ?

19 ಯೆಹೋವನು ನಮ್ಗೆ ಕೊಟ್ಟಿರೋ ಅಮೂಲ್ಯ ವಿಷಯಗಳನ್ನ ನಾವು ಕಾಪಾಡಿಕೊಳ್ಳಬೇಕು. ಬೈಬಲ್‌ ಸತ್ಯಗಳು ಮತ್ತು ಆ ಸತ್ಯಗಳನ್ನ ಬೇರೆಯವ್ರಿಗೆ ತಿಳಿಸೋ ಅವಕಾಶನೇ ಆ ಅಮೂಲ್ಯ ವಿಷ್ಯಗಳಾಗಿವೆ. ಅವುಗಳನ್ನ ಕಾಪಾಡಿಕೊಳ್ಳೋದಾದ್ರೆ ನಮ್ಗೆ ಶುದ್ಧ ಮನಸ್ಸಾಕ್ಷಿ ಇರುತ್ತೆ, ನಮ್ಮ ಜೀವನಕ್ಕೆ ಅರ್ಥ ಇರುತ್ತೆ ಮತ್ತು ಬೇರೆಯವ್ರಿಗೆ ಯೆಹೋವನನ್ನ ತಿಳುಕೊಳ್ಳೋಕೆ ಸಹಾಯ ಮಾಡೋದ್ರಿಂದ ಸಿಗೋ ಸಂತೋಷನೂ ಇರುತ್ತೆ. ಯೆಹೋವನು ನಮಗೆ ಕೊಟ್ಟಿರೋ ಈ ಅಮೂಲ್ಯ ವಿಷ್ಯಗಳನ್ನ ನಾವು ಆತನ ಸಹಾಯದಿಂದ ಖಂಡಿತ ಕಾಪಾಡಿಕೊಳ್ಳಬಹುದು.—1 ತಿಮೊ. 6:12, 19.

ಗೀತೆ 61 ನಾನು ಯಾವ ರೀತಿಯ ವ್ಯಕ್ತಿ ಆಗಿರಬೇಕು?

^ ಪ್ಯಾರ. 5 ಸತ್ಯವನ್ನ ತಿಳ್ಕೊಳ್ಳುವ ಮತ್ತು ಬೇರೆಯವ್ರಿಗೆ ಕಲಿಸುವ ದೊಡ್ಡ ಅವಕಾಶ ನಮಗಿದೆ. ಈ ಅವಕಾಶವನ್ನ ಕಾಪಾಡಿಕೊಳ್ಳಲು ಅಥ್ವಾ ಕಳ್ಕೊಳ್ಳದೇ ಇರೋಕೆ ಈ ಲೇಖನ ನಮ್ಗೆ ಸಹಾಯ ಮಾಡುತ್ತೆ.

^ ಪ್ಯಾರ. 8 ಹೆಸರನ್ನ ಬದಲಾಯಿಸಲಾಗಿದೆ.