ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಪ್ರಸಂಗಿ 5:8 ಬರೀ ಮಾನವ ಅಧಿಕಾರಿಗಳ ಬಗ್ಗೆ ತಿಳಿಸುತ್ತಾ ಅಥವಾ ಯೆಹೋವನ ಬಗ್ಗೆನೂ ತಿಳಿಸುತ್ತಾ?

ಆ ವಚನದಲ್ಲಿ ಹೀಗಿದೆ: “ಸಂಸ್ಥಾನದಲ್ಲಿ ಬಡವರ ಹಿಂಸೆಯನ್ನೂ ನೀತಿನ್ಯಾಯಗಳ ನಾಶನವನ್ನೂ ನೀನು ನೋಡಿದರೆ ಆಶ್ಚರ್ಯಪಡಬೇಡ; ಉನ್ನತೋನ್ನತನು ಲಕ್ಷ್ಯಕ್ಕೆ ತರುವನು; ಆ ಹಿಂಸಕರಿಗಿಂತ ಮಹೋನ್ನತನು ಇದ್ದಾನಲ್ಲಾ.”—ಪ್ರಸಂ. 5:8.

ಈ ವಚನ ಸರಕಾರಿ ಅಧಿಕಾರಿಗಳ ಬಗ್ಗೆ ತಿಳಿಸುತ್ತೆ ಅಂತ ನಮಗೆ ಅನಿಸುತ್ತೆ. ಆದ್ರೆ ಇದರ ಬಗ್ಗೆ ಚೆನ್ನಾಗಿ ಯೋಚಿಸಿದ್ರೆ ಯೆಹೋವನ ಬಗ್ಗೆನೂ ಒಂದು ಸತ್ಯ ಇದ್ರಲ್ಲಿ ಇದೆ ಅಂತ ಗೊತ್ತಾಗುತ್ತೆ. ಆ ಸತ್ಯ ನಮ್ಗೆ ಸಾಂತ್ವನ ಮತ್ತು ಭರವಸೆ ಕೊಡುತ್ತೆ.

ಪ್ರಸಂಗಿ 5:8 ರಲ್ಲಿ ಬಡವರ ಮೇಲೆ ದಬ್ಬಾಳಿಕೆ ಮಾಡೋ, ಅವ್ರಿಗೆ ಅನ್ಯಾಯ ಮಾಡೋ ಅಧಿಕಾರಿ ಬಗ್ಗೆ ಹೇಳಲಾಗಿದೆ. ಆ ಅಧಿಕಾರಿ ತನಗಿಂತ ಮೇಲಿನ ಸ್ಥಾನದಲ್ಲಿ ಇರುವವ್ರು ಅಥ್ವಾ ಸರಕಾರದಲ್ಲಿ ಹೆಚ್ಚು ಅಧಿಕಾರ ಇರುವವ್ರು ತನ್ನನ್ನ ಗಮನಿಸ್ತಾರೆ ಅನ್ನೋದನ್ನ ನೆನಪಲ್ಲಿಡಬೇಕು. ಅಷ್ಟೇ ಅಲ್ಲ, ಅವ್ರಿಗಿಂತಲೂ ಇನ್ನೂ ಮೇಲಿನ ಸ್ಥಾನದಲ್ಲಿ ಬೇರೆಯವ್ರು ಇರಬಹುದು. ಹಾಗಿದ್ರೂ ಮಾನವ ಸರಕಾರದಲ್ಲಿ ಇರೋ ಎಲ್ಲಾ ಅಧಿಕಾರಿಗಳು ಭ್ರಷ್ಟರಾಗಿರೋ ಸಾಧ್ಯತೆ ಇದೆ. ಇದ್ರಿಂದ ಸಾಮಾನ್ಯ ಜನ್ರಿಗೆ ಅನ್ಯಾಯ ಆಗಿ ಅವ್ರು ಕಷ್ಟ ಅನುಭವಿಸಬೇಕಾಗುತ್ತೆ.

ಇಂಥ ಪರಿಸ್ಥಿತಿಯಲ್ಲಿ ನಮ್ಮ ಕೈಯಲ್ಲಿ ಏನೂ ಮಾಡೋಕಾಗಲ್ಲ ಅಂತ ಅನಿಸಬಹುದು. ಆದ್ರೆ ಯೆಹೋವನು ಮಾನವ ಸರಕಾರದಲ್ಲಿರೋ ಉನ್ನತ ಅಧಿಕಾರಿಗಳನ್ನ ಸಹ ನೋಡ್ತಿದ್ದಾನೆ ಅನ್ನೋದು ನಮ್ಗೆ ಸಾಂತ್ವನ ಕೊಡುತ್ತೆ. ನಾವು ಯೆಹೋವನ ಮೊರೆ ಹೋಗಬಹುದು ಮತ್ತು ನಮ್ಮ ಭಾರವನ್ನೆಲ್ಲ ಆತನ ಮೇಲೆ ಹಾಕಬಹುದು. (ಕೀರ್ತ. 55:22; ಫಿಲಿ. 4:6, 7) “ಯೆಹೋವನು ಭೂಲೋಕದ ಎಲ್ಲಾ ಕಡೆಯಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥ ಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ” ಅಂತ ನಮಗೆ ಗೊತ್ತು.—2 ಪೂರ್ವ. 16:9.

ಹಾಗಾಗಿ, ಮಾನವ ಸರಕಾರದಲ್ಲಿರೋ ಯಾವುದೇ ಅಧಿಕಾರಿಗಳಿಗಿಂತ ಮೇಲಿನ ಸ್ಥಾನದಲ್ಲಿ ಇನ್ನೊಬ್ರು ಇರ್ತಾರೆ ಅನ್ನೋದನ್ನ ಪ್ರಸಂಗಿ 5:8 ನೆನಪಿಗೆ ತರುತ್ತೆ. ಮುಖ್ಯವಾಗಿ, ಎಲ್ರಿಗಿಂತ ಹೆಚ್ಚಿನ ಅಧಿಕಾರ ಮತ್ತು ಸ್ಥಾನ ಯೆಹೋವನಿಗಿದೆ ಅನ್ನೋದನ್ನ ನೆನಪಿಸುತ್ತೆ. ಆತನು ಈಗ ತನ್ನ ರಾಜ್ಯದ ರಾಜನಾಗಿರೋ ಯೇಸು ಕ್ರಿಸ್ತನ ಮೂಲಕ ಆಳ್ತಿದ್ದಾನೆ. ಎಲ್ಲವನ್ನ ನೋಡ್ತಿರೋ ಸರ್ವೋನ್ನತನು ಮತ್ತು ಆತನ ಮಗನು ಯಾವಾಗ್ಲೂ ನ್ಯಾಯವನ್ನೇ ನಡಿಸ್ತಾರೆ.