ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 39

ನಿಮ್ಮ ಆಪ್ತರು ಯೆಹೋವನನ್ನ ಬಿಟ್ಟುಹೋದಾಗ

ನಿಮ್ಮ ಆಪ್ತರು ಯೆಹೋವನನ್ನ ಬಿಟ್ಟುಹೋದಾಗ

“ಎಷ್ಟೋ ಸಲ . . . ಆತನನ್ನ ನೋಯಿಸಿದ್ರು!”—ಕೀರ್ತ. 78:40.

ಗೀತೆ 42 “ನೀವು ಬಲಹೀನರಿಗೆ ನೆರವು ನೀಡಬೇಕು”

ಕಿರುನೋಟ *

1. ಕುಟುಂಬದಲ್ಲಿ ಯಾರಿಗಾದ್ರು ಬಹಿಷ್ಕಾರ ಆದಾಗ ಹೇಗನಿಸುತ್ತೆ?

ಕುಟುಂಬದಲ್ಲಿ ಯಾರಿಗಾದ್ರು ಬಹಿಷ್ಕಾರ ಆದಾಗ ನಮ್ಮ ಎದೆನೇ ಒಡೆದುಹೋಗುತ್ತೆ. ಸಹೋದರಿ ಹಿಲ್ಡಗೂ ಹೀಗೇ ಆಯ್ತು. * “ನಮ್ಮ ಮದುವೆ ಆಗಿ 41 ವರ್ಷ ಆದಮೇಲೆ ನನ್ನ ಗಂಡ ತೀರಿಕೊಂಡ್ರು. ಆಗ ನನಗೆ ತುಂಬ ನೋವಾಯ್ತು. ನಮ್ಮ ಮಗ ಯೆಹೋವ ದೇವರನ್ನ ಬಿಟ್ಟು ಹೋದಾಗ ಅದಕ್ಕಿಂತ ತುಂಬ ಬೇಜಾರಾಯ್ತು. ಅವನು ಹೆಂಡ್ತಿ-ಮಕ್ಕಳನ್ನೂ ಬಿಟ್ಟುಹೋಗಿಬಿಟ್ಟ.”

ಬಹಿಷ್ಕಾರ ಆದ ವ್ಯಕ್ತಿಯ ಕುಟುಂಬದವರಿಗೆ ಆಗೋ ನೋವನ್ನು ಯೆಹೋವ ಅರ್ಥಮಾಡಿಕೊಳ್ತಾರೆ (ಪ್ಯಾರ 2-3 ನೋಡಿ) *

2-3. ಒಬ್ಬರಿಗೆ ಬಹಿಷ್ಕಾರ ಆದಾಗ ಯೆಹೋವನಿಗೆ ಹೇಗನಿಸುತ್ತೆ ಅಂತ ಕೀರ್ತನೆ 78:40, 41 ಹೇಳುತ್ತೆ?

2 ದೇವದೂತರು ಯೆಹೋವನನ್ನ ಬಿಟ್ಟುಹೋದಾಗ ಆತನಿಗೆ ತುಂಬ ನೋವಾಯ್ತು. (ಯೂದ 6) ಇಸ್ರಾಯೇಲ್ಯರು ಕೂಡ ಆಗಾಗ ದೇವರ ವಿರುದ್ಧ ತಿರುಗಿಬೀಳ್ತಿದ್ರು. ಇದ್ರಿಂದ ಆತನಿಗೆ ತುಂಬ ನೋವಾಗ್ತಿತ್ತು. (ಕೀರ್ತನೆ 78:40, 41 ಓದಿ.) ಇವತ್ತು ಯಾರಾದ್ರೂ ಯೆಹೋವ ದೇವರನ್ನ ಬಿಟ್ಟುಹೋದಾಗ ಆತನಿಗೆ ತುಂಬ ನೋವಾಗುತ್ತೆ. ಹಾಗಾಗಿ ನಿಮ್ಮ ನೋವನ್ನ ಚೆನ್ನಾಗಿ ಅರ್ಥಮಾಡಿಕೊಳ್ತಾರೆ. ದೇವರು ನಿಮಗೆ ಖಂಡಿತ ತಾಳಿಕೊಳ್ಳೋಕೆ ಬೇಕಾದ ಸಹಾಯ ಮಾಡ್ತಾರೆ, ಸಮಾಧಾನ ಮಾಡ್ತಾರೆ, ಧೈರ್ಯ ತುಂಬುತ್ತಾರೆ.

3 ಬಹಿಷ್ಕಾರ ಆದ ವ್ಯಕ್ತಿಯ ಕುಟುಂಬದವರು ಯಾವ ತರದ ಯೋಚನೆ ಮಾಡಬಾರದು? ಆ ನೋವನ್ನ ತಾಳಿಕೊಳ್ಳೋಕೆ ಯೆಹೋವ ದೇವರು ಕೊಡೋ ಸಹಾಯನ ಪಡಕೊಳ್ಳೋಕೆ ಅವರೇನು ಮಾಡಬೇಕು? ಆ ಕುಟುಂಬದವರಿಗೆ ಸಭೆಯವರು ಹೇಗೆ ಸಹಾಯ ಮಾಡಬಹುದು? ಈ ಎಲ್ಲಾ ಪ್ರಶ್ನೆಗಳಿಗೂ ಈ ಲೇಖನದಲ್ಲಿ ಉತ್ತರ ನೋಡೋಣ.

ನೀವು ಕಾರಣ ಅಲ್ಲ

4. ಮಕ್ಕಳು ಯೆಹೋವ ದೇವರನ್ನ ಬಿಟ್ಟುಹೋದಾಗ ಅಪ್ಪ-ಅಮ್ಮಾಗೆ ಹೇಗನಿಸುತ್ತೆ?

4 ಮಗ ಅಥವ ಮಗಳು ಬಹಿಷ್ಕಾರ ಆದಾಗ “ನಾವಿನ್ನೂ ಸರಿಯಾಗಿ ಬೆಳೆಸಬೇಕಿತ್ತು, ಆಗ ಅವರು ಯೆಹೋವ ದೇವರನ್ನ ಬಿಟ್ಟುಹೋಗ್ತಿರಲಿಲ್ಲ” ಅಂತ ಅಪ್ಪ-ಅಮ್ಮ ಬೇಜಾರು ಮಾಡಿಕೊಳ್ತಾರೆ. ಸಹೋದರ ಲೂಕ್‌ಗೆ ಅವರ ಮಗ ಬಹಿಷ್ಕಾರ ಆದಾಗ ಹೀಗೇ ಅನಿಸ್ತು. ಅವರು ಹೇಳಿದ್ದು, “ನನ್ನ ಮಗ ಸತ್ಯ ಬಿಟ್ಟು ಹೋಗೋಕೆ ನಾನೇ ಕಾರಣ ಅಂತ ಅನಿಸ್ತಿತ್ತು, ರಾತ್ರಿಯೆಲ್ಲಾ ಕೆಟ್ಟ-ಕೆಟ್ಟ ಕನಸು ಬೀಳ್ತಿತ್ತು. ನನಗೆ ಎಷ್ಟು ನೋವಾಯ್ತು ಅಂದ್ರೆ ರಾತ್ರಿಯೆಲ್ಲಾ ನಿದ್ದೆ ಮಾಡದೇ ಎದ್ದು ಕೂತು ಅಳ್ತಿದ್ದೆ.” ಸಹೋದರಿ ಎಲಿಜಬೇತ್‌ ಅವರ ಮಗನಿಗೆ ಬಹಿಷ್ಕಾರ ಆದಾಗ ಅವರಿಗಾದ ನೋವಿನ ಬಗ್ಗೆ ಹೀಗೆ ಹೇಳ್ತಾರೆ: “ಒಬ್ಬ ತಾಯಾಗಿ ನನ್ನ ಮಗನನ್ನ ನಾನು ಸರಿಯಾಗಿ ಬೆಳೆಸಲಿಲ್ವಾ? ಯೆಹೋವನನ್ನ ಪ್ರೀತಿಸೋಕೆ ನನ್ನ ಮಗನಿಗೆ ಸರಿಯಾಗಿ ಹೇಳಿಕೊಡಲಿಲ್ಲವೇನೋ ಅಂತ ನನ್ನ ಮನಸ್ಸು ಯಾವಾಗಲೂ ಚುಚ್ಚುತ್ತಿತ್ತು.”

5. ಮಕ್ಕಳು ಸತ್ಯ ಬಿಟ್ಟು ಹೋದ್ರೆ ಅದಕ್ಕೆ ಅಪ್ಪ-ಅಮ್ಮ ಕಾರಣನಾ?

5 ಯೆಹೋವ ದೇವರು ನಮ್ಮೆಲ್ಲರಿಗೂ ಇಚ್ಛಾಸ್ವಾತಂತ್ರ್ಯ ಕೊಟ್ಟಿದ್ದಾರೆ. ಅಂದ್ರೆ ಆತನ ಮಾತನ್ನ ಕೇಳಬೇಕಾ ಬೇಡ್ವಾ ಅನ್ನೋ ಆಯ್ಕೆ ಅವರವರಿಗೇ ಬಿಟ್ಟಿದ್ದು. ಅಪ್ಪ-ಅಮ್ಮ ಯೆಹೋವನ ಆರಾಧಕರಲ್ಲದಿದ್ರೂ ಮಕ್ಕಳು ಯೆಹೋವನನ್ನ ಆರಾಧನೆ ಮಾಡೋ ಆಯ್ಕೆ ಮಾಡಿ ಕೊನೇ ತನಕ ನಂಬಿಗಸ್ತರಾಗಿ ಇರ್ತಾರೆ. ಇನ್ನು ಕೆಲವು ಮಕ್ಕಳಿಗೆ ಅಪ್ಪ-ಅಮ್ಮ ಯೆಹೋವನ ಬಗ್ಗೆ ಕಲಿಸಿದ್ರೂ ದೊಡ್ಡವರಾದ ಮೇಲೆ ಸತ್ಯ ಬಿಟ್ಟುಹೋಗ್ತಾರೆ. ಒಟ್ಟಿನಲ್ಲಿ ಹೇಳೋದಾದ್ರೆ ಯೆಹೋವ ದೇವರನ್ನ ಆರಾಧನೆ ಮಾಡಬೇಕಾ ಬೇಡ್ವಾ ಅನ್ನೋದು ಪ್ರತಿಯೊಬ್ಬರೂ ತಾವಾಗೇ ಮಾಡಬೇಕಾಗಿರೋ ತೀರ್ಮಾನ. (ಯೆಹೋ. 24:15) ಹಾಗಾಗಿ ಮಕ್ಕಳು ಸತ್ಯ ಬಿಟ್ಟುಹೋದ್ರೆ ಅದಕ್ಕೆ ತಾವೇ ಕಾರಣ ಅಂತ ಅಪ್ಪ-ಅಮ್ಮ ಕೊರಗಬೇಕಾಗಿಲ್ಲ.

6. ಅಪ್ಪ-ಅಮ್ಮ ಯೆಹೋವನನ್ನು ಬಿಟ್ಟು ಹೋಗಿಬಿಟ್ರೆ ಮಕ್ಕಳಿಗೆ ಏನಾಗುತ್ತೆ?

6 ಕೆಲವೊಮ್ಮೆ ಹೆತ್ತವರೇ ಸತ್ಯ ಬಿಟ್ಟು ಹೋಗಿಬಿಡ್ತಾರೆ. (ಕೀರ್ತ. 27:10) ಹೀಗಾದಾಗ ಅಪ್ಪ-ಅಮ್ಮನ ಮೇಲೆ ಗೌರವ ಇರೋ ಮಕ್ಕಳಿಗೆ ಏನು ಮಾಡಬೇಕು ಅಂತಾನೇ ಗೊತ್ತಾಗಲ್ಲ. ಎಸ್ತೇರ್‌ಳ ಅಪ್ಪನಿಗೆ ಬಹಿಷ್ಕಾರ ಆಯ್ತು. ಅವಳು ಹೇಳಿದ್ದು: “ಅಪ್ಪ ಬರೀ ಸತ್ಯ ಬೇಡ ಅಂತಲ್ಲ ಯೆಹೋವನೇ ಬೇಡ ಅಂತ ದೂರ ಹೋದ್ರು. ಇದನ್ನ ನೆನಸಿಕೊಂಡಾಗ ನನಗೆ ತುಂಬ ಅಳು ಬರುತ್ತಿತ್ತು. ನನಗೆ ಅಪ್ಪ ಅಂದ್ರೆ ತುಂಬಾ ಇಷ್ಟ. ಅವರು ಬಹಿಷ್ಕಾರ ಆದಮೇಲೆ ಏನು ಮಾಡ್ತಾರೋ ಹೇಗೆ ಇರ್ತಾರೋ ಅಂತ ತುಂಬ ಚಿಂತೆ ಆಗ್ತಿತ್ತು. ಕೆಲವೊಮ್ಮೆ ತುಂಬ ಗಾಬರಿ, ಭಯನೂ ಆಗ್ತಿತ್ತು.”

7. ಹೆತ್ತವರಿಗೆ ಬಹಿಷ್ಕಾರ ಆದ್ರೆ ಆ ಮಕ್ಕಳ ಬಗ್ಗೆ ದೇವರಿಗೆ ಹೇಗನಿಸುತ್ತೆ?

7 ಅಪ್ಪ-ಅಮ್ಮಾಗೆ ಬಹಿಷ್ಕಾರ ಆದಾಗ ಮಕ್ಕಳ ಮನಸ್ಸು ಚೂರುಚೂರಾಗಿಬಿಡುತ್ತೆ. ಮಕ್ಕಳೇ, ನಿಮಗಾಗ್ತಿರೋ ನೋವು ಯೆಹೋವ ದೇವರಿಗೆ ಚೆನ್ನಾಗಿ ಅರ್ಥ ಆಗುತ್ತೆ. ಏನೇ ಆದ್ರೂ ನೀವು ದೇವರಿಗೆ ನಿಯತ್ತಾಗಿರೋದನ್ನ ನೋಡುವಾಗ ಯೆಹೋವನಿಗೆ ಮತ್ತು ನಮಗೂ ತುಂಬ ಖುಷಿಯಾಗುತ್ತೆ. ನಿಮ್ಮ ಅಪ್ಪ-ಅಮ್ಮ ಸತ್ಯ ಬಿಟ್ಟು ಹೋಗಿರೋದಕ್ಕೆ ನೀವು ಕಾರಣ ಅಲ್ಲ. ಆಗಲೇ ಹೇಳಿದ ಹಾಗೆ, ಯೆಹೋವ ಎಲ್ಲರಿಗೂ ಆಯ್ಕೆ ಮಾಡೋ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಹಾಗಾಗಿ ದೀಕ್ಷಾಸ್ನಾನ ಪಡ್ಕೊಂಡಿರೋ “ಪ್ರತಿಯೊಬ್ಬನು ತನ್ನ ಜವಾಬ್ದಾರಿಯನ್ನ ತಾನೇ ಹೊತ್ಕೊಬೇಕು.”—ಗಲಾ. 6:5, ಪಾದಟಿಪ್ಪಣಿ.

8. ಬಹಿಷ್ಕಾರ ಆದವರು ವಾಪಸ್‌ ಯೆಹೋವ ದೇವರ ಹತ್ರ ಬರೋ ತನಕ ನಾವೇನು ಮಾಡಬೇಕು? (“ ಮರಳಿ ಬನ್ನಿ ಯೆಹೋವನ ಬಳಿ” ಅನ್ನೋ ಚೌಕ ಕೂಡ ನೋಡಿ.)

8 ಕುಟುಂಬದಲ್ಲಿ ಯಾರಾದ್ರು ಈ ತರ ಸತ್ಯ ಬಿಟ್ಟುಹೋದಾಗ ಅವರು ಮುಂದೆ ಒಂದಲ್ಲಾ ಒಂದಿನ ಯೆಹೋವನ ಹತ್ರ ವಾಪಸ್‌ ಬರ್ತಾರೆ ಅಂತ ನೀವು ಕಾಯ್ತಾ ಇರ್ತೀರ. ಅಲ್ಲಿ ತನಕ ನೀವು ಏನು ಮಾಡಬಹುದು? ಯೆಹೋವನ ಮೇಲಿರೋ ನಿಮ್ಮ ನಂಬಿಕೆ ಕಳಕೊಳ್ಳದೇ ಇರೋಕೆ ಏನೆಲ್ಲ ಆಗುತ್ತೋ ಅದನ್ನೆಲ್ಲ ಮಾಡ್ತಾ ಇರಿ. ಹೀಗೆ ಮಾಡಿದ್ರೆ ನಿಮ್ಮ ಕುಟುಂಬದಲ್ಲಿ ಇರೋ ಬೇರೆಯವರಿಗೆ, ಬಹಿಷ್ಕಾರ ಆದವರಿಗೆ ಒಳ್ಳೇ ಮಾದರಿ ಆಗ್ತೀರ. ಅವರು ನಿಮ್ಮನ್ನ ನೋಡಿ ಕಲಿತಾರೆ. ಅಷ್ಟೇ ಅಲ್ಲ, ನಿಮ್ಮ ಮನಸ್ಸಿಗಾಗಿರೋ ನೋವು ಕೂಡ ಕಡಿಮೆ ಆಗುತ್ತೆ. ಈಗ ನಾವು ದೇವರ ಮೇಲಿರೋ ನಂಬಿಕೆ ಕಳಕೊಳ್ಳದೇ ಇರೋಕೆ ಏನೇನು ಮಾಡಬೇಕು ಅಂತ ನೋಡೋಣ.

ದೇವರ ಮೇಲೆ ನಂಬಿಕೆ ಕಳಕೊಳ್ಳದೇ ಇರೋಕೆ ಏನು ಮಾಡಬೇಕು?

9. ಯೆಹೋವ ದೇವರ ಮೇಲಿರೋ ನಂಬಿಕೆನ ಗಟ್ಟಿಮಾಡೋಕೆ ಏನು ಮಾಡಬೇಕು? (“ ನೆಮ್ಮದಿ ಕೊಡೋ ವಚನಗಳು” ಅನ್ನೋ ಚೌಕ ಕೂಡ ನೋಡಿ.)

9 ಆರಾಧನೆಗೆ ಸಂಬಂಧಪಟ್ಟ ಕೆಲಸಗಳನ್ನ ಮಾಡ್ತಾ ಇರಿ. ಅಂದ್ರೆ ದಿನಾ ಬೈಬಲ್‌ ಓದಿ, ಧ್ಯಾನಿಸಿ ಮತ್ತು ತಪ್ಪದೇ ಕೂಟಗಳಿಗೆ ಹಾಜರಾಗಿ. ಇದ್ರಿಂದ ನಿಮ್ಮ ನಂಬಿಕೆನೂ ಬಲ ಆಗುತ್ತೆ, ನಿಮ್ಮ ಕುಟುಂಬದವರ ನಂಬಿಕೆಯನ್ನ ಬಲಪಡಿಸೋಕೂ ಆಗುತ್ತೆ. ಸಹೋದರಿ ಜೊಯೆನ್ನಾ ಅವರ ಅಪ್ಪ ಮತ್ತು ಅಕ್ಕ ಸತ್ಯ ಬಿಟ್ಟು ಹೋದ್ರು. ಆಗ ಜೊಯೆನ್ನಾ ಏನು ಮಾಡಿದ್ರು ಅಂತ ಅವರ ಮಾತಲ್ಲೇ ಕೇಳಿ: “ಅಬಿಗೈಲ್‌, ಎಸ್ತೇರ್‌, ಯೋಬ, ಯೋಸೇಫ ಮತ್ತು ಯೇಸು ಬಗ್ಗೆ ಬೈಬಲಿಂದ ಓದಿದಾಗ ಸ್ವಲ್ಪ ಸಮಾಧಾನ ಆಯ್ತು. ಇವರ ಉದಾಹರಣೆಗಳು ಒಳ್ಳೇ ಯೋಚನೆ ಮಾಡೋಕೆ ಸಹಾಯ ಮಾಡ್ತಿತ್ತು. ಇದ್ರಿಂದ ನನ್ನ ಮನಸ್ಸಲ್ಲಿರೋ ನೋವು ಕಡಿಮೆ ಆಗ್ತಿತ್ತು. ಬ್ರಾಡ್‌ಕಾಸ್ಟಿಂಗ್‌ ಹಾಡುಗಳನ್ನೂ ಕೇಳಿಸಿಕೊಳ್ತಿದ್ದೆ. ಇದ್ರಿಂದ ತುಂಬ ಧೈರ್ಯ ಸಿಕ್ತಿತ್ತು.”

10. ನೋವನ್ನ ಸಹಿಸಿಕೊಳ್ಳೋಕೆ ಕೀರ್ತನೆ 32:6-8 ಹೇಗೆ ಸಹಾಯ ಮಾಡುತ್ತೆ?

10 ಮನಸ್ಸಲ್ಲಿರೋ ನೋವನ್ನೆಲ್ಲ ಯೆಹೋವನ ಹತ್ರ ಹೇಳಿಕೊಳ್ಳಿ. ಮನಸ್ಸಲ್ಲಿ ತುಂಬ ನೋವಿದ್ರೂ ಪ್ರಾರ್ಥನೆ ಮಾಡೋಕೆ ಮರೆಯಬಾರದು. ದೇವರ ಹತ್ರ “ನಿನ್ನ ತರ ಯೋಚನೆ ಮಾಡೋಕೆ ಸಹಾಯ ಮಾಡಪ್ಪಾ, ‘ನನಗೆ ತಿಳುವಳಿಕೆ ಕೊಟ್ಟು ಯಾವ ದಾರಿಯಲ್ಲಿ ನಡಿಬೇಕು ಅಂತ ಕಲಿಸಪ್ಪಾ’” ಅಂತ ಬೇಡಿಕೊಳ್ಳಿ. (ಕೀರ್ತನೆ 32:6-8 ಓದಿ.) ದೇವರ ಹತ್ರ ನಿಮಗೇನು ಅನಿಸ್ತಿದೆ ಅಂತ ಬಿಡಿಸಿ ಬಿಡಿಸಿ ಹೇಳೋಕೆ ಆಗದಿದ್ರೂ ನಿಮ್ಮ ಮನಸ್ಸಿನ ಮೂಲೆಮೂಲೆಯಲ್ಲೂ ಇರೋ ನೋವನ್ನ ಯೆಹೋವ ಅರ್ಥಮಾಡಿಕೊಳ್ತಾರೆ. ಆತ ನಿಮ್ಮನ್ನ ತುಂಬ ಪ್ರೀತಿಸ್ತಾರೆ. ನಿಮ್ಮ ಕಷ್ಟಗಳನ್ನೆಲ್ಲಾ ತನ್ನ ಹತ್ರ ಹೇಳ್ಕೊಬೇಕು ಅಂತ ಬಯಸ್ತಾರೆ.—ವಿಮೋ. 34:6; ಕೀರ್ತ. 62:7, 8.

11. ಯೆಹೋವ ಕೊಡೋ ಶಿಸ್ತಿನ ಬಗ್ಗೆ ಇಬ್ರಿಯ 12:11 ಏನು ಹೇಳುತ್ತೆ? (“ ಬಹಿಷ್ಕಾರ—ಯೆಹೋವ ದೇವರ ಪ್ರೀತಿಯ ಏರ್ಪಾಡು” ಅನ್ನೋ ಚೌಕ ಕೂಡ ನೋಡಿ.)

11 ಹಿರಿಯರ ಮೇಲೆ ಕೋಪಿಸಿಕೊಳ್ಳಬೇಡಿ. ದೊಡ್ಡ ತಪ್ಪು ಮಾಡಿದವರಿಗೆ ಬಹಿಷ್ಕಾರ ಆಗಬೇಕು ಅನ್ನೋದು ಯೆಹೋವ ಇಟ್ಟಿರೋ ನಿಯಮ. ಇದ್ರಿಂದ ತಪ್ಪು ಮಾಡಿದವರಿಗೂ ಸಭೆಯಲ್ಲಿ ಇರುವವರಿಗೂ ಒಳ್ಳೇದಾಗುತ್ತೆ. (ಇಬ್ರಿಯ 12:11 ಓದಿ.) ಸಭೆಯಲ್ಲಿ ಕೆಲವರು “ಹಿರಿಯರು ಆ ವ್ಯಕ್ತಿನ ಬಹಿಷ್ಕಾರ ಮಾಡಬಾರದಿತ್ತು, ತಪ್ಪು ನಿರ್ಧಾರ ತಗೊಂಡುಬಿಟ್ರು” ಅಂತ ಹೇಳಬಹುದು. ಆದ್ರೆ ನೆನಪಿಡಿ ಆ ತರ ಹೇಳೋರು ಬಹಿಷ್ಕಾರ ಆದ ವ್ಯಕ್ತಿಯ ತಪ್ಪನ್ನ ಮುಚ್ಚಿಟ್ಟು, ಹಿರಿಯರು ಮಾಡಿದ್ದು ತಪ್ಪು ಅಂತ ಹೇಳ್ತಾ ಇರ್ತಾರೆ. ಅಷ್ಟೇ ಅಲ್ಲ, ಹಿರಿಯರು ಯಾಕೆ ಆ ನಿರ್ಧಾರ ತಗೊಂಡ್ರು ಅಂತ ಎಲ್ಲಾ ವಿಷಯ ನಮಗೆ ಗೊತ್ತಿರಲ್ಲ. ಅವರು “ಯೆಹೋವನಿಗೋಸ್ಕರ” ತೀರ್ಪು ಮಾಡ್ತಾರೆ. ಬೈಬಲ್‌ ತತ್ವಗಳನ್ನ ಮನಸ್ಸಲ್ಲಿಟ್ಟು ತೀರ್ಮಾನ ಮಾಡ್ತಾರೆ. ಹಾಗಾಗಿ ಹಿರಿಯರ ಮೇಲೆ ನಂಬಿಕೆಯಿಡಿ.—2 ಪೂರ್ವ. 19:6.

12. ಹಿರಿಯರ ನಿರ್ಧಾರಕ್ಕೆ ಬೆಂಬಲ ಕೊಟ್ರೆ ಏನಾಗುತ್ತೆ?

12 ಹಿರಿಯರು ಮಾಡಿದ ನಿರ್ಧಾರಕ್ಕೆ ನಾವು ಬೆಂಬಲ ಕೊಟ್ರೆ ಬಹಿಷ್ಕಾರ ಆದ ವ್ಯಕ್ತಿಗೆ ಯೆಹೋವನ ಹತ್ತಿರ ವಾಪಸ್‌ ಬರೋಕೆ ನೀವು ಸಹಾಯ ಸಹಾಯ ಮಾಡಿದ ಹಾಗೆ ಆಗುತ್ತೆ. ಸಹೋದರಿ ಎಲಿಜಬೇತ್‌ ಹೀಗೆ ಹೇಳ್ತಾರೆ, “ನಮ್ಮ ಮಗನ ಜೊತೆ ಮಾತಾಡದೇ ಇರೋಕೆ ನಮಗೆ ತುಂಬ ಕಷ್ಟ ಆಗ್ತಿತ್ತು. ಆದ್ರೂ ನಾವು ಮಾತಾಡ್ತಿರಲಿಲ್ಲ. ಇದ್ರಿಂದ ನಮ್ಮ ಮಗ ವಾಪಸ್‌ ಯೆಹೋವನ ಹತ್ರ ಬಂದಾಗ ‘ನನಗೆ ಬಹಿಷ್ಕಾರ ಆಗಿದ್ದು ನ್ಯಾಯನೇ’ ಅಂತ ಒಪ್ಕೊಂಡ. ‘ಇದ್ರಿಂದ ನಾನು ಸರಿದಾರಿಗೆ ಬಂದೆ. ಯೆಹೋವ ಕೊಡೋ ಶಿಸ್ತಿಂದ ಯಾವಾಗಲೂ ಒಳ್ಳೇದೇ ಆಗುತ್ತೆ ಅಂತ ನನಗೆ ಅರ್ಥ ಆಯ್ತು’ ಅಂತ ಹೇಳಿದ.” ಸಹೋದರಿಯ ಗಂಡ ಮಾರ್ಕ್‌ ಹೇಳಿದ್ದು, “‘ನೀವು ನನ್ನನ್ನ ಮಾತಾಡಿಸದೆ ಇದ್ದಿದ್ದಕ್ಕೇ ನನಗೆ ವಾಪಸ್‌ ಬರಬೇಕು ಅಂತ ಅನಿಸಿದ್ದು’ ಅಂತ ನಮ್ಮ ಮಗ ಹೇಳಿದ. ಹಿರಿಯರಿಗೆ ಬೆಂಬಲ ಕೊಡಬೇಕು ಅನ್ನೋ ಮನಸ್ಸನ್ನ ನಮಗೆ ಕೊಟ್ಟಿದ್ದಕ್ಕೆ ಯೆಹೋವ ದೇವರಿಗೆ ತುಂಬ ಥ್ಯಾಂಕ್ಸ್‌.”

13. ನಿಮ್ಮ ನೋವನ್ನ ಕಡಿಮೆ ಮಾಡೋಕೆ ಇನ್ನೂ ಏನು ಮಾಡಬೇಕು?

13 ನಿಮ್ಮನ್ನ ಅರ್ಥಮಾಡಿಕೊಳ್ಳೋ ಸ್ನೇಹಿತರ ಜೊತೆ ಮಾತಾಡಿ. ಪ್ರೌಢ ಸಹೋದರ ಸಹೋದರಿಯರ ಜೊತೆ ಸಮಯ ಕಳಿರಿ. ನೀವು ಖುಷಿಯಿಂದ ಕಾಯೋಕೆ ಅವರು ನಿಮಗೆ ಸಹಾಯ ಮಾಡ್ತಾರೆ. (ಜ್ಞಾನೋ. 12:25; 17:17) ಸಹೋದರಿ ಜೊಯೆನ್ನಾ ಹೇಳ್ತಾರೆ, “ನಾನು ಒಂಟಿ ಅಂತ ಅನಿಸ್ತಿತ್ತು. ಆಗೆಲ್ಲ ನನ್ನನ್ನ ಅರ್ಥಮಾಡಿಕೊಳ್ಳೋ ಫ್ರೆಂಡ್ಸ್‌ ಹತ್ತಿರ ಮನಸ್ಸುಬಿಚ್ಚಿ ಮಾತಾಡ್ತಿದ್ದೆ. ಆಗ ಅವರು ಧೈರ್ಯ ತುಂಬ್ತಿದ್ರು.” ಒಂದುವೇಳೆ ಸಭೆಯಲ್ಲಿರೋ ಯಾರಾದ್ರು ಧೈರ್ಯ ತುಂಬೋಕೆ ಹೇಳಿದ ಮಾತು ನಿಮ್ಮ ನೋವನ್ನು ಜಾಸ್ತಿ ಮಾಡಿದ್ರೆ ಏನು ಮಾಡಬೇಕು?

14. ನಾವ್ಯಾಕೆ ‘ಒಬ್ರನ್ನೊಬ್ರು ಸಹಿಸ್ಕೊಳ್ತಾ ಉದಾರವಾಗಿ ಕ್ಷಮಿಸ್ತಾ’ ಇರಬೇಕು?

14 ಸಹೋದರ ಸಹೋದರಿಯರ ಜೊತೆ ತಾಳ್ಮೆಯಿಂದಿರಿ. ಕೆಲವೊಮ್ಮೆ ಅವರು ಹೇಳೋ ಮಾತುಗಳಿಂದ ನಮಗೆ ನೋವಾಗಬಹುದು. (ಯಾಕೋ. 3:2) ಯಾಕಂದ್ರೆ ಅವರೂ ಅಪರಿಪೂರ್ಣರು. ಅವರು ಒಳ್ಳೇ ಉದ್ದೇಶದಿಂದಾನೆ ಹೇಳ್ತಾರೆ. ಆದ್ರೆ ಅದರಿಂದ ನಮಗೆ ನೋವಾಗಿಬಿಡಬಹುದು. ಆಗ “ಬೇರೆಯವರು ತಪ್ಪು ಮಾಡಿದ್ರೂ ಒಬ್ರನ್ನೊಬ್ರು ಸಹಿಸ್ಕೊಳ್ತಾ ಇರಿ. ಮನಸ್ಸಲ್ಲಿ ಏನೂ ಇಟ್ಕೊಳ್ಳದೆ ಒಬ್ರನ್ನೊಬ್ರು ಉದಾರವಾಗಿ ಕ್ಷಮಿಸ್ತಾ ಇರಿ” ಅಂತ ಪೌಲ ಕೊಟ್ಟ ಸಲಹೆಯನ್ನ ಪಾಲಿಸಬೇಕು. (ಕೊಲೊ. 3:13) ಒಬ್ಬ ಸಹೋದರಿಯ ಸಂಬಂಧಿಕರೊಬ್ಬರಿಗೆ ಬಹಿಷ್ಕಾರ ಆದಾಗ ಆ ಸಹೋದರಿ ಹೇಳಿದ್ದು: “ಸಹೋದರ ಸಹೋದರಿಯರು ನನಗೆ ಧೈರ್ಯ ತುಂಬೋಕೆ ನನ್ನ ಜೊತೆ ಮಾತಾಡ್ತಿದ್ರು. ಆದ್ರೆ ಕೆಲವೊಮ್ಮೆ ಅದು ನನ್ನ ಮನಸ್ಸಿಗೆ ನೋವು ಮಾಡ್ತಿತ್ತು. ಅದನ್ನ ಬೇಕುಬೇಕಂತ ಅವರು ಹೇಳಿಲ್ಲ ಅನ್ನೋದು ನನಗೆ ಗೊತ್ತಿತ್ತು. ಅವರನ್ನ ಕ್ಷಮಿಸೋಕೆ ಯೆಹೋವ ನನಗೆ ಸಹಾಯ ಮಾಡಿದ್ರು.” ನಾವೀಗ ಬಹಿಷ್ಕಾರ ಆದ ವ್ಯಕ್ತಿಯ ಕುಟುಂಬದವರಿಗೆ ಸಭೆಯವರು ಹೇಗೆ ಸಹಾಯ ಮಾಡಬೇಕು ಅಂತ ನೋಡೋಣ.

ಸಭೆಯವರು ಹೇಗೆ ಸಹಾಯ ಮಾಡಬಹುದು?

15. ಬಹಿಷ್ಕಾರ ಆದ ವ್ಯಕ್ತಿಯ ಕುಟುಂಬದವರಿಗೆ ನಾವು ಹೇಗೆ ಸಹಾಯ ಮಾಡಬಹುದು?

15 ಬಹಿಷ್ಕಾರ ಆದ ವ್ಯಕ್ತಿಯ ಕುಟುಂಬದವರಿಗೆ ಪ್ರೀತಿ ತೋರಿಸಿ. ಮಿರಿಯಾಮ್‌ ಅನ್ನೋ ಸಹೋದರಿಯ ತಮ್ಮನಿಗೆ ಬಹಿಷ್ಕಾರ ಆಯ್ತು. ಆಗ ಕೂಟಗಳಿಗೆ ಹೋದ್ರೆ ಸಭೆಯವರು ತನ್ನ ಜೊತೆ ಹೇಗೆ ನಡಕೊಳ್ತಾರೋ ಅನ್ನೋ ಚಿಂತೆ ಅವಳಿಗೆ ಕಾಡುತ್ತಿತ್ತು. ಅವಳು ಹೇಳಿದ್ದು: “ಸಭೆಯವರು ಏನಂತಾರೋ ಅಂದುಕೊಂಡಿದ್ದೆ. ಆದ್ರೆ ಅವರಿಗೂ ನನ್ನ ತರಾನೇ ತುಂಬ ಬೇಜಾರಾಗಿತ್ತು. ಅವರು ನನ್ನ ತಮ್ಮನ ಬಗ್ಗೆ ಕೋಪದಿಂದಾಗಲಿ ಕೆಟ್ಟದಾಗಿ ಆಗಲಿ ಮಾತಾಡಲಿಲ್ಲ. ಇಂಥ ಫ್ರೆಂಡ್ಸ್‌ಗೆ ನಾನು ಎಷ್ಟು ಥ್ಯಾಂಕ್ಸ್‌ ಹೇಳಿದ್ರೂ ಸಾಕಾಗಲ್ಲ.” ಇನ್ನೊಬ್ಬ ಸಹೋದರಿ ಹೇಳಿದ್ದು: “ನನ್ನ ಮಗನಿಗೆ ಬಹಿಷ್ಕಾರ ಆದಮೇಲೆ ಸಹೋದರ ಸಹೋದರಿಯರು ನನಗೆ ಸಮಾಧಾನ ಮಾಡೋಕೆ ಬಂದ್ರು. ನಮಗೆ ಏನು ಹೇಳಬೇಕು ಅಂತಾನೇ ಗೊತ್ತಾಗ್ತಿಲ್ಲ ಅಂತ ಹೇಳಿ ನನ್ನ ಜೊತೆ ಅತ್ತುಬಿಟ್ಟರು. ಇನ್ನು ಕೆಲವರು ನನಗೆ ಪತ್ರ ಬರೆದು ಧೈರ್ಯ ತುಂಬಿದ್ರು. ಅವರು ಅವತ್ತು ಮಾಡಿದ್ದೆಲ್ಲಾ ನನಗೆ ನೋವನ್ನು ತಾಳಿಕೊಳ್ಳೋಕೆ ತುಂಬ ಸಹಾಯ ಮಾಡ್ತು.”

16. ಸಭೆಯವರು ಇನ್ನೂ ಹೇಗೆಲ್ಲಾ ಸಹಾಯ ಮಾಡಬಹುದು?

16 ಸಮಾಧಾನ-ಸಹಾಯ ಮಾಡೋದನ್ನ ನಿಲ್ಲಿಸಬೇಡಿ. ಬಹಿಷ್ಕಾರ ಆದ ವ್ಯಕ್ತಿಯ ಕುಟುಂಬದವರಿಗೆ ನಮ್ಮ ಪ್ರೀತಿ, ಸಹಾಯ ತುಂಬಾನೇ ಬೇಕಾಗುತ್ತೆ. (ಇಬ್ರಿ. 10:24, 25) ಅವರಿಗೂ ಬಹಿಷ್ಕಾರ ಆಗಿದೆ ಅನ್ನೋ ತರ ನಾವು ನಡಕೊಳ್ಳಬಾರದು. ಹೆತ್ತವರು ಸತ್ಯ ಬಿಟ್ಟು ಹೋದಾಗ ಕೆಲವು ಮಕ್ಕಳು ಚಿಕ್ಕವರಾಗಿದ್ದರೂ ದೇವರಿಗೆ ನಿಯತ್ತಾಗಿ ಇರುತ್ತಾರೆ. ಅಂಥ ಮಕ್ಕಳಿಗೆ ನಮ್ಮ ಮಾತುಗಳಿಂದ ಪ್ರೋತ್ಸಾಹ ಕೊಡಬೇಕು. ಮರಿಯಾ ಅನ್ನೋ ಸಹೋದರಿಯ ಗಂಡ ಬಹಿಷ್ಕಾರ ಆದಾಗ ಅವಳನ್ನ, ಮಕ್ಕಳನ್ನ ಬಿಟ್ಟು ಹೋಗಿಬಿಟ್ಟರು. ಅವಳು ಹೇಳಿದ್ದು: “ಸಹೋದರ ಸಹೋದರಿಯರು ನಮ್ಮ ಮನೆಗೆ ಬಂದ್ರು, ಅಡುಗೆ ಮಾಡಿಕೊಟ್ರು, ನಮ್ಮ ಜೊತೆ ಕುಟುಂಬ ಆರಾಧನೆ ಮಾಡಿದ್ರು. ನನ್ನ ನೋವನ್ನು ಅರ್ಥಮಾಡಿಕೊಂಡು ಅವರೂ ಅತ್ತರು. ಜನರು ನನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದಾಗ ನನ್ನ ಪರವಾಗಿ ಮಾತಾಡಿದ್ರು. ಈ ಫ್ರೆಂಡ್ಸ್‌ ಇಲ್ಲದಿದ್ರೆ ನನಗೆ ಈ ಕಷ್ಟ ಸಹಿಸಿಕೊಳ್ಳೋಕೆ ಆಗ್ತಾನೇ ಇರಲಿಲ್ಲ.”—ರೋಮ. 12:13, 15.

ಬಹಿಷ್ಕಾರ ಆದ ವ್ಯಕ್ತಿಯ ಕುಟುಂಬಕ್ಕೆ ಸಭೆಯವರು ಸಹಾಯ ಮಾಡಬೇಕು (ಪ್ಯಾರ 17 ನೋಡಿ) *

17. ಹಿರಿಯರು ಹೇಗೆ ಸಹಾಯ ಮಾಡಬಹುದು?

17 ಹಿರಿಯರೇ, ಬಹಿಷ್ಕಾರ ಆದ ವ್ಯಕ್ತಿಯ ಕುಟುಂಬದವರಿಗೆ ಸಮಾಧಾನ ಮಾಡೋ ಮುಖ್ಯ ಜವಾಬ್ದಾರಿ ನಿಮಗಿದೆ. (1 ಥೆಸ. 5:14) ಅವರಿಗೆ ಸಹಾಯ ಮಾಡೋಕೆ ಸಿಗೋ ಒಂದು ಅವಕಾಶವನ್ನೂ ಬಿಡಬೇಡಿ. ಕೂಟಕ್ಕಿಂತ ಮುಂಚೆ ಮತ್ತು ಕೂಟ ಆದಮೇಲೆ ನೀವೇ ಹೋಗಿ ಮಾತಾಡಿಸಿ. ಅವರ ಮನೆಗೆ ಹೋಗಿ ಅವರ ಜೊತೆ ಪ್ರಾರ್ಥಿಸಿ. ನಿಮ್ಮ ಜೊತೆ ಸೇವೆಗೆ ಕರಕೊಂಡು ಹೋಗಿ. ಕುಟುಂಬ ಆರಾಧನೆಗೆ ಕರೆಯಿರಿ. ನೋವಲ್ಲಿ ಇರುವವರಿಗೆ ಹಿರಿಯರು ಪ್ರೀತಿ ವಾತ್ಸಲ್ಯ ತೋರಿಸಬೇಕು.—1 ಥೆಸ. 2:7, 8.

ನಂಬಿಕೆ ಕಳಕೊಳ್ಳಬೇಡಿ

18. ಎರಡನೇ ಪೇತ್ರ 3:9ರ ಪ್ರಕಾರ ಯೆಹೋವ ದೇವರ ಆಸೆ ಏನು?

18 “ಯಾರೂ ನಾಶ ಆಗಬಾರದು . . . ಎಲ್ರಿಗೂ ತಮ್ಮ ತಪ್ಪನ್ನ ತಿದ್ಕೊಳ್ಳೋಕೆ ಅವಕಾಶ ಸಿಗಬೇಕು ಅನ್ನೋದೇ ದೇವರ ಆಸೆ.” (2 ಪೇತ್ರ 3:9 ಓದಿ.) ದೊಡ್ಡ ತಪ್ಪು ಮಾಡಿದವರ ಜೀವನೂ ದೇವರಿಗೆ ಅಮೂಲ್ಯ. ಅಂಥವರಿಗೂ ದೇವರು ಯೇಸುವನ್ನ ಬಿಡುಗಡೆ ಬೆಲೆಯಾಗಿ ಕೊಟ್ಟಿದ್ದಾರೆ. ಅಂಥವರು ತನ್ನ ಹತ್ರ ವಾಪಸ್‌ ಬರೋಕೆ ದೇವರು ಸಹಾಯ ಮಾಡ್ತಾರೆ. ಯೇಸು ಹೇಳಿದ ಕಥೆಯಲ್ಲಿ ಮನೆ ಬಿಟ್ಟುಹೋದ ಮಗನಿಗೋಸ್ಕರ ಅಪ್ಪ ಹೇಗೆ ಕಾಯ್ತಾ ಇದ್ರೋ ಅದೇ ತರ ಯೆಹೋವ ಕಾಯ್ತಾ ಇದ್ದಾರೆ. (ಲೂಕ 15:11-32) ಸತ್ಯ ಬಿಟ್ಟುಹೋದ ಎಷ್ಟೋ ಜನರು ತುಂಬ ವರ್ಷಗಳಾದ ಮೇಲೆ ಯೆಹೋವನ ಹತ್ರ ವಾಪಸ್‌ ಬಂದಿದ್ದಾರೆ. ಆ ತರ ಬಂದವರನ್ನು ಸಭೆಯವರು ಪ್ರೀತಿಯಿಂದ ಸೇರಿಸಿಕೊಂಡಿದ್ದಾರೆ. ಸಹೋದರಿ ಎಲಿಜಬೇತ್‌ ಅವರ ಮಗ ಯೆಹೋವನ ಹತ್ರ ವಾಪಸ್‌ ಬಂದಾಗ ತುಂಬ ಖುಷಿಪಟ್ಟರು. ಆಗ ಅವರು “ಸಭೆಯವರು ನನಗೆ ‘ನಿಮ್ಮ ಮಗ ವಾಪಸ್‌ ಬರ್ತಾನೆ, ನಂಬಿಕೆ ಕಳಕೊಳ್ಳಬೇಡಿ’ ಅಂತ ಹೇಳಿ ಸಮಾಧಾನ ಮಾಡ್ತಿದ್ರು” ಅಂತ ನೆನಪಿಸಿಕೊಂಡ್ರು.

19. ನಾವು ಯೆಹೋವನ ಮೇಲೆ ಯಾಕೆ ನಂಬಿಕೆ ಕಳಕೊಳ್ಳಬಾರದು?

19 ಯೆಹೋವ ದೇವರ ಮೇಲೆ ನಂಬಿಕೆ ಕಳಕೊಳ್ಳಬೇಡಿ. ಆತನು ಕೊಡೋ ಸಲಹೆಯಿಂದ ಯಾವಾಗ್ಲೂ ಒಳ್ಳೆದೇ ಆಗುತ್ತೆ. ಯೆಹೋವ ಧಾರಾಳ ಮನಸ್ಸು, ಕರುಣೆ ಇರೋ ದೇವರು. ತನ್ನನ್ನು ತುಂಬ ಪ್ರೀತಿಸೋ, ಆರಾಧಿಸೋ ಜನರನ್ನು ದೇವರೂ ತುಂಬ ಪ್ರೀತಿಸ್ತಾರೆ. ಕಷ್ಟ ಬಂದಾಗ ನಮ್ಮ ಕೈಬಿಡಲ್ಲ. (ಇಬ್ರಿ. 13:5, 6) ಸಹೋದರ ಮಾರ್ಕ್‌ ಹೀಗೆ ಹೇಳ್ತಾರೆ: “ಯೆಹೋವ ಯಾವತ್ತೂ ನಮ್ಮ ಕೈಬಿಡಲ್ಲ. ನಮಗೆ ಕಷ್ಟ ಬಂದಾಗ ನಮ್ಮ ಜೊತೆನೇ ಇದ್ದು ಸಹಾಯ ಮಾಡ್ತಾರೆ.” ಯೆಹೋವ ನಮಗೆ “ಸಾಮಾನ್ಯವಾಗಿ ಇರೋ ಶಕ್ತಿಗಿಂತ ಇನ್ನೂ ಹೆಚ್ಚಿನ ಶಕ್ತಿನ” ಕೊಟ್ಟೇ ಕೊಡ್ತಾರೆ. (2 ಕೊರಿಂ. 4:7) ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಬಹಿಷ್ಕಾರ ಆದ್ರೆ ನೀವು ಯೆಹೋವನಿಗೆ ನಿಯತ್ತಾಗಿರೋಕೆ ಮತ್ತು ನಂಬಿಕೆ ಕಳಕೊಳ್ಳದೇ ಇರೋಕೆ ನಿಮಗೆ ಖಂಡಿತ ಸಹಾಯ ಮಾಡೇ ಮಾಡ್ತಾರೆ.

ಗೀತೆ 68 ವಿನಮ್ರನ ಪ್ರಾರ್ಥನೆ

^ ಪ್ಯಾರ. 5 ನಮ್ಮ ಕುಟುಂಬದಲ್ಲಿ ಯಾರಾದ್ರು ಯೆಹೋವನನ್ನ ಬಿಟ್ಟುಹೋದಾಗ ನಮಗೆ ತುಂಬ ಬೇಜಾರಾಗುತ್ತೆ. ಹೀಗಾದಾಗ ಯೆಹೋವ ದೇವರಿಗೆ ಹೇಗನಿಸುತ್ತೆ? ಬಹಿಷ್ಕಾರ ಆದ ವ್ಯಕ್ತಿಯ ಕುಟುಂಬದವರು ನೋವನ್ನ ತಾಳಿಕೊಳ್ಳೋಕೆ ಮತ್ತು ಅವರ ನಂಬಿಕೆಯನ್ನ ಕಳಕೊಳ್ಳದೇ ಇರೋಕೆ ಏನು ಮಾಡಬೇಕು ಅಂತ ಈ ಲೇಖನದಲ್ಲಿ ನೋಡೋಣ. ಅಷ್ಟೇ ಅಲ್ಲ, ಆ ಕುಟುಂಬದವರಿಗೆ ಸಭೆಯವರು ಹೇಗೆ ಸಮಾಧಾನ ಮಾಡಬಹುದು, ಧೈರ್ಯ ತುಂಬಬಹುದು ಅಂತನೂ ನೋಡೋಣ.

^ ಪ್ಯಾರ. 1 ಈ ಲೇಖನದಲ್ಲಿ ಕೆಲವು ಹೆಸರುಗಳು ಬದಲಾಗಿವೆ.

^ ಪ್ಯಾರ. 79 ಚಿತ್ರ ವಿವರಣೆ: ಒಬ್ಬ ಸಹೋದರ ಯೆಹೋವನನ್ನ, ಕುಟುಂಬವನ್ನ ಬಿಟ್ಟು ಹೋಗುವಾಗ ಅವನ ಹೆಂಡತಿ-ಮಕ್ಕಳು ಅಳ್ತಿದ್ದಾರೆ.

^ ಪ್ಯಾರ. 81 ಚಿತ್ರ ವಿವರಣೆ: ಇಬ್ಬರು ಹಿರಿಯರು ಒಂದು ಕುಟುಂಬಕ್ಕೆ ಧೈರ್ಯ ತುಂಬೋಕೆ ಬಂದಿದ್ದಾರೆ.