ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದ್ವೇಷದ ಸರಪಳಿಯನ್ನು ಮುರಿಯೋದು ಹೇಗೆ?

3 | ದ್ವೇಷದ ಕಳೆಯನ್ನ ಮನಸ್ಸಿಂದ ಕಿತ್ತಾಕಿ

3 | ದ್ವೇಷದ ಕಳೆಯನ್ನ ಮನಸ್ಸಿಂದ ಕಿತ್ತಾಕಿ

ಬೈಬಲ್‌ ಕಲಿಸೋದು:

“ನಿಮ್ಮ ಯೋಚಿಸೋ ವಿಧಾನವನ್ನ ಬದಲಾಯಿಸೋಕೆ ಬಿಟ್ಟುಕೊಡಿ. ಆಗ ದೇವರು ಇಷ್ಟಪಡೋ ವಿಷ್ಯಗಳು ಯಾವಾಗ್ಲೂ ಒಳ್ಳೇದಾಗಿ, ಪರಿಪೂರ್ಣವಾಗಿ, ಸರಿಯಾಗಿ ಇರುತ್ತೆ ಅಂತ ಪರೀಕ್ಷಿಸಿ ಅರ್ಥ ಮಾಡ್ಕೊಳ್ತೀರ.”ರೋಮನ್ನರಿಗೆ 12:2.

ಅರ್ಥ ಏನು?

ನಾವು ಮನಸ್ಸಲ್ಲಿ ಏನು ಯೋಚಿಸ್ತೀವಿ ಅನ್ನೋದನ್ನ ದೇವರು ಗಮನಿಸ್ತಾ ಇರ್ತಾನೆ. (ಯೆರೆಮೀಯ 17:10) ನಾವು ದ್ವೇಷದಿಂದ ಮಾತಾಡೋದನ್ನ ಮತ್ತು ನಡ್ಕೊಳ್ಳೋದನ್ನ ನಿಲ್ಲಿಸಿದ್ರೆ ಮಾತ್ರ ಸಾಕಾಗಲ್ಲ, ಅದಕ್ಕಿಂತ ಹೆಚ್ಚಿನದ್ದನ್ನು ಮಾಡಬೇಕು. ದ್ವೇಷದ ಕಿಡಿ ಶುರುವಾಗೋದೇ ಮನಸ್ಸಲ್ಲಿ. ಹಾಗಾಗಿ ನಮ್ಮ ಮನಸ್ಸಲ್ಲಿ ದ್ವೇಷವನ್ನ ಹುಟ್ಟಿಸೋ ಯಾವುದಾದ್ರೂ ವಿಷಯಗಳಿದ್ರೆ ತಕ್ಷಣ ಅದನ್ನು ಬೇರು ಸಮೇತ ಕಿತ್ತಾಕಬೇಕು. ಹೀಗೆ ಮಾಡೋದಾದ್ರೆ ಮಾತ್ರ ನಮ್ಮನ್ನು “ಬದಲಾಯಿಸಿಕೊಂಡು” ದ್ವೇಷ ಅನ್ನೋ ಸರಪಳಿಯನ್ನ ಕಿತ್ತು ಹಾಕೋಕೆ ಆಗುತ್ತೆ.

ನೀವೇನು ಮಾಡಬಹುದು?

ಬೇರೆಯವರ ಬಗ್ಗೆ ನಿಮಗೆ ಯಾವ ರೀತಿಯ ಯೋಚನೆ ಇದೆ? ಅದ್ರಲ್ಲೂ ವಿಶೇಷವಾಗಿ ಬೇರೆ ಜಾತಿ ಅಥವಾ ದೇಶದವರ ಬಗ್ಗೆ ನೀವು ಯಾವ ರೀತಿ ಯೋಚಿಸ್ತೀರಾ ಅಂತ ಪರೀಕ್ಷಿಸಿ. ಅದಕ್ಕೆ ಸಹಾಯ ಮಾಡೋ ಕೆಲವು ಪ್ರಶ್ನೆಗಳು: ‘ನಾನು ಅವರನ್ನ ಹೇಗೆ ನೋಡ್ತಿದ್ದೀನಿ? ಅವರ ಬಗ್ಗೆ ಎಲ್ಲಾ ತಿಳ್ಕೊಂಡು ನಾನು ಅವರನ್ನ ಆ ರೀತಿ ನೋಡ್ತಿದ್ದೀನಾ? ಅಥವಾ ಅವರ ಮೇಲೆ ನನಗೆ ಪೂರ್ವಾಭಿಪ್ರಾಯ ಇದೆಯಾ?’ ಹಾಗಿರೋದಾದ್ರೆ ದ್ವೇಷ ಮತ್ತು ಹಿಂಸೆ ತುಂಬಿರೋ ಸಿನಿಮಾಗಳಿಂದ, ವಿಡಿಯೋಗಳಿಂದ ಮತ್ತು ಮನೋರಂಜನೆಗಳಿಂದ ದೂರ ಇರಬೇಕು.

ದೇವರ ವಾಕ್ಯ ನಮ್ಮ ಮನಸ್ಸಲ್ಲಿರೋ ದ್ವೇಷವನ್ನು ಬೇರು ಸಮೇತ ಕಿತ್ತು ಹಾಕಲು ಸಹಾಯ ಮಾಡುತ್ತೆ.

ನಮ್ಮ ಯೋಚನೆ, ಅನಿಸಿಕೆಗಳು ಯಾವಾಗಲೂ ಸರಿಯಾಗಿದೆಯಾ ಅಂತ ತಿಳಿದುಕೊಳ್ಳೋದು ಸುಲಭ ಅಲ್ಲ. ಆದ್ರೆ ದೇವರ ವಾಕ್ಯಕ್ಕೆ “ಹೃದಯದ ಆಲೋಚನೆ, ಉದ್ದೇಶಗಳನ್ನು ಬಯಲು ಮಾಡೋ ಸಾಮರ್ಥ್ಯ” ಇದೆ. (ಇಬ್ರಿಯ 4:12) ಹಾಗಾಗಿ ಬೈಬಲನ್ನು ಅಧ್ಯಯನ ಮಾಡಿ. ನೀವು ಯಾವ ತರ ಯೋಚಿಸ್ತಿದ್ದೀರಾ, ಬೈಬಲಲ್ಲಿ ಏನು ಹೇಳ್ತಾ ಇದೆ ಅಂತ ನೋಡಿ. ಆಮೇಲೆ, ಬೈಬಲ್‌ ಹೇಳೋ ತರ ನೀವು ಯೋಚಿಸ್ತಿದ್ದೀರಾ ಅಂತ ಪರೀಕ್ಷಿಸಿ. ನಮ್ಮ ಮನಸ್ಸಲ್ಲಿರೋ ದ್ವೇಷ “ದೊಡ್ಡ ದೊಡ್ಡ ಕೋಟೆಗಳ ತರ” ಇದ್ರೂ ಅದನ್ನ ಕೆಡವಿ ಹಾಕೋಕೆ ದೇವರ ವಾಕ್ಯ ಸಹಾಯ ಮಾಡುತ್ತೆ.—2 ಕೊರಿಂಥ 10:4, 5.