ದ್ವೇಷ ಶಾಶ್ವತವಾಗಿ ಕಣ್ಮರೆಯಾಗುತ್ತೆ!
ನಾವು ನಮ್ಮ ಮನಸ್ಸಲ್ಲಿರೋ ದ್ವೇಷವನ್ನು ಕಿತ್ತಾಕಿದ್ರೂ ಬೇರೆಯವರ ದ್ವೇಷವನ್ನ ತೆಗೆದು ಹಾಕೋಕೆ ಅಥವಾ ನಿಯಂತ್ರಿಸೋಕೆ ನಮ್ಮಿಂದಾಗಲ್ಲ. ಎಷ್ಟೋ ಅಮಾಯಕ ಜನರು ದ್ವೇಷಕ್ಕೆ ಗುರಿಯಾಗ್ತಾನೇ ಇದ್ದಾರೆ. ಹಾಗಿದ್ರೆ ದ್ವೇಷಕ್ಕೆ ಶಾಶ್ವತ ಪರಿಹಾರ ಏನಾದ್ರೂ ಇದೆಯಾ?
ಖಂಡಿತ ಇದೆ. ದ್ವೇಷ ಅನ್ನೋ ಸರಪಳಿಯನ್ನು ಕಿತ್ತು ಹಾಕೋಕೆ ಯೆಹೋವ ದೇವರಿಗೆ ಮಾತ್ರ ಆಗೋದು. ಇದು ನಿಜ ಆಗುತ್ತೆ ಅಂತ ಬೈಬಲ್ ಹೇಳುತ್ತೆ.—ಜ್ಞಾನೋಕ್ತಿ 20:22.
ದ್ವೇಷಕ್ಕೆ ಮುಖ್ಯ ಕಾರಣವಾಗಿರೋ ಎಲ್ಲವನ್ನ ದೇವರು ತೆಗೆದುಹಾಕ್ತಾನೆ
-
1. ಸೈತಾನ. ದ್ವೇಷದ ಕಿಚ್ಚನ್ನ ಹಚ್ಚಿದ್ದು ಸೈತಾನನೇ. ಇವನನ್ನ ಮತ್ತು ಇವನ ತರ ದ್ವೇಷ ಕಾರುತ್ತಿರೋ ಜನರನ್ನ ದೇವರು ಸರ್ವನಾಶ ಮಾಡ್ತಾನೆ.—ಕೀರ್ತನೆ 37:38; ರೋಮನ್ನರಿಗೆ 16:20.
-
2. ದ್ವೇಷ ತುಂಬಿದ ಸೈತಾನನ ಲೋಕ. ದ್ವೇಷ ಕೆರಳಿಸೋ ರಾಜಕೀಯ ವ್ಯಕ್ತಿಗಳನ್ನ ಮತ್ತು ಧಾರ್ಮಿಕ ನಾಯಕರನ್ನ ದೇವರು ಸರ್ವನಾಶ ಮಾಡ್ತಾನೆ. ಅಷ್ಟೇ ಅಲ್ಲ, ಜನರನ್ನ ಶೋಷಿಸುತ್ತಾ ಇರೋ ದುರಾಸೆ ತುಂಬಿರೋ ಆರ್ಥಿಕ ವ್ಯವಸ್ಥೆಯನ್ನೂ ದೇವರು ನಾಶ ಮಾಡ್ತಾನೆ.—2 ಪೇತ್ರ 3:13.
-
3. ಮನುಷ್ಯನಲ್ಲಿರೋ ಪಾಪ. ಮನುಷ್ಯರೆಲ್ಲರಲ್ಲಿ ಪಾಪ ಇರೋದ್ರಿಂದಾಗಿ ನಾವು ಯೋಚಿಸೋದು, ಮಾಡೋದು ಕೆಲವೊಮ್ಮೆ ತಪ್ಪಾಗಿರುತ್ತೆ ಅಂತ ಬೈಬಲ್ ಹೇಳುತ್ತೆ. (ರೋಮನ್ನರಿಗೆ 5:12) ಈ ಕಾರಣದಿಂದಾನೇ ಜನರು ಬೇರೆಯವರ ಮೇಲೆ ದ್ವೇಷ ಕಾರುತ್ತಾರೆ. ಆದ್ರೆ ದೇವರು ದ್ವೇಷಕ್ಕೆ ಕಾರಣವಾಗಿರೋ ಪಾಪವನ್ನೇ ನಮ್ಮಿಂದ ತೆಗೆದು ಹಾಕ್ತಾರೆ. ಹೀಗೆ ದ್ವೇಷ ಶಾಶ್ವತವಾಗಿ ಕಣ್ಮರೆಯಾಗುತ್ತೆ.—ಯೆಶಾಯ 54:13.
ದ್ವೇಷವಿಲ್ಲದ ಲೋಕ ಬರುತ್ತೆ ಅಂತ ಬೈಬಲ್ ಹೇಳುತ್ತೆ
-
1. ಯಾರಿಗೂ ಅನ್ಯಾಯ ಆಗಲ್ಲ. ದೇವರ ಸರ್ಕಾರ ಸ್ವರ್ಗದಿಂದ ಆಳುತ್ತೆ, ಹಾಗಾಗಿ ಭೂಮಿಯಲ್ಲಿರೋ ಎಲ್ಲರಿಗೂ ನ್ಯಾಯ ಸಿಗುತ್ತೆ. (ದಾನಿಯೇಲ 2:44) ಅಲ್ಲಿ ಪೂರ್ವಾಭಿಪ್ರಾಯ ಇರೋರು, ತಮಗಿಂತ ಭಿನ್ನರಾದವರನ್ನ ಅಥವಾ ಏಳಿಗೆ ಹೊಂದುವವರನ್ನ ಸಹಿಸದವರು ಇರಲ್ಲ. ಈಗಿರೋ ಅನ್ಯಾಯವನ್ನ ದೇವರು ಸಂಪೂರ್ಣವಾಗಿ ತೆಗೆದು ಹಾಕ್ತಾನೆ.—ಲೂಕ 18:7.
-
2. ಎಲ್ಲರೂ ಶಾಂತಿಯಿಂದ ಜೀವನ ಮಾಡ್ತಾರೆ. ಯುದ್ಧ ಹಿಂಸೆಯಿಂದಾಗುವ ಕಷ್ಟ ನಷ್ಟಗಳನ್ನು ಅಲ್ಲಿ ಯಾರೂ ಅನುಭವಿಸಲ್ಲ. (ಕೀರ್ತನೆ 46:9) ಇಡೀ ಭೂಮಿಯಲ್ಲಿ ಪ್ರೀತಿ ಶಾಂತಿಯಿಂದ ಜೀವಿಸೋ ಜನರೇ ತುಂಬಿರುತ್ತಾರೆ. ಅಲ್ಲಿ ಎಲ್ಲಾ ಕಡೆ ಸುರಕ್ಷತೆ ಇರುತ್ತೆ.—ಕೀರ್ತನೆ 72:7.
-
3. ಯಾವುದೇ ಕೊರತೆಯಿಲ್ಲದೆ ಜನರು ಶಾಶ್ವತವಾಗಿ ಬದುಕುತ್ತಾರೆ. ಅಲ್ಲಿರೋ ಪ್ರತಿಯೊಬ್ಬರು ಒಬ್ಬರಿಗೊಬ್ಬರು ನಿಜ ಪ್ರೀತಿ ತೋರಿಸುತ್ತಾರೆ. (ಮತ್ತಾಯ 22:39) ಅಲ್ಲಿ ಯಾರಿಗೂ ಕಷ್ಟದ ಜೀವನ ಇರಲ್ಲ. ಅವರ ಕಹಿ ನೆನಪುಗಳೆಲ್ಲ ಮಾಸಿ ಹೋಗುತ್ತೆ. (ಯೆಶಾಯ 65:17) ದೇವರು ದ್ವೇಷದ ಜ್ವಾಲೆಯನ್ನು ನಂದಿಸೋದ್ರಿಂದ ಅಲ್ಲಿರೋ ಜನರೆಲ್ಲ “ನೆಮ್ಮದಿಯಾಗಿ ಖುಷಿಖುಷಿಯಾಗಿ” ಬದುಕುತ್ತಾರೆ.—ಕೀರ್ತನೆ 37:11.
ಇಂಥ ಪರಿಸ್ಥಿತಿಯಲ್ಲಿ ಬದುಕೋಕೆ ನೀವು ಇಷ್ಟಪಡುತ್ತೀರಾ? ಇವತ್ತು ಎಷ್ಟೋ ಜನ ಬೈಬಲ್ ತತ್ವಗಳನ್ನು ತಮ್ಮ ಜೀವನದಲ್ಲಿ ಪಾಲಿಸುತ್ತಾ ದ್ವೇಷ ಅನ್ನೋ ಸರಪಳಿಯನ್ನು ಕಿತ್ತು ಹಾಕಿದ್ದಾರೆ. (ಕೀರ್ತನೆ 37:8) ಈಗಾಗ್ಲೇ ಲಕ್ಷಾಂತರ ಯೆಹೋವನ ಸಾಕ್ಷಿಗಳು ಇದನ್ನ ಮಾಡ್ತಿದ್ದಾರೆ. ಇವರು ಬೇರೆಬೇರೆ ಹಿನ್ನೆಲೆ, ಸಂಸ್ಕೃತಿಯಿಂದ ಬಂದರೂ ಪ್ರೀತಿ ಒಗ್ಗಟ್ಟನ್ನು ತೋರಿಸ್ತಾ ಒಂದು ಕುಟುಂಬದಂತೆ ಖುಷಿಖುಷಿಯಾಗಿ ಇದ್ದಾರೆ.—ಯೆಶಾಯ 2:2-4.
ಅನ್ಯಾಯ ಆದಾಗ ಭೇದಭಾವ ಮಾಡ್ದಾಗ ಅದನ್ನು ಸಹಿಸಿಕೊಳ್ಳೋದು ಹೇಗೆ ಅಂತ ಯೆಹೋವನ ಸಾಕ್ಷಿಗಳು ಕಲಿತಿದ್ದಾರೆ. ಅದನ್ನು ನಿಮಗೂ ಹೇಳಿ ಕೊಡೋಕೆ ಅವರು ಇಷ್ಟಪಡ್ತಾರೆ. ನೀವು ಈ ವಿಷಯವನ್ನು ಕಲಿಯೋದಾದ್ರೆ ದ್ವೇಷವನ್ನು ಕಿತ್ತಾಕಿ ಜನರನ್ನ ಪ್ರೀತಿಸೋಕೆ ಸಹಾಯ ಆಗುತ್ತೆ. ನೀವು ದ್ವೇಷ ತೋರಿಸುವವರ ಜೊತೆನೂ ಚೆನ್ನಾಗಿ ನಡ್ಕೊಳ್ಳೋಕೆ ಆಗುತ್ತೆ. ಹೀಗೆ ಮಾಡೋದಾದ್ರೆ ನೀವು ಖುಷಿಯಾಗಿ ಇರುತ್ತೀರ ಮತ್ತು ಬೇರೆಯವರ ಜೊತೆ ನಿಮಗೆ ಒಳ್ಳೇ ಸ್ನೇಹನೂ ಇರುತ್ತೆ. ಅಷ್ಟೇ ಅಲ್ಲ, ದ್ವೇಷವನ್ನು ಬೇರು ಸಮೇತ ಕಿತ್ತು ಹಾಕೋ ದೇವರ ಸರ್ಕಾರದಲ್ಲಿ ಜೀವಿಸೋಕೆ ನೀವು ಏನು ಮಾಡ್ಬೇಕು ಅಂತ ಕಲಿತಿರ.—ಕೀರ್ತನೆ 37:29.