ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದ್ವೇಷದ ಸರಪಳಿಯನ್ನು ಮುರಿಯೋದು ಹೇಗೆ?

2 | ಸೇಡು ತೀರಿಸಬೇಡಿ

2 | ಸೇಡು ತೀರಿಸಬೇಡಿ

ಬೈಬಲ್‌ ಕಲಿಸೋದು:

“ಯಾರಾದ್ರೂ ನಿಮಗೆ ಕೆಟ್ಟದು ಮಾಡಿದ್ರೆ ನೀವೂ ಅವ್ರಿಗೆ ಕೆಟ್ಟದು ಮಾಡಬೇಡಿ . . . ಸಾಧ್ಯವಾದ್ರೆ ಎಲ್ರ ಜೊತೆ ಶಾಂತಿಯಿಂದ ಇರೋಕೆ ನಿಮ್ಮಿಂದ ಆಗೋದನ್ನೆಲ್ಲ ಮಾಡಿ . . . ಸೇಡು ತೀರಿಸಬೇಡಿ . . . ‘“ಸೇಡು ತೀರಿಸೋದು ನನ್ನ ಕೆಲಸ, ನಾನೇ ಸರಿಯಾದ ಪ್ರತಿಫಲ ಕೊಡ್ತೀನಿ” ಅಂತ ಯೆಹೋವ ಹೇಳ್ತಾನೆ’ ಅಂತ ಬರೆದಿದೆ.”—ರೋಮನ್ನರಿಗೆ 12:17-19.

ಅರ್ಥ ಏನು?

ಯಾರಾದ್ರು ನಮಗೆ ಕೆಟ್ಟದು ಮಾಡಿದ್ರೆ ಅವರ ಮೇಲೆ ಕೋಪ ಬರೋದು ಸಹಜ. ಆದ್ರೆ ಅವರ ಮೇಲೆ ಸೇಡು ತೀರಿಸಬಾರದು ಅಂತ ದೇವರು ಬಯಸುತ್ತಾನೆ. ಅದಕ್ಕೆ ಬದಲು ನಮಗಾಗಿರೋ ಅನ್ಯಾಯವನ್ನ ದೇವರು ಸರಿ ಮಾಡೋ ತನಕ ಕಾಯಬೇಕು ಅಂತ ಆತನು ಇಷ್ಟಪಡುತ್ತಾನೆ.—ಕೀರ್ತನೆ 37:7, 10.

ನೀವೇನು ಮಾಡಬಹುದು?

ಮನುಷ್ಯರಲ್ಲಿ ಕುಂದು ಕೊರತೆಗಳು ಇರೋದ್ರಿಂದ ಅವರು ಸೇಡು ತೀರಿಸುವಾಗ ದ್ವೇಷ ಅನ್ನೋ ಸರಪಳಿಯ ಕೊಂಡಿಗಳು ಒಂದೊಂದಾಗಿ ಸೇರಿಕೊಳ್ಳುತ್ತಾ ಹೋಗುತ್ತೆ. ಹಾಗಾಗಿ ಯಾರಾದ್ರು ನಿಮಗೆ ಹಾನಿ ಮಾಡಿದ್ರೆ ಏಟಿಗೆ ತಿರುಗೇಟು ಕೊಡೋಕೆ ಹೋಗಬೇಡಿ. ಮೊದಲು ನಿಮ್ಮ ಭಾವನೆಗಳನ್ನು ನಿಯಂತ್ರಿಸಿ, ಸಮಾಧಾನವಾಗಿ ಇರೋಕೆ ಪ್ರಯತ್ನಿಸಿ. ಇನ್ನು ಕೆಲವೊಮ್ಮೆ, ನಡೆದ ವಿಷಯಗಳನ್ನ ಮನಸ್ಸಿಗೆ ತಗೊಳ್ಳದೆ ಇರೋದೇ ಒಳ್ಳೇದು. (ಜ್ಞಾನೋಕ್ತಿ 19:11) ಕೆಲವು ವಿಷಯಗಳನ್ನ ನಾವು ಅಧಿಕಾರಿಗಳಿಗೆ ಹೇಳಬೇಕಾಗುತ್ತೆ. ನೀವು ಯಾವುದಾದ್ರು ಅಪರಾಧಕ್ಕೆ ಬಲಿಯಾಗಿದ್ದರೆ, ಆ ವಿಷಯವನ್ನ ಪೊಲೀಸರಿಗೆ ಅಥವಾ ಬೇರೆ ಅಧಿಕಾರಿಗಳಿಗೆ ವರದಿಸಬಹುದು.

ಸೇಡು ಒಂದು ತಿರುಗು ಬಾಣ

ಸಮಸ್ಯೆಯನ್ನ ಸಮಾಧಾನವಾಗಿ ಬಗೆಹರಿಸೋಕೆ ಆಗದೆ ಇದ್ರೆ ಏನು ಮಾಡೋದು? ಅಥವಾ ಸಮಸ್ಯೆಯನ್ನ ಬಗೆಹರಿಸೋಕೆ ನಿಮ್ಮಿಂದಾದ ಎಲ್ಲಾ ಪ್ರಯತ್ನ ಮಾಡಿನೂ ಪ್ರಯೋಜನ ಆಗಿಲ್ಲಾಂದ್ರೆ ಏನ್‌ ಮಾಡೋದು? ಆಗ ಸೇಡು ತೀರಿಸಿಕೊಳ್ಳೋಕೆ ಹೋಗಬೇಡಿ. ಹಾಗೆ ಮಾಡಿದ್ರೆ ಪರಿಸ್ಥಿತಿ ಇನ್ನು ಹದಗೆಡುತ್ತೆ. ಅದರ ಬದಲು ದ್ವೇಷದ ಜ್ವಾಲೆ ನಂದಿಸಿ. ಆ ಸಮಸ್ಯೆಯನ್ನ ದೇವರು ಸರಿ ಮಾಡ್ತಾನೆ ಅನ್ನೋ ಭರವಸೆ ಇಡಿ. ಬೈಬಲ್‌ ಹೇಳೋದು: “ಆತನ ಮೇಲೆ ಭರವಸೆ ಇಡು, ಆತನೇ ನಿನ್ನ ಪರವಾಗಿ ಹೆಜ್ಜೆ ತಗೊತಾನೆ.”—ಕೀರ್ತನೆ 37:3-5.