ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ

ಸಾವಿನ ನೋವಿಗೆ ಸಾಂತ್ವನದ ಮದ್ದು

ಸಾವಿನ ನೋವಿಗೆ ಸಾಂತ್ವನದ ಮದ್ದು

“ಆಗೋದೆಲ್ಲಾ ಒಳ್ಳೇದಕ್ಕೆ. ಅಳಬೇಡ ಮಗಳೇ. . . ”

ಪ್ರಣೀತಳ * ತಂದೆ ಕಾರ್‌ ಅಪಘಾತದಲ್ಲಿ ತೀರಿಕೊಂಡಿದ್ದರು. ಶವಸಂಸ್ಕಾರಕ್ಕೆ ಬಂದಿದ್ದ ಮಹಿಳೆಯೊಬ್ಬಳು ಈ ಮಾತುಗಳನ್ನು ಹೇಳಿದರು.

ಪ್ರಣೀತಳಿಗೆ ಸಾಂತ್ವನ ಹೇಳಲೆಂದು ಆಪ್ತರೊಬ್ಬರು ಈ ಮಾತುಗಳನ್ನು ಹೇಳಿದರು. ಆದರೆ ಅದು ಪ್ರಣೀತಳಿಗೆ ನೆಮ್ಮದಿ ಕೊಡುವ ಬದಲು ತುಂಬ ನೋವು ಕೊಟ್ಟಿತು. ಎಷ್ಟರ ಮಟ್ಟಿಗೆಂದರೆ ಅನೇಕ ವರ್ಷಗಳಾದ ಮೇಲೆ ಆ ಘಟನೆ ಬಗ್ಗೆ ಬರೆಯುವಾಗಲೂ ಅವಳ ಕಣ್ಣೀರ ಕಟ್ಟೆ ಒಡೆಯಿತು. ಅವಳು ತನ್ನೊಳಗೆ “ನನ್ನಪ್ಪ ಸತ್ತು ಒಳ್ಳೇದಾಗಿಲ್ಲ” ಎಂದು ಕೊರಗುತ್ತಿದ್ದಳು. ಯಾಕೆಂದರೆ ಅವಳು ತನ್ನ ತಂದೆ ಮೇಲೆ ಪ್ರಾಣನೇ ಇಟ್ಟುಕೊಂಡಿದ್ದಳು.

ಪ್ರಣೀತಳಂತೆ ಅನೇಕರಿಗೆ ಸಾವಿನ ದುಃಖದಿಂದ ಹೊರಬರಲು ತುಂಬಾ ಸಮಯ ಬೇಕಾಗುತ್ತದೆ. ಅದರಲ್ಲೂ ಪ್ರೀತಿಪಾತ್ರರು ತೀರಿಹೋದಾಗಂತೂ ತುಂಬಾ ತುಂಬಾ ಸಮಯ ಹಿಡಿಯುತ್ತದೆ. ಅದಕ್ಕೇ ಬೈಬಲ್‌, ಸಾವನ್ನು “ಕೊನೆಯ ಶತ್ರು” ಎಂದು ಹೇಳುತ್ತದೆ. (1 ಕೊರಿಂಥ 15:26) ಸಾವು ಮತ್ತು ಅದು ತರುವ ನೋವು ನಮ್ಮ ಜೀವನವನ್ನೇ ಅಲ್ಲೋಲಕಲ್ಲೋಲ ಮಾಡಿಬಿಡುತ್ತದೆ. ಇದ್ದಕ್ಕಿದ್ದಂತೆ ಸಾವು ನಮ್ಮ ಪ್ರಿಯರೊಬ್ಬರನ್ನು ಕಿತ್ತುಕೊಂಡಾಗ ಅದು ಅರಗಿಸಿಕೊಳ್ಳಲಾಗದ ವಿಷಯ. ಇಂಥ ನೋವು, ಸಂಕಟದಿಂದ ಯಾರೂ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಇದು ಸಹಜ.

‘ಈ ನೋವು, ನೆನಪುಗಳು ನನ್ನನ್ನ ಎಷ್ಟು ದಿನ ಕಾಡುತ್ತೆ? ಹೇಗೆ ಸಮಾಧಾನ ಮಾಡಿಕೊಳ್ಳಲಿ? ಆಪ್ತರನ್ನು ಕಳೆದುಕೊಂಡು ದುಃಖದಲ್ಲಿರುವವರಿಗೆ ಹೇಗೆ ಸಮಾಧಾನ ಹೇಳಲಿ? ತೀರಿಹೋಗಿರುವ ನಮ್ಮ ಪ್ರೀತಿಪಾತ್ರರು ಮತ್ತೆ ಬದುಕುತ್ತಾರಾ?’ ನಿಮಗೂ ಈ ಪ್ರಶ್ನೆಗಳು ಬಂದಿದೆಯಾ? (w16-E No. 3)

^ ಪ್ಯಾರ. 4 ಹೆಸರುಗಳನ್ನು ಬದಲಿಸಲಾಗಿದೆ.