ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತೀರಿ ಹೋದವರನ್ನು ಮತ್ತೆ ಎದುರುನೋಡಬಹುದು!

ತೀರಿ ಹೋದವರನ್ನು ಮತ್ತೆ ಎದುರುನೋಡಬಹುದು!

ಪ್ರೀತಿಯ ಜನರು ತೀರಿಹೋದರೆ ನಮಗೆ ತುಂಬ ದುಃಖ ಆಗುತ್ತೆ. ಈ ರೀತಿ ಸಾವಿನ ನೋವನ್ನು ಅನುಭವಿಸದೇ ಇರುವವರು ನಮ್ಮಲ್ಲಿ ಯಾರು ಇಲ್ಲ. ಆದರೆ ಮರಣ, ಬದುಕಿನ ಪೂರ್ಣ ವಿರಾಮಾನಾ? ಸತ್ತವರನ್ನು ನಾವು ಮರೆತು ಬಿಡಬೇಕಾ? ಮತ್ತೆ ಯಾವತ್ತೂ ಅವರನ್ನು ನೋಡಕ್ಕಾಗಲ್ವಾ?

ಬೈಬಲ್‌ ಏನು ಹೇಳುತ್ತೆ:

ತೀರಿ ಹೋದವರನ್ನು ಮತ್ತೆ ನೋಡಬಹುದು

‘ಸಮಾಧಿಗಳಲ್ಲಿರುವವರೆಲ್ಲರು, ಎದ್ದು ಹೊರಗೆ ಬರುತ್ತಾರೆ’.—ಯೋಹಾನ 5:28, 29.

ದೇವರು ಸತ್ತವರಿಗೆ ಪುನಃ ಜೀವ ಕೊಡುತ್ತಾನೆ.

ಪುನರುತ್ಥಾನ ಭೂಮಿಯಲ್ಲಿ ನಡೆದೇ ನಡೆಯುತ್ತೆ

‘ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದು’.—ಅ. ಕಾರ್ಯಗಳು 24:15.

ಮರಣ ಹೊಂದಿದ ಕೋಟ್ಯಾಂತರ ಜನರಿಗೆ ಪುನಃ ಜೀವಿಸುವ ಅವಕಾಶ ಸಿಗುತ್ತೆ ಮತ್ತು ಶಾಂತಿಯಿಂದ ಶಾಶ್ವತವಾಗಿ ಜೀವಿಸುವ ನಿರೀಕ್ಷೆಯೂ ಅವರಿಗಿದೆ.

ಪುನರುತ್ಥಾನವಾಗುತ್ತೆ ಎಂದು ನಾವು ನಂಬಬಹುದು

“(ದೇವರು) ನಕ್ಷತ್ರಗಳ ಸಂಖ್ಯೆಯನ್ನು ಗೊತ್ತುಮಾಡಿ ಪ್ರತಿಯೊಂದಕ್ಕೆ ಹೆಸರಿಟ್ಟಿದ್ದಾನೆ.”—ಕೀರ್ತನೆ 147:4.

ಪ್ರತಿಯೊಂದು ನಕ್ಷತ್ರದ ಹೆಸರನ್ನೇ ನೆನಪಿಟ್ಟಿರುವ ದೇವರಿಗೆ, ತಾನು ಪುನರುತ್ಥಾನ ಮಾಡಲು ಬಯಸುವ ಜನರ ಬಗ್ಗೆ ನೆನಪಿಟ್ಟುಕೊಳ್ಳುವುದು ಕಷ್ಟನಾ?