ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರಿಗೆ ನಮ್ಮ ಮೇಲೆ ಪ್ರೀತಿ ಕಾಳಜಿ ಇದೆ

ದೇವರಿಗೆ ನಮ್ಮ ಮೇಲೆ ಪ್ರೀತಿ ಕಾಳಜಿ ಇದೆ

1. ದೇವರು ಸೂರ್ಯ ಉದಯಿಸುವ ಹಾಗೆ ಮಾಡ್ತಾನೆ

ಒಂದು ಮರ ಬೆಳೆದು ಎಲೆ, ಹೂವು, ಕಾಯಿ, ಹಣ್ಣು ಬಿಡಬೇಕಂದ್ರೆ ಅದಕ್ಕೆ ಸೂರ್ಯನ ಬೆಳಕು ಬೇಕೇಬೇಕು. ಮರ ಮಣ್ಣಿನಿಂದ ನೀರನ್ನ ಹೀರಿಕೊಂಡು ಎಲೆಗಳಿಗೆ ಕಳಿಸಿ ಆ ನೀರು ಆವಿ ಆಗಿ ಹೋಗಲು ಸೂರ್ಯನ ಬೆಳಕೇ ಕಾರಣ. ಸ್ವಲ್ಪ ಯೋಚಿಸಿ, ಸೂರ್ಯನೇ ಇಲ್ಲಾಂದ್ರೆ ಇದೆಲ್ಲಾ ಸಾಧ್ಯನಾ?

2. ದೇವರು ಮಳೆ ಸುರಿಸ್ತಾನೆ

ಭೂಮಿನಾ ಮಳೆ ತೋಯಿಸೋದು ದೇವರ ಅದ್ಭುತ ವರ. ಮಳೆಯಿಂದ ಭೂಮೀಲಿ ನಮಗಾಗಿ ಸಾಕಷ್ಟು ಬೆಳೆ ಬೆಳೆಯುತ್ತೆ. ಹೀಗೆ ದೇವರು ಬಗೆಬಗೆಯ ಆಹಾರ ಕೊಟ್ಟು ನಮ್ಮ ಮನಸ್ಸನ್ನ ಖುಷಿಪಡಿಸ್ತಾನೆ.

3. ದೇವರು ಊಟ ಬಟ್ಟೆ ಕೊಟ್ಟು ಪೋಷಿಸ್ತಾನೆ

ಒಬ್ಬ ತಂದೆ ತನ್ನ ಕುಟುಂಬಕ್ಕೆ ಬೇಕಾಗಿರೋ ಆಹಾರ ಬಟ್ಟೆನಾ ಹೇಗೆ ಕೊಡ್ತಾನೋ ಅದೇ ತರ ದೇವರೂ ನಮಗೆ ಬೇಕಾಗಿರೋದನ್ನ ಕೊಡ್ತಾನೆ. ನಮ್ಮನ್ನ ಚೆನ್ನಾಗಿ ನೋಡಿಕೊಳ್ತಾನೆ ಅನ್ನೋದರ ಬಗ್ಗೆ ದೇವರು ತನ್ನ ಗ್ರಂಥದಲ್ಲಿ ಬರೆಸಿಟ್ಟಿರೋದನ್ನ ಗಮನಿಸಿ. ಅಲ್ಲಿ ಹೇಳುತ್ತೆ: “ಆಕಾಶದ ಪಕ್ಷಿಗಳನ್ನು ಸೂಕ್ಷ್ಮವಾಗಿ ಗಮನಿಸಿರಿ; ಅವು ಬೀಜವನ್ನು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಕಣಜಗಳಲ್ಲಿ ಶೇಖರಿಸಿಡುವುದಿಲ್ಲ; ಹಾಗಿದ್ದರೂ ಸ್ವರ್ಗದಲ್ಲಿರುವ ನಿಮ್ಮ ತಂದೆಯು ಅವುಗಳನ್ನು ಪೋಷಿಸುತ್ತಾನೆ. ನೀವು ಅವುಗಳಿಗಿಂತ ಹೆಚ್ಚು ಬೆಲೆಬಾಳುವವರಲ್ಲವೆ?”—ಮತ್ತಾಯ 6:25, 26.

“ಹೊಲದ ಲಿಲಿಹೂವುಗಳು ಬೆಳೆಯುವ ರೀತಿಯಿಂದ ಪಾಠವನ್ನು ಕಲಿಯಿರಿ . . . ; ಆದರೆ ಅವುಗಳಲ್ಲಿ ಒಂದಕ್ಕಿರುವ ಅಲಂಕಾರವು [ಅರಸ] ಸೊಲೊಮೋನನಿಗೆ ಅವನು ತನ್ನ ಸಕಲ ವೈಭವದಲ್ಲಿದ್ದಾಗಲೂ ಇರಲಿಲ್ಲವೆಂದು ನಾನು ನಿಮಗೆ ಹೇಳುತ್ತೇನೆ . . . ಹೊಲದ ಸಸ್ಯಗಳಿಗೆ ದೇವರು ಈ ರೀತಿಯಲ್ಲಿ ಉಡಿಸುತ್ತಾನಾದರೆ ನಿಮಗೆ ಇನ್ನೂ ಹೆಚ್ಚು ಉಡಿಸಿತೊಡಿಸುವನಲ್ಲವೆ?”—ಮತ್ತಾಯ 6:28-30.

ದೇವರು ನಮಗೆ ಆಹಾರ ಬಟ್ಟೆನೇ ಕೊಡ್ತಾನೆ ಅಂದಮೇಲೆ ಜೀವನ ನಡೆಸೋಕೆ ಬೇಕಾದ ಬೇರೆ ವಿಷ್ಯಗಳನ್ನೂ ಕೊಡ್ತಾನೆ. ನಾವು ದೇವರ ಇಷ್ಟದ ತರ ನಡಕೊಂಡ್ರೆ ಅವನು ನಮ್ಮನ್ನ ಆಶೀರ್ವದಿಸುತ್ತಾನೆ. ಹೇಗೆ? ಒಂದು, ನಾವೇ ಒಳ್ಳೇ ಬೆಳೆ ಬೆಳೆದು ಅದ್ರಿಂದ ಆಹಾರ ಮುಂತಾದ ವಿಷ್ಯಗಳನ್ನ ಪಡಕೊಳ್ಳೋ ತರ ಮಾಡ್ತಾನೆ. ಇಲ್ಲಾಂದ್ರೆ ನಮಗೆ ಒಳ್ಳೇ ಕೆಲಸ ಸಿಗೋ ಹಾಗೆ ಮಾಡಿ ಜೀವನ ಸಾಗಿಸೋ ತರ ಮಾಡ್ತಾನೆ.—ಮತ್ತಾಯ 6:32, 33.

ಸೂರ್ಯ, ಮಳೆ, ಪಕ್ಷಿ, ಹೂಗಳ ಬಗ್ಗೆ ನಾವು ಕಲಿತಿದ್ರಿಂದ ದೇವರ ಮೇಲೆ ಪ್ರೀತಿ ಮೂಡಲ್ವಾ? ಮುಂದಿನ ಲೇಖನದಲ್ಲಿ ದೇವರು ತನ್ನ ಸಂದೇಶನಾ ಮನುಷ್ಯರಿಗೆ ಹೇಗೆ ತಿಳಿಸಿದ್ದಾನೆ ಅಂತ ನೋಡೋಣ.