ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಾಸ್‌ ಹೇಗೆ ಸೆಕ್ರೆಟ್ರಿ ಕೈಯಲ್ಲಿ ಪತ್ರ ಬರೆಸುತ್ತಾನೋ ಅದೇ ತರ ದೇವರು ಕೆಲವು ವ್ಯಕ್ತಿಗಳ ಕೈಯಲ್ಲಿ ಪವಿತ್ರ ಗ್ರಂಥನ ಬರೆಸಿದ

ದೇವರು ತನ್ನ ಆಶೀರ್ವಾದದ ಸಂದೇಶನಾ ಬರೆಸಿಟ್ಟಿದ್ದಾನೆ

ದೇವರು ತನ್ನ ಆಶೀರ್ವಾದದ ಸಂದೇಶನಾ ಬರೆಸಿಟ್ಟಿದ್ದಾನೆ

ಮಾನವರನ್ನ ಸೃಷ್ಟಿ ಮಾಡಿದಾಗಿಂದ ದೇವರು ಜನ್ರ ಹತ್ರ ದೇವದೂತರು ಮತ್ತು ಪ್ರವಾದಿಗಳ ಮೂಲಕ ಮಾತಾಡಿದ್ದಾನೆ. ಅಷ್ಟೇ ಅಲ್ಲ ದೇವರು ತನ್ನ ಸಂದೇಶನಾ ಮತ್ತು ತಾನು ಕೊಡಲಿರೋ ಆಶೀರ್ವಾದಗಳನ್ನ ಬರೆಸಿಟ್ಟಿದ್ದಾನೆ. ಅದನ್ನ ಓದಿದ್ರೆ ದೇವರ ಆಶೀರ್ವಾದಗಳನ್ನ ಹೇಗೆ ಪಡಕೊಳ್ಳಬಹುದು ಅಂತ ತಿಳುಕೊಳ್ತೀರ. ಹಾಗಾದ್ರೆ ಈ ಮಾತುಗಳು ಎಲ್ಲಿ ಸಿಗುತ್ತೆ?

ದೇವರ ಸಂದೇಶ ಪವಿತ್ರ ಗ್ರಂಥದಲ್ಲಿ ಸಿಗುತ್ತೆ. (2 ತಿಮೊಥೆಯ 3:16) ಅದನ್ನ ದೇವರು ತನ್ನ ಪ್ರವಾದಿಗಳ ಮೂಲಕ ಬರೆಸಿದ್ದಾನೆ. (2 ಪೇತ್ರ 1:21) ಹೇಗಂದ್ರೆ ದೇವರು ತನ್ನ ಯೋಚ್ನೆನ ಬರಹಗಾರರ ಮನಸ್ಸಲ್ಲಿ ಹಾಕಿದ. ಅವರು ಅದನ್ನೇ ಬರೆದ್ರು. ಒಂದು ಉದಾಹರಣೆ ನೋಡಿ. ಒಬ್ಬ ಬಾಸ್‌ ತನ್ನ ಸೆಕ್ರೆಟ್ರಿ ಕೈಯಲ್ಲಿ ಒಂದು ಪತ್ರ ಬರೆಸಿದ್ರೆ ಆ ಪತ್ರ ಯಾರದು? ಆ ಸೆಕ್ರೆಟ್ರಿದಾ? ಖಂಡಿತ ಅಲ್ಲ. ಅದು ಬಾಸಿನ ಪತ್ರ. ಯಾಕಂದ್ರೆ ಅದರಲ್ಲಿ ಇರೋ ಯೋಚ್ನೆಗಳು ಬಾಸಿನದ್ದು. ಅದೇ ತರ ಪವಿತ್ರ ಗ್ರಂಥನ ಬರೆದವ್ರು ಮನುಷ್ಯರೇ ಆದ್ರೂ ಅದರಲ್ಲಿ ಇರೋ ಸಂದೇಶ ಮತ್ತು ಯೋಚ್ನೆಗಳು ದೇವರದ್ದು. ಹಾಗಾಗಿ ಪವಿತ್ರ ಗ್ರಂಥದ ನಿಜ ಬರಹಗಾರ ದೇವರೇ ಆಗಿದ್ದಾನೆ.

ದೇವರ ಸಂದೇಶ ಸಾವಿರಾರು ಭಾಷೆಗಳಲ್ಲಿ ಲಭ್ಯ

ದೇವರ ಸಂದೇಶ ತುಂಬ ಮುಖ್ಯವಾದದ್ದು. ಎಷ್ಟು ಮುಖ್ಯ ಅಂದ್ರೆ ಅದನ್ನ ಎಲ್ಲ ‘ಕುಲ ಜನಾಂಗ ಮತ್ತು ಭಾಷೆಯವರು’ ಓದಿ ಅರ್ಥ ಮಾಡ್ಕೋಬೇಕು ಅಂತ ದೇವರು ಬಯಸುತ್ತಾನೆ. (ಪ್ರಕಟನೆ 14:6) ದೇವರ ಆಶೀರ್ವಾದದಿಂದ ಇಂದು ಇಡೀ ಪವಿತ್ರ ಗ್ರಂಥ ಅಥವಾ ಅದರಲ್ಲಿ ಇರೋ ಪುಸ್ತಕಗಳು 3,000ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಸಿಗುತ್ತಿದೆ. ಪ್ರಪಂಚದಲ್ಲಿ ಬೇರೆ ಯಾವ ಪುಸ್ತಕನೂ ಇಷ್ಟೊಂದು ಭಾಷೆಯಲ್ಲಿ ಸಿಗಲ್ಲ.