ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದ ಹಾಡು

ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದ ಹಾಡು

ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದ ಹಾಡು

“ಶಾಲೆಯಲ್ಲಿದ್ದಾಗ ನಾನು, ‘ತನ್ನ ಮಹಿಮೆಯಲ್ಲಿ ಆಸನಾರೂಢನಾಗಿರುವ ಮಹಾ ಯೆಹೋವನು’ ಎಂಬ ಪದಗಳೊಂದಿಗೆ ಸ್ತೋತ್ರಗೀತೆಯನ್ನು ಹಾಡುತ್ತಿದ್ದೆ. ‘ಈ ಯೆಹೋವನು ಯಾರು?’ ಎಂದು ನಾನು ಅನೇಕವೇಳೆ ಕುತೂಹಲಪಡುತ್ತಿದ್ದೆ.”

ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿರುವ ಗ್ವೆನ್‌ ಗೂಚ್‌ರವರ ಈ ಹೇಳಿಕೆಯು, ಕಾವಲಿನಬುರುಜು ಪತ್ರಿಕೆಯಲ್ಲಿ ಪ್ರಕಾಶಿಸಲ್ಪಟ್ಟಿದ್ದ ಅವರ ಜೀವನ ಕಥೆಯಲ್ಲಿತ್ತು. * ಇದು ಕಡಿಮೆ ಪಕ್ಷ ಒಬ್ಬ ವಾಚಕರ ಮನವನ್ನಾದರೂ ಮುಟ್ಟಿತು. ಅಮೆರಿಕದ ವಾಷಿಂಗ್‌ಟನ್‌ನಲ್ಲಿರುವ ಸಿಆ್ಯಟಲ್‌ನ ವಿರ ಎಂಬ ಮಹಿಳೆಯು ಜ್ಞಾಪಿಸಿಕೊಳ್ಳುವುದು: “ಪ್ರೌಢ ಶಾಲೆಯಲ್ಲಿ ನನಗೂ ಇದೇ ರೀತಿಯ ಅನುಭವವಾಯಿತು.”

ಒಂದು ನಿರ್ದಿಷ್ಟ ಗೀತೆಯನ್ನು ಕೇಳಿದ ನಂತರ, ಗ್ವೆನ್‌ರಂತೆಯೇ ವಿರ ಸಹ ಈ ಯೆಹೋವನು ಯಾರಾಗಿರಬಹುದೆಂಬುದರ ಕುರಿತು ತುಂಬ ಕುತೂಹಲಪಟ್ಟರು. 1949ರಲ್ಲಿ ಅವರ ಸಹೋದರನು ಪ್ರಥಮ ಬಾರಿ ಯೆಹೋವನ ಕುರಿತಾಗಿ ತಿಳಿಸಿದಾಗ ಅವರ ಈ ಕುತೂಹಲವು ತಣಿಸಲ್ಪಟ್ಟಿತು. ಅದು ಬೈಬಲಿನಲ್ಲಿ ಕೊಡಲ್ಪಟ್ಟಿರುವ ದೇವರ ವೈಯಕ್ತಿಕ ಹೆಸರಾಗಿದೆಯೆಂದು ಅವನು ಹೇಳಿದ್ದನು.

ವಿರ ಈಗ ಸುಮಾರು ಐವತ್ತು ವರ್ಷಗಳಿಂದ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿದ್ದಾರೆ. ಆದರೆ ಪ್ರೌಢ ಶಾಲೆಯಲ್ಲಿದ್ದಾಗ ತಾವು ಕಲಿತಿದ್ದ ಆ ದೇವರ ಸ್ತುತಿಗೀತೆಯನ್ನು ಅವರು ಮರೆತುಬಿಡಲಿಲ್ಲ. “ಆ ಗೀತೆಯು ಎಲ್ಲಿಂದ ಬಂತೆಂಬುದನ್ನು ನಾನು ಎಷ್ಟೋ ವರ್ಷಗಳಿಂದ ಪತ್ತೆಹಚ್ಚಲು ಪ್ರಯತ್ನಿಸಿದೆ” ಅನ್ನುತ್ತಾರವರು. ಕೊನೆಗೆ, ಒಂದು ಸಂಗೀತ ಅಂಗಡಿಯ ಸಹಾಯದಿಂದ ಅವರು ಅದನ್ನು ಕಂಡುಹಿಡಿದರು. ಆ ಗೀತೆಯು, ಫ್ರಾಂಟ್ಸ್‌ ಶೂಬರ್ಟ್‌ರವರ 1825ರ ಸಂಗೀತಕೃತಿಯಿಂದ ತೆಗೆಯಲ್ಪಟ್ಟಿತ್ತು. ಆ ಸಂಗೀತದೊಂದಿಗೆ ಜೊತೆಗೂಡಿರುವ ಪದಗಳು ಖಂಡಿತವಾಗಿಯೂ ಯೆಹೋವನನ್ನು ಸ್ತುತಿಸುತ್ತವೆ. ಉದಾಹರಣೆಗಾಗಿ ಆ ಗೀತೆಯ ಕೆಲವೊಂದು ಸಾಲುಗಳು ಹೀಗಿವೆ:

“ಪ್ರಭುವಾದ ಯೆಹೋವ ಮಹೋನ್ನತನು! ಭೂಮ್ಯಾಕಾಶ ಘೋಷಿಸುತೆ ಆತನ ಅದ್ಭುತಕರ ಶಕ್ತಿಯನು. . . . ಪ್ರಚಂಡ, ರಭಸದ ಬಿರುಗಾಳಿಯಲಿ, ಹೊಳೆಯ ಅಬ್ಬರಿಸುವ ಕರೆಯ ಗರ್ಜನೆಯಲಿ . . . ವನ, ಕಾಡುಗಳ ಮರ್ಮರ ಧ್ವನಿಯಲಿ ಕೇಳುತ್ತೀರಿ ನೀವದನು, ಹೊಂಬಣ್ಣದ ಜೋಳವು ತಲೆಯಾಡಿಸುತ್ತಿರುವಾಗ, ಸುಗಂಧದ ಹೂವುಗಳ ಕಾಂತಿಮಯ ಸಾಲಿನಲಿ, ನೀಲಿ ಬಾನಿನಲ್ಲಿ ತುಂಬಿರುವ ತಾರೆಗಳಲ್ಲಿ ನೋಡುತ್ತೀರಿ ನೀವದನು . . . ಆತನ ಗುಡುಗುಗಳು ಹೊರಡಿಸುತ್ತವೆ ಭಯಗೊಳಿಸುವ ಧ್ವನಿಗಳನು, ಆತನ ಮಿಂಚುಗಳ ಜ್ವಾಲೆಗಳು ಓಡಾಡುತ್ತವೆ ಬೆಳಗಿಸುತ್ತ ಆಕಾಶವನು. ಆದರೆ ಇವೆಲ್ಲವುಗಳಿಗಿಂತ ಹೆಚ್ಚಾಗಿ, ಬಡಿಯುತ್ತಿರುವ ನಿಮ್ಮ ಹೃದಯವು ಈಗಲೂ ಘೋಷಿಸುತೆ ಯೆಹೋವನ ಶಕ್ತಿಯನು . . . ನಿತ್ಯನಾದ ದೇವಪ್ರಭುವನು ಉನ್ನತದಿ ನೋಡಿ, ನಿರೀಕ್ಷಿಸಿ ಆತನ ಕೃಪಾದಯೆಯನು . . . ಪ್ರಭುವಾದ ಯೆಹೋವ ಮಹೋನ್ನತನು!”

ವಿರ ಗಮನಿಸುವುದು: “ಹತ್ತೊಂಬತ್ತನೆಯ ಶತಮಾನದಲ್ಲಿ ದೇವರ ಹೆಸರನ್ನು ತಿಳಿದು, ಆತನನ್ನು ಸ್ತುತಿಸುವವರೂ ಇದ್ದರೆಂಬುದನ್ನು ಜನರಿಗೆ ತೋರಿಸಲು ನಾನು ಕೆಲವೊಮ್ಮೆ ಈ ಹಾಡಿನ ಪದಗಳನ್ನು ಉಪಯೋಗಿಸಿದ್ದೇನೆ.” ಸತ್ಯ ಸಂಗತಿಯೇನೆಂದರೆ, ಪ್ರಾಚೀನ ಸಮಯದಿಂದಲೂ ನಂಬಿಕೆಯುಳ್ಳ ಸ್ತ್ರೀಪುರುಷರು ಯೆಹೋವನನ್ನು ಹಾಡುಗಳೊಂದಿಗೆ ಸ್ತುತಿಸುವಂತೆ ಪ್ರಚೋದಿಸಲ್ಪಟ್ಟಿದ್ದಾರೆ. ಇದು ಸದಾಕಾಲಕ್ಕೆ ಮುಂದುವರಿಯುವ ಒಂದು ರೂಢಿಯಾಗಿದೆ, ಯಾಕೆಂದರೆ ಭೂಮ್ಯಾಕಾಶಗಳ ಸೃಷ್ಟಿಕರ್ತನನ್ನು ಸ್ತುತಿಸಲಿಕ್ಕಾಗಿರುವ ಕಾರಣಗಳಿಗೆ ಅಂತ್ಯವೇ ಇಲ್ಲ.

[ಪಾದಟಿಪ್ಪಣಿಗಳು]

^ ಮಾರ್ಚ್‌ 1, 1998ರ ಕಾವಲಿನಬುರುಜು ಪತ್ರಿಕೆಯನ್ನು ನೋಡಿರಿ.

[ಪುಟ 13ರಲ್ಲಿರುವ ಚಿತ್ರ]

ವಿರ