ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಬ್ಬ ನಾಸ್ತಿಕನು ಉತ್ತರವನ್ನು ಕಂಡುಕೊಂಡದ್ದು

ಒಬ್ಬ ನಾಸ್ತಿಕನು ಉತ್ತರವನ್ನು ಕಂಡುಕೊಂಡದ್ದು

ಒಬ್ಬ ನಾಸ್ತಿಕನು ಉತ್ತರವನ್ನು ಕಂಡುಕೊಂಡದ್ದು

“ನಿಮ್ಮ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯಲ್ಲಿ ಪ್ರಕಾಶವಾಗುವ ಲೇಖನಗಳು ಅಚ್ಚರಿಗೊಳಿಸುವಂಥದ್ದು! ನಿಮ್ಮ ಇತ್ತೀಚಿನ ಸಂಚಿಕೆಗಳಂತೂ ಅತ್ಯಾಕರ್ಷಕವಾಗಿದ್ದವು! ಅವನ್ನು ನೋಡಿದ ತಕ್ಷಣವೇ ನನಗೆ ಓದಲು ಮನಸ್ಸಾಗುತ್ತದೆ. ಅವು ನಾನಾ ಬಗೆಯ ಪ್ರಶ್ನೆಗಳನ್ನು ಉತ್ತರಿಸುತ್ತವೆ ಮತ್ತು ಮನಶ್ಯಾಂತಿಯನ್ನೂ ನೀಡುತ್ತವೆ.”

ಹೀಗೆಂದು, ದಕ್ಷಿಣ ಭಾರತದಲ್ಲಿರುವ ಓದುಗರೊಬ್ಬರು ಹೇಳಿದರು. ಅವರು ಹಿಂದುವಾಗಿ ಹುಟ್ಟಿದ್ದರೂ, ಅವರ ತಂದೆಯು ಅವರನ್ನು ಒಬ್ಬ ನಾಸ್ತಿಕನಾಗಿ ಬೆಳೆಸಿದ್ದರೆಂದು ಅವರು ಬರೆಯುತ್ತಾರೆ. ಅವರು ಹೇಳುವುದು: “ನನಗೆ ಜೀವಿತದಲ್ಲಿ ಯಾವುದೇ ಉದ್ದೇಶವಿರುವಂತೆ ಕಾಣಲಿಲ್ಲ. ಡಾರ್ವಿನ್‌ನ ವಿಕಾಸವಾದದ ಸಿದ್ಧಾಂತವು ಅಸಂಬದ್ಧವಾಗಿ ತೋರಿತು. ದೇವರು ಯಾರು? ಈ ಲೋಕವು ಏಕೆ ಭ್ರಷ್ಟವಾಗಿದೆ? ಸತ್ತ ಮೇಲೆ ನಾವು ಎಲ್ಲಿಗೆ ಹೋಗುತ್ತೇವೆ? ದುಷ್ಟ ಆತ್ಮಗಳು ನಿಜವಾಗಿಯೂ ಇವೆಯೇ? ಪುನರ್‌ಜನ್ಮವಿದೆಯೇ? ಇಂತಹ ಹಲವಾರು ಪ್ರಶ್ನೆಗಳು ಹಲವಾರು ವರ್ಷಗಳಿಂದ ನನ್ನನ್ನು ಕಾಡಿವೆ.

ತಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯಲ್ಲಿ ಕಂಡುಕೊಂಡ ಈ ಹುರುಪುಳ್ಳ ಓದುಗರು, ಈ ಎರಡು ಪತ್ರಿಕೆಗಳಿಗೆ ಚಂದಾ ಮಾಡಿದರು. ತನ್ನ ತಂಗಿಗೆ ಒಂದು ಚಂದಾವನ್ನು ಉಡುಗೊರೆಯಾಗಿ ಕಳುಹಿಸಿಕೊಟ್ಟರು ಮತ್ತು ಈಗ ಅವರು ತಾವು ಸಂಧಿಸುವ ಜನರಿಗೆಲ್ಲ ಈ ಪತ್ರಿಕೆಯನ್ನು ಓದಲು ಕೊಡುತ್ತಾರೆ. ಒಬ್ಬ ಛಾಯಾಚಿತ್ರಗಾರ ಹಾಗೂ ಕಲಾವಿದರಾಗಿರುವ ಇವರು, ಪತ್ರಿಕೆಗಳಿಗಾಗಿ ಮತ್ತು “ಸದ್ದಿಲ್ಲದೆ ಮಾತಾಡುವ” ಪತ್ರಿಕೆಯ ಚಿತ್ರಕಲೆಗಾಗಿ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಈ ಉತ್ತಮ ಪತ್ರಿಕೆಗಳನ್ನು ಓದುವ ಮೂಲಕ, ತಮ್ಮ ಪ್ರಶ್ನೆಗಳಿಗೆ ಉತ್ತರವನ್ನೂ ಹಾಗೂ ಮನಶ್ಯಾಂತಿಯನ್ನೂ ಕಂಡುಕೊಂಡಿರುವ ಜಗತ್ತಿನಾದ್ಯಂತವಿರುವ ಕೋಟ್ಯಂತರ ಜನರಲ್ಲಿ ನೀವೂ ಒಬ್ಬರಾಗಬಹುದು.

ದೇವರ ಕುರಿತು ಮತ್ತು ನಮಗಾಗಿರುವ ಆತನ ಉದ್ದೇಶಗಳ ಕುರಿತು ನೀವು ಹೆಚ್ಚಿನ ಮಾಹಿತಿಯನ್ನು ಪಡೆಯಲು ಬಯಸುವುದಾದರೆ, ವ್ಯಾಪಕವಾಗಿ ವಿತರಿಸಲ್ಪಡುವ, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ? ಎಂಬ ಬ್ರೋಷರನ್ನು ಉಚಿತವಾಗಿ ಕಳುಹಿಸಿಕೊಡಲು ನಾವು ಸಂತೋಷಿಸುವೆವು. ಇದರೊಂದಿಗಿರುವ ಕೂಪನನ್ನು ಭರ್ತಿಮಾಡಿ ಅದರಲ್ಲಿ ನೀಡಲ್ಪಟ್ಟಿರುವ ವಿಳಾಸಕ್ಕೆ ಅಥವಾ ಈ ಪತ್ರಿಕೆಯ 5ನೇ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ಸೂಕ್ತ ವಿಳಾಸಕ್ಕೆ ಅಂಚೆಯ ಮೂಲಕ ಕಳುಹಿಸಿಕೊಡಿ.

ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ? ಎಂಬ ಬ್ರೋಷರಿನ ಒಂದು ಪ್ರತಿಯನ್ನು ನನಗೆ ಕಳುಹಿಸಿರಿ.

□ ಒಂದು ಉಚಿತ ಗೃಹ ಬೈಬಲ್‌ ಅಭ್ಯಾಸಕ್ಕಾಗಿ ನನ್ನನ್ನು ಸಂಪರ್ಕಿಸಿರಿ.

[ಪುಟ 32ರಲ್ಲಿರುವ ಚಿತ್ರ ಕೃಪೆ]

ಮುಖಪುಟ, ಪುಟ 2-9 ಮತ್ತು 32: Einstein: U.S. National Archives photo; Model-T Ford: From the Collections of Henry Ford Museum & Greenfield Village; Great Depression: Dorothea Lange, FSA Collection, Library of Congress; Nicholas II and family: From the book Liberty’s Victorious Conflict; League of Nations building: U.S. National Archives photo; Churchill: The Trustees of the Imperial War Museum (MH 26392); Battleship: U.S. Navy photo; Atomic bombs: USAF photo; Gandhi: Culver Pictures; Man on the moon: NASA photo; Pollution: Godo-Foto; Mao Tse-tung: Culver Pictures; African children: FAO photo/F. Botts; Statue of Lenin: Juraatis/Sipa Press; Space shuttle: NASA photo; Archduke Ferdinand: From the book The War of the Nations; Lenin: Musée d’Histoire Contemporaine-BDIC