ತೀರ ಮುಂಚಿತವಾಗಿಯೇ ಅಥವಾ ತೀರ ತಡವಾಗಿಯೇ?
ತೀರ ಮುಂಚಿತವಾಗಿಯೇ ಅಥವಾ ತೀರ ತಡವಾಗಿಯೇ?
ಯೇಸು ಕ್ರಿಸ್ತನ ಜನನವಾಗಿ ಮೂರನೇ ಸಹಸ್ರವರ್ಷ ಮತ್ತು 21ನೇ ಶತಮಾನದ ಆರಂಭದ ಕುರಿತು ಈಗ ಅನೇಕ ಅಭಿಪ್ರಾಯಗಳನ್ನು ಹೇಳಲಾಗುತ್ತಿದೆ. ನ್ಯೂಸ್‌ವೀಕ್ ಪತ್ರಿಕೆಯು ಹೇಳಿದ್ದು, 20ನೇ ಶತಮಾನವು “ಸಂಪೂರ್ಣ ಯುದ್ಧದ ಶಕವಾಗಿ ಆರಂಭವಾಗುತ್ತಾ ಅಣುಬಾಂಬಿನ ಯುಗವಾಗಿ ಬೆಳೆದು, ಮನೋರಂಜನೆಯ ಯುಗವಾಗಿ ಅಂತ್ಯಗೊಳ್ಳುತ್ತಿರುವಂತೆ ಕಾಣುತ್ತದೆ.” ಆ ಪತ್ರಿಕೆಯ ಜನವರಿ 22, 1997ರ ಸಂಚಿಕೆಯಲ್ಲಿ ಅದು ವರದಿಸಿದ್ದು: “ಡಿಸೆಂಬರ್ 31, 1999ರ ಸಂಜೆಯ ಸಮಾರಂಭಕ್ಕಾಗಿ ಭೂಗೋಳದ ಸುತ್ತಲೂ ಇರುವ ಹೋಟೆಲುಗಳಲ್ಲಿ ಈಗಾಗಲೇ ರೂಮ್ ಕಾದಿರಿಸುವಿಕೆಯು ಮುಗಿದುಹೋಗಿದೆ.”
ಆದರೆ, ಸಮಾರಂಭವು ಸಮಯಕ್ಕಿಂತ ಬಹಳ ಮುಂಚಿತವಾಗಿ ನಡೆಯುತ್ತಿದೆ ಎಂದು ಕೆಲವರು ಹೇಳುತ್ತಾರೆ. ಅನೇಕರ ನಂಬಿಕೆಗೆ ವ್ಯತಿರಿಕ್ತವಾಗಿ ಅವರು ಸೂಚಿಸಿ ಹೇಳುವುದೇನೆಂದರೆ, 21ನೇ ಶತಮಾನ ಮತ್ತು ಹೊಸ ಸಹಸ್ರವರ್ಷವು ಜನವರಿ 1, 2000ಕ್ಕೆ ಆರಂಭವಾಗುವುದಿಲ್ಲ, ಅದಕ್ಕೆ ಬದಲು, ಜನವರಿ 1, 2001ಕ್ಕೆ ಆರಂಭವಾಗುತ್ತದೆ. ಏಕೆಂದರೆ, ಯಾವುದೇ ರೀತಿಯಲ್ಲಿ 0 ವರ್ಷವು ಇಲ್ಲದಿರುವುದರಿಂದ, ಮೊದಲನೇ ಶತಮಾನವನ್ನು 1ರಿಂದ 100ರ ವರೆಗೆ ಎಣಿಸಲಾಯಿತು. ಎರಡನೇ ಶತಮಾನವು 101ರಿಂದ 200ರ ವರೆಗೆ ಮತ್ತು ಹೀಗೆ ಲೆಕ್ಕವು ಮುಂದುವರಿಯಿತು. ಆದುದರಿಂದ, ಜನವರಿ 1, 1901ರಿಂದ ಆರಂಭವಾದ 20ನೇ ಶತಮಾನ ಹಾಗೂ ಜನವರಿ 1, 1001ರಿಂದ ಆರಂಭವಾದ ಎರಡನೇ ಸಹಸ್ರವರ್ಷವು, ಡಿಸೆಂಬರ್ 31, 2000ದವರೆಗೂ ಅಂತ್ಯವಾಗುವುದಿಲ್ಲವೆಂದು ತರ್ಕಿಸಲಾಗುತ್ತಿದೆ.
ಪರಿಗಣಿಸಲು ಮತ್ತೊಂದು ಅಂಶವಿದೆ. ನಮ್ಮ ಕ್ಯಾಲೆಂಡರುಗಳು ಕ್ರಿಸ್ತನ ಜನನಕ್ಕೆ ಮುಂಚೆ ಇಲ್ಲವೆ ನಂತರದ ಸಮಯದ ಮೇಲಾಧರಿಸಿ ಕಾಲವನ್ನು ವಿಭಾಗಿಸುತ್ತವೆ. ತಾವು ಇದುವರೆಗೂ ನಂಬಿದ್ದಂತಹ ಸಮಯಕ್ಕೆ ಮೊದಲೇ ಯೇಸು ಜನಿಸಿದ್ದನೆಂದು ವಿದ್ವಾಂಸರು ಈಗ ಗ್ರಹಿಸಿದ್ದಾರೆ. ಆದ್ದರಿಂದ ಕ್ಯಾಲೆಂಡರನ್ನು ಕಾಲದ ನಿರ್ಣಾಯಕ ಸೂಚಿಯನ್ನಾಗಿ ಮಾಡುವುದು ನಿಷ್ಕೃಷ್ಟವಾಗಿರದು. ಯೇಸು ಯಾವಾಗ ಹುಟ್ಟಿದನೆಂಬ ವಿಷಯದಲ್ಲಿ ಅಭಿಪ್ರಾಯಗಳು ಬೇರೆಬೇರೆಯಾಗಿವೆ. ಆದರೆ ಬೈಬಲ್ ಕಾಲಗಣನಶಾಸ್ತ್ರವು ಯೇಸುವಿನ ಜನನವನ್ನು ಸಾ. ಶ. ಪೂ. 2ಕ್ಕೆ ಸೂಚಿಸುತ್ತದೆ. ಆ ಲೆಕ್ಕದ ಪ್ರಕಾರ ನೋಡುವುದಾದರೆ, ಮೂರನೇ ಸಹಸ್ರವರ್ಷವು ವಾಸ್ತವದಲ್ಲಿ ಈ ವರ್ಷದ ಶರತ್ಕಾಲದ ಸಮಯದಲ್ಲೇ ಆರಂಭವಾಗಿದೆ! ಹೆಚ್ಚಿನ ಮಾಹಿತಿಯನ್ನು ಅವೇಕ್! ಪತ್ರಿಕೆಯ ಮೇ 22, 1997ರ ಸಂಚಿಕೆಯ ಪುಟ 28, ಮತ್ತು ಡಿಸೆಂಬರ್ 22, 1975ರ 27ನೇ ಪುಟದಲ್ಲಿ ನೋಡಬಹುದು. *
ವಿಷಯವು ಏನೇ ಆಗಿರಲಿ, 21ನೇ ಶತಮಾನ ಮತ್ತು ಹೊಸ ಸಹಸ್ರವರ್ಷವು ಈಗಾಗಲೇ ಆರಂಭವಾಗಿದೆ ಎಂದು ಉದ್ಧಟತನದಿಂದ ಹೇಳುವುದನ್ನು ತಪ್ಪಿಸುವುದು ವಿವೇಕಯುತವಾಗಿರುವುದು. ಹಾಗಿದ್ದರೂ, ಜನಪ್ರಿಯ ಅಭಿಪ್ರಾಯಗಳ ನೋಟದಲ್ಲಿ, ಎಚ್ಚರ! ಪತ್ರಿಕೆಯು “20ನೇ ಶತಮಾನದ ಬದಲಾವಣೆಯ ನಿರ್ಣಾಯಕ ವರ್ಷಗಳು” ಎಂಬ ವಿಷಯದ ಕುರಿತು ಚರ್ಚಿಸುವುದನ್ನು ಸಮಯೋಚಿತವಾಗಿ ಕಂಡುಕೊಂಡಿದೆ.
[ಪಾದಟಿಪ್ಪಣಿ]
^ ನವೆಂಬರ್ 1, 1999ರ ಕಾವಲಿನಬುರುಜು ಸಂಚಿಕೆಯನ್ನು ನೋಡಿ.