ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಾವು ಎಷ್ಟು ಆಭಾರಿಗಳು!”

“ನಾವು ಎಷ್ಟು ಆಭಾರಿಗಳು!”

“ನಾವು ಎಷ್ಟು ಆಭಾರಿಗಳು!”

ಎಚ್ಚರ! ಪತ್ರಿಕೆಯಲ್ಲಿ ಬಂದಿದ್ದ ಮಸ್ತಿಷ್ಕ ಆಘಾತದ ಕುರಿತ ಲೇಖನಗಳು, (ಮಾರ್ಚ್‌ 8, 1998) ನನ್ನ ತಾಯಿಯ ಜೀವವನ್ನು ಉಳಿಸುವುದರಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಿದವು,” ಎಂದು ಕಾರ್ಲ್‌ ಎಂಬ ಸ್ತ್ರೀ, ಕೆನಡದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿಗೆ ಬರೆದ ಪತ್ರದಲ್ಲಿ ತಿಳಿಸುತ್ತಾಳೆ. ಅವಳ ತಾಯಿಯ ಎಡ ತೋಳಿನಲ್ಲಿ ಜಡತೆಯ ಅನಿಸಿಕೆಯಾಯಿತು ಮತ್ತು ಹೀಗಾಗಿ ಮರುದಿನ ಬೆಳಗ್ಗೆ ಅವರಿಗೆ ದೃಷ್ಟಿಮಂದತೆಯ ಸಮಸ್ಯೆಗಳು ಆರಂಭಿಸಿದವು. “ಮುಂದಿನ ದಿನ ಅವರು ತಮ್ಮ ಡಾಕ್ಟರರನ್ನು ನೋಡಲು ಬಯಸಿದರು,” ಎಂದು ಕಾರ್ಲ್‌ ವಿವರಿಸುತ್ತಾಳೆ. “ಹಾಗಾಗಿ ಮಸ್ತಿಷ್ಕ ಆಘಾತದ ಕುರಿತು ಹೇಳುವ ಎಚ್ಚರ! ಪತ್ರಿಕೆಯಲ್ಲಿರುವ ಲೇಖನಗಳನ್ನು ನನ್ನ ತಾಯಿಯು ಓದುವಂತೆ ನಾನು ಬಹಳವಾಗಿ ಕೇಳಿಕೊಂಡೆ. ಹದಿನೈದು ನಿಮಿಷಗಳೊಳಗೆ ಅವರು ನನ್ನನ್ನು ಫೋನಿನಲ್ಲಿ ಕರೆದು, ಆಸ್ಪತ್ರೆಗೆ ಹೋಗುವುದೇ ಉತ್ತಮವೆಂದು ಅನಿಸುತ್ತಿದೆ ಎಂದು ನನಗೆ ಹೇಳಿದರು. ಡಾಕ್ಟರರು ಇಡೀ ರಾತ್ರಿ ಅವರ ಚಲನವಲನಗಳನ್ನು ಗಮನಿಸಿದರು. ತಾಯಿಗೆ ಒಂದೆರೆಡು ಸಲ ಮಸ್ತಿಷ್ಕ ಆಘಾತಗಳ ಲಕ್ಷಣಗಳು ಸಂಭವಿಸಿವೆ ಎಂದು ಡಾಕ್ಟರ್‌ ಮರುದಿನ ದೃಢೀಕರಿಸಿದರು ಮತ್ತು ಅವರು ಆಸ್ಪತ್ರೆಗೆ ದಾಖಲಾದದ್ದು ಒಳ್ಳೆಯದಾಯಿತೆಂದು ಡಾಕ್ಟರ್‌ ಹೇಳಿದರು. ಈ ಲೇಖನಗಳ ಸರಣಿಗಳಿಗೆ ನಾವು ತುಂಬ ಆಭಾರಿಗಳಾಗಿದ್ದೇವೆ.

ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸಲು ಬೈಬಲ್‌ ಪ್ರಾಯೋಗಿಕ ಮಾರ್ಗದರ್ಶನವನ್ನು ಒದಗಿಸುತ್ತದೆ ಎಂದು ತಿಳಿಯುವುದು ನಿಮಗೆ ಆಶ್ಚರ್ಯವನ್ನು ಉಂಟುಮಾಡಬಹುದು. ಈ ನಿಜತ್ವವು ಸಕಲ ಜನರಿಗಾಗಿರುವ ಒಂದು ಗ್ರಂಥ ಎಂಬ 32 ಪುಟದ ಆಕರ್ಷಕ ಬ್ರೋಷರ್‌ನ 20 ಮತ್ತು 21ನೇ ಪುಟಗಳಲ್ಲಿ ಮಾತ್ರವಲ್ಲ, 25 ಮತ್ತು 26ನೇ ಪುಟಗಳಲ್ಲಿ ಎತ್ತಿತೋರಿಸಲಾಗಿದೆ. ಸಕಲ ಜನರಿಗಾಗಿರುವ ಒಂದು ಗ್ರಂಥ ಎಂಬ ಪ್ರಕಾಶನದ ಕುರಿತು ಹೆಚ್ಚನ್ನು ಕಲಿತುಕೊಳ್ಳುವುದಕ್ಕೆ ನಿಮಗೆ ಸಹಾಯಮಾಡಲು, ನಿಮ್ಮ ನೆರೆಹೊರೆಯಲ್ಲಿಯೇ ಜೀವಿಸುವ ನಮ್ಮ ಪ್ರತಿನಿಧಿಗಳಲ್ಲೊಬ್ಬರು ನಿಮ್ಮನ್ನು ಭೇಟಿಮಾಡುವಂತೆ ನಾವು ಅವರನ್ನು ಕೇಳಿಕೊಳ್ಳುವ ಮೂಲಕ ನಿಮ್ಮಲ್ಲಿಗೆ ಕಳುಹಿಸಲು ಸಂತೋಷಿಸುತ್ತೇವೆ. ನೀವು ಬಯಸುವುದಾದರೆ, ಇದರೊಂದಿಗಿರುವ ಕೂಪನನ್ನು ಭರ್ತಿಮಾಡಿ ಅದರಲ್ಲಿ ನೀಡಲ್ಪಟ್ಟಿರುವ ವಿಳಾಸಕ್ಕೆ ಅಥವಾ ಈ ಪತ್ರಿಕೆಯ 5ನೇ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ಸೂಕ್ತ ವಿಳಾಸಕ್ಕೆ ನೀವು ಅಂಚೆಯ ಮೂಲಕ ಕಳುಹಿಸಿಕೊಡುವುದಾದರೆ ನೀವೂ ಒಂದು ಪ್ರತಿಯನ್ನು ಪಡೆದುಕೊಳ್ಳಬಹುದು.

□ ನಿಮ್ಮ ಪ್ರತಿನಿಧಿಗಳಲ್ಲಿ ಒಬ್ಬರು ನನ್ನನ್ನು ಭೇಟಿಯಾಗುವಂತೆ ಕಳುಹಿಸಿಕೊಡಿರಿ

□ ಒಂದು ಉಚಿತ ಗೃಹ ಬೈಬಲ್‌ ಅಭ್ಯಾಸಕ್ಕಾಗಿ ನನ್ನನ್ನು ದಯವಿಟ್ಟು ಸಂಪರ್ಕಿಸಿರಿ.