ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಪತ್ರಿಕೆಗಳಲ್ಲೇ ಅತ್ಯುತ್ತಮವಾದ ಪತ್ರಿಕೆ”

“ಪತ್ರಿಕೆಗಳಲ್ಲೇ ಅತ್ಯುತ್ತಮವಾದ ಪತ್ರಿಕೆ”

“ಪತ್ರಿಕೆಗಳಲ್ಲೇ ಅತ್ಯುತ್ತಮವಾದ ಪತ್ರಿಕೆ”

ಇತ್ತೀಚೆಗೆ ಎಚ್ಚರ! ಪತ್ರಿಕೆಯ ಸಂಪಾದಕರು, ಅಮೆರಿಕದ 18 ವರ್ಷ ಪ್ರಾಯದ ಲೀಸಲ್‌ ಎಂಬ ಹೈಸ್ಕೂಲ್‌ ವಿದ್ಯಾರ್ಥಿನಿಯಿಂದ ಒಂದು ಪತ್ರವನ್ನು ಸ್ವೀಕರಿಸಿದರು. ಅವಳು ಬರೆದದು:

“ನಾನು ಕಾಲೇಜು ಮಟ್ಟದ ಇತಿಹಾಸದ ಕೋರ್ಸಿಗೆ ಸೇರಿದ್ದೇನೆ. ಸವಿಸ್ತಾರವಾಗಿ ಮಾಡಿರುವ ರೀಸರ್ಚ್‌ ಪೇಪರ್‌ ಅಗತ್ಯವಿದೆ ಮತ್ತು ಜರ್ಮನಿಯ ಮೂರನೆಯ ಆಳ್ವಿಕೆಯ ಕೆಳಗೆ, ನಾಸಿಯ ವಿರುದ್ಧ ಯೆಹೋವನ ಸಾಕ್ಷಿಗಳ ನೈತಿಕ ಪ್ರತಿಭಟನೆ ಎಂಬ ವಿಷಯದ ಕುರಿತು ಬರೆಯಲು ನಾನು ಆಯ್ಕೆಮಾಡಿದ್ದೇನೆ. ಜುಲೈ 8, 1998ರ ಅವೇಕ್‌! ಸಂಚಿಕೆಯಲ್ಲಿದ್ದ ‘ಯೆಹೋವನ ಸಾಕ್ಷಿಗಳು—ನಾಸಿ ಅಪಾಯದ ಎದುರಿನಲ್ಲೂ ಧೈರ್ಯವಂತರು’ ಎಂಬ ಲೇಖನದ ಕೊನೆಯಲ್ಲಿ ಸೂಚಿಸಲಾಗಿದ್ದ, ಇದೇ ವಿಷಯಕ್ಕೆ ಸಂಬಂಧಪಟ್ಟಿರುವ ಇನ್ನಿತರ ಲೇಖನಗಳ ಪಟ್ಟಿಯನ್ನು ವಿನಂತಿಸಿಕೊಳ್ಳುತ್ತಿದ್ದೇನೆ. ಈ ಲೇಖನವು ಸಂಪೂರ್ಣವಾಗಿ ರೀಸರ್ಚ್‌ ಮಾಡಲ್ಪಟ್ಟಿತ್ತು ಮತ್ತು ಎಂಥ ಒಂದು ತರ್ಕದೊಂದಿಗೆ ಬರೆಯಲ್ಪಟ್ಟಿತ್ತೆಂದರೆ, ಅದರಲ್ಲಿರುವ ಕೇವಲ ಅರ್ಧದಷ್ಟು ಆವೇಶ ಮತ್ತು ಸತ್ಯವನ್ನು ನಾನು ನನ್ನ ಪೇಪರಿನಲ್ಲಿ ಬರೆಯುವುದಾದರೆ ಅದರ ಅಂತಿಮ ಫಲಿತಾಂಶವು, ನನ್ನ ಪೇಪರನ್ನು ತಿದ್ದುಪಡಿಮಾಡಲಿರುವ ಶಿಕ್ಷಣ ಮಂಡಳಿಗೆ ಒಂದು ಉತ್ತಮ ಸಾಕ್ಷಿಯಾಗಿರುವುದು.

“ಪತ್ರಿಕೆಗಳಲ್ಲೇ ಅತ್ಯುತ್ತಮವಾದ ಪತ್ರಿಕೆಗಳನ್ನು ಹೊರತರುವುದಕ್ಕಾಗಿ ನಿಮಗೆ ತುಂಬ ಉಪಕಾರಗಳು. ನನ್ನ ಶಾಲೆಯಲ್ಲಿ ನೀಡುವ ಯಾವುದೇ ವಿಷಯಕ್ಕಿಂತಲೂ ಉತ್ಕೃಷ್ಟವಾದ ‘ಬರೆಯಲು ಕಲಿಸುವ ಪಾಠಗಳನ್ನು’ ನಾನು ಪ್ರತಿಯೊಂದು ಸಂಚಿಕೆಯಲ್ಲೂ ಪಡೆದುಕೊಳ್ಳುತ್ತಿದ್ದೇನೆ. ಪ್ರತಿಯೊಂದು ಪೇಪರನ್ನು ನಾನು ಬರೆಯುವಾಗಲೂ ವಿಷಯಗಳನ್ನು ಇನ್ನೂ ಉತ್ತಮವಾಗಿ ಬರೆಯಲು ಗುರಿಯನ್ನಿಡುವಂತೆ ಇದು ಸಹಾಯಮಾಡುತ್ತದೆ. ನಿಮ್ಮ ಕೆಲಸವನ್ನು ನಾನು ಗಣ್ಯಮಾಡುತ್ತೇನೆ ಎಂಬುದನ್ನು ದಯವಿಟ್ಟು ತಿಳಿದುಕೊಳ್ಳಿ.”

[ಪುಟ 25ರಲ್ಲಿರುವ ಚಿತ್ರ ಕೃಪೆ]

Center photo: Państwowe Muzeum Oświęcim-Brzezinka, courtesy of the USHMM Photo Archives