ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆತ್ಮಹತ್ಯೆ—ಮರೆಯಲ್ಲಿದ್ದು ಕಾಡುತ್ತಿರುವ ಪಿಡುಗು

ಆತ್ಮಹತ್ಯೆ—ಮರೆಯಲ್ಲಿದ್ದು ಕಾಡುತ್ತಿರುವ ಪಿಡುಗು

ಆತ್ಮಹತ್ಯೆಮರೆಯಲ್ಲಿದ್ದು ಕಾಡುತ್ತಿರುವ ಪಿಡುಗು

ಜಾನ್‌ ಮತ್ತು ಮೇರಿ * ತಮ್ಮ 50ರ ಪ್ರಾಯದ ಕೊನೆಯ ಹಂತದಲ್ಲಿದ್ದಾರೆ. ಅವರು ಅಮೆರಿಕದ ಒಂದು ಹಳ್ಳಿಯ ಚಿಕ್ಕ ಮನೆಯೊಂದರಲ್ಲಿ ವಾಸಿಸುತ್ತಾರೆ. ಜಾನ್‌, ಎಂಫೈಸೀಮ (ಗಾಳಿ ಉಬ್ಬಟೆ) ಮತ್ತು ಕನ್‌ಜೆಸ್ಟಿವ್‌ ಹಾರ್ಟ್‌ ಫೆಲ್ಯುಎರ್‌ (ಹೃದಯ ಸೋಲುವಿಕೆ) ರೋಗದಿಂದಾಗಿ ಸಾವನ್ನು ಸಮೀಪಿಸುತ್ತಿದ್ದಾರೆ. ಪ್ರತಿಸಾರಿಯೂ ಜಾನ್‌ ಮೇಲುಸಿರನ್ನು ಬಿಡುತ್ತಿರುತ್ತಾರೆ. ಜಾನ್‌ ಇಲ್ಲದ ಬದುಕನ್ನು ಮೇರಿಗೆ ಕಲ್ಪನೆ ಮಾಡಿನೋಡುವುದೂ ಅಸಾಧ್ಯವಾಗಿದೆ, ಅವರು ಹೂವಿನಂತೆ ಬಾಡಿಹೋಗುತ್ತಿರುವುದನ್ನು ಮೇರಿಗೆ ನೋಡಲಾಗುತ್ತಿಲ್ಲ. ಮೇರಿಗೂ ತಮ್ಮದೇ ಆದ ಆರೋಗ್ಯ ಸಮಸ್ಯೆಗಳಿವೆ. ಅನೇಕ ವರುಷಗಳಿಂದ ಅವರು ಖಿನ್ನತೆಯ ಸಮಸ್ಯೆಯನ್ನು ಅನುಭವಿಸಿದ್ದಾರೆ. ಅವರು ಆತ್ಮಹತ್ಯೆಯ ಕುರಿತು ಮಾತಾಡುತ್ತಿರುವುದು ಇತ್ತೀಚೆಗೆ ಜಾನ್‌ರನ್ನು ಚಿಂತೆಗೀಡುಮಾಡಿತು. ಖಿನ್ನತೆ ಮತ್ತು ಸೇವಿಸುತ್ತಿರುವ ವಿವಿಧ ಔಷಧಿಗಳ ಕಾರಣ ಮೇರಿಯ ಆಲೋಚನೆಗಳು ತುಂಬ ಗೊಂದಲಮಯವಾಗಿವೆ. ಒಂಟಿಯಾಗಿರಬೇಕೆಂಬ ಭಾವನೆಯನ್ನೇ ನನ್ನಿಂದ ಸಹಿಸಿಕೊಳ್ಳುವುದಕ್ಕೆ ಆಗುತ್ತಿಲ್ಲವೆಂದು ಅವರು ಹೇಳುತ್ತಾರೆ.

ಹೃದ್ರೋಗ ಮಾತ್ರೆಗಳು, ಖಿನ್ನತೆಯ ಪ್ರತಿರೋಧಕ ಮಾತ್ರೆಗಳು, ನಿದ್ರೆ ಮಾತ್ರೆಗಳು, ಹೀಗೆ ಅವರ ಮನೆತುಂಬ ಔಷಧಿಗಳು. ಒಂದು ದಿನ ಬೆಳಿಗ್ಗೆ, ಮೇರಿ ಅಡುಗೆಮನೆಗೆ ಹೋಗಿ, ಅಲ್ಲಿರುವ ಮಾತ್ರೆಗಳನ್ನು ತೆಗೆದು ನುಂಗಲು ಪ್ರಾರಂಭಿಸುತ್ತಾರೆ. ಜಾನ್‌ ಅದನ್ನು ನೋಡಿ, ಕೈಯಿಂದ ಮಾತ್ರೆಗಳನ್ನು ಕಿತ್ತುಕೊಳ್ಳುವ ವರೆಗೂ ಅವರು ನಿಲ್ಲಿಸುವುದೇ ಇಲ್ಲ. ಜಾನ್‌ ಕೂಡಲೇ ತುರ್ತು ಚಿಕಿತ್ಸೆಯನ್ನು ನೀಡುವ ರಕ್ಷಣಾ ಸ್ಕ್ವಾಡ್‌ ಅನ್ನು ಕರೆಯುತ್ತಾರೆ. ಅಷ್ಟರೊಳಗಾಗಿ ಮೇರಿ ಕೋಮಾ ಸ್ಥಿತಿಯನ್ನು ತಲುಪುತ್ತಾರೆ. ತುಂಬಾ ತಡವಾಗಬಾರದೆಂದು ಜಾನ್‌ ಪ್ರಾರ್ಥಿಸುತ್ತಾರೆ.

ಸಂಖ್ಯಾಸಂಗ್ರಹಣಗಳು ಏನನ್ನು ಬಹಿರಂಗಪಡಿಸುತ್ತವೆ?

ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಯುವಜನರ ಆತ್ಮಹತ್ಯೆಯ ಕುರಿತು ಸಾಕಷ್ಟು ಬರೆಯಲಾಗಿದೆ. ಇದಕ್ಕೆ ತಕ್ಕ ಕಾರಣವೂ ಇದೆ. ಅದೇನೆಂದರೆ, ಜೀವತುಂಬಿರುವ ಹಾಗೂ ಬದುಕಿನಲ್ಲಿ ಯಶಸ್ಸನ್ನು ಗಳಿಸುವ ನಿರೀಕ್ಷೆಯನ್ನು ಹೊಂದಿರುವ ಯೌವನದ ಕುಡಿಯು ಅನಾವಶ್ಯಕವಾಗಿ ಮರಣದಲ್ಲಿ ಕೊನೆಯಾಗುವಂಥ ಅನಾಹುತಕ್ಕಿಂತ ಘೋರವಾದುದು ಇನ್ಯಾವುದಿರಸಾಧ್ಯವಿದೆ? ಆದರೂ, ತಲೆಬರಹಗಳಲ್ಲಿ ಕಡೆಗಣಿಸಲ್ಪಟ್ಟಿರುವ ಒಂದು ನಿಜಾಂಶವೇನೆಂದರೆ, ಅನೇಕ ದೇಶಗಳಲ್ಲಿ ಜನರ ವಯಸ್ಸು ಹೆಚ್ಚಾದಂತೆ ಅವರಲ್ಲಾಗುವ ಆತ್ಮಹತ್ಯೆಯ ಪ್ರಮಾಣವು ಒಂದೇ ಸಮನೇ ಹೆಚ್ಚುತ್ತಿದೆ. ಮುಂದಿನ ಪುಟದಲ್ಲಿರುವ ಚೌಕದಲ್ಲಿ ತೋರಿಸಲ್ಪಟ್ಟಿರುವಂತೆ, ಕೆಲವೊಂದು ದೇಶಗಳಲ್ಲಿ ಆತ್ಮಹತ್ಯೆಯ ಪ್ರಮಾಣದ ಒಟ್ಟುಸಂಖ್ಯೆಯು ಹೆಚ್ಚಿದ್ದರೂ ಅಥವಾ ಕಡಿಮೆಯಿದ್ದರೂ ಇದು ಸತ್ಯವಾಗಿದೆ. ಈ ಸಂಖ್ಯಾಸಂಗ್ರಹಣಗಳ ಕಡೆಗಿನ ಒಂದು ಮೇಲ್ನೋಟವು ಕೂಡ, ಮರೆಯಲ್ಲಿದ್ದು ಕಾಡುತ್ತಿರುವ ಪಿಡುಗಿನ ಭೌಗೋಲಿಕ ಸ್ವರೂಪವನ್ನು ಬಹಿರಂಗಪಡಿಸುತ್ತದೆ.

ಅಮೆರಿಕದ ರೋಗ ನಿಯಂತ್ರಣ ಕೇಂದ್ರಗಳು 1996ರಲ್ಲಿ ವರದಿಸಿದ್ದೇನೆಂದರೆ, ಆತ್ಮಹತ್ಯೆ ಮಾಡಿಕೊಳ್ಳುವ 65ಕ್ಕಿಂತಲೂ ಹೆಚ್ಚಿನ ವಯಸ್ಸಿನ ಅಮೆರಿಕನ್ನರ ಸಂಖ್ಯೆಯು, 1980ರಿಂದ 36 ಪ್ರತಿಶತಕ್ಕೆ ಜಿಗಿದಿದೆ. ಈ ಸಂಖ್ಯೆಯ ಹೆಚ್ಚುವರಿಗೆ ಸ್ವಲ್ಪ ಮಟ್ಟಿಗೆ ವೃದ್ಧ ಅಮೆರಿಕನ್ನರ ಸಂಖ್ಯೆಯು ಅಧಿಕವಾಗಿರುವುದು ಕಾರಣವಾಗಿದ್ದರೂ, ಒಟ್ಟುಸಂಖ್ಯೆಗೆ ಇವರೇ ಮುಖ್ಯ ಕಾರಣರಲ್ಲ. 1996ರಲ್ಲಿ 65ಕ್ಕಿಂತಲೂ ಹೆಚ್ಚಿನ ವಯಸ್ಸಿನವರಲ್ಲೂ ಆತ್ಮಹತ್ಯೆಯ ನಿಜವಾದ ಸಂಖ್ಯಾಪ್ರಮಾಣವು 9 ಪ್ರತಿಶತದಷ್ಟು ಹೆಚ್ಚಾಗಿತ್ತು. ಈ ಹೆಚ್ಚಳವು ಕಳೆದ 40 ವರ್ಷಗಳಲ್ಲಿ ಮೊದಲ ಬಾರಿಯಾಗಿತ್ತು. ಅಪಘಾತಕ್ಕೆ ಸಂಬಂಧಿಸಿದ ಮರಣಗಳಲ್ಲಿ, ಕೇವಲ ಮೋಟಾರು ವಾಹನದ ಢಿಕ್ಕಿಹೊಡೆಯುವಿಕೆ ಮತ್ತು ಕಟ್ಟಡದ ಮೇಲಿಂದ ಬೀಳುವಂಥ ಅಪಘಾತಗಳಿಂದಲೇ ಹೆಚ್ಚಿನ ವೃದ್ಧ ಅಮೆರಿಕನ್ನರು ಕೊಲ್ಲಲ್ಪಟ್ಟಿದ್ದಾರೆ. ವಾಸ್ತವದಲ್ಲಿ, ಭೀತಿಯನ್ನುಂಟುಮಾಡುವ ಈ ಸಂಖ್ಯೆಯು ಕೂಡ ಬಹಳ ಕಡಿಮೆಯಾಗಿರಬಹುದು. “ಸಾವಿಗೆ ಕಾರಣ ಎಂಬ ಪ್ರಮಾಣಪತ್ರದ ಮೇಲೆ ಆಧಾರಿತವಾಗಿರುವ ಸಂಖ್ಯಾಸಂಗ್ರಹಣಗಳಲ್ಲಿ, ಆತ್ಮಹತ್ಯೆಗೆ ತೀರ ಕಡಿಮೆ ಮಹತ್ವವು ಕೊಡಲ್ಪಟ್ಟಿದೆ ಎಂದು ಸಂದೇಹಿಸಲಾಗುತ್ತದೆ” ಎಂದು ಆತ್ಮಹತ್ಯೆಯ ಕುರಿತು ಅಭ್ಯಾಸಿಸುವುದಕ್ಕಾಗಿರುವ ಕೈಪಿಡಿ (ಇಂಗ್ಲಿಷ್‌) ಎಂಬ ಪುಸ್ತಕವು ಗಮನಿಸುತ್ತದೆ. ಈ ಪುಸ್ತಕವು ಮುಂದುವರಿಸುತ್ತಾ ಹೇಳುವುದು, ವರದಿಸಲ್ಪಟ್ಟಿರುವ ಸಂಖ್ಯಾಸಂಗ್ರಹಣದಲ್ಲಿರುವ ಆತ್ಮಹತ್ಯೆಯ ಪ್ರಮಾಣಕ್ಕಿಂತ ವಾಸ್ತವದಲ್ಲಿ ನಡೆಯುತ್ತಿರುವ ಆತ್ಮಹತ್ಯೆಗಳು ಎರಡು ಪಟ್ಟು ಹೆಚ್ಚಾಗಿವೆ ಎಂದು ಕೆಲವರು ಅಂದಾಜುಮಾಡುತ್ತಾರೆ.

ಇದರ ಫಲಿತಾಂಶ? ಇತರ ದೇಶಗಳಂತೆ, ಅಮೆರಿಕವು ಸಹ ಹಿರಿಯ ನಾಗರಿಕರ ಆತ್ಮಹತ್ಯೆಯೆಂಬ ಮರೆಯಲ್ಲಿದ್ದು ಕಾಡುತ್ತಿರುವ ಭೌಗೋಲಿಕ ಪಿಡುಗನ್ನು ಅನುಭವಿಸುತ್ತಿದೆ. ಈ ವಿಷಯದಲ್ಲಿ ಪರಿಣತರಾಗಿರುವ ಡಾಕ್ಟರ್‌ ಹರ್ಬಟ್‌ ಹೆನ್‌ಡಿನ್‌ ಗಮನಿಸುವುದು: “ಅಮೆರಿಕದಲ್ಲಿ, ಆತ್ಮಹತ್ಯೆಯ ಪ್ರಮಾಣವು ಜನರ ವಯಸ್ಸು ಹೆಚ್ಚಾದಂತೆ ಏಕಪ್ರಕಾರವಾಗಿ ಮತ್ತು ಸುಸ್ಪಷ್ಟವಾಗಿ ಹೆಚ್ಚುತ್ತಿದ್ದರೂ, ವೃದ್ಧ ವ್ಯಕ್ತಿಗಳಲ್ಲಾಗುತ್ತಿರುವ ಆತ್ಮಹತ್ಯೆಯು ಸಾರ್ವಜನಿಕರ ಗಮನವನ್ನು ಅಷ್ಟೇನೂ ಸೆಳೆದಿಲ್ಲ. ಇದಕ್ಕೆ ಕಾರಣವೇನು? ಸಮಸ್ಯೆಗೆ ಒಂದು ಕಾರಣವು, ಹಿರಿಯ ವ್ಯಕ್ತಿಗಳಲ್ಲಾಗುವ ಆತ್ಮಹತ್ಯೆಯ ಪ್ರಮಾಣವು ಯಾವಾಗಲೂ ಅಧಿಕವಾಗಿಯೇ ಇತ್ತು. ಆದುದರಿಂದ “ಇದ್ದಕ್ಕಿದ್ದಂತೆ ಅರಳುವ ಯುವಜನತೆಯ ಆತ್ಮಹತ್ಯೆಯ ಪ್ರಮಾಣವು ಹೆಚ್ಚಾದ ತಕ್ಷಣ ಮೊಳಗಿದಂತಹ ಎಚ್ಚರದ ಘಂಟೆಯು ಆಗ ಮೊಳಗಲಿಲ್ಲ” ಎಂದು ಅವರು ಸೂಚಿಸಿದರು.

ಭಾರಿ ಸಾಮರ್ಥ್ಯವುಳ್ಳ ಸ್ವಹಂತಕರು

ಈ ಸಂಖ್ಯಾ ಸಂಗ್ರಹಣಗಳು ಬೆಚ್ಚಿಬೀಳಿಸುವಂಥವುಗಳಾಗಿದ್ದರೂ ಇವು ಕೇವಲ ನಿರ್ಭಾವ ಸಂಖ್ಯೆಗಳಾಗಿವೆ. ಏಕೆಂದರೆ ಇವು, ಅನೇಕ ವರ್ಷಗಳವರೆಗೆ ಪ್ರೀತಿಸಿದ್ದ ಸಂಗಾತಿಯು ಇಲ್ಲದೆ ಹೋದಾಗ ಉಂಟಾಗುವ ಒಂಟಿ ಜೀವನದ ಭಾವನೆಗಳು, ಸ್ವಾತಂತ್ರ್ಯವನ್ನು ಕಳೆದುಕೊಂಡಿರುವುದರಿಂದಾಗುವ ಆಶಾಭಂಗ, ಬಹಳ ಸಮಯದಿಂದ ಅಂಟಿಕೊಂಡಿರುವ ರೋಗದಿಂದ ಪರಿಣಮಿಸುವ ಹತಾಶೆ, ದೀರ್ಘಕಾಲದ ಖಿನ್ನತೆಯಿಂದುಂಟಾಗುವ ಶೂನ್ಯಭಾವನೆ, ಗಂಭೀರ ಆರೋಗ್ಯ ಸಮಸ್ಯೆಯಿಂದಾಗುವ ಆಶಾಭಂಗವನ್ನು ತಿಳಿಸುವುದಿಲ್ಲ. ದುಃಖಕರವಾದ ನಿಜಾಂಶವೇನೆಂದರೆ, ಯುವಜನರು ತಾತ್ಕಾಲಿಕ ಸಮಸ್ಯೆಗಳಿಗೆ ದುಡುಕಿನಿಂದ ಪ್ರತಿಕ್ರಿಯಿಸುತ್ತಾ ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಪ್ರಯತ್ನಿಸಬಹುದು. ಆದರೆ ವೃದ್ಧ ವ್ಯಕ್ತಿಗಳಿಗೆ ಸಾಮಾನ್ಯವಾಗಿ ಪರಿಹರಿಸಲಾಗದ ಮತ್ತು ನಿರಂತರ ಸಮಸ್ಯೆಗಳಾಗಿ ತೋರುವಂಥ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರ ಪರಿಣಾಮವಾಗಿ, ಅವರು ಅನೇಕವೇಳೆ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ಉಳಿದಿರುವ ದಾರಿಯೆಂದು ಯುವಜನರಿಗಿಂತ ಹೆಚ್ಚು ದೃಢವಾಗಿ ಮನಗಂಡವರಾಗಿ ಭಾರಿ ಸಾಮರ್ಥ್ಯದೊಂದಿಗೆ ಅದನ್ನು ಮಾಡಿಕೊಳ್ಳುತ್ತಾರೆ.

“ವೃದ್ಧ ವ್ಯಕ್ತಿಗಳಲ್ಲಿ ಆತ್ಮಹತ್ಯೆಯು ಗಮನಾರ್ಹವಾದ ರೀತಿಯಲ್ಲಿ ಹೆಚ್ಚಾಗಿರುವುದು ಮಾತ್ರವಲ್ಲ, ಆತ್ಮಹತ್ಯೆಗಾಗಿ ಕ್ರಿಯೆಗೈಯುವ ವಿಧಾನವು ತಾನೇ ವೃದ್ಧರ ಮತ್ತು ಯುವಜನರ ಮಧ್ಯೆ ಇರುವ ಮುಖ್ಯ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರಿಸುತ್ತದೆ” ಎಂದು ಡಾಕ್ಟರ್‌ ಹೆನ್‌ಡಿನ್‌ ಅಮೆರಿಕದಲ್ಲಿ ಆತ್ಮಹತ್ಯೆ (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ ಗಮನಿಸುತ್ತಾರೆ. “ವಿಶೇಷವಾಗಿ ನೋಡುವುದಾದರೆ, ವೃದ್ಧ ವ್ಯಕ್ತಿಗಳಲ್ಲಿ ಆತ್ಮಹತ್ಯೆಗಾಗಿ ಮಾಡಲ್ಪಡುವ ಪ್ರಯತ್ನಗಳು ಮತ್ತು ಅದರ ಪ್ರಮಾಣದಲ್ಲಿರುವ ಬದಲಾವಣೆಗಳು ತೀರ ಸ್ಪಷ್ಟವಾಗಿವೆ. ಇಡೀ ಜನಸಂಖ್ಯೆಯನ್ನು ಒಟ್ಟಾರೆ ನೋಡುವಾಗ ಆತ್ಮಹತ್ಯೆಗಾಗಿ ಪ್ರಯತ್ನ ಮಾಡುವವರ ಮತ್ತು ಆತ್ಮಹತ್ಯೆಯನ್ನು ಮಾಡಿಕೊಳ್ಳುವವರ ಪ್ರಮಾಣವು 10ಕ್ಕೆ 1ರಂತೆ ಇದೆ ಎಂದು ಅಂದಾಜುಮಾಡಲಾಗಿದೆ. ಯುವಜನರಲ್ಲಿ ಇದು 100ಕ್ಕೆ 1ರಂತೆ ಮತ್ತು 55ಕ್ಕಿಂತಲೂ ಹೆಚ್ಚಿನ ವಯಸ್ಸಿನವರಲ್ಲಿ ಅದು 1ಕ್ಕೆ 1ರಷ್ಟು ಇದೆಯೆಂದು ಅಂದಾಜುಮಾಡಲಾಗಿದೆ.”

ಎಂಥ ಸೋಜಿಗಗೊಳಿಸುವ ಸಂಖ್ಯಾಸಂಗ್ರಹಣಗಳು! ವಯಸ್ಸಾಗುತ್ತಾ, ದೇಹದ ಶಕ್ತಿಯು ಕುಂದುತ್ತಾ, ವೇದನೆ ಮತ್ತು ಅನಾರೋಗ್ಯವನ್ನು ಅನುಭವಿಸುವುದು ಎಂತಹ ನಿರಾಶಾಜನಕ ಸ್ಥಿತಿಯಾಗಿದೆ! ಇವುಗಳಿಂದಾಗಿ ಅನೇಕರು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿರುವುದರಲ್ಲಿ ಆಶ್ಚರ್ಯವೇ ಇಲ್ಲ. ಆದರೂ, ಎಂತಹ ಸಂದಿಗ್ಧ ಪರಿಸ್ಥಿತಿಗಳ ಮಧ್ಯೆಯೂ ಜೀವವನ್ನು ರಕ್ಷಿಸಿ ಕಾಪಾಡುವುದಕ್ಕೆ ಬಲವಾದ ಕಾರಣಗಳಿವೆ. ಆರಂಭದ ಪೀಠಿಕೆಯಲ್ಲಿ ತಿಳಿಸಲ್ಪಟ್ಟಿರುವ ಮೇರಿಗೆ ನಂತರ ಏನು ಸಂಭವಿಸಿತು ಎಂಬುದನ್ನು ಪರಿಗಣಿಸಿರಿ.

[ಪಾದಟಿಪ್ಪಣಿಗಳು]

^ ಹೆಸರುಗಳು ಬದಲಾಯಿಸಲ್ಪಟ್ಟಿವೆ.

[ಪುಟ 3ರಲ್ಲಿರುವ ಚಾರ್ಟು]

ವಯಸ್ಸು ಮತ್ತು ಲಿಂಗಕ್ಕನುಸಾರವಾಗಿ 1,00,000 ಜನರಲ್ಲಿ ಆತ್ಮಹತ್ಯೆಯ ಪ್ರಮಾಣ

15ರಿಂದ 24 ವಯಸ್ಸು 75 ಮತ್ತು ಅದಕ್ಕಿಂತಲೂ ಹೆಚ್ಚು ವಯಸ್ಸು

ಗಂಡಸರು/ಹೆಂಗಸರು ದೇಶ ಗಂಡಸರು/ಹೆಂಗಸರು

8.0/2.5 ಅರ್ಜೆಂಟೀನ 55.4/8.3

4.0/0.8 ಗ್ರೀಸ್‌ 17.4/1.6

19.2/3.8 ಹಂಗೆರಿ 168.9/60.0

10.1/4.4 ಜಪಾನ್‌ 51.8/37.0

7.6/2.0 ಮೆಕ್ಸಿಕೊ 18.8/1.0

53.7/9.8 ರಷ್ಯಾ 93.9/34.8

23.4/3.7 ಅಮೆರಿಕ 50.7/5.6