ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದು ನಿಶ್ಚಿತ ನಿರೀಕ್ಷೆ

ಒಂದು ನಿಶ್ಚಿತ ನಿರೀಕ್ಷೆ

ಒಂದು ನಿಶ್ಚಿತ ನಿರೀಕ್ಷೆ

ಸುಮಾರು 2000 ವರ್ಷಗಳ ಹಿಂದೆ, ಜೀವಿಸಿದವರಲ್ಲಿಯೇ ಅತ್ಯಂತ ಮಹಾನ್‌ ಪುರುಷ ಎಂದು ಅನೇಕವೇಳೆ ಕರೆಯಲಾಗುವ ಯೇಸು ಕ್ರಿಸ್ತನನ್ನು ಅನ್ಯಾಯವಾಗಿ ಮರಣದಂಡನೆಗೆ ಗುರಿಪಡಿಸಲಾಯಿತು. ಅವನು ಹಿಂಸಾಕಂಭದ ಮೇಲೆ ತೂಗಾಡುತ್ತಿದ್ದಾಗ, ಅವನ ಪಕ್ಕದಲ್ಲೇ ತೂಗುಹಾಕಿದ್ದ ಒಬ್ಬ ದುಷ್ಕರ್ಮಿಯು “ನೀನು ಬರಬೇಕಾದ ಕ್ರಿಸ್ತನಲ್ಲವೇ, ನಿನ್ನನ್ನು ರಕ್ಷಿಸಿಕೋ, ನಮ್ಮನ್ನೂ ರಕ್ಷಿಸು” ಎಂದು ಅವನನ್ನು ಕುಚೋದ್ಯಮಾಡಿದನು.

ಅದಕ್ಕೆ, ಅವನ ಪಕ್ಕದಲ್ಲೇ ತೂಗುಹಾಕಲ್ಪಟ್ಟಿದ್ದ ಮತ್ತೊಬ್ಬ ದುಷ್ಕರ್ಮಿಯು ಗದರಿಸುತ್ತಾ “ನೀನು ಇದೇ ದಂಡನೆಯಲ್ಲಿರುವಾಗಲೂ ದೇವರಿಗೆ ಹೆದರುವದಿಲ್ಲವೋ? ನಾವಂತೂ ನ್ಯಾಯವಾಗಿ ದಂಡನೆಯಲ್ಲಿದ್ದೇವೆ, ನಾವು ಮಾಡಿದ್ದಕ್ಕೆ ತಕ್ಕ ಪ್ರತಿಫಲವನ್ನು ಹೊಂದುತ್ತಾ ಇದ್ದೇವೆ; ಈತನಾದರೋ ಅಲ್ಲದ್ದೇನೂ ಮಾಡಲಿಲ್ಲ ಎಂದು ಹೇಳಿ” ಯೇಸುವಿನ ಕಡೆಗೆ ತಿರುಗಿ, “ನೀನು ನಿನ್ನ ರಾಜ್ಯವನ್ನು ಪಡೆದವನಾಗಿ ಬರುವಾಗ ನನ್ನನ್ನು ನೆನಸಿಕೋ” ಎಂದು ಅವನಲ್ಲಿ ವಿನಂತಿಸಿಕೊಂಡನು.

ಅದಕ್ಕೆ ಯೇಸು, “ಇಂದೇ ನಿನಗೆ ಸತ್ಯವಾಗಿ ಹೇಳುತ್ತೇನೆ, ನೀನು ನನ್ನ ಸಂಗಡ ಪ್ರಮೋದವನದಲ್ಲಿರುವಿ” ಎಂದು ಉತ್ತರಕೊಟ್ಟನು.—ಲೂಕ 23:39-43, NW.

ಯೇಸುವಿನ ಮುಂದೆ ಒಂದು ಅದ್ಭುತಕರವಾದ ನಿರೀಕ್ಷೆಯು ಇಡಲ್ಪಟ್ಟಿತ್ತು. ಆ ನಿರೀಕ್ಷೆಯು ಯೇಸು ಕ್ರಿಸ್ತನ ಮೇಲೆ ಬೀರಿದ ಪ್ರಭಾವವನ್ನು ಅಪೊಸ್ತಲ ಪೌಲನು ಗಮನಿಸಿದ್ದನು. ಅವನು ಅದನ್ನು ಹೀಗೆ ಹೇಳುತ್ತಾನೆ: “ಆತನು ತನ್ನ ಮುಂದೆ ಇಟ್ಟಿದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡನು.”—ಇಬ್ರಿಯ 12:2.

ಯೇಸುವಿನ ಮುಂದೆ ಇಟ್ಟಿದ್ದ ‘ಸಂತೋಷದಲ್ಲಿ’ ತನ್ನ ತಂದೆಯೊಂದಿಗೆ ಪುನಃ ಸ್ವರ್ಗದಲ್ಲಿ ಜೀವಿಸುವುದು ಮತ್ತು ದೇವರ ರಾಜ್ಯದಲ್ಲಿ ರಾಜನಾಗಿ ಸೇವೆಸಲ್ಲಿಸುವುದೂ ಒಳಗೂಡಿತ್ತು. ಅಷ್ಟೇ ಅಲ್ಲ, ತನ್ನೊಂದಿಗೆ ಭೂಮಿಯ ಮೇಲೆ ರಾಜರಾಗಿ ಆಳಲಿರುವ ತನ್ನ ನಂಬಿಗಸ್ತ ಮತ್ತು ಪರೀಕ್ಷಿಸಲ್ಪಟ್ಟ ಹಿಂಬಾಲಕರನ್ನು ಪರಲೋಕಕ್ಕೆ ಸ್ವಾಗತಿಸುವ ಸಂತೋಷವೂ ಅವನ ಮುಂದಿತ್ತು. (ಯೋಹಾನ 14:2, 3; ಫಿಲಿಪ್ಪಿ 2:7-11; ಪ್ರಕಟನೆ 20:5, 6) ಹಾಗಾದರೆ, ಪಶ್ಚಾತ್ತಾಪವನ್ನು ತೋರಿಸಿದ ಆ ಪಾತಕಿಗೆ ನೀನು ನನ್ನೊಂದಿಗೆ ಪ್ರಮೋದವನದಲ್ಲಿರುವಿ ಎಂದು ಯೇಸು ವಾಗ್ದಾನಮಾಡಿದಾಗ, ಅವನ ಮಾತಿನ ಅರ್ಥವೇನಾಗಿತ್ತು?

ಪಾತಕಿಗೆ ಯಾವ ನಿರೀಕ್ಷೆಯಿತ್ತು?

ಆ ಮನುಷ್ಯನು ಯೇಸುವಿನೊಂದಿಗೆ ಸ್ವರ್ಗದಲ್ಲಿ ಆಳ್ವಿಕೆಯನ್ನು ಮಾಡಲು ಅರ್ಹನಾಗಿರಲಿಲ್ಲ. ಮತ್ತು “ನೀವು ನನ್ನ ಕಷ್ಟಗಳಲ್ಲಿ ನನ್ನ ಸಂಗಡ ಎಡೆಬಿಡದೆ ಇದ್ದವರು. ಆದದರಿಂದ ನನ್ನ ತಂದೆಯು ನನಗೆ ರಾಜ್ಯವನ್ನು ನೇಮಿಸಿದ್ದ ಪ್ರಕಾರ ನಾನು ನಿಮಗೂ ನೇಮಿಸುತ್ತೇನೆ” ಎಂದು ಯೇಸು ಹೇಳಿದವರೊಂದಿಗೆ ಅವನು ಸೇರಿಸಲ್ಪಡಲಿಲ್ಲ. (ಲೂಕ 22:28, 29) ಆದರೂ, ಯೇಸು ಆ ಪಾತಕಿಗೆ ತನ್ನೊಂದಿಗೆ ಪ್ರಮೋದವನದಲ್ಲಿರುವಿ ಎಂದು ವಾಗ್ದಾನಮಾಡಿದನು. ಹಾಗಾದರೆ, ಆ ವಾಗ್ದಾನವು ಹೇಗೆ ನೆರವೇರಿಸಲ್ಪಡುವುದು?

ಪ್ರಥಮ ಪುರುಷ ಮತ್ತು ಸ್ತ್ರೀಯಾಗಿದ್ದ ಆದಾಮ ಮತ್ತು ಹವ್ವಳನ್ನು ಯೆಹೋವ ದೇವರು ಪ್ರಮೋದವನದಲ್ಲಿ ಇಟ್ಟಿದ್ದನು. ಅಂದರೆ ಏದೇನ್‌ ಎಂದು ಕರೆಯಲ್ಪಡುತ್ತಿದ್ದ ಆಹ್ಲಾದಕರವಾದ ನಂದನವನದಲ್ಲಿ ಅವರನ್ನು ಇಟ್ಟಿದ್ದನು. (ಆದಿಕಾಂಡ 2:8, 15) ಏದೆನ್‌ ಭೂಮಿಯಲ್ಲೇ ಇತ್ತು ಮತ್ತು ಇಡೀ ಭೂಮಿಯು ಪ್ರಮೋದವನವಾಗುವುದೇ ದೇವರ ಉದ್ದೇಶವಾಗಿತ್ತು. ಆದರೆ, ಆದಾಮಹವ್ವರು ದೇವರಿಗೆ ಅವಿಧೇಯರಾದರು. ಇದರ ನಿಮಿತ್ತ ಅವರನ್ನು ಆ ಸುಂದರವಾದ ಮನೆಯಿಂದ ಹೊರಹಾಕಲಾಯಿತು. (ಆದಿಕಾಂಡ 3:23, 24) ಆದರೆ ಭೂಮಿಯ ಮೇಲೆ ಪ್ರಮೋದವನವು ಪುನಸ್ಥಾಪಿಸಲ್ಪಡುವುದು ಹಾಗೂ ಅದು ಇಡೀ ಭೂಮಿಯನ್ನು ಆವರಿಸುವುದು ಎಂದು ಯೇಸು ಪ್ರಕಟಪಡಿಸಿದನು.

ಯೇಸುವನ್ನು ಅನುಸರಿಸುವುದರಿಂದ ತನಗೂ ಮತ್ತು ಅವನ ಇತರ ಶಿಷ್ಯರಿಗೂ ಯಾವ ಪ್ರತಿಫಲ ಸಿಗುವುದು ಎಂದು ಅಪೊಸ್ತಲ ಪೇತ್ರನು ಅವನನ್ನು ಕೇಳಿದನು. ಆಗ, ಯೇಸು ‘ಹೊಸ ಸೃಷ್ಟಿಯಲ್ಲಿ ಮನುಷ್ಯಕುಮಾರನು ತನ್ನ ಮಹಿಮೆಯ ಸಿಂಹಾಸನದ ಮೇಲೆ ಕೂತುಕೊಳ್ಳುವಾಗ ನನ್ನನ್ನು ಹಿಂಬಾಲಿಸಿರುವ ನೀವು ಸಹ ಹನ್ನೆರಡು ಸಿಂಹಾಸನಗಳ ಮೇಲೆ ಕೂತುಕೊಳ್ಳುವಿರಿ’ ಎಂದು ವಾಗ್ದಾನ ಮಾಡಿದನು. (ಓರೆ ಅಕ್ಷರಗಳು ನಮ್ಮವು.) (ಮತ್ತಾಯ 19:27, 28) ಗಮನಾರ್ಹವಾಗಿ, ಈ ಸಂಭಾಷಣೆಯ ಕುರಿತಾದ ಲೂಕನ ವೃತ್ತಾಂತದಲ್ಲಿ “ಹೊಸ ಸೃಷ್ಟಿಯಲ್ಲಿ” ಎಂದು ಹೇಳುವ ಬದಲು ಯೇಸು “ಮುಂದಣ ಲೋಕ” ಎಂದು ಹೇಳಿರುವುದಾಗಿ ಉಲ್ಲೇಖಿಸಲಾಗಿದೆ.—ಲೂಕ 18:28-30.

ಹೀಗೆ, ಯೇಸು ಸ್ವರ್ಗದಲ್ಲಿ ತನ್ನೊಂದಿಗೆ ರಾಜ್ಯಭಾರ ಮಾಡುವ ಇತರರೊಂದಿಗೆ ತನ್ನ ಮಹಿಮಾಭರಿತ ಸಿಂಹಾಸನದಲ್ಲಿ ಕುಳಿತುಕೊಳ್ಳುವಾಗ, ಅವನು ನೀತಿಭರಿತ ಹೊಸ ವ್ಯವಸ್ಥೆಯನ್ನು ಸ್ಥಾಪಿಸುವನು. (2 ತಿಮೊಥೆಯ 2:11, 12; ಪ್ರಕಟನೆ 5:10; 14:1, 3) ಕ್ರಿಸ್ತನ ಸ್ವರ್ಗೀಯ ರಾಜ್ಯದಾಳ್ವಿಕೆಯ ಮೂಲಕ, ಇಡೀ ಭೂಮಿಯು ಪ್ರಮೋದವನವಾಗುವ ದೇವರ ಮೂಲ ಉದ್ದೇಶವು ಕೈಗೂಡುವುದು!

ಈ ರಾಜ್ಯದ ಆಳ್ವಿಕೆಯ ಸಮಯದಲ್ಲಿ, ತನ್ನ ಪಕ್ಕದಲ್ಲಿ ಸತ್ತ ಪಾತಕಿಗೆ ಕೊಟ್ಟ ಮಾತನ್ನು ಯೇಸು ಆಗ ನೆರವೇರಿಸುವನು. ಯೇಸು ಅವನನ್ನು ಪುನರುತ್ಥಾನಗೊಳಿಸುವನು ಮತ್ತು ಆ ಮನುಷ್ಯನು ಭೂಮಿಯ ಮೇಲೆ ಯೇಸುವಿನ ಪ್ರಜೆಯಾಗುವನು. ಆಗ ದೇವರ ಆವಶ್ಯಕತೆಗಳನ್ನು ಪೂರೈಸುವ ಮತ್ತು ರಾಜ್ಯದ ಆಳ್ವಿಕೆಯ ಕೆಳಗೆ ಸದಾಕಾಲ ಬಾಳುವ ಸಂದರ್ಭವನ್ನು ಆ ಪಾತಕಿಗೆ ಕೊಡಲಾಗುವುದು. ಖಂಡಿತವಾಗಿಯೂ ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾಕಾಲ ಜೀವಿಸುವ ಬೈಬಲಾಧರಿತ ಪ್ರತೀಕ್ಷೆಯಲ್ಲಿ ನಾವು ಹರ್ಷಿಸಬಹುದು!

ಜೀವನಕ್ಕೆ ಖಂಡಿತವಾಗಿಯೂ ಅರ್ಥವಿದೆ

ಅಂಥ ಒಂದು ಭವ್ಯವಾದ ನಿರೀಕ್ಷೆಯು ನಮ್ಮ ಜೀವನಕ್ಕೆ ಕೊಡಬಹುದಾದ ಅರ್ಥವನ್ನು ಸ್ವಲ್ಪ ಊಹಿಸಿನೋಡಿ. ಅದು ನಕಾರಾತ್ಮಕ ಆಲೋಚನೆಗಳಿಂದಾಗಿ ಉದ್ಭವಿಸುವ ಹಾನಿಗಳಿಂದ ನಮ್ಮ ಮನಸ್ಸನ್ನು ರಕ್ಷಿಸಲು ಸಹಾಯಮಾಡುವುದು. ಅಪೊಸ್ತಲ ಪೌಲನು ಆ ನಿರೀಕ್ಷೆಯನ್ನು ಆತ್ಮಿಕ ಆಯುಧದ ಬಹು ಮುಖ್ಯ ಭಾಗಕ್ಕೆ ಹೋಲಿಸಿದನು. ನಾವು “ನಿರೀಕ್ಷೆಯೆಂಬ ಶಿರಸ್ತ್ರಾಣವನ್ನೂ” ಧರಿಸಿಕೊಳ್ಳುವಂತೆ ಅವನು ಹೇಳಿದನು.—1 ಥೆಸಲೊನೀಕ 5:8; ಕೀರ್ತನೆ 37:29; ಪ್ರಕಟನೆ 21:3, 4.

ಆ ನಿರೀಕ್ಷೆಯು ಜೀವಕ್ಕೆ ಆಸರೆಯಾಗಿದೆ. ಬರಲಿರುವ ಪ್ರಮೋದವನದಲ್ಲಿ, ‘ಸತ್ತವರನ್ನು ಎಬ್ಬಿಸುವ ದೇವರು’ ನಮ್ಮ ಸತ್ತ ಪ್ರಿಯ ಜನರಿಗೆ ಪುನಃ ಜೀವವನ್ನು ಕೊಡುವಾಗ, ಒಂಟಿತನವು ಆನಂದಬಾಷ್ಪವಾಗಿ ಮಾರ್ಪಡುವುದು. (2 ಕೊರಿಂಥ 1:9) ಆಗ ಆಶಾಭಂಗವನ್ನುಂಟುಮಾಡುವ ಶಾರೀರಿಕ ದೌರ್ಬಲ್ಯ, ವೇದನೆ ಮತ್ತು ಎದ್ದು ಓಡಾಡಲಾಗದಂತಹ ನಿಶ್ಯಕ್ತತೆಯು ಮರೆತುಹೋಗಿರುವುದು. ಏಕೆಂದರೆ “ಕುಂಟನು ಜಿಂಕೆಯಂತೆ ಹಾರುವನು” ಮತ್ತು “ಅವನು ಪುನಃ ಎಳೆಯತನದ ದಿನಗಳನ್ನು ಅನುಭವಿಸುವನು.”—ಯೆಶಾಯ 35:5; ಯೋಬ 33:25.

ಆ ಸಮಯದಲ್ಲಿ, “ಯಾವ ನಿವಾಸಿಯೂ ತಾನು ಅಸ್ವಸ್ಥನೆಂದು ಹೇಳನು.” ಬಿಟ್ಟು ಹೋಗಲೊಲ್ಲದ ಕಾಯಿಲೆಯಿಂದಾಗುವ ಹತಾಶೆಯು ಆಗ ಕೇವಲ ಮರೆತುಹೋಗುತ್ತಿರುವ ಸಂಗತಿಯಾಗಿರುವುದು. (ಯೆಶಾಯ 33:24) ದೀರ್ಘಕಾಲದ ಖಿನ್ನತೆಯಿಂದ ಉಂಟಾಗುವ ಶೂನ್ಯಭಾವನೆಯು ಸದಾಕಾಲಕ್ಕೂ ‘ಹರ್ಷಾನಂದಗಳಾಗಿ’ ಮಾರ್ಪಡುವುದು. (ಯೆಶಾಯ 35:10) ಮಾರಕವಾದ ಕಾಯಿಲೆಯಿಂದಾಗುವ ಎದೆಗುಂದುವಿಕೆಯೊಂದಿಗೆ ಮಾನವನ ಪುರಾತನ ವೈರಿಯಾದ ಮರಣವು ಇನ್ನಿಲ್ಲದಂತಾಗುವುದು.—1 ಕೊರಿಂಥ 15:26.

[ಪುಟ 8, 9ರಲ್ಲಿರುವ ಚಿತ್ರಗಳು]

ದೇವರ ನೂತನ ಲೋಕದ ಅದ್ಭುತಕರ ನಿರೀಕ್ಷೆಯು ಯಾವಾಗಲೂ ನಿಮ್ಮ ಕಣ್ಮುಂದೆಯೇ ಇರುವಂತೆ ನೋಡಿಕೊಳ್ಳಿ