ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜನರಿಗೆ ಆಶಾಕಿರಣವನ್ನು ನೀಡುವುದು

ಜನರಿಗೆ ಆಶಾಕಿರಣವನ್ನು ನೀಡುವುದು

ಜನರಿಗೆ ಆಶಾಕಿರಣವನ್ನು ನೀಡುವುದು

ಹಿಂದಿನ ಸೋವಿಯತ್‌ ಗಣರಾಜ್ಯದ ಮಾಲ್ಡೋವಾದ 17 ವರ್ಷದ ಒಬ್ಬ ಯುವತಿಯು, ಅಕ್ಟೋಬರ್‌ 8, 1998ರ ಎಚ್ಚರ! ಪತ್ರಿಕೆಯಲ್ಲಿ ಕಾಣಿಸಿಕೊಂಡಿದ್ದ “ಇಂದಿನ ಯುವಜನರಿಗೆ ಯಾವ ನಿರೀಕ್ಷೆಯಾದರೂ ಇದೆಯೆ?” ಎಂಬ ಲೇಖನಮಾಲೆಗಾಗಿ ತನ್ನ ಗಣ್ಯತೆಯನ್ನು ವ್ಯಕ್ತಪಡಿಸಲು ಅಲ್ಲಿದ್ದ ಯೆಹೋವನ ಸಾಕ್ಷಿಗಳ ಕಛೇರಿಗೆ ಪತ್ರವನ್ನು ಬರೆದಳು. ಪತ್ರಬರೆದವಳು ವಿವರಿಸುವುದು:

“ನನಗೆ ಕಂಬನಿಯನ್ನು ತಡೆಯಲು ಸಾಧ್ಯವಾಗಲೇ ಇಲ್ಲ. ನಿಮಗೆ ಉಪಕಾರವನ್ನು ತಿಳಿಸುವುದನ್ನು ಬಿಟ್ಟರೆ ನನಗೆ ಬೇರೆ ಮಾರ್ಗವೇ ತೋಚಲಿಲ್ಲ. ಆ ಲೇಖನಗಳು, ಸ್ವಲ್ಪ ಸಮಯದ ಹಿಂದೆ ನನ್ನ ಮನಸ್ಸಿನಲ್ಲಿ ಹಾದುಹೋಗುತ್ತಿದ್ದ ಭಾವನೆಗಳನ್ನು ಪುನಃ ನೆನಪಿಗೆ ತಂದವು. ನಾನು ಇನ್ನೇನೂ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿರುವಾಗ ತಮಗರಿವಿಲ್ಲದೆಯೇ ಯೆಹೋವನ ಸಾಕ್ಷಿಗಳು ನನ್ನನ್ನು ಕಾಪಾಡಿದರು. ಅವರೊಂದಿಗೆ ಭವಿಷ್ಯಕ್ಕಾಗಿರುವ ನಿರೀಕ್ಷೆಯ ಕುರಿತು ಮಾತಾಡಿದ್ದರಿಂದ ಹಾಗೂ ಸೃಷ್ಟಿಕರ್ತನ ದಯೆಯಲ್ಲಿ ನನ್ನ ವಿಶ್ವಾಸವನ್ನು ಬಲಪಡಿಸಿಕೊಂಡ ಕಾರಣ, ನಾನು ಸ್ವಲ್ಪ ಸ್ವಲ್ಪವಾಗಿ ನಿರಾಶಾಜನಕ ಸ್ಥಿತಿಯಿಂದ ಚೇತರಿಸಿಕೊಂಡೆ. . . .

“ಉತ್ತಮ ಜೀವನ ಸ್ಥಿತಿಯನ್ನು ತರಬೇಕೆಂದಿರುವ ದೇವರ ಉದ್ದೇಶವನ್ನು ತಿಳಿದುಕೊಳ್ಳುವಂತೆ ಜನರಿಗೆ ನೀವು ಮಾಡುತ್ತಿರುವ ಸಹಾಯವು, ಜೊತೆಮಾನವರಿಗಾಗಿರುವ ನಿಮ್ಮ ನಿಜ ಪ್ರೀತಿಯ ಪ್ರದರ್ಶನವಾಗಿದೆ. ಈ ನಿಮ್ಮ ಪ್ರಯತ್ನಗಳು ಖಂಡಿತವಾಗಿ ನಿಷ್ಫಲವಾಗಿ ಹೋಗುವುದಿಲ್ಲವೆಂಬುದು ಸ್ಪಷ್ಟ. ಸಮಾಜದ ಅತಿ ಪ್ರಾಮುಖ್ಯವಾದ ಸಮಸ್ಯೆಗಳನ್ನು ಎತ್ತಿತೋರಿಸುವ ನಿಮ್ಮ ಪ್ರಯತ್ನಗಳು ನಿಜವಾಗಿಯೂ ಮೆಚ್ಚತಕ್ಕವು. ಈ ಉಪಯುಕ್ತ ಕೆಲಸವನ್ನು ಮುಂದುವರಿಸುತ್ತಿರಿ. ಈ ಪತ್ರಿಕೆಯ ಪ್ರತಿಯೊಂದು ಹೊಸ ಸಂಚಿಕೆಗಾಗಿಯೂ ನಾನು ಕಾಯುತ್ತಿರುತ್ತೇನೆ.”

ಪ್ರತಿಯೊಂದು ಸಂಚಿಕೆಯಲ್ಲೂ 4ನೇ ಪುಟದಲ್ಲಿ ಕಾಣಿಸಿಕೊಳ್ಳುವ “ಎಚ್ಚರ! ಪ್ರಕಾಶಿಸಲು ಕಾರಣ” ಎಂಬ ಪ್ಯಾರದಲ್ಲಿ ಹೀಗೆ ಹೇಳಲಾಗಿದೆ: “ಸದ್ಯದ ದುಷ್ಟ, ನ್ಯಾಯರಹಿತ ವಿಷಯಗಳ ವ್ಯವಸ್ಥೆಯನ್ನು ಇನ್ನೇನು ಸ್ಥಾನಾಂತರಿಸಲಿಕ್ಕಿರುವ, ಶಾಂತಿಯ ಮತ್ತು ಭದ್ರ ನೂತನ ಲೋಕವೊಂದರ ನಿರ್ಮಾಣಿಕನ ವಾಗ್ದಾನದಲ್ಲಿ ಈ ಪತ್ರಿಕೆಯು ಭರವಸೆಯನ್ನು ಸ್ಥಾಪಿಸುತ್ತದೆ.” ಬೈಬಲಿನ ಮೇಲೆ ಆಧಾರಿತವಾದ ದೇವರ ವಾಗ್ದಾನವು, ಈ ಗೊಂದಲಯುಕ್ತ ಸಮಯಗಳಲ್ಲಿ ಸಮಸ್ಯೆಗಳನ್ನು ಎದುರಿಸಲು ಭೂಲೋಕದ ಸುತ್ತಲೂ ಇರುವ ಲಕ್ಷಾಂತರ ಜನರಿಗೆ ಬಲವನ್ನು ನೀಡಿದೆ.

ನಮ್ಮ ಸೃಷ್ಟಿಕರ್ತನು ನೀಡುವ ಆಶಾಕಿರಣವನ್ನು, ಸುಂದರವಾಗಿ ವರ್ಣಿಸಲ್ಪಟ್ಟಿರುವ ಜೀವಿತದ ಉದ್ದೇಶವೇನು? ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ? ಎಂಬ 32 ಪುಟದ ಬ್ರೊಷರಿನಲ್ಲಿ ನೀವು ಕಂಡುಕೊಳ್ಳಬಹುದು. ವಿಶೇಷವಾಗಿ ಅದರಲ್ಲಿರುವ “ದೇವರ ಉದ್ದೇಶವು ಬೇಗನೆ ಕೈಗೂಡಲಿದೆ” ಮತ್ತು “ಪ್ರಮೋದವನವಾದ ಭೂಮಿಯೊಂದರ ಮೇಲೆ ಸದಾ ಜೀವಿಸಿರಿ” ಎಂಬ ವಿಭಾಗಗಳನ್ನು ನೋಡಿರಿ. ನೀವು ಈ 32 ಪುಟದ ಬ್ರೋಷರಿನಿಂದ ಹೆಚ್ಚಿನ ಮಾಹಿತಿಯನ್ನು ಪಡೆಯಲು ಬಯಸುವುದಾದರೆ, ಬ್ರೋಷರಿನೊಂದಿಗಿರುವ ಕೂಪನನ್ನು ಭರ್ತಿಮಾಡಿ ಅಲ್ಲೇ ಕೆಳಗೆ ನೀಡಲ್ಪಟ್ಟಿರುವ ವಿಳಾಸಕ್ಕೆ ಅಥವಾ ಈ ಪತ್ರಿಕೆಯ 5ನೇ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ಸೂಕ್ತ ವಿಳಾಸಕ್ಕೆ ದಯವಿಟ್ಟು ಕಳುಹಿಸಿಕೊಡಿ.

◻ ಈ ಬ್ರೋಷರಿನ ಒಂದು ಪ್ರತಿಯನ್ನು ನನಗೆ ಕಳುಹಿಸಿಕೊಡಿ ಜೀವಿತದ ಉದ್ದೇಶವೇನು? ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?

◻ ದಯವಿಟ್ಟು ಒಂದು ಉಚಿತ ಗೃಹ ಬೈಬಲ್‌ ಅಭ್ಯಾಸಕ್ಕಾಗಿ ನನ್ನನ್ನು ಸಂಪರ್ಕಿಸಿರಿ.