ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನನಗೆ ದೇವರ ಮೇಲೆ ನಂಬಿಕೆ ಇರಬೇಕು”

“ನನಗೆ ದೇವರ ಮೇಲೆ ನಂಬಿಕೆ ಇರಬೇಕು”

“ನನಗೆ ದೇವರ ಮೇಲೆ ನಂಬಿಕೆ ಇರಬೇಕು”

ಕೆನಡಾ ದೇಶದ, ಆ್ಯಲ್ಬರ್ಟಾ ರಾಜ್ಯದ ಎಡ್ಮಂಟನ್‌ ಎಂಬ ನಗರದಲ್ಲಿದ್ದ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದಲ್ಲಿ ಈ ಮುಂದಿನ ಪತ್ರವನ್ನು ಯಾರೋ ಒಬ್ಬರು ಬಿಟ್ಟುಹೋಗಿದ್ದರು:

“ಪ್ರೀತಿಯ ಸಂದೇಶವಾಹಕರೇ:

“ನಿಸ್ಸಂದೇಹವಾಗಿಯೂ, ತನಗರಿವಿಲ್ಲದೆಯೇ ನನ್ನ ಜೀವನದಲ್ಲಿ ಒಂದು ಪವಾಡವನ್ನು ಮಾಡಿರುವ ವ್ಯಕ್ತಿಗೆ ನನ್ನ ಉಪಕಾರವನ್ನು ತಿಳಿಸಲು ಈ ಪತ್ರವನ್ನು ಬರೆಯುತ್ತಿದ್ದೇನೆ.

“ಕೆಲವು ವಾರಗಳ ಹಿಂದೆ, ನಾನು ಮತ್ತು ನನ್ನ ಗಂಡ ಬಹಳ ಬಿರುಸಿನ ವಾಗ್ವಾದದಲ್ಲಿ ತೊಡಗಿದ್ದೆವು. ಆಗ ತಾನೇ ನಾನು ನನ್ನ ಗಂಡನಿಗೆ, ‘ನೋಡಿ, ವಿಷಯವು ತುಂಬ ಗಂಭೀರವಾಗುತ್ತಿದೆ. ಇನ್ನು ನನ್ನಿಂದ ಖಂಡಿತ ಸಹಿಸಿಕೊಳ್ಳಲಿಕ್ಕೆ ಆಗುವುದಿಲ್ಲವೆಂದು ಅನಿಸುತ್ತದೆ’ ಎಂದು ಹೇಳಿ ಮುಗಿಸಿದೆ. ಅಷ್ಟರೊಳಗಾಗಿ ಬಾಗಿಲ ಕರೆಗಂಟೆಯು ಬಾರಿಸಲಾರಂಭಿಸಿತು. ನನ್ನ ಮನೆಯ ಬಾಗಿಲಲ್ಲಿ ಒಬ್ಬ ಯೆಹೋವನ ಸಾಕ್ಷಿ ನಿಂತಿದ್ದರು. ನಡೆಯುತ್ತಿದ್ದುದ್ದನ್ನು ಅವರಿಂದ ಬಚ್ಚಿಡಲು ಅದು ತುಂಬ ತಡವಾಗಿತ್ತು.

“ನಾನು ಬಾಗಿಲು ತೆರೆದಾಗ, ನನ್ನ ಮನಸ್ಸು ಎಷ್ಟು ಕದಡಿಹೋಗಿತ್ತೆಂದರೆ ಅವರು ಏನನ್ನು ಹೇಳುತ್ತಿದ್ದಾರೆಂಬುದನ್ನು ಗಮನಕೊಟ್ಟು ಕೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ. ಆದರೆ ಅವರು ಹೇಳಿದ ‘ಮಕ್ಕಳು’ ಮತ್ತು ‘ಕುಟುಂಬ’ ಎಂಬ ಶಬ್ದಗಳು ಮಾತ್ರ ನನ್ನ ಕಿವಿಗೆ ಬಿದ್ದವು. ಆ ವ್ಯಕ್ತಿಯು ತನ್ನ ಬ್ಯಾಗಿನಿಂದ ಕುಟುಂಬ ಸಂತೋಷದ ರಹಸ್ಯ ಎಂಬ ಪುಸ್ತಕವನ್ನು ಹೊರತೆಗೆದರು. ಆ ಪುಸ್ತಕದ ಶೀರ್ಷಿಕೆಯನ್ನು ನೋಡಿದೊಡನೆ, ನಾನು ಅಳಲು ಶುರುಮಾಡಿದೆ, ಎಷ್ಟು ಮಾಡಿದರೂ ನನ್ನಿಂದ ಅಳುವನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಆಗ ಅವರು ತಮ್ಮ ತಲೆಯೆತ್ತಿ ನನ್ನನ್ನು ನೋಡುತ್ತಾ ನನಗೆ ತೊಂದರೆ ಕೊಟ್ಟಿದ್ದಕ್ಕಾಗಿ ಕ್ಷಮೆಯಾಚಿಸುತ್ತಾ, ನನ್ನ ಕೈಯಲ್ಲಿ ಆ ಪುಸ್ತಕವನ್ನು ಕೊಟ್ಟು ಅಲ್ಲಿಂದ ಹೊರಟುಹೋದರು.

“ಹಾಗಾದರೆ ಏನದು ಆ ಪವಾಡ? ನನಗೆ ಏನು ಮಾಡಬೇಕೆಂದು ದಾರಿಕಾಣದಿದ್ದಾಗ ಅದರ ಬಗ್ಗೆ ಚಿಂತೆಮಾಡುವ ಅವಶ್ಯಕತೆಯಿರುವುದಿಲ್ಲ, ಏಕೆಂದರೆ ಅದು ದೇವರಿಗೇ ಗೊತ್ತಿದೆ. ಆದರೆ ನನಗೆ ಆತನ ಮೇಲೆ ನಂಬಿಕೆಯಿರಬೇಕು. ನಮಗೆ ಸಹಾಯಮಾಡಲು ಆತನು ತನ್ನ ಸಂದೇಶವಾಹಕರನ್ನೂ ಸಹ ಕಳುಹಿಸುತ್ತಾನೆ ಎಂಬ ಮರುಜ್ಞಾಪನವೇ ಆ ಪವಾಡವಾಗಿತ್ತು. ಉಪಕಾರಗಳು.”

ಕುಟುಂಬ ಸಂತೋಷದ ರಹಸ್ಯ ಎಂಬ ಪುಸ್ತಕವು ಕುಟುಂಬದಲ್ಲಿರುವ ಪ್ರತಿಯೊಬ್ಬ ಸದಸ್ಯರಿಗೂ ಪ್ರಯೋಜನಕಾರಿಯಾಗಿದೆ. ಅದರಲ್ಲಿರುವ ಬೋಧನಾಪ್ರದ ಅಧ್ಯಾಯಗಳಲ್ಲಿ ಕೆಲವು, “ನಿಮ್ಮ ಕುಟುಂಬವನ್ನು ನಾಶಕಾರಕ ಪ್ರಭಾವಗಳಿಂದ ಸಂರಕ್ಷಿಸಿರಿ,” “ನಿಮ್ಮ ಮನೆವಾರ್ತೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಿರಿ” ಮತ್ತು “ಒಂದು ಕುಟುಂಬವನ್ನು ಭಂಗಗೊಳಿಸುವಂತಹ ಸಮಸ್ಯೆಗಳನ್ನು ನೀವು ಜಯಿಸಬಲ್ಲಿರಿ” ಎಂಬುದಾಗಿದೆ.

ಈ 192 ಪುಟಗಳ ಪುಸ್ತಕದ ಕುರಿತು ನೀವು ಹೆಚ್ಚು ಮಾಹಿತಿಯನ್ನು ಬಯಸುವುದಾದರೆ, ಇದರೊಂದಿಗೆ ನೀಡಿರುವ ಕೂಪನನ್ನು ಭರ್ತಿಮಾಡಿ, ಕೆಳಗೆ ಕೊಡಲ್ಪಟ್ಟಿರುವ ವಿಳಾಸಕ್ಕೆ ಅಥವಾ ಇದೇ ಪತ್ರಿಕೆಯ 5ನೇ ಪುಟದಲ್ಲಿ ಕೊಡಲ್ಪಟ್ಟಿರುವ ವಿಳಾಸಕ್ಕೆ ದಯವಿಟ್ಟು ಬರೆದು ಕಳಿಸಿ. ಸೃಷ್ಟಿಕರ್ತನು ಯಾವ ರೀತಿಯಲ್ಲಿ ಕುಟುಂಬವು ಇರಬೇಕೆಂದು ಅಪೇಕ್ಷಿಸಿ ಉಂಟುಮಾಡಿದನೋ ಅದೇ ರೀತಿಯಲ್ಲಿ ನಿಮ್ಮ ಕುಟುಂಬ ಜೀವನವನ್ನು ಸಂತೋಷವಾಗಿಡಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಸಹಾಯಮಾಡುವ ನಿರ್ದಿಷ್ಟ ಸಲಹೆಗಳನ್ನು ನೀವು ಪಡೆದುಕೊಳ್ಳುವಿರಿ.

ಕುಟುಂಬ ಸಂತೋಷದ ರಹಸ್ಯ ಎಂಬ ಪುಸ್ತಕದ ಕುರಿತು ಹೆಚ್ಚಿನ ಮಾಹಿತಿಯನ್ನು ನನಗೆ ಕಳುಹಿಸಿಕೊಡಿ.

□ ಒಂದು ಉಚಿತ ಬೈಬಲ್‌ ಅಭ್ಯಾಸಕ್ಕಾಗಿ ನನ್ನನ್ನು ಸಂಪರ್ಕಿಸಿ.