ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ವಾಚಕರಿಂದ

ನಮ್ಮ ವಾಚಕರಿಂದ

ನಮ್ಮ ವಾಚಕರಿಂದ

ಮಿಚ್‌ ಬಿರುಗಾಳಿ “ಹಂತಕ ಬಿರುಗಾಳಿಯಿಂದ ರಕ್ಷಣೆ!” (ಜುಲೈ 8, 1999) ಎಂಬ ಮನಮುಟ್ಟುವಂಥ ಲೇಖನಕ್ಕಾಗಿ ತುಂಬ ಧನ್ಯವಾದಗಳು. ನಮ್ಮ ಸಹೋದರರನ್ನು ಬಾಧಿಸಿರುವಂಥ ಪ್ರಕೃತಿ ವಿನಾಶಗಳ ಕುರಿತ ಸುದ್ದಿಯು ನನಗೆ ಆಗಾಗ ಈ-ಮೆಯ್ಲ್‌ ಮೂಲಕ ಸಿಗುತ್ತಾ ಇರುತ್ತದೆ. ಆದರೆ ಆ ಮಾಹಿತಿಯು ಎಷ್ಟರ ಮಟ್ಟಿಗೆ ನಿಜ ಎಂಬುದು ನನಗಂತೂ ಗೊತ್ತಾಗುವುದೇ ಇಲ್ಲ. ಆದರೆ ಈ ಲೇಖನದಲ್ಲಿ ಮಾಹಿತಿಯು ಬರೆದಿದ್ದ ರೀತಿಯು ಬಹಳ ಪ್ರೋತ್ಸಾಹನದಾಯಕವು ಮತ್ತು ಆತ್ಮೋನ್ನತಿಯನ್ನು ಮಾಡುವಂಥದ್ದಾಗಿತ್ತು. ಅಲ್ಲದೆ ನಾವು ಜೀವಿಸುತ್ತಿರುವ ಕಠಿನ ಸಮಯಗಳ ಗಂಭೀರ ಮರುಜ್ಞಾಪನವಾಗಿತ್ತು.

ಸಿ. ಪಿ., ಅಮೆರಿಕ

ಈ ದುರಂತದಲ್ಲಿ ಅನೇಕರು ತಮ್ಮ ಎಲ್ಲಾ ವಸ್ತುಗಳನ್ನು ಕಳೆದುಕೊಂಡಿದ್ದರೆಂದು ನನಗೆ ಗೊತ್ತಾಯಿತು. ಆದರೆ ನಮ್ಮ ಅಂತಾರಾಷ್ಟ್ರೀಯ ಸಹೋದರರು ಹೆಚ್ಚು ಅಪಾಯದ ಮಧ್ಯೆಯೂ ಹೇಗೆ ಸಾಹಸದಿಂದ ಕ್ರಿಯೆಗೈದರು ಎಂಬುದನ್ನು ಓದಿದಾಗ, ಅದು ಹೃದಯ ಪುಳಕಿಸುವಂಥದ್ದಾಗಿತ್ತು. ಹಾಳಾಗಿ ಬಿದ್ದಿದ್ದ ತನ್ನ ಮನೆಯ ಮುಂದೆ ನಿಂತಿರುವ ಸಹೋದರನ ಚಿತ್ರವು ನನ್ನನ್ನು ಆಳವಾಗಿ ಯೋಚಿಸುವಂತೆ ಮಾಡಿತು. ಯಾವುದೇ ವಿಷಯದ ಕುರಿತು ಗೊಣಗುಟ್ಟಲು ನನಗೇನು ಹಕ್ಕಿದೆ?

ಆರ್‌. ಕೆ. ಎನ್‌., ಬ್ರೆಸಿಲ್‌

ಅನಾರೋಗ್ಯಕರ ಜೀವನಶೈಲಿ ಕಳೆದ ಕೆಲವು ತಿಂಗಳುಗಳಿಂದ ನನ್ನ ಆರೋಗ್ಯವು ತೀರ ಹದಗೆಟ್ಟಿದೆ. ನಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವ ಮೂಲಕ ನಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಂಡಿದ್ದು ತುಂಬ ಪ್ರೋತ್ಸಾಹನದಾಯಕವಾಗಿತ್ತು. “ನಿಮ್ಮ ಜೀವನಶೈಲಿಯು ನಿಮ್ಮನ್ನು ಕೊಲ್ಲುತ್ತಿದೆಯೋ?” (ಆಗಸ್ಟ್‌ 8, 1999) ಎಂಬ ಲೇಖನಮಾಲೆಯನ್ನು ಓದಿದಂತೆ, ನಾನು ಸೇವಿಸುವ ಕೆಲವು ಆಹಾರಪದಾರ್ಥಗಳನ್ನು ಕಡಿಮೆಮಾಡಬೇಕು ಹಾಗೂ ಹೆಚ್ಚೆಚ್ಚು ಹಣ್ಣುಹಂಪಲುಗಳು ಮತ್ತು ತರಕಾರಿಗಳನ್ನು ಒಳಗೂಡಿರುವ ಹೆಚ್ಚು ಸಮತುಲಿತ ಆಹಾರವನ್ನು ತೆಗೆದುಕೊಳ್ಳಬೇಕಾದ ಅಗತ್ಯವನ್ನು ಕಾಣಲು ಸಹಾಯಮಾಡಿತು.

ಈ. ಪಿ. ಎಮ್‌., ಬ್ರೆಸಿಲ್‌

ನಿಧಾನವಾದ ಪ್ರತಿಕ್ರಿಯೆ “ವರ್ಷಗಳಾನಂತರ ಫಲಕೊಟ್ಟ ಬೀಜಗಳು” (ಆಗಸ್ಟ್‌ 8, 1999) ಎಂಬ ಲೇಖನವು ತುಂಬ ಪ್ರೋತ್ಸಾಹನದಾಯಕವಾಗಿತ್ತು. ಇದು ನನ್ನ ಪೂರ್ಣ ಸಮಯದ ಸೇವೆಯ ಮೂರನೇ ವರ್ಷವಾಗಿದೆ. ನಾನು ನಿರೀಕ್ಷಿಸುವ ಫಲಿತಾಂಶಗಳು ಸಿಗದಿದ್ದಾಗ, ಬಹಳ ನಿರಾಶೆಯಾಗುತ್ತದೆ ಮತ್ತು ಸೇವೆಯನ್ನು ಬಿಟ್ಟುಬಿಡಬೇಕು ಎಂದು ಅನ್ನಿಸುತ್ತದೆ. ಈ ಲೇಖನವನ್ನು ಓದಿದ್ದರಿಂದ ನನ್ನಿಂದಾಗುವ ಅತ್ಯುತ್ತಮವಾದುದನ್ನು ಈಗ ಮಾಡುವಂತೆ ಮತ್ತು ಉಳಿದದ್ದನ್ನು ಯೆಹೋವನಿಗೆ ಬಿಟ್ಟುಬಿಡುವಂತೆ ನನಗೆ ಸಹಾಯಮಾಡಿದೆ.

ಟಿ. ಎನ್‌., ಜಪಾನ್‌

ಕೆಣಕುನುಡಿ ಜುಲೈ 8, 1999ರ ಸಂಚಿಕೆಯಲ್ಲಿ ಬಂದಿದ್ದ “ಯುವ ಜನರು ಪ್ರಶ್ನಿಸುವುದು . . . ನಾನು ಕೆಣಕುನುಡಿಯನ್ನು ಹೇಗೆ ನಿಭಾಯಿಸಬಲ್ಲೆ?” ಎಂಬ ಲೇಖನವನ್ನು ಓದಿ ತುಂಬ ಸಂತೋಷಿಸಿದೆ. ನಾನು ಮಕ್ಕಳ ಪಾಠಶಾಲೆಯಲ್ಲಿದ್ದ (ಕಿಂಡರ್‌ಗಾರ್‌ಟನ್‌) ಸಮಯದಿಂದಲೂ ಶಾಲಾ ಸ್ನೇಹಿತರು ನನ್ನ ನಂಬಿಕೆಗಳ ಕುರಿತು ಕೇಳುತ್ತಿದ್ದರು. ಕೆಲವೊಮ್ಮೆ ಅವರು ನನ್ನನ್ನು ಕೇಳುತ್ತಿದ್ದ ರೀತಿಯು ನನ್ನ ಮನಸ್ಸನ್ನು ಬಹಳ ನೋಯಿಸುತ್ತಿತ್ತು. ಅನೇಕಸಲ, ನನ್ನ ತಾಳ್ಮೆಯನ್ನು ಕಳೆದುಕೊಳ್ಳುವಂಥ ಮಟ್ಟಕ್ಕೆ ಹೋಗಿದ್ದೇನೆ. ಆದರೆ ಅವೆಲ್ಲವೂ ನಮ್ಮ ನಂಬಿಕೆಯ ಪರೀಕ್ಷೆಗಳು ಎಂದು ಈಗ ನನಗೆ ತಿಳಿದಿದೆ. ಅದಲ್ಲದೆ ನನ್ನ ಶಾಲೆಯಲ್ಲಿದ್ದ ಇತರರಿಗೆ ನಾನು ಹೆಚ್ಚು ಯಶಸ್ವಿಕರವಾಗಿ ಸಾಕ್ಷಿನೀಡಿದ್ದೇನೆ.

ಎಲ್‌. ಕೆ., ಅಮೆರಿಕ

ನಾನು ಕೂಡ ಕೆಲವು ಧಾರ್ಮಿಕ ಆಚರಣೆಗಳು ಇಲ್ಲವೇ ದೇಶಭಕ್ತಿಯನ್ನು ಪ್ರದರ್ಶಿಸುವಂಥ ಸಮಾರಂಭಗಳನ್ನು ಆಚರಿಸಲು ನಿರಾಕರಿಸಿದ್ದಕ್ಕಾಗಿ ಹಾಸ್ಯಕ್ಕೆ ಗುರಿಯಾಗಿದ್ದೇನೆ. ಬೈಬಲಿನ ಉಚ್ಚ ನೈತಿಕ ಮಟ್ಟಗಳನ್ನು ಎತ್ತಿಹಿಡಿದದ್ದಕ್ಕಾಗಿ ಮತ್ತು ಪ್ರಾಮಾಣಿಕನಾಗಿ ಇದ್ದುದಕ್ಕಾಗಿಯೂ ಕೂಡ ಕಿರುಕುಳವನ್ನು ಕೊಟ್ಟಿದ್ದಾರೆ. ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಂಡಿರುವುದು ನನ್ನ ನಂಬಿಕೆಯನ್ನು ಸಮರ್ಥಿಸಲು ಸಹಾಯಮಾಡಿದೆ. ಇದು ನನ್ನ ನಂಬಿಕೆಗಳ ಕುರಿತು ಸಂಕೋಚವಿಲ್ಲದೆ ಬಹಿರಂಗವಾಗಿ ಮಾತಾಡಲು ಸಹ ಸಹಾಯಮಾಡಿದೆ.

ಎಚ್‌. ಚ., ಸಾಂಬಿಯ

ನಾನು ನನ್ನ ಹದಿಹರೆಯದ ವಯಸ್ಸನ್ನು ದಾಟಿ ಬಹಳ ಕಾಲವಾಗಿದೆ, ಅಂದರೆ ಈಗ ನಾನು 50ಕ್ಕೂ ಹೆಚ್ಚು ವಯಸ್ಸನ್ನು ದಾಟಿದ್ದೇನೆ. ಆದರೂ ಈ ಲೇಖನವನ್ನು ನಾನು ಗಣ್ಯಮಾಡುತ್ತೇನೆ. ಕೆಲವೊಮ್ಮೆ ಕ್ಷೇತ್ರಸೇವೆಯಲ್ಲಿ ವಿರೋಧವನ್ನು ಎದುರಿಸುವಾಗ, ಆ ಕ್ಷಣದಲ್ಲಿ ನಾವು ಕೆರಳುವಂತೆ ಮಾಡುತ್ತಾ, ಪ್ರತ್ಯುತ್ತರ ಕೊಡಬೇಕೆಂಬ ಅನಿಸಿಕೆಗಳು ನಮಗೆ ಬರಬಹುದು. ಆದುದರಿಂದಲೇ ನಾನು ಆ ಲೇಖನದಲ್ಲಿ ಬಂದಿದ್ದ ಈ ಮರುಜ್ಞಾಪನವನ್ನು ತುಂಬ ಗಣ್ಯಮಾಡುತ್ತೇನೆ. “ಎಷ್ಟೇ ಜಾಣತನದಿಂದ ಪ್ರತಿನುಡಿಯನ್ನು ಹೇಳಿದರೂ ಸರಿ, ಅದು ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಂತಾಗುತ್ತದಷ್ಟೇ. ಮತ್ತು ಅದು ಇನ್ನೂ ಹೆಚ್ಚಿನ ಕೆಣಕುನುಡಿಗಳಿಗೆ ದಾರಿಮಾಡಿಕೊಡಬಹುದು.” ಪ್ರತ್ಯುತ್ತರ ಕೊಡುವವನಂತೆ ತೋರಿಸಿಕೊಳ್ಳದೆ ಅದಕ್ಕೆ ಬದಲಾಗಿ ನನ್ನ ನಂಬಿಕೆಯನ್ನು ಸಮರ್ಥಿಸಲು ಪ್ರಯತ್ನಿಸುತ್ತೇನೆ. ಹೀಗೆ ಮಾಡುವುದನ್ನು ಮುಂದುವರಿಸುವುದು ಎಷ್ಟೊಂದು ಪ್ರಾಮುಖ್ಯವಾಗಿದೆ ಎಂಬುದನ್ನು ಮನಗಾಣಲು ಈ ಮರುಜ್ಞಾಪನವು ಸಹಾಯಮಾಡಿದೆ.

ಎ. ಎಫ್‌., ಅಮೆರಿಕ

ಹೆಚ್ಚುಕಾಲ ಬದುಕುವುದು “ಹೆಚ್ಚು ದೀರ್ಘಾಯುಷಿಗಳೂ ಹೆಚ್ಚು ಆರೋಗ್ಯವಂತರೂ ಆಗಿರುವ ವಿಧ” (ಸೆಪ್ಟೆಂಬರ್‌ 8, 1999) ಎಂಬ ಶೀರ್ಷಿಕೆಯನ್ನೊಳಗೊಂಡ ಅತ್ಯುತ್ತಮ ಲೇಖನಮಾಲೆಗಾಗಿ ಪತ್ರ ಬರೆಯುವಂತೆ ನಾನು ಒತ್ತಾಯಿಸಲ್ಪಟ್ಟಿದ್ದೇನೆ. ಸರಾಸರಿ ಜೀವಮಾನಕಾಲಕ್ಕೂ, ಬದುಕುವ ನಿರೀಕ್ಷೆಗೂ ಇರುವ ವ್ಯತ್ಯಾಸದ ವಿವರಣೆಯು ಕೊನೆಗೂ ನನಗೆ ಸಿಕ್ಕಿತು ಮತ್ತು ಈಗ ಅದು ನನಗೆ ಅರ್ಥವಾಗಿದೆ. ಅಲ್ಲದೆ, ವಯಸ್ಸಾಗುವುದರೊಂದಿಗೆ ಬರುವ ವೇದನಾಮಯ ಪರಿಣಾಮಗಳನ್ನು ಹೇಗೆ ತಡೆಗಟ್ಟಬಹುದು ಎಂಬುದರ ಕುರಿತು ಕೊಟ್ಟಿದ್ದ ಉತ್ತಮ ಸಲಹೆಗಳು ಒಳ್ಳೆಯ ಮರುಜ್ಞಾಪನಗಳಾಗಿದ್ದವು. ಅವುಗಳನ್ನು, ತನ್ನ ಕುರಿತು ಮರುಕಪಡುವ ಸಮಸ್ಯೆಯಿಂದ ತೊಳಲಾಡುತ್ತಿರುವ ನನ್ನ 88 ವರ್ಷ ಪ್ರಾಯದ ಅಜ್ಜನಿಗೆ ಸಹಾಯಮಾಡಲು ಹೆಚ್ಚು ಜಾಣ್ಮೆಯಿಂದ ನಾನು ಉಪಯೋಗಿಸಬಹುದು.

ಟಿ. ಎನ್‌., ಅಮೆರಿಕ

ಕಿವಿಗೊಡುವ ನಾಯಿ “ನನಗಾಗಿ ನನ್ನ ನಾಯಿ ಕೇಳಿಸಿಕೊಳ್ಳುತ್ತದೆ!” (ಜುಲೈ 22, 1999 ಇಂಗ್ಲಿಷ್‌) ಕಿವಿ ಕೇಳಿಸದಿರುವವರು ಎಂಥ ಗಂಭೀರವಾದ ತೊಂದರೆಗಳನ್ನು ಎದುರಿಸಬೇಕಾಗಿರುತ್ತದೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಂಡೆ. ಮತ್ತು ಅಂಥವರನ್ನು ಹೆಚ್ಚು ಅರ್ಥಮಾಡಿಕೊಳ್ಳುವಂತೆ ಅದು ನನಗೆ ಸಹಾಯಮಾಡಿದೆ. ನನಗೆ ನಾಯಿಗಳೆಂದರೆ ತುಂಬ ಇಷ್ಟ. ಅನೇಕರಿಗೆ ಅದು ಹೇಗೆ ಸಹಾಯ ಮತ್ತು ಸಹಕಾರವನ್ನು ಕೊಡಸಾಧ್ಯವಿದೆ ಎಂಬುದನ್ನು ಕಲಿಯಲು ನಾನು ಬಹಳ ಸಂತೋಷಿಸಿದೆ.

ಎಲ್‌. ಬಿ., ಇಟಲಿ

ನನ್ನ ಬಳಿಯೂ ಒಂದು ನಾಯಿ ಇದೆ. ಏಕೆಂದರೆ ನನ್ನ ಸೊಂಟ ಮುರಿದುಹೋಗಿರುವುದರಿಂದ ಮತ್ತು ಫೈಬ್ರೋಮೈಲೇಜಿಯಾ ರೋಗದ ಸಮಸ್ಯೆಯ ಕಾರಣ, ನಾನು ನನ್ನ ಹೆಚ್ಚಿನ ಸಮಯವನ್ನು ಗಾಲಿಕುರ್ಚಿಯಲ್ಲೇ ಕಳೆಯುತ್ತೇನೆ. ನನ್ನ ನಾಯಿಯು ನನಗಾಗಿ ಮಾಡುವ ಎಲ್ಲಾ ಕೆಲಸಗಳನ್ನು ವಿವರಿಸಲು ನನ್ನಲ್ಲಿ ಶಬ್ದಗಳೇ ಇಲ್ಲ. ನಾನು ಶಾಪಿಂಗ್‌ ಹೋಗುವಾಗ ಇಲ್ಲವೇ ಮನೆಯನ್ನು ಶುಚಿಗೊಳಿಸುವಾಗ ಅದು ಸಹಾಯಮಾಡುತ್ತದೆ. ನಾನು ಕ್ಷೇತ್ರಸೇವೆಗೆ ಹೋಗುವಾಗಲೂ ಸಹ ನನ್ನ ಪ್ರಕಾಶನಗಳನ್ನು ಒಯ್ಯುವ ಮೂಲಕ ನನಗೆ ಅದು ಸಹಾಯಮಾಡುತ್ತದೆ.

ಕೆ. ಡಬ್ಲ್ಯೂ., ಅಮೆರಿಕ